Viral Photo: ಮಗಳು ಡಾಕ್ಟರೇಟ್ ಪದವಿ ಪಡೆದ ಖುಷಿಗೆ ಈ ತಾಯಿ ಏನು ಮಾಡಿದ್ದಾಳೆ ಗೊತ್ತಾ? ಇಲ್ಲಿದೆ ನೋಡಿ

ಹೆತ್ತವರಿಗೆ ತಮ್ಮ ಮಕ್ಕಳ ಸಾಧನೆಯನ್ನು ದೊಡ್ಡ ಹೋರ್ಡಿಂಡ್​​ಗಳಲ್ಲಿ ನೋಡುವುದು, ಟಿವಿಯಲ್ಲಿ ನೋಡುವುದು ಎಂದರೆ ತುಂಬಾನೇ ಇಷ್ಟ. ಅಮೆರಿಕದ ನ್ಯೂಜೆರ್ಸಿಯ ಮಹಿಳೆಯೊಬ್ಬರು ಡಾಕ್ಟರೇಟ್ ಪದವಿ ಪಡೆದ ತನ್ನ ಮಗಳನ್ನು ಅಭಿನಂದಿಸಲು ಒಂದು ದೊಡ್ಡ ಹೋರ್ಡಿಂಗ್ ಹಾಕಿ ಗಮನ ಸೆಳೆಯುತ್ತಿದ್ದಾರೆ.

ಡಾಕ್ಟರೇಟ್ ಪದವಿ ಪಡೆದ ಯುವತಿ

ಡಾಕ್ಟರೇಟ್ ಪದವಿ ಪಡೆದ ಯುವತಿ

  • Share this:
ಪೋಷಕರಾದವರಿಗೆ ತಮ್ಮ ಮಗ (Son) ಅಥವಾ ಮಗಳು (Daughter)  ಚೆನ್ನಾಗಿ ಓದಿಕೊಂಡು ಪರೀಕ್ಷೆಯಲ್ಲಿ (Exam) ಉತ್ತಮ ಅಂಕಗಳೊಂದಿಗೆ ಪಾಸ್ (Pass) ಮಾಡಿ, ಒಳ್ಳೆಯ ಕೆಲಸ ಗಿಟ್ಟಿಸಿದರೆ ಅದೇ ಅವರಿಗೆ ದೊಡ್ಡ ಯಶಸ್ಸು (Success) ಮತ್ತು ದೊಡ್ಡ ಖುಷಿಯ (Happy) ವಿಚಾರ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹಾಗೆಯೇ ಮಕ್ಕಳಿಗೂ, ಅವರ ಯಶಸ್ಸು ನೋಡಿ ತಂದೆ ತಾಯಿ (Parents)  ಖುಷಿ ಪಡುತ್ತಿದ್ದಾರೆ ಎಂದರೆ ಅದೇ ಅವರಿಗೆ ಪರೀಕ್ಷೆಯಲ್ಲಿ ಇನ್ನೂ ಚೆನ್ನಾಗಿ ಮಾಡಲು ಪ್ರೇರಣೆ ಆಗಿರುತ್ತದೆ ಎಂದು ಹೇಳಬಹುದು. ಮೊದಲೆಲ್ಲಾ ಈ 10ನೇ ತರಗತಿಯಲ್ಲಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಫರ್ಸ್ಟ್ ಕ್ಲಾಸ್ ನಲ್ಲಿ ಪಾಸ್ ಮಾಡಿದರೆ ನೆರೆಹೊರೆಯವರಿಗೆಲ್ಲಾ ಸಿಹಿ ಹಂಚಿ ಸಂಭ್ರಮ ಪಡುತ್ತಿದ್ದರು.

ಮಕ್ಕಳು ಸಾಧನೆ ಮಾಡಿದಾಗ ಪೋಷಕರ ಖುಷಿ ಹೇಗಿರುತ್ತೆ? 
ಈಗಂತೂ ಈ 10ನೇ ತರಗತಿಯಲ್ಲಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಫೋಟೋ ಸಮೇತವಾಗಿ ಅವರು ಓದಿದ ಕಾಲೇಜಿನವರು ದಿನಪತ್ರಿಕೆಗಳಲ್ಲಿ ಮತ್ತು ಶಾಲೆಯ ಫಲಿತಾಂಶದ ಬಗ್ಗೆ ಜಾಹೀರಾತು ನೀಡುವ ದೊಡ್ಡ ದೊಡ್ಡ ಹೋರ್ಡಿಂಗ್ ಗಳನ್ನು ಹಾಕಿಸುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ಬೇರೆ ವಿದ್ಯಾರ್ಥಿಗಳಿಗೆ ಪ್ರೇರಣೆ ಸಹ ಆಗುತ್ತದೆ ಎಂದು ಹೇಳಬಹುದು.

ಅಮೆರಿಕದ ನ್ಯೂಜೆರ್ಸಿಯ ಮಹಿಳೆಯೊಬ್ಬರು ಡಾಕ್ಟರೇಟ್ ಪದವಿ ಪಡೆದ ತನ್ನ ಮಗಳನ್ನು ಅಭಿನಂದಿಸಲು ಒಂದು ದೊಡ್ಡ ಹೋರ್ಡಿಂಗ್ ಹಾಕಿದ್ದಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆಯುತ್ತಿದ್ದಾರೆ.

ಜಾಹೀರಾತು ಫಲಕ ಬಾಡಿಗೆಗೆ ಪಡೆಯಲು ಈಕೆ ಖರ್ಚು ಮಾಡಿದ್ದು ಎಷ್ಟು?
ಕೇಂಡ್ರಾ ಬಸ್ಬೀ ಎಂಬ ತಾಯಿ ತನ್ನ ಮಗಳ ಬಗ್ಗೆ ಎಷ್ಟು ಹೆಮ್ಮೆ ಪಡುತ್ತಿದ್ದಾಳೆಂದರೆ, ಅವಳು ತನ್ನ ಮಗಳ ಸಾಧನೆಯ ಬಗ್ಗೆ ಇಡೀ ನಗರಕ್ಕೆ ಗೊತ್ತಾಗಲಿ ಅಂತ ನಿರ್ಧರಿಸಿ ಹೆಮ್ಮೆಯ ತಾಯಿ ಒಂದು ಜಾಹೀರಾತು ಫಲಕವನ್ನು ಬಾಡಿಗೆಗೆ ಪಡೆಯಲು 1,250 ಡಾಲರ್ ಹಣವನ್ನು ಖರ್ಚು ಮಾಡಿದ್ದಾರೆ. ದುಡ್ಡು ಖರ್ಚಾದರೂ ಪರವಾಗಿಲ್ಲ, ಅದರ ಪರಿಣಾಮವು ಅಮೂಲ್ಯವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:  No Entry To Indians: ಭಾರತದ ಈ ಪ್ರದೇಶಗಳಿಗೆ ವಿದೇಶಿಗರಿಗೆ ಮಾತ್ರ ಪ್ರವೇಶವಂತೆ! ಆದ್ರೆ ಭಾರತೀಯರಿಗೆ ನೋ ಎಂಟ್ರಿ

ಮಗಳ ಬಗ್ಗೆ ತಾಯಿ ಬರೆದುಕೊಂಡಿದ್ದೇನು?
ಜುಲೈ 28 ರಂದು ಬಸ್ಬೀ ತಮ್ಮ ಸಾಮಾಜಿಕ ಮಾಧ್ಯಮವಾದ ಫೇಸ್‌ಬುಕ್ ಖಾತೆಯ ಪುಟದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, "ನೀವು ನನ್ನ ಹೊಳೆಯುವ ತಾರೆಯಾಗಿರಬೇಕು. ನೀವು ಎಲ್ಲೇ ಇದ್ದರೂ ನೀವು ಮಾಡುವ ಸಾಧನೆಯಿಂದ ಹೊಳೆಯುತ್ತಿರಬೇಕು! ನಾನು ಹೆಮ್ಮೆಯ ತಾಯಿ. ನಾನು ನಿನ್ನನ್ನು ತುಂಬಾನೇ ಪ್ರೀತಿಸುತ್ತೇನೆ ಡಾ. ಕ್ರಿಸ್ಟಿನ್ ಎಸ್. ಸ್ಮಾಲ್ಸ್" ಎಂದು ಬರೆದಿದ್ದಾರೆ.

ಈ ಪೋಸ್ಟ್ ನೂರಾರು ಲೈಕ್ಸ್ ಮತ್ತು ಕಾಮೆಂಟ್ ಗಳನ್ನು ಪಡೆದಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಡಾ. ಸ್ಮಾಲ್ಸ್ ಅವರ ಸಾಧನೆಗಾಗಿ ಮತ್ತು ಶ್ರೀಮತಿ ಬಸ್ಬೀ ಅವರನ್ನು ತುಂಬಾ ಹೆಮ್ಮೆ ಪಟ್ಟಿದ್ದಕ್ಕಾಗಿ ಅಭಿನಂದಿಸುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.ಕ್ಯಾಮ್ಡೆನ್ ಬಳಿಯ ಏರ್‌ಪೋರ್ಟ್ ಸರ್ಕಲ್ ನ ದಕ್ಷಿಣಕ್ಕಿರುವ ಮಾರ್ಗ-130 ರಲ್ಲಿ ಹಾದು ಹೋಗುವ ಪ್ರತಿಯೊಬ್ಬರಿಗೂ ಡಾ. ಕ್ರಿಸ್ಟಿನ್ ಎಸ್. ಸ್ಮಾಲ್ಸ್ ಅವರ ಮುಖ ಮತ್ತು ಅವರ ಸಾಧನೆಗಳು ಎದ್ದು ಕಾಣುತ್ತಿದ್ದವು. "ಅಲ್ಲಿನ ಮಕ್ಕಳಿಗೆ ಕ್ಯಾಮ್ಡೆನ್ ನ ಹೊರಗೆ ಏನಿದೆ ಎಂದು ನಿಜವಾಗಿಯೂ ತಿಳಿದಿಲ್ಲ. ಜಾಹೀರಾತು ಫಲಕದಲ್ಲಿ ಯಾರೋ ಒಬ್ಬರು ವೈದ್ಯರಾಗುತ್ತಿರುವುದನ್ನು ನೋಡಿದ ಹಾಗಿದೆ" ಎಂದು ಸ್ಮಾಲ್ಸ್ ಹೇಳಿದರು.

ಸಂತಸದಿಂದ ಬಸ್ಬೀ ಅವರು ಏನು ಹೇಳಿದ್ದಾರೆ
ಸುದ್ದಿ ಮಾಧ್ಯಮದ ವರದಿಯ ಪ್ರಕಾರ, ಬಸ್ಬೀ ಅವರ ಮಗಳು ಕ್ರಿಸ್ಟಿನ್ ಅವರು ಜುಲೈ 29 ರಂದು ಫಿಲಡೆಲ್ಫಿಯಾ ಕಾಲೇಜ್ ಆಫ್ ಆಸ್ಟಿಯೋಪತಿಕ್ ಮೆಡಿಸಿನ್ ನಿಂದ ಮನಃಶಾಸ್ತ್ರದ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದರು.

ಇದನ್ನೂ ಓದಿ: Fashion Show: 18ರ ಹುಡುಗಿಯರಿಗೆ ಪೈಪೋಟಿ ಕೊಟ್ಟ ಗೃಹಿಣಿಯರು! ಇದು Mrs Karnataka ಫ್ಯಾಶನ್ ಶೋ ಝಲಕ್

"ಐದು ವರ್ಷದವಳಿದ್ದಾಗ, ಅವಳು ಮುಂದೆ ದೊಡ್ಡವಳಾದ ಮೇಲೆ ವೈದ್ಯೆ ಆಗುತ್ತೇನೆ ಅಂತ ಹೇಳುತ್ತಿದ್ದಳು. ಏನಾದರೂ ಒಂದು ದೊಡ್ಡ ಸಾಧನೆ ಮಾಡಬೇಕೆಂಬುದು ಆಕೆಯ ಹಂಬಲವಾಗಿತ್ತು. ಅದಕ್ಕಾಗಿ ಆಕೆಯ ಸಾಧನೆಯನ್ನು ನಾನು ಆಚರಿಸಲೇಬೇಕು ಎಂದು ಈ ದೊಡ್ಡ ಹೋರ್ಡಿಂಗ್ ಮಾಡಿಸಿದೆ" ಎಂದು ಕ್ಯಾಮ್ಡೆನ್ ನ ಮಿಸ್ ಬಸ್ಬೀ ಅವರು ಹೇಳಿದ್ದಾರೆ.
Published by:Ashwini Prabhu
First published: