• Home
  • »
  • News
  • »
  • trend
  • »
  • Social Bonding: ಸಾಮಾಜಿಕ ಬಾಂಧವ್ಯ ಹೆಚ್ಚಿಸಲು ಈ ಹಳ್ಳಿಯವರು ತೆ್ಗೆದುಕೊಂಡ ನಿರ್ಧಾರವಿದು!

Social Bonding: ಸಾಮಾಜಿಕ ಬಾಂಧವ್ಯ ಹೆಚ್ಚಿಸಲು ಈ ಹಳ್ಳಿಯವರು ತೆ್ಗೆದುಕೊಂಡ ನಿರ್ಧಾರವಿದು!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಸಾಮಾಜಿಕ ಜೀವನ ಇನ್ನಷ್ಟು ಹದಗೆಡಬಾರದು ಅಂತ ಇಲ್ಲೊಂದು ಹಳ್ಳಿ ಒಂದು ಒಳ್ಳೆಯ ಯೋಜನೆಯನ್ನು ಮಾಡಿದೆ ನೋಡಿ. ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿಯಲ್ಲಿರುವ ಅಥಣಿಯ ಸಾಂಗ್ಲಿಯ ವಡಗಾಂವ್ ನಿವಾಸಿಗಳು ತಮ್ಮ ಗ್ರಾಮದಲ್ಲಿ ಪ್ರತಿದಿನ ಸಂಜೆ 7 ರಿಂದ ರಾತ್ರಿ 9 ರವರೆಗೆ ಟಿವಿ ಮತ್ತು ಮೊಬೈಲ್ ಫೋನ್ ಗಳನ್ನು ನಿಷೇಧಿಸಲು ನಿರ್ಧರಿಸಿದ್ದಾರೆ.

ಮುಂದೆ ಓದಿ ...
  • Share this:

ಮೊದಲೆಲ್ಲಾ ಈ ಜನರು ಹಳ್ಳಿಯಲ್ಲಿ (Village) ಅಥವಾ ಸಣ್ಣ ಸಣ್ಣ ಪಟ್ಟಣಗಳಲ್ಲಿ ಮನೆಗಳ ಮುಂದೆ ಇರುವ ಕಟ್ಟೆಯ ಮೇಲೆ ಕುಳಿತುಕೊಂಡು ಅಥವಾ ಅವರ ಮನೆಯ ಕಾಂಪೌಂಡಿನ ಬಳಿ ನಿಂತು ಅಕ್ಕ ಪಕ್ಕದ ಮನೆಯವರ ಜೊತೆಯಲ್ಲಿ ಗಂಟೆ ಗಟ್ಟಲೆ ಹರಟೆ ಹೊಡೆಯುತ್ತಿದ್ದರು. ಆದರೆ ಈಗ ಯಾರ ಬಳಿ ಸಹ ಅಷ್ಟೊಂದು ಸಮಯವಿಲ್ಲ, ಇದ್ದರೂ ಆ ಸಮಯವನ್ನು ಮೊಬೈಲ್ ಫೋನ್ (Mobile Phone), ಟಿವಿ ಮತ್ತು ಸಾಮಾಜಿಕ ಮಾಧ್ಯಮಗಳು (Social Media) ಕಸಿದುಕೊಂಡಿವೆ. ಜನರು ಅಕ್ಕ ಪಕ್ಕದ ಮನೆಯವರ ಜೊತೆ ಇರಲಿ, ತಮ್ಮ ಮನೆಯ ಒಳಗೆ ಇರುವ ಜನರ ಜೊತೆಯಲ್ಲಿ ಸಹ ಮುಖಕ್ಕೆ ಮುಖ ಕೊಟ್ಟು ಮಾತಾಡುವುದು ತುಂಬಾನೇ ಅಪರೂಪವಾಗಿದೆ.


ಹೀಗಾಗಿ ಮನೆಯವರ ಮಧ್ಯೆ ಮೊದಲಿದ್ದ ಬಾಂಧವ್ಯ ಮತ್ತು ಮಾತುಕತೆ ಇವಾಗಿಲ್ಲ ಅಂತ ಹೇಳಬಹುದು. ಮನೆಯಲ್ಲಿ ನಾಲ್ಕು ಜನರು ಒಂದೇ ಕೋಣೆಯಲ್ಲಿ ಕೂತಿದ್ದರೂ ಸಹ ಅವರವರ ಮೊಬೈಲ್ ಫೋನ್ ಗಳಲ್ಲಿ ತುಂಬಾನೇ ಬ್ಯುಸಿ ಆಗಿರುತ್ತಾರೆ ಅಂತ ಹೇಳಬಹುದು.


ಸಾಮಾಜಿಕ ಜೀವನದ ಮೇಲೆ ಪರಿಣಾಮ ಬೀರುತ್ತಿವೆ ಈ ಗ್ಯಾಜೆಟ್ ಗಳು
ಹೌದು. ಮೊಬೈಲ್ ಫೋನ್ ಗಳು ಮತ್ತು ಇತರ ಗ್ಯಾಜೆಟ್ ಗಳ ಹೆಚ್ಚುತ್ತಿರುವ ಬಳಕೆಯು ಜನರ ಸಾಮಾಜಿಕ ಜೀವನದ ಮೇಲೆ ತೀವ್ರ ಪರಿಣಾಮ ಬೀರಿದಂತೂ ನಿಜ. ಈ ಗ್ಯಾಜೆಟ್ ಗಳು ಮನುಷ್ಯರ ನಡುವಿನ ಕಾಳಜಿ ಮತ್ತು ವಾತ್ಸಲ್ಯವನ್ನು ಕ್ರಮೇಣವಾಗಿ ಕಡಿಮೆ ಮಾಡುತ್ತಿದೆ. ಅನೇಕ ಮಕ್ಕಳು ಈ ಮೊಬೈಲ್ ಫೋನ್ ನ ಚಟದಿಂದಾಗಿ ಆಟದ ಮೈದಾನಕ್ಕೆ ಹೋಗಿ ಆಟ ಆಡುವುದನ್ನೇ ನಿಲ್ಲಿಸಿದ್ದಾರೆ.


ಇದನ್ನೂ ಓದಿ:  Nora Fatehi: ನೋರಾ ಫತೇಹಿಯಂತೆ ರಸ್ತೆ ನಡುವಿನಲ್ಲಿ ದಿಲ್ಬರ್​ ಹಾಡಿಗೆ ಹೆಜ್ಜೆ ಹಾಕಿದ ಯುವತಿ! ವಿಡಿಯೋ ಇಲ್ಲಿದೆ


ಹೀಗೆ ಸಾಮಾಜಿಕ ಜೀವನ ಇನ್ನಷ್ಟು ಹದಗೆಡಬಾರದು ಅಂತ ಇಲ್ಲೊಂದು ಹಳ್ಳಿ ಒಂದು ಒಳ್ಳೆಯ ಯೋಜನೆಯನ್ನು ಮಾಡಿದೆ ನೋಡಿ. ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿಯಲ್ಲಿರುವ ಅಥಣಿಯ ಸಾಂಗ್ಲಿಯ ವಡಗಾಂವ್ ನಿವಾಸಿಗಳು ತಮ್ಮ ಗ್ರಾಮದಲ್ಲಿ ಪ್ರತಿದಿನ ಸಂಜೆ 7 ರಿಂದ ರಾತ್ರಿ 9 ರವರೆಗೆ ಟಿವಿ ಮತ್ತು ಮೊಬೈಲ್ ಫೋನ್ ಗಳನ್ನು ನಿಷೇಧಿಸಲು ನಿರ್ಧರಿಸಿದ್ದಾರೆ.


ಈ ಹಳ್ಳಿಯಲ್ಲಿ ಪ್ರತಿದಿನ 2 ಗಂಟೆ ಮೊಬೈಲ್ ಮತ್ತು ಟಿವಿ ಬಳಕೆ ನಿಷೇಧವಂತೆ!
ಸುದ್ದಿ ಮಾಧ್ಯಮದ ಜೊತೆ ಮಾತನಾಡಿದ ವಡಗಾಂವ್ ಗ್ರಾಮ ಪಂಚಾಯತ್ ಅಧ್ಯಕ್ಷ ವಿಜಯ್ ಮೋಹಿತೆ ಅವರು “ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ, ಪೋಷಕರು ತಮ್ಮ ಮಕ್ಕಳಿಗೆ ಆನ್ಲೈನ್ ಶಿಕ್ಷಣವನ್ನು ನೀಡಲು ಈ ಸ್ಮಾರ್ಟ್‌ಫೋನ್ ಗಳನ್ನು ಒದಗಿಸಲು ಒತ್ತಾಯಿಸಲಾಯಿತು” ಎಂದು ಹೇಳಿದರು. “ಶಾಲೆಯ ಆನ್ಲೈನ್ ಶಿಕ್ಷಣವು ಈಗ ವಿದ್ಯಾರ್ಥಿಗಳನ್ನು ಗ್ಯಾಜೆಟ್ ಗಳಿಗೆ ವ್ಯಸನಿಗಳನ್ನಾಗಿ ಮಾಡಿದೆ. ಇದರ ಪರಿಣಾಮವಾಗಿ, ಅನೇಕ ವಿದ್ಯಾರ್ಥಿಗಳು ಈಗ ತಮ್ಮ ಪೋಷಕರಿಗೆ ತಿಳಿಯದಂತೆ ಅವರ ಸ್ಮಾರ್ಟ್‌ಫೋನ್ ಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ” ಎಂದು ಅವರು ಹೇಳಿದರು.


ಟಿವಿ ಸೆಟ್ ಮತ್ತು ಮೊಬೈಲ್ ಸ್ವಿಚ್ ಆಫ್


ಗ್ಯಾಜೆಟ್ ಮತ್ತು ಟಿವಿ ವ್ಯಸನವು ವಡಗಾಂವ್ ಗ್ರಾಮ ಪಂಚಾಯತ್ ನಿರ್ಣಯವನ್ನು ಅಂಗೀಕರಿಸುವಂತೆ ಒತ್ತಾಯಿಸಿತು, ಅದರ ಪ್ರಕಾರ ಗ್ರಾಮದ ದೇವಾಲಯದ ಮೇಲೆ ಧ್ವನಿವರ್ಧಕವನ್ನು ಹಾಕಲಾಗಿದ್ದು, ಇದು ಕ್ರಮವಾಗಿ ಸಂಜೆ 7 ಗಂಟೆಗೆ ಮತ್ತು ರಾತ್ರಿ 9 ಗಂಟೆಗೆ ಎರಡು ಬಾರಿ ಸೈರನ್ ಬಾರಿಸುತ್ತದೆ. ಸಂಜೆ 7 ಗಂಟೆಗೆ ಸೈರನ್ ಬಂದಾಗ, ಗ್ರಾಮಸ್ಥರು ತಮ್ಮ ಟಿವಿ ಸೆಟ್ ಮತ್ತು ಮೊಬೈಲ್ ಗಳನ್ನು ಸ್ವಿಚ್ ಆಫ್ ಮಾಡುತ್ತಾರೆ ಮತ್ತು ಪರಸ್ಪರ ಸಂವಹನ ನಡೆಸಲು ತಮ್ಮ ಮನೆಗಳಿಂದ ಹೊರಬರುತ್ತಾರೆ ಎಂದು ಮೋಹಿತೆ ಹೇಳಿದರು.


ಇದನ್ನೂ ಓದಿ:  Video: ಪಾರ್ಕಿಂಗ್​ ಸ್ಥಳದಲ್ಲಿದ್ದ ಬೈಕ್​ಗಳ ಮೇಲೆ ಚಲಿಸಿದ ಹೊಸ ಕಾರು! ದೃಶ್ಯ ಇಲ್ಲಿದೆ ನೋಡಿ


ಹಳ್ಳಿಗಳು ಮತ್ತು ನಗರಗಳು ಸಹ ಇದನ್ನು ಅನುಸರಿಸಬೇಕು


ಈಗ ಕರ್ನಾಟಕ ಮತ್ತು ಮಹಾರಾಷ್ಟ್ರದ ಹಲವಾರು ಗ್ರಾಮ ಪಂಚಾಯಿತಿಗಳ ಸದಸ್ಯರು ಈ ಉಪಕ್ರಮಕ್ಕೆ ಸಾರ್ವಜನಿಕರ ಪ್ರತಿಕ್ರಿಯೆಯನ್ನು ನೋಡಲು ವಡಗಾಂವ್ ಗೆ ಭೇಟಿ ನೀಡುತ್ತಿದ್ದಾರೆ. ಬೆಳಗಾವಿಯ ಖಾಸಗಿ ಕಾಲೇಜಿನ ಕಚೇರಿ ಅಧೀಕ್ಷಕ ಸುನಿಲ್ ಚೋಲೇಕರ್ ಮಾತನಾಡಿ "ವಡಗಾಂವ್ ಗ್ರಾಮಸ್ಥರು ಬಹಳ ಬುದ್ಧಿವಂತ ನಿರ್ಧಾರ ಕೈಗೊಂಡಿದ್ದಾರೆ. ಇದು ಈಗಿನ ದಿನಗಳಲ್ಲಿ ತುಂಬಾನೇ ಅಗತ್ಯವಾಗಿದೆ. ಇತರ ಹಳ್ಳಿಗಳು ಮತ್ತು ನಗರಗಳು ಸಹ ಇದನ್ನು ಅನುಸರಿಸಬೇಕು ಎಂದು ಆಶಿಸುತ್ತೇನೆ" ಎಂದು ಹೇಳಿದ್ದಾರೆ.

Published by:Ashwini Prabhu
First published: