Swiggy: ಸ್ವಿಗ್ಗಿಯಲ್ಲಿ ಆರ್ಡರ್ ಮಾಡ್ತಿದ್ರೆ ಇಲ್ಲಿಯವರೆಗೆ ಎಷ್ಟು ಖರ್ಚು ಮಾಡಿದ್ದೀರಿ ಅನ್ನೋದನ್ನೂ ಹೀಗೆ ನೋಡಬಹುದು

ಸ್ವಿಗ್ಗಿಯಂತಹ ಅಪ್ಲಿಕೇಶನ್‌ಗಳಲ್ಲಿ ಇಲ್ಲಿಯವರೆಗೆ ನೀವು ವ್ಯಯಿಸಿರುವ ಹಣವೆಷ್ಟು ಎಂಬುದನ್ನು ನೀವು ನಿಜವಾಗಿಯೂ ಟ್ರ್ಯಾಕ್ ಮಾಡಬಹುದು. ಆದರೆ ಸ್ವಿಗ್ಗಿ ಆರ್ಡರ್‌ಗಳಿಗೆ ನೀವು ಇಲ್ಲಿಯವರೆಗೆ ಎಷ್ಟು ಹಣವನ್ನು ಖರ್ಚು ಮಾಡಿದ್ದೀರಿ ಎಂಬುದನ್ನು ಟ್ರ್ಯಾಕ್ ಮಾಡಲು ವಾಸ್ತವವಾಗಿ ಒಂದು ಮಾರ್ಗವಿದೆ ನೋಡಿ.

 ಸ್ವಿಗ್ಗಿ

ಸ್ವಿಗ್ಗಿ

  • Share this:

ಮೊದಲೆಲ್ಲಾ ನಮಗೆ ಏನಾದರೂ ಹೊಟೇಲ್ (Hotel) ಊಟ ಮಾಡಬೇಕು ಅಂತ ಅನ್ನಿಸಿದರೆ, ನೇರವಾಗಿ ಹೊಟೇಲ್‌ಗೆ ಹೋಗಿ ಇಷ್ಟವಾದ ಆಹಾರ (Food) ತಿನ್ನುತ್ತಿದ್ದೆವು. ಹೀಗೆ ವಾರಕ್ಕೊಮ್ಮೆಯಾದರೂ ಹೊರಗಡೆ ಊಟ ಮಾಡುವ ಪದ್ಧತಿ ಇಟ್ಟುಕೊಂಡಿರುತ್ತಿದ್ದೆವು. ಆದರೆ ಈಗ ಪ್ರತಿಯೊಂದೂ ಆನ್‌ಲೈನ್‌ (Online) ಅವಲಂಬಿತವಾಗಿದೆ. ಏಕೆಂದರೆ ಆಹಾರ ಸಂಸ್ಥೆಗಳು ತಮ್ಮ ಮೊಬೈಲ್ ಆ್ಯಪ್‌ಗಳನ್ನು (Mobile Apps) ಪ್ರಾರಂಭಿಸಿದ ಮೇಲಂತೂ ಆಹಾರ ಪ್ರಿಯರು ತಮಗೆ ಇಷ್ಟವಾದ ಆಹಾರವನ್ನು ತಮ್ಮ ಇಷ್ಟವಾದ ಹೊಟೇಲ್ ಅಥವಾ ರೆಸ್ಟೋರೆಂಟ್ (Restaurants) ನಿಂದ ಮೊಬೈಲ್ ಆ್ಯಪ್‌ನ ಮೂಲಕ ಆರ್ಡರ್ ಮಾಡಿ ಮನೆ ಬಾಗಿಲಿಗೆ ಊಟವನ್ನು ತರಿಸಿಕೊಳ್ಳುತ್ತಿದ್ದಾರೆ ಹೀಗೆ ಆ್ಯಪ್ ಅವಲಂಬಿಸಿ ಆಹಾರ ಆರ್ಡರ್ ಮಾಡುವ ವ್ಯವಸ್ಥೆ ಕೂಡ ಪ್ರಚಲಿತದಲ್ಲಿದೆ.


ಒಟ್ಟಿನಲ್ಲಿ ಆಹಾರ ಸಂಸ್ಥೆಗಳ ಮೊಬೈಲ್ ಆ್ಯಪ್‌ಗಳು ಅನೇಕರ ಜೀವನವನ್ನು ಹಿಂದೆಂದಿಗಿಂತಲೂ ಸುಲಭವಾಗಿಸಿದ್ದು, ಕೋವಿಡ್‌ನಂತಹ ಸಂದರ್ಭದಲ್ಲಿ ಕೂಡ ಫುಡ್ ಡೆಲಿವರಿ ಆ್ಯಪ್‌ಗಳು ಜನಸಾಮಾನ್ಯರಿಗೆ ಪ್ರಯೋಜನಕಾರಿಯಾಗಿ ಮಾರ್ಪಡಾಗಿದ್ದವು.


ಸ್ವಿಗ್ಗಿ ಆರ್ಡರ್‌ಗಳಿಗೆ ನೀವು ಎಷ್ಟು ಖರ್ಚು ಮಾಡಿದ್ದೀರಿ? ಈಗ್ಲೇ ಟ್ರ್ಯಾಕ್ ಮಾಡಿ  
ನಿಸ್ಸಂದೇಹವಾಗಿ, ಭಾರತದಲ್ಲಿ ಹೆಚ್ಚು ಬಳಸಲಾಗುವ ಎರಡು ಆಹಾರ ವಿತರಣಾ ಅಪ್ಲಿಕೇಶನ್ ಗಳೆಂದರೆ ಸ್ವಿಗ್ಗಿ ಮತ್ತು ಜೊಮ್ಯಾಟೊ.  ಹಾಗಿದ್ದರೆ ಸ್ವಿಗ್ಗಿಯಂತಹ ಅಪ್ಲಿಕೇಶನ್‌ಗಳಲ್ಲಿ ಇಲ್ಲಿಯವರೆಗೆ ನೀವು ವ್ಯಯಿಸಿರುವ ಹಣವೆಷ್ಟು ಎಂಬುದನ್ನು ನೀವು ನಿಜವಾಗಿಯೂ ಟ್ರ್ಯಾಕ್ ಮಾಡಬಹುದು. ಆದರೆ ಸ್ವಿಗ್ಗಿ ಆರ್ಡರ್‌ಗಳಿಗೆ ನೀವು ಇಲ್ಲಿಯವರೆಗೆ ಎಷ್ಟು ಹಣವನ್ನು ಖರ್ಚು ಮಾಡಿದ್ದೀರಿ ಎಂಬುದನ್ನು ಟ್ರ್ಯಾಕ್ ಮಾಡಲು ವಾಸ್ತವವಾಗಿ ಒಂದು ಮಾರ್ಗವಿದೆ ನೋಡಿ.


ಇದನ್ನೂ ಓದಿ:  Dog Feeder: ಬೀದಿ ನಾಯಿಗಳ ಹಸಿವು ನೀಗಿಸಲು ವಿದ್ಯಾರ್ಥಿಗಳು ಮಾಡಿದ ಐಡಿಯಾ ನೋಡಿ

ಟ್ರಿಕ್ ನಿಜವಾಗಿಯೂ ಸರಳವಾಗಿದೆ ಆದರೆ ಸ್ವಿಗ್ಗಿಯಿಂದ ಆಹಾರವನ್ನು ಆರ್ಡರ್ ಮಾಡಲು ಮಾಡಿರುವ ಖರ್ಚನ್ನು ಕಂಡು ಹಿಡಿಯಲು ನೀವು ಮೊದಲು ನಿಮ್ಮ ಡೆಸ್ಕ್ ಟಾಪ್ ಅಥವಾ ಪಿಸಿಯನ್ನು ಬಳಸಬೇಕು. ಸ್ವಿಗ್ಗಿಯಲ್ಲಿ ನೀವು ಇಲ್ಲಿಯವರೆಗೆ ಎಷ್ಟು ಹಣದ ಆಹಾರವನ್ನು ಆರ್ಡರ್ ಮಾಡಿದ್ದೀರಿ ಅಂತ ತಿಳಿದುಕೊಳ್ಳಲು ನೀವು ಕೆಳಗಿನ ಹಂತಗಳನ್ನು ಅನುಸರಿಸಿದರೆ ಸಾಕು.


ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ 

  • ನಿಮ್ಮ ಕಂಪ್ಯೂಟರ್‌ನ ಯಾವುದೇ ವೆಬ್ ಬ್ರೌಸರ್‌ನಲ್ಲಿ ನೀವು ಮೊದಲು ಸ್ವಿಗ್ಗಿ ಅಪ್ಲಿಕೇಷನ್ ಅನ್ನು ತೆರೆಯಬೇಕಾಗುತ್ತದೆ. ನಿಮ್ಮ ಇ-ಮೇಲ್ ಅಥವಾ ಫೋನ್ ಸಂಖ್ಯೆಯೊಂದಿಗೆ ಲಾಗಿನ್ ಆಗಬಹುದು.

  • ಈಗ, ಮೇಲಿನ ಬಲ ಮೂಲೆಯಲ್ಲಿರುವ ನಿಮ್ಮ ಹೆಸರಿನ ಮೇಲೆ ಕ್ಲಿಕ್ ಮಾಡಿ.

  • ಮುಂದೆ, "ಆರ್ಡರ್" ಮೇಲೆ ಕ್ಲಿಕ್ ಮಾಡಿ ಮತ್ತು ಪುಟದ ಕೆಳಭಾಗದ ತನಕ ಹಾಗೆಯೇ ಸ್ಕ್ರಾಲ್ ಮಾಡಿ ಕೆಳಗಿರುವ "ಶೋ ಮೋರ್ ಆರ್ಡರ್” ಅನ್ನು ಕ್ಲಿಕ್ ಮಾಡಿರಿ.

  • ನಿಮ್ಮ ಆರ್ಡರ್ ಇತಿಹಾಸದ ಅಂತ್ಯವನ್ನು ನೀವು ತಲುಪಿದ ನಂತರ, ನಿಮ್ಮ ಮೌಸ್ ಅನ್ನು ಬಳಸಿಕೊಂಡು ರೈಟ್-ಕ್ಲಿಕ್ ಮಾಡಿ ಮತ್ತು "ಇನ್ಸ್ಪೆಕ್ಟ್" ಮೇಲೆ ಕ್ಲಿಕ್ ಮಾಡಿ.

  • ಈಗ ನಿಮ್ಮ ಪುಟದ ಕೆಳಭಾಗದಲ್ಲಿ ತೋರಿಸಲಾದ "ಕನ್ಸೋಲ್" ಆಯ್ಕೆಯನ್ನು ಕ್ಲಿಕ್ ಮಾಡಿ.

  • ಅಂತಿಮವಾಗಿ, ಈ ಕೆಳಗಿನ ಕೋಡ್ ಅನ್ನು ಕನ್ಸೋಲ್ ಗೆ ಅಂಟಿಸಿ ಮತ್ತು ಎಂಟರ್ ಬಟನ್ ಅನ್ನು ಒತ್ತಿರಿ.


amount_node_list = document.getElementsByClassName('_3Hghg');


amount_regex = /\d+.\d*/g;


total_amount = 0


for (let i = 0; i


current_amount = amount_node_list[i].innerHTML;


if (current_amount.match(amount_regex)) {


integer_amount = parseInt(current_amount.match(amount_regex)[0])


total_amount += integer_amount;


}


} console.log("Total amount spent on Swiggy so far is ", total_amount);


ಹೀಗೆ ಮಾಡಿ ನೋಡಿದ ಒಬ್ಬ ವ್ಯಕ್ತಿಗೆ 30,000 ರೂಪಾಯಿಗಳಿಗಿಂತಲೂ ಹೆಚ್ಚು ಹಣವನ್ನು ಸ್ವಿಗ್ಗಿಯಲ್ಲಿ ಆತ ಊಟಕ್ಕೆ ಆರ್ಡರ್ ಮಾಡಿರುವುದು ತಿಳಿದು ಬಂದಿದೆ.


ಇದನ್ನೂ ಓದಿ:  Fact Check: ನೀರಿನಲ್ಲಿ ಮುಳುಗಿ ಮೃತಪಟ್ಟವರನ್ನು ಉಪ್ಪಿನಿಂದ ಬದುಕಿಸಲು ಸಾಧ್ಯವೇ?

ಈ ಹಂತಗಳನ್ನು ಅನುಸರಿಸಿ, ಸ್ವಿಗ್ಗಿ ಆರ್ಡರ್‌ಗಳಿಗೆ ಇಲ್ಲಿಯವರೆಗೆ ಖರ್ಚು ಮಾಡಿದ ಒಟ್ಟು ಮೊತ್ತವನ್ನು ನೀವು ನೋಡಲು ಸಾಧ್ಯವಾಗುತ್ತದೆ. ಇದರಿಂದ, ಬಹುಶಃ ಇದು ನಿಮ್ಮ ಖರ್ಚನ್ನು ಟ್ರ್ಯಾಕ್ ಮಾಡಲು ಅಥವಾ ಭವಿಷ್ಯದಲ್ಲಿ ನಿಮ್ಮ ಆರ್ಡರ್ ಗಳನ್ನು ಮಿತಿಗೊಳಿಸಲು ನಿಮಗೆ ಸಹಾಯ ಮಾಡುತ್ತದೆ.

Published by:Ashwini Prabhu
First published: