HOME » NEWS » Trend » DO YOU KNOW WHAT NEWBORN ALPACAS LOOK LIKE NETIZENS ARE BAFFLED BY THIS PHOTO STG MAK

ನವಜಾತ ಆಲ್ಪಾಕಾಗಳು ಹೇಗೆ ಕಾಣುತ್ತವೆ ಗೊತ್ತೇ? ನೆಟ್ಟಿಗರ ತಲೆ ಕೆಡಿಸುತ್ತಿದೆ ಈ ವೈರಲ್ ಫೋಟೋ..

ಸಾಮಾನ್ಯವಾಗಿ ಪ್ರಾಣಿಪ್ರಿಯರಿಗೆ ಆಲ್ಪಕಾ ಹೇಗಿರುತ್ತದೆ ಎನ್ನುವ ಸ್ಪಷ್ಟ ಅರಿವು ಇದ್ದೇ ಇರುತ್ತದೆ. ಆದರೆ ಆಗಷ್ಟೇ ಹುಟ್ಟಿದ ಆಲ್ಪಕಾಗಳನ್ನು ಕಂಡವರು ಇದ್ಯಾವ ಪ್ರಾಣಿ ಎಂದು ಅಚ್ಚರಿಪಡುತ್ತಿದ್ದಾರೆ.

Trending Desk
Updated:June 10, 2021, 6:19 AM IST
ನವಜಾತ ಆಲ್ಪಾಕಾಗಳು ಹೇಗೆ ಕಾಣುತ್ತವೆ ಗೊತ್ತೇ? ನೆಟ್ಟಿಗರ ತಲೆ ಕೆಡಿಸುತ್ತಿದೆ ಈ ವೈರಲ್ ಫೋಟೋ..
ಆಲ್ಪಾಕಾ.
  • Share this:

ಈ ಭೂಮಿ ವಿಸ್ಮಯಗಳ ಆಗರ. ಪ್ರತಿ ಸೃಷ್ಟಿಯೂ ತನ್ನದೇ ಆದ ಸೌಂದರ್ಯವನ್ನು ಹೊಂದಿದೆ. ಅದರಲ್ಲೂ ಮನುಷ್ಯ ಕಂಡು ಕೇಳರಿಯದ ಅನೇಕ ಜೀವ ವೈವಿಧ್ಯಗಳು ಆಗಾಗ ಅಚ್ಚರಿಗೆ ಕಾರಣವಾಗುತ್ತವೆ. ಈಗ ಅಂಥದ್ದೇ ಒಂದು ಪ್ರಾಣಿಯ ಫೋಟೋ ನೆಟ್ಟಿಗರನ್ನು ಗೊಂದಲಕ್ಕೆ ತಳ್ಳಿದೆ. ನಿಮಗೆ ಈ ಆಲ್ಪಾಕಾ ಹೇಗಿರುತ್ತದೆ ಎನ್ನುವುದು ಗೊತ್ತೇ? ಆಲ್ಪಕಾ ದಕ್ಷಿಣ ಅಮೆರಿಕದ ಒಂಟೆ ಸಸ್ತನಿ. ಲಾಮಾ ಮತ್ತು ಆಲ್ಪಕಾಗಳು ನೋಡಲು ಒಂದೇ ರೀತಿ ಕಾಣಿಸುತ್ತವೆ. ಆದರೆ ಈ ಎರಡೂ ಪ್ರಾಣಿಗಳು ಬೇರೆ ಬೇರೆ.ಈ ಎರಡು ಪ್ರಾಣಿಗಳು ನಿಕಟ ಸಂಬಂಧ ಹೊಂದಿವೆ ಮತ್ತು ಪರಿಣಾಮಕಾರಿಯಾಗಿ ಅಡ್ಡ ಸಂತಾನೋತ್ಪತ್ತಿ ಮಾಡಬಲ್ಲವು. ಆದರೆ ಅಲ್ಪಕಾಗಳು ಹಲವಾರು ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿವೆ.


ಆಲ್ಪಕಾಗಳು ಆಕರ್ಷಕ ನೋಟ, ನಯವಾದ ರೇಷ್ಮೆಯಂತಹ ಉಣ್ಣೆಗಳ ಸ್ವರೂಪದೊಂದಿಗೆ ಮುದ್ದು ಮುದ್ದಾಗಿವೆ. ಅಲ್ಲದೇ ಮಾಲೀಕನಿಗೆ ನಿಷ್ಠೆಯಿಂದ ಇರುವ ಮೂಲಕ ತಮ್ಮದೇ ವಿಶಿಷ್ಟ ವ್ಯಕ್ತಿತ್ವ ಹೊಂದಿವೆ. ಆಲ್ಪಕಾ ಸಿಕ್ಕಾಪಟ್ಟೆ ತೊಂದರೆ ಮಾಡದ ಶಾಂತ ಸ್ವಭಾವದ ಪ್ರಾಣಿಯಾಗಿದ್ದು, ಮಕ್ಕಳೊಂದಿಗೆ ಹೊಂದಿಕೊಳ್ಳುತ್ತವೆ.





ಯುಟ್ಯೂಬ್​ನಲ್ಲಿ ಹಲವಾರು ಆಲ್ಪಕಾ ವಿಡಿಯೋಗಳಿದ್ದು, ಬೆಕ್ಕು ಮತ್ತು ಶ್ವಾನಗಳ ವಿಡಿಯೋಗಳಂತೆ ಲಕ್ಷಾಂತರ ವೀಕ್ಷಣೆಗಳಿಸಿವೆ.


ಸಾಮಾನ್ಯವಾಗಿ ಪ್ರಾಣಿಪ್ರಿಯರಿಗೆ ಆಲ್ಪಕಾ ಹೇಗಿರುತ್ತದೆ ಎನ್ನುವ ಸ್ಪಷ್ಟ ಅರಿವು ಇದ್ದೇ ಇರುತ್ತದೆ. ಆದರೆ ಆಗಷ್ಟೇ ಹುಟ್ಟಿದ ಆಲ್ಪಕಾಗಳನ್ನು ಕಂಡವರು ಇದ್ಯಾವ ಪ್ರಾಣಿ ಎಂದು ಅಚ್ಚರಿಪಡುತ್ತಿದ್ದಾರೆ.

@kittynouveau ಎನ್ನುವ ಟ್ವಿಟ್ಟರ್​ ಬಳಕೆದಾರರು ಒಂದು ಪೇಜ್​ನಿಂದ ಬೇಬಿ ಆಲ್ಪಕಾದ ಸ್ಕ್ರೀನ್​ಶಾಟ್​ ಒಂದನ್ನು ಹಂಚಿಕೊಂಡಿದ್ದಾರೆ. ಮುಲ್ಲಾಕೋಟ್​ ಎನ್ನುವವರು ತಮ್ಮ ಪೇಜ್​ನಲ್ಲಿ ನವಜಾತ ಆಲ್ಪಕಾ ಫೋಟೋ ಹಂಚಿಕೊಂಡಿದ್ದು, ಇದಕ್ಕೆ 10 ಸಾವಿರ ಪ್ರತಿಕ್ರಿಯೆ ಮತ್ತು ಮೆಚ್ಚುಗೆಗಳು ಲಭ್ಯವಾಗಿವೆ. ಆದರೆ ಕಿಟ್ಟಿನೌವಿಯವರು ಹಂಚಿಕೊಂಡಾಗ ನೆಟ್ಟಿಗರು ಇದು ಯಾವ ಪ್ರಾಣಿ ಎಂದು ಗೊಂದಲಕ್ಕೆ ಒಳಗಾಗಿದ್ದಾರೆ.


ಮೂಲ ಪೋಸ್ಟ್​​ ಏಪ್ರಿಲ್​ 18 ರಲ್ಲಿದ್ದು, ಸ್ಯಾಂಕ್ಚುರಿಯೊಂದರಲ್ಲಿ ನವಜಾತ ಆಲ್ಪಕಾವನ್ನು ಕಾಣಬಹುದಾಗಿದೆ. ಈ ನವಜಾತ ಮರಿ ನಯವಾದ ರೇಷ್ಮೆಯಂಥ ದಟ್ಟವಾದ ಉಣ್ಣೆಗಳನ್ನು ಒಳಗೊಂಡಿರದೇ ವಿಭಿನ್ನವಾದ ಪ್ರಾಣಿಯಂತೆ ಕಾಣುತ್ತಿದೆ.


ಇದನ್ನೂ ಓದಿ: ಆಗ್ರಾ ಆಸ್ಪತ್ರೆಯ ಆಮ್ಲಜನಕ ಅಣುಕು ಪ್ರದರ್ಶನ 22 ಜನರ ಸಾವಿಗೆ ಕಾರಣವಾಯ್ತಾ? : ತನಿಖೆಗೆ ಮುಂದಾದ ಉತ್ತರ ಪ್ರದೇಶ ಸರ್ಕಾರ

ಟ್ವಿಟ್ಟರ್​ ಬಳಕೆದಾರರು ಈ ಫೋಟೋ ಹಂಚಿಕೊಂಡಿದ್ದು, ಬೇಬಿ ಆಲ್ಪಕಾ ಬಹಳ ವಿಭಿನ್ನವಾಗಿದೆ ಎಂದಿದ್ದಾರೆ.


ಇನ್ನೂ ಆಕೆ ಮಾತ್ರವೇ ಆಶ್ಚರ್ಯಕ್ಕೆ ಒಳಗಾಗಿಲ್ಲ, ಸಾವಿರಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಫೋಟೋ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕಿಟ್ಟಿನೌವಿಯವರ ಟ್ವೀಟ್​​ 22 ಲಕ್ಷ ಮೆಚ್ಚುಗೆ, 23,000 ರೀ ಟ್ವೀಟ್​ ಮತ್ತು 1,300 ಪ್ರತಿಕ್ರಿಯೆಗಳನ್ನು ಗಳಿಸಿದೆ.


ಇದನ್ನೂ ಓದಿ: Narendra Modi: ಗಡ್ಡ ಬೋಳಿಸಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿಗೆ 100ರೂ ಕಳಿಸಿದ ಚಹಾ ಮಾರಾಟಗಾರ!

ಈ ಟ್ವೀಟ್​​ ವೈರಲ್​ ಆಗುತ್ತಿದ್ದಂತೆ ಮುಲ್ಲಾಕೋಟ್​​ ಫೇಸ್​ಬುಕ್​ನಲ್ಲಿ ಬೇಬಿ ಆಲ್ಪಕಾ ಬೆಳವಣಿಗೆ ಬಗ್ಗೆ ಪೋಸ್ಟ್​ ಮಾಡಿದ್ದಾರೆ. ಮುದ್ದು ಟೆಡ್ಡಿಬೇರ್​ನಂತಿರುವ ಆಲ್ಪಕಾಗಳು ತಮ್ಮೊಳಗೆ ಸಾಕಷ್ಟು ವಿಭಿನ್ನ ಗುಣ ಲಕ್ಷಣಗಳನ್ನು ಪ್ರದರ್ಶಿಸುತ್ತವೆ.


ಆಲ್ಪಕಾ ಉಗುಳುತ್ತಿದೆ ಎಂದರೆ ಉದ್ವೇಗಕ್ಕೆ ಒಳಗಾಗಿದೆ ಎಂದು ಅರ್ಥ. ಅಷ್ಟೇ ಅಲ್ಲದೇ ಭಯ ಮತ್ತು ಆಕ್ರಮಣದ ಸಂಕೇತಗಳನ್ನು ಸಹ ಪ್ರದರ್ಶಿಸುತ್ತವೆ.



Youtube Video

ಗಂಡು ಆಲ್ಪಕಾಗಳು ಹೆಣ್ಣಿಗಿಂತ ಹೆಚ್ಚು ಆಕ್ರಮಣಕಾರಿ ಮತ್ತು ತಮ್ಮ ಹಿಂಡಿನ ಗುಂಪಿನ ಮೇಲೆ ಪ್ರಾಬಲ್ಯವನ್ನು ಸ್ಥಾಪಿಸುತ್ತವೆ. ತಮ್ಮ ಶಕ್ತಿ ಮತ್ತು ಅಧಿಕಾರವನ್ನು ಪ್ರದರ್ಶಿಸುವ ಸಲುವಾಗಿ, ಗಂಡು ಆಲ್ಪಕಾ ಕೆಲವೊಮ್ಮೆ ದುರ್ಬಲ ಗಂಡು ಆಲ್ಪಕಾಗಳ ಕುತ್ತಿಗೆಯ ಮೇಲೆ ಆಕ್ರಮಣ ಮಾಡುತ್ತವೆ. ಆಲ್ಪಕಾದ ಜನನ ಸಮಯದ 20 ನಿಮಿಷಗಳ ವಿಡಿಯೋವನ್ನು ಸ್ಯಾಂಕ್ಚುರಿಯೂ ಹಂಚಿಕೊಂಡಿದೆ.

First published: June 10, 2021, 6:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories