ನೀವು ಎಲ್ಲೋ ಒಂದು ಊರಿಗೆ ಹೋಗುತ್ತಿದ್ದಾಗ ಮುಖ್ಯ ಹೆದ್ದಾರಿಯ ಸ್ವಲ್ಪ ಒಳಗೆ ಕೆಲವೊಂದು ದೊಡ್ಡ ಕಾರ್ಖಾನೆಗಳನ್ನು (Factory) ನೋಡುತ್ತೀರಿ, ಆದರೆ ಆ ಕಾರ್ಖಾನೆಯನ್ನು ನೀವು ನೋಡಿದಾಗ ನಿಮ್ಮ ದೃಷ್ಟಿ ಮೊದಲಿಗೆ ಅದರ ಮೇಲಿರುವ ಚಿಕ್ಕ ಚಿಕ್ಕ ವೃತ್ತಾಕಾರದಲ್ಲಿರುವ ಚಕ್ರಗಳ (Round Wheel) ಮೇಲೆ ಬೀಳುತ್ತದೆ. ಏನಿದು ರೌಂಡ್ ಆಗಿರುವ ಫ್ಯಾನಿನ (Fan) ಆಕಾರದಲ್ಲಿರುವ ಯಂತ್ರಗಳು ಅಂತ ನಾವು ತುಂಬಾ ಸಾರಿ ತಲೆ ಕೆಡೆಸಿಕೊಂಡಿರುವುದು ಇರುತ್ತದೆ, ಆದರೆ ಇದರ ಬಗ್ಗೆ ನಾವು ಯಾರ ಬಳಿಯೂ ಅಷ್ಟಾಗಿ ಕೇಳಿರುವುದಿಲ್ಲ. ಇನ್ನೂ ಕೆಲವು ಕಾರ್ಖಾನೆಗಳನ್ನು ನಾವು ನೋಡಿರುತ್ತೇವೆ, ಅದರ ಮೇಲ್ಛಾವಣಿಯಲ್ಲಿ ಉದ್ದನೆಯ ದೊಡ್ಡ ದೊಡ್ಡ ಕೊಳವೆಗಳು ಇದ್ದು, ಅದರಿಂದ ಹೊಗೆಯು ಹಾಗೆ ಗಾಳಿಯಲ್ಲಿ (Air) ಹೋಗುತ್ತಿರುವುದನ್ನು ಸಹ ನಾವು ನೋಡಿರುತ್ತೇವೆ.
ಬನ್ನಿ ಹಾಗಾದರೆ ಇವುಗಳು ಏನು? ಇವುಗಳಿಂದ ಕಾರ್ಖಾನೆಗಳಿಗೆ ಏನು ಪ್ರಯೋಜನವಾಗುವುದು ಅಂತ ತಿಳಿದುಕೊಳ್ಳೋಣ.
ಏನಿದು ರೌಂಡ್ ಆಕಾರದ ಯಂತ್ರ?
ಈ ರೌಂಡ್ ರೌಂಡ್ ಆಕಾರದ ಯಂತ್ರಗಳನ್ನು ನೀವು ನೋಡಿದಾಗ ನಿಮಗೆ ಈ ದುಂಡಗಿನ ಚಕ್ರಗಳು ಏನು? ಅವುಗಳನ್ನು ಕಾರ್ಖಾನೆಗಳ ಮೇಲ್ಛಾವಣಿಯ ಮೇಲೆ ಏಕೆ ಸ್ಥಾಪಿಸಿರುತ್ತಾರೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳು ಇಲ್ಲಿವೆ ನೋಡಿ. ವಾಸ್ತವವಾಗಿ ಹೇಳಬೇಕೆಂದರೆ ಈ ರೌಂಡ್ ಆಕಾರದಲ್ಲಿರುವ ಯಂತ್ರಗಳು ಒಂದು ರೀತಿಯ ಎಕ್ಸಾಸ್ಟ್ ಫ್ಯಾನ್ ಗಳು ಇದ್ದಂತೆ.
ಇದನ್ನೂ ಓದಿ: Flipkart Delivery Boy: ಗ್ರಾಹಕರಿಗೆ ತಲುಪದ 4 ಲಕ್ಷ ರೂಪಾಯಿಯ 61 ಗ್ಯಾಜೆಟ್! ಡೆಲಿವರಿ ಕೊಡೋಕೆ ಹೋದ ಹುಡುಗನೇ ಎಸ್ಕೇಪ್!
ಈ ಎಕ್ಸಾಸ್ಟ್ ಫ್ಯಾನ್ ಗಳು ಎಂದರೆ ನಿಮಗೆ ಥಟ್ಟನೆ ನಿಮ್ಮ ಅಡುಗೆಮನೆಯಲ್ಲಿ ಮೇಲೆ ಒಂದು ಮೂಲೆಯಲ್ಲಿರುವುದು ಅಂತ ಗೊತ್ತಾಗುತ್ತದೆ. ಅಡುಗೆಮನೆಯಲ್ಲಿ ನಾವು ಅಡುಗೆ ಮಾಡುವಾಗ ಆ ಕೋಣೆಯಲ್ಲಿ ಜಮೆ ಆಗುವ ಹೊಗೆಯನ್ನು ಹೊರಗೆ ಕಳುಹಿಸುವ ಕೆಲಸ ಮಾಡುತ್ತವೆ ಈ ಎಕ್ಸಾಸ್ಟ್ ಫ್ಯಾನ್ ಗಳು ಅಂತ ಹೇಳಬಹುದು. ಈ ಎಕ್ಸಾಸ್ಟ್ ಫ್ಯಾನ್ ಗಳನ್ನು ಕಾರ್ಖಾನೆಯಲ್ಲಿ ಟರ್ಬೋ ವೆಂಟಿಲೇಟರ್ ಗಳು ಎಂದು ಕರೆಯುತ್ತಾರೆ.
ಟರ್ಬೋ ವೆಂಟಿಲೇಟರ್ ಎಂದರೇನು?
ಟರ್ಬೋ ವೆಂಟಿಲೇಟರ್ ಅನ್ನು ರೂಫ್ಟಾಪ್ ಏರ್ ವೆಂಟಿಲೇಟರ್, ಟರ್ಬೈನ್ ವೆಂಟಿಲೇಟರ್, ರೂಫ್ ಎಕ್ಸ್ಟ್ರಾಕ್ಟರ್ ಮತ್ತು ರೂಫ್ಟಾಪ್ ವೆಂಟಿಲೇಟರ್ ಎಂದೂ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ಫ್ಯಾಕ್ಟರಿಗಳನ್ನು ಹೊರತುಪಡಿಸಿ, ಗೋದಾಮುಗಳು, ಅಂಗಡಿಗಳು, ರೈಲ್ವೆ ನಿಲ್ದಾಣಗಳು ಮತ್ತು ಇತರ ಆವರಣಗಳ ಛಾವಣಿಗಳ ಮೇಲೆ ಈ ಮೇಲ್ಛಾವಣಿ ವೆಂಟಿಲೇಟರ್ ಗಳನ್ನು ನೀವು ನೋಡಬಹುದು.
ಈ ಮೊದಲು ಈ ಮೇಲ್ಛಾವಣಿಗಳು ಕಾರ್ಖಾನೆಗಳ ಛಾವಣಿಗಳ ಮೇಲೆ ಮಾತ್ರ ಕಾಣುತ್ತಿದ್ದವು. ಆದರೆ ಅವುಗಳ ಕೆಲಸ ಮತ್ತು ಕಾರ್ಯಕ್ಷಮತೆಯನ್ನು ಪರಿಗಣಿಸಿ, ಅವುಗಳನ್ನು ಇತರ ಅನೇಕ ಸ್ಥಳಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬಳಸಲಾಗುತ್ತಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಟರ್ಬೋ ವೆಂಟಿಲೇಟರ್ ಗಳು ಹೇಗೆ ಕೆಲಸ ಮಾಡುತ್ತವೆ?
ಟರ್ಬೋ ವೆಂಟಿಲೇಟರ್ ಗಳು ನಿಧಾನವಾಗಿ ಚಲಿಸುವ ಫ್ಯಾನ್ ಗಳಾಗಿದ್ದು, ಅವು ಕಾರ್ಖಾನೆ ಅಥವಾ ಇನ್ನಾವುದೇ ಆವರಣದೊಳಗೆ ಜಮೆ ಆಗುವಂತಹ ಅಥವಾ ಬರುವ ಬಿಸಿ ಗಾಳಿಯನ್ನು ಹೊರಕ್ಕೆ ಹಾಕುವ ಕೆಲಸ ಮಾಡುತ್ತವೆ. ಈ ವೆಂಟಿಲೆಟರ್ ಗಳು ದೊಡ್ಡ ದೊಡ್ಡ ಆವರಣದೊಳಗಿನ ದುರ್ವಾಸನೆ ಮತ್ತು ತೇವಾಂಶವನ್ನು ಸಹ ಇವುಗಳು ತೆಗೆದು ಹಾಕಬಹುದು. ಆದ್ದರಿಂದ, ಪ್ರತಿ ದೊಡ್ಡ ಕ್ಯಾಂಪಸ್ ನಲ್ಲಿ ಇದನ್ನು ಬಳಸುವುದು ಪ್ರಯೋಜನಕಾರಿ ಎಂದು ಜನರು ಅರಿತುಕೊಂಡಿದ್ದಾರೆ.
ಇದನ್ನೂ ಓದಿ: Bacteria: ದೇಹದ ಬ್ಯಾಕ್ಟೀರಿಯಾದಿಂದಲೇ ಆಭರಣ ತಯಾರಿಕೆ: ಮಹಿಳೆಯಿಂದ ಅಚ್ಚರಿಯ ಸಾಧನೆ
ಟರ್ಬೋ ವೆಂಟಿಲೇಟರ್ ಗಳು ಕೆಳಗಿರುವ ದೊಡ್ಡ ದೊಡ್ಡ ಅವರಣಗಳಲ್ಲಿನ ಗಾಳಿಯನ್ನು ತನ್ನೆಡೆಗೆ ಹೀರಿಕೊಂಡು ಹೊರಕ್ಕೆ ಹಾಕುವ ಕೆಲಸವನ್ನು ಮಾಡುವ ಛಾವಣಿಗಳ ಮೇಲೆ ಅಳವಡಿಸಲಾಗಿರುವ ಸ್ವಯಂ ಚಾಲಿತ ಸಾಧನಗಳಾಗಿವೆ ಎಂದು ಹೇಳಬಹುದು. ಅವು ವಾತಾವರಣದ ಗಾಳಿಯಿಂದ ನಿರ್ವಹಿಸಲ್ಪಡುವುದರಿಂದ ಅವುಗಳಿಗೆ ಯಾವುದೇ ರೀತಿಯ ವಿದ್ಯುತ್ ಶಕ್ತಿ ಮತ್ತು ಇನ್ನಿತರೆ ಶಕ್ತಿಯ ಅಗತ್ಯವಿಲ್ಲ ಎಂದು ಹೇಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ