ನೀವು ಸಾಮಾನ್ಯವಾಗಿ ಪ್ರತಿದಿನ ಮನೆಯಲ್ಲಿ ಊಟ ಮಾಡಿ ಮಾಡಿ ಬೋರ್ ಆಗಿದ್ದರೆ, ಸ್ವಲ್ಪ ಬಾಯಿ ರುಚಿಗೆ ಬದಲಾವಣೆ ಇರಲಿ ಅಂತ ನೀವು ಹೊರಗಡೆ ಹೊಟೇಲ್ (Hotel) ನಿಂದ ಆಹಾರವನ್ನು (Food Delivery) ಮನೆಗೆ ತರಿಸಿಕೊಳ್ಳುವುದಕ್ಕೆ ರೆಸ್ಟೋರೆಂಟ್ (Restaurant) ಅಗ್ರಿಗೇಟರ್ ಗಳಾದ ಜೋಮಾಟೊ (Zomato) ಮತ್ತು ಸ್ವಿಗ್ಗಿಯಂತಹ (Swiggy) ಮೊಬೈಲ್ ಅಪ್ಲಿಕೇಷನ್ ನಲ್ಲಿ ಹೋಗಿ ನಿಮ್ಮ ಇಷ್ಟದ ಹೊಟೇಲ್ ನಲ್ಲಿರುವ ಆಹಾರವನ್ನು ಆರ್ಡರ್ (Food Order) ಮಾಡುತ್ತೀರಿ. ಎಷ್ಟೋ ಬಾರಿ ನಮಗೆ ಈ ರೆಸ್ಟೋರೆಂಟ್ ಅಗ್ರಿಗೇಟರ್ ಗಳಾದ ಜೋಮಾಟೊ ಮತ್ತು ಸ್ವಿಗ್ಗಿಯ ಆಹಾರ ಡೆಲಿವರಿ ಮಾಡುವ ಉದ್ಯೋಗಿಗಳು (Employee) ಸರಿಯಾದ ಸಮಯಕ್ಕೆ ಎಂದರೆ ಹೇಳಿದ ಸಮಯಕ್ಕಿಂತ ಮೊದಲೇ ತಂದು ಆಹಾರವನ್ನು ನಮಗೆ ನೀಡುತ್ತಾರೆ .
ನಿಮ್ಮ ಎಲ್ಲಾ ಫುಡ್ ಪಾರ್ಟ್ನರ್ ಗಳು ಈಗ ಬ್ಯುಸಿ ಆಗಿದ್ದಾರೆ
ಆದರೆ ಕೆಲವೊಮ್ಮೆ ಆ ಅಪ್ಲಿಕೇಷನ್ ನಲ್ಲಿ ಊಟ ಆರ್ಡರ್ ಮಾಡುವುದಕ್ಕೆ ಹೋದರೆ ಒಂದು ಸಂದೇಶ ಬರುತ್ತಾ ಇದೆ, ಅದು ಜನರಿಗೆ ತುಂಬಾನೇ ಬೇಸರವನ್ನು ಮೂಡಿಸುತ್ತಿದೆ ಎಂದು ಹೇಳಬಹುದು. ಅದೇನಪ್ಪಾ ಎಂದರೆ ‘ನಿಮ್ಮ ಎಲ್ಲಾ ಫುಡ್ ಪಾರ್ಟ್ನರ್ ಗಳು ಈಗ ಬ್ಯುಸಿ ಆಗಿದ್ದಾರೆ’ ಅಂತ.
ಇದನ್ನೂ ಓದಿ: Breakfast Recipe: ಬೆಳಗಿನ ಉಪಹಾರಕ್ಕೆ ಮಕ್ಕಳಿಗೆ ಇಷ್ಟವಾಗೋ ರುಚಿಕರ ಪಡ್ಡು
ಈ ಸಂದೇಶ ನೋಡಿ ಜನರಿಗೆ ಬೇಸರವಾಗಿ ಆಹಾರ ಆರ್ಡರ್ ಮಾಡುವುದನ್ನೇ ಅರ್ಧಕ್ಕೆ ಕೈ ಬಿಡುತ್ತಾರೆ. ಈ ಸಂದೇಶವು ಕೆಲವು ದಿನಗಳಿಂದ ತುಂಬಾನೇ ಸಾಮಾನ್ಯವಾಗಿ ಬಿಟ್ಟಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ರೆಸ್ಟೋರೆಂಟ್ ಅಗ್ರಿಗೇಟರ್ ಜೋಮಾಟೊ ಮತ್ತು ಸ್ವಿಗ್ಗಿಯವರು ಆಹಾರದ ಆರ್ಡರ್ ತಲುಪಿಸಲು ತೆಗೆದುಕೊಳ್ಳುವ ಸಮಯಕ್ಕಿಂತಲೂ ಹೆಚ್ಚು ಸಮಯವನ್ನು ಈಗ ತೆಗೆದುಕೊಳ್ಳುತ್ತಿದ್ದಾರೆ ಎನ್ನುವುದು ಸಹ ಗ್ರಾಹಕರ ಅಭಿಪ್ರಾಯವಾಗಿದೆ.
ಈ ಸಂದೇಶ ಬರಲು ನಿಜವಾದ ಕಾರಣ ಏನು
ಏಕೆ ಈ ಸಂದೇಶವನ್ನು ನೀವು ಆಗಾಗ್ಗೆ ನೋಡುತ್ತಿದ್ದೀರಿ, ನಿಜವಾಗಲೂ ಇವರೆಲ್ಲಾ ಬ್ಯುಸಿ ಇದ್ದಾರೆಯೇ ಎಂದು ನೀವು ಆಲೋಚಿಸಿದರೆ, ಅದು ತಪ್ಪು. ಇದಕ್ಕೆ ಮುಖ್ಯವಾದ ಕಾರಣ ಎಂದರೆ ಮೆಟ್ರೋ ನಗರಗಳಲ್ಲಿ ಈ ರೆಸ್ಟೋರೆಂಟ್ ಅಗ್ರಿಗೇಟರ್ ಗಳ ಬಳಿ ಡೇಲಿವರಿ ಎಕ್ಸಿಕ್ಯೂಟಿವ್ಸ್ ಗಳ ತುಂಬಾನೇ ಕೊರತೆ ಇದೆಯಂತೆ, ಇದೇ ಕಾರಣಕ್ಕೆ ನೀವು ಆರ್ಡರ್ ಮಾಡಿದ ಊಟ ತಡವಾಗಿ ಬರುತ್ತಿದೆ ಮತ್ತು ನೀವು ಆಗಾಗ್ಗೆ ‘ನಿಮ್ಮ ಎಲ್ಲಾ ಫುಡ್ ಪಾರ್ಟ್ನರ್ ಗಳು ಈಗ ಬ್ಯುಸಿ ಆಗಿದ್ದಾರೆ’ ಎಂಬ ಸಂದೇಶಗಳನ್ನು ಸಹ ನೀವು ನೋಡುತ್ತಿರುವಿರಿ ಎಂದು ಹೇಳಲಾಗುತ್ತಿದೆ.
ಸೂಪರ್ ಡೇಲಿ’ ಸೇವೆಗಳ ರದ್ದು
ಸುದ್ದಿ ಮಾಧ್ಯಮದ ವರದಿಯ ಪ್ರಕಾರ, ಈ ಮೆಟ್ರೋ ನಗರಗಳಲ್ಲಿ ಸ್ವಿಗ್ಗಿಯು ಇನ್ನೂ ಕೆಲವೇ ದಿನಗಳಲ್ಲಿ ಅದರ ಮನೆಗೆ ಬೇಕಾಗಿರುವ ದಿನಸಿ ಸಾಮಾನುಗಳನ್ನುಡೆಲಿವರಿ ಮಾಡುವ ‘ಸೂಪರ್ ಡೇಲಿ’ ಎಂಬ ಸೇವೆಗಳನ್ನು ರದ್ದು ಮಾಡುವ ಎಲ್ಲಾ ಲಕ್ಷಣಗಳು ಇವೆಯಂತೆ ಎಂದು ಹೇಳಲಾಗುತ್ತಿದೆ. ಇಷ್ಟೇ ಅಲ್ಲದೆ, ಬೆಂಗಳೂರು ಮೂಲದ ಕಂಪನಿಯು ‘ಜೇನಿ’ ಸರ್ವಿಸಸ್ ಅನ್ನು ತಾತ್ಕಾಲಿಕವಾಗಿ ದೇಶಾದ್ಯಂತ ಕೆಲವು ಮಹಾ ನಗರಗಳಲ್ಲಿ ಈಗಾಗಲೇ ರದ್ದು ಗೊಳಿಸಿದ್ದಾರೆ.
ಇದನ್ನೂ ಓದಿ: Mangoes: ರಾಸಾಯನಿಕಗಳಿಲ್ಲದ ರುಚಿಕರವಾದ ಮಾವಿನ ಹಣ್ಣುಗಳನ್ನು ಕಂಡುಹಿಡಿಯುವುದು ಹೇಗೆ? ಇಲ್ಲಿದೆ ಮಾಹಿತಿ
ರೆಸ್ಟೋರೆಂಟ್ ಅಗ್ರಿಗೇಟರ್ ಜೋಮಾಟೊ ಮತ್ತು ಸ್ವಿಗ್ಗಿಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿರುವ ಡೇಲಿವರಿ ಬಾಯ್ಸ್ ಗಳು ಇತ್ತೀಚೆಗೆ ಭಾರಿ ಡಿಮ್ಯಾಂಡ್ ಇರುವಂತಹ ಕ್ವಿಕ್ ಕಾಮರ್ಸ್ ಮತ್ತು ಮೊಬಿಲಿಟಿ ಸೇವೆಗಳಲ್ಲಿ ಕೆಲಸವನ್ನು ಹುಡುಕಿಕೊಂಡು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ಮತ್ತು ಈ ಅಕಾಲಿಕ ಮಳೆಯಿಂದ ಸಹ ಅನೇಕರು ಕೆಲಸಕ್ಕೆ ಹಾಜರಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಉದ್ಯೋಗಿಗಳ ಕೊರತೆ
ಮಾಧ್ಯಮ ವರದಿಗಳ ಪ್ರಕಾರ ಗ್ರಾಹಕರಿಗೆ ಸೇವೆ ನೀಡುವ ಕಂಪನಿಗಳಲ್ಲಿ ಉದ್ಯೋಗಿಗಳ ಕೊರತೆ ತುಂಬಾನೇ ಇದೆ ಎಂದು ಹೇಳಬಹುದು. ‘ಜೇನಿ ಸರ್ವಿಸಸ್’ ಅನ್ನು ಈಗಾಗಲೇ ತಾತ್ಕಾಲಿಕವಾಗಿ ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್ ನಗರಗಳಲ್ಲಿ ರದ್ದು ಗೊಳಿಸಿದ್ದಾರೆ. ಸದ್ಯಕ್ಕೆ ಈ ‘ಜೇನಿ ಸರ್ವಿಸಸ್’ 68 ನಗರಗಳಲ್ಲಿ ಕೇವಲ 65 ನಗರಗಳಲ್ಲಿ ಮಾತ್ರವೇ ಮುಂದುವರೆದಿದೆ ಎಂದು ಹೇಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ