• Home
  • »
  • News
  • »
  • trend
  • »
  • Singapore: ಸಿಂಗಾಪುರ್ 100% ಸುರಕ್ಷಿತ ದೇಶ ಎಂಬುದನ್ನು ಖಾತ್ರಿಪಡಿಸಲು ಈ ಟಿಕ್‌ಟಾಕರ್ ಮಾಡಿದ ಸಾಹಸವೇನು? ಇಲ್ಲಿದೆ ರೋಚಕ ಸ್ಟೋರಿ!

Singapore: ಸಿಂಗಾಪುರ್ 100% ಸುರಕ್ಷಿತ ದೇಶ ಎಂಬುದನ್ನು ಖಾತ್ರಿಪಡಿಸಲು ಈ ಟಿಕ್‌ಟಾಕರ್ ಮಾಡಿದ ಸಾಹಸವೇನು? ಇಲ್ಲಿದೆ ರೋಚಕ ಸ್ಟೋರಿ!

 Singapore

Singapore

ಸಿಂಗಾಪುರ್​ ದೇಶ ಅಷ್ಟೊಂದು ಸುರಕ್ಷಿತವಾಗಿದ್ಯಾ ಅಂತ ನೀವು ಕೇಳಿದ್ರೆ, ಹೌದು ಅನ್ನುತ್ತೆ ಈ ವಿಡಿಯೋ (Video). ಅಷ್ಟಕ್ಕೂ ಏನಪ್ಪಾ ಇದೆ ಈ ವಿಡಿಯೋದಲ್ಲಿ?

  • Trending Desk
  • Last Updated :
  • New Delhi, India
  • Share this:

ನಮ್ಮ ದೇಶವನ್ನು ಬಿಟ್ಟು ಪರದೇಶಕ್ಕೆ ಪ್ರಯಾಣಿಸಿದ ಸಂದರ್ಭದಲ್ಲಿ ಮೈಯೆಲ್ಲಾ ಕಣ್ಣಾಗಿರುವಂತೆ ಎಚ್ಚರವಾಗಿರುವುದೇ ಹೆಚ್ಚು. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋದಾಗಲೇ ನಾವು ನಮ್ಮ ಹಾಗೂ ನಮ್ಮ ವಸ್ತುಗಳ ಬಗ್ಗೆ ಹೆಚ್ಚಿನ ಮುತುವರ್ಜಿ (Care) ವಹಿಸುತ್ತೇವೆ. ಇನ್ನು ಬೇರೊಂದು ದೇಶಕ್ಕೆ ಹೋದಾಗ ಇನ್ನಷ್ಟು ಜಾಗರೂಕರಾಗಿರುವುದಂತೂ ಸತ್ಯ. ಆದರೆ ಉಪ್ಟಿನ್ ಸಯಿದಿ ಎಂಬ ಟಿಕ್‌ಟಾಕರ್ (Tiktoker) ಬಳಕೆದಾರ ಹೆಸರು (@uptin) ಸಿಂಗಾಪುರ್‌ಗೆ ಪ್ರಯಾಣಿಸಿದ ಸಂದರ್ಭದಲ್ಲಿ ಆ ದೇಶ ಎಷ್ಟು ಸುರಕ್ಷಿತ ಎಂಬುದನ್ನು ಪತ್ತೆಹಚ್ಚಲು ಸಣ್ಣ ಪ್ರಯೋಗವೊಂದನ್ನು ಮಾಡಿದ್ದಾರೆ. ಹಾಗಾದ್ರೆ ಆ ದೇಶ ಅಷ್ಟೊಂದು ಸುರಕ್ಷಿತವಾಗಿದ್ಯಾ ಅಂತ ನೀವು ಕೇಳಿದ್ರೆ, ಹೌದು ಅನ್ನುತ್ತೆ ಈ ವಿಡಿಯೋ (Video). ಅಷ್ಟಕ್ಕೂ ಏನಪ್ಪಾ ಇದೆ ಈ ವಿಡಿಯೋದಲ್ಲಿ?


ಸುರಕ್ಷಿತ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಿಂಗಾಪುರ್


ವಿಶ್ವದಲ್ಲಿಯೇ ಅತ್ಯಂತ ಸುರಕ್ಷಿತ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಿಂಗಾಪುರ್, ಈ ಖ್ಯಾತಿಗೆ ಸರಿಯಾಗಿ ಹೊಂದುತ್ತದೆಯೇ ಎಂಬುದನ್ನು ಪರಿಶೀಲಿಸಲು ಉಪ್ಟಿನ್ ಬಯಸಿದ್ದರು ಎಂದು ತಮ್ಮ ಟಿಕ್‌ಟಾಕ್ ವಿಡಿಯೋದಲ್ಲಿ ತಿಳಿಸಿದ್ದಾರೆ. ಸ್ಟಾರ್‌ಬಕ್ಸ್‌ಗೆ ಹೋಗಿದ್ದಾಗ ಉಪ್ಟಿನ್ ಬೇಕೆಂದೇ ತಮ್ಮ ಲ್ಯಾಪ್‌ಟಾಪ್ ಅನ್ನು ಅಲ್ಲಿಯೇ ಬಿಟ್ಟು ಉಪಹಾರ ಸೇವಿಸಲು ಇನ್ನೊಂದು ಸ್ಥಳಕ್ಕೆ ಬಂದರು. ಸಿಂಗಾಪುರ್ ಎಷ್ಟು ಸುರಕ್ಷಿತ ಎಂಬ ಪರಿಶೀಲನೆಯನ್ನು ಉಪ್ಟಿನ್ ಇಲ್ಲಿಂದಲೇ ಕೈಗೆತ್ತಿಕೊಂಡರು.


ಅಪರಾಧವೆಸಗದ ನಾಗರಿಕರು


ಆಶ್ಚರ್ಯ ಎಂಬಂತೆ ಉಪ್ಟಿನ್ ಉಪಹಾರ ಮುಗಿಸಿ ಒಂದಷ್ಟು ಹೊತ್ತು ನಗರದಲ್ಲೆಲ್ಲಾ ಸಂಚರಿಸಿ ಪುನಃ ಲ್ಯಾಪ್‌ಟಾಪ್ ಇರಿಸಿದ ಅದೇ ಸ್ಟಾರ್‌ಬಕ್ಸ್‌ಗೆ ಬಂದಾಗ ಅವರು ನಿಜವಾಗಿಯೂ ಬೆರಗುಗೊಂಡರು. ಉಪ್ಟಿನ್ ಲ್ಯಾಪ್‌ಟಾಪ್ ಇರಿಸಿದಲ್ಲಿಯೇ ಒಂದಿಂಚೂ ಅಲುಗಾಡದಂತೆ ಹಾಗೆಯೇ ಇತ್ತು.


ಇದನ್ನೂ ಓದಿ: ಇದು ಅಂತಿಂತ ಕಣ್ಣಲ್ಲ ಬ್ಯಾಟರಿ ಕಣ್ಣು, ಕ್ಯಾನ್ಸರ್‌ನಿಂದ ದೃಷ್ಟಿ ಕಳೆದುಕೊಂಡ ವ್ಯಕ್ತಿಯ ಆವಿಷ್ಕಾರ ನೋಡಿ


ಉಪ್ಟಿನ್‌ ಸಿಂಗಾಪುರ್ ಬಗ್ಗೆ ತಿಳಿದುಕೊಂಡೇ ಇಷ್ಟೊಂದು ವಿಶ್ವಾಸದಿಂದ ಲ್ಯಾಪ್‌ಟಾಪ್ ಅನ್ನು ಸ್ಟಾರ್‌ಬಕ್ಸ್‌ನಲ್ಲಿ ಬಿಟ್ಟು ಹೋಗಿದ್ದರು ಎಂದು ತಿಳಿಸಿದ್ದಾರೆ. ಇಲ್ಲಿನ ಸರಕಾರದ ಅಂಕಿ ಅಂಶ ಹೇಳುವಂತೆ 2021 ರಿಂದ 250 ದಿನಗಳವರೆಗೆ ಸಿಂಗಾಪೂರ್ ಒಂದೇ ಒಂದು ಸಣ್ಣ ಸಾಮಾನ್ಯ ವಿಧವಾದ ಅಪರಾಧವನ್ನು ಕೂಡ ವರದಿ ಮಾಡಿಲ್ಲ ಎಂದಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಉಪ್ಟಿನ್ ತಮ್ಮ ಲ್ಯಾಪ್‌ಟಾಪ್ ಅನ್ನು ಎಲ್ಲಿ ಇರಿಸಿದ್ದರೋ ಅಲ್ಲಿಯೇ ಪಡೆದುಕೊಂಡಿದ್ದರು.


ಪ್ರಮಾಣಿಕತೆ ಹಾಗೂ ನಿಸ್ವಾರ್ಥತೆಗೆ ಹೆಸರುವಾಸಿ


ಉಪ್ಟಿನ್ ಹೇಳುವಂತೆ ಸಿಂಗಾಪೂರ ದೇಶವು ಸೌಂದರ್ಯಕ್ಕೆ ಮಾತ್ರ ಹೆಸರುವಾಸಿಯಾಗಿರುವುದಲ್ಲದೆ ಪ್ರಮಾಣಿಕತೆ ಹಾಗೂ ನಿಸ್ವಾರ್ಥತೆಗೆ ಕೂಡ ಜನಪ್ರಿಯ ದೇಶವಾಗಿದೆ. ಉಪ್ಟಿನ್ ಲ್ಯಾಪ್‌ಟಾಪ್ ತಂಟೆಗೆ ಏಕೆ ಯಾರೂ ಬರಲಿಲ್ಲ ಎಂಬುದಕ್ಕೆ ಉತ್ತರ ನೀಡಿರುವ ಉಪ್ಟಿನ್, ಇಲ್ಲಿರುವ ಪ್ರತಿಯೊಬ್ಬರ ಬಳಿಯೂ ಅಗತ್ಯವಾದ ಸೌಲಭ್ಯಗಳಿವೆ. ಹಾಗಾಗಿ ಅವರು ಮತ್ತೊಬ್ಬರ ವಸ್ತುಗಳಿಗೆ ಆಸೆ ಪಡುವುದೂ ಇಲ್ಲ ಮತ್ತು ಬಯಸುವುದೂ ಇಲ್ಲ ಎಂದು ತಿಳಿಸಿದ್ದಾರೆ.


ಒಂದು ದೇಶದಲ್ಲಿ ಅಪರಾಧ ಪ್ರಕರಣಗಳು ಶೂನ್ಯವಾಗಿರಬೇಕು ಎಂದಾದಲ್ಲಿ ಅಲ್ಲಿನ ಸರಕಾರ, ಪೊಲೀಸ್ ಅಧಿಕಾರಿಗಳು ಹಾಗೂ ಇನ್ನಿತರ ವಿಭಾಗಗಳು ಮಾತ್ರವೇ ಕೆಲಸಮಾಡಿದರೆ ಸಾಲದು. ಜೊತೆಗೆ ಅಲ್ಲಿನ ನಾಗರಿಕರು ಈ ಎಲ್ಲಾ ವಿಭಾಗಗಳೊಂದಿಗೆ ಜೊತೆಯಾಗಿ ಕೆಲಸ ಮಾಡಬೇಕು ಎಂಬ ಕಿವಿಮಾತನ್ನು ಹೇಳಿದ್ದಾರೆ.


ಅಪರಾಧವೆಸಗಿದವರಿಗೆ ಶಿಕ್ಷೆ ಗ್ಯಾರಂಟಿ


ಕ್ಯಾಮೆರಾಗಳಲ್ಲಿ ಸೆರೆಯಾಗುವ ಅಪರಾಧಗಳಿಗೆ ಸರಿಯಾದ ಶಿಕ್ಷೆಯೂ ಇದೆ. ಸಿಂಗಾಪುರದ ಸರಕಾರಿ ಏಜೆನ್ಸಿ ವೆಬ್‌ಸೈಟ್ ಉಲ್ಲೇಖಿಸಿರುವಂತೆ, ಕಳ್ಳತನ ಇಲ್ಲವೇ ಅಪರಾಧವೆಸಗುವವರಿಗೆ ಮೂರು ವರ್ಷಗಳವರೆಗಿನ ಜೈಲು ವಾಸವನ್ನು ಶಿಕ್ಷೆಯಾಗಿ ನೀಡಲಾಗುತ್ತದೆ ಇಲ್ಲವೇ ಜುಲ್ಮಾನೆ ವಿಧಿಸಲಾಗುತ್ತದೆ ಎಂದಾಗಿದೆ. ಅಪರಾಧವು ತೀವ್ರವಾಗಿದ್ದರೆ ಸೆರೆವಾಸ ಹಾಗೂ ಜುಲ್ಮಾನೆ ಎರಡೂ ಅಪರಾಧಿಗೆ ತಪ್ಪಿದ್ದಲ್ಲ ಎಂದು ತಿಳಿಸುತ್ತದೆ.


ಸಿಂಗಾಪುರ್ ಕುರಿತು ಅನುಭವ ಹಂಚಿಕೊಂಡ ಬಳಕೆದಾರರು


ಉಪ್ಟಿನ್ ಅವರ ವಿಡಿಯೋವು ಹಲವಾರು ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದ್ದು ಸಿಂಗಾಪುರದ ನಾಗರಿಕರ ವರ್ತನೆಗೆ ಬಹುಪರಾಕ್ ಹೇಳಿದ್ದಾರೆ. ಸಿಂಗಾಪುರ ಎಷ್ಟು ಸುರಕ್ಷಿತ ದೇಶ ಎಂಬುದಕ್ಕೆ ಬಳಕೆದಾರರು ಇನ್ನಷ್ಟು ನಿದರ್ಶನಗಳನ್ನು ಸೇರಿಸಿದ್ದು, ಒಬ್ಬ ಬಳಕೆದಾರರು ತಮಗೆ ಘಟಿಸಿದ ಸಂಭವವನ್ನು ಬರೆದುಕೊಂಡಿದ್ದಾರೆ.


ಸಿಂಗಾಪುರ್ ನಿವಾಸಿಯಾಗಿರುವ ಈ ಬಳಕೆದಾರರು ಅಕಸ್ಮಾತ್ ಆಗಿ ತಮ್ಮ ಫೋನ್ ಅನ್ನು ಬಸ್‌ನಿಲ್ದಾಣದಲ್ಲಿ ಮರೆತು ಹೋಗಿದ್ದರು. ಮರುದಿನ ಬಂದು ನೋಡಿದಾಗ ಅವರ ಫೋನ್ ಅನ್ನು ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಹಾಕಿಡಲಾಗಿತ್ತು ಮತ್ತು ಕಳೆದುಹೋದ ಫೋನ್ ಎಂಬ ಟಿಪ್ಪಣಿಯನ್ನು ಬ್ಯಾಗ್‌ನೊಂದಿಗೆ ಅಂಟಿಸಲಾಗಿತ್ತು ಎಂದು ನೆನಪಿಸಿಕೊಂಡಿದ್ದಾರೆ.

View this post on Instagram


A post shared by Uptin (@uptin)

ಉಪ್ಟಿನ್ ಮಾಡಿರುವುದು ಅತ್ಯಂತ ವೆಚ್ಚದಾಯಕ ಸಾಮಾಜಿಕ ಪ್ರಯೋಗ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದು, ಉಪ್ಟಿನ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಲಂಡನ್‌ನಲ್ಲಿ ನಿಮ್ಮ ವಸ್ತುವು ನಿಮ್ಮ ಮುಂದೆಯೇ ಕಳುವಾಗುತ್ತದೆ ಎಂದು ಇನ್ನೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: ಸೋಶಿಯಲ್‌ ಮೀಡಿಯಾಗಳಿಗೆ ಕೇಂದ್ರ ಲಗಾಮು, ಹೊಸ ನೀತಿಗಳ ಬಗ್ಗೆ ಇಲ್ಲಿದೆ ಮಾಹಿತಿ


ವಿಶ್ವದಲ್ಲಿಯೇ 9 ನೇ ಸುರಕ್ಷಿತ ದೇಶ: ಸಿಂಗಾಪುರ್


2022 ರ ಗ್ಲೋಬಲ್ ಪೀಸ್ ಅಂಕಿಅಂಶದ ಪ್ರಕಾರ ಸಿಂಗಾಪುರ್ ಅನ್ನು ವಿಶ್ವದಲ್ಲಿಯೇ 9 ನೇ ಸುರಕ್ಷಿತ ದೇಶ ಎಂದು ಕರೆಯಲಾಗಿದೆ. ಸಿಂಗಾಪುರದಲ್ಲಿ ವಾಸಿಸುವ ಹೆಚ್ಚಿನ ವಿದೇಶಿಗರ ಪ್ರಕಾರ ದೇಶವು ಅತ್ಯಂತ ಸುರಕ್ಷಿತ ದೇಶ ಎಂಬುದಾಗಿದೆ. ಸಾಮಾಜಿಕ ಭದ್ರತೆ ಮತ್ತು ಸಂಘರ್ಷದ ಕೊರತೆಯಿಂದಾಗಿ ದೇಶವು ಉನ್ನತ ಸ್ಥಾನದಲ್ಲಿದೆ.

First published: