Golgappa: ಗೋಲ್​ಗಪ್ಪ ಇಂದು ನಿನ್ನೆಯದಲ್ಲ! ದ್ರೌಪದಿ ಪಾಂಡವರಿಗೆ ಮಾಡಿಕೊಟ್ಟ ಸ್ಪೆಷಲ್​ ಫುಡ್​ ಇದೇನಾ?

Golgappa: ಭಾರತದಲ್ಲಿ ಗೋಲ್​​ಗಪ್ಪ ಅನ್ನು ವಿವಿಧ ರೀತಿಯ ಪದಾರ್ಥಗಳಿಂದ ತಯಾರಿಸಲಾಗುತ್ತದೆ. ಇದು ಮೈದಾ, ರವೆ ಮತ್ತು ಹಿಟ್ಟನ್ನು ಒಳಗೊಂಡಿರುತ್ತದೆ. ಅವುಗಳಿಂದ ಸಣ್ಣ ಪೂರಿಗಳನ್ನು ತಯಾರಿಸಲಾಗುತ್ತದೆ ಮತ್ತು ನಂತರ ಅದರೊಳಗೆ ಮಸಾಲೆಗಳನ್ನು ತುಂಬಿಸಲಾಗುತ್ತದೆ. ನಂತರ ಬಿಸಿನೀರನ್ನು ತುಂಬಿಸಿ ತಿನ್ನಲಾಗುತ್ತದೆ.

ಗೋಲ್​ಗಪ್ಪ

ಗೋಲ್​ಗಪ್ಪ

  • Share this:
    ಗೋಲ್​​ಗಪ್ಪ ತಿಂದಿದ್ದೀರಾ? ಹೆಣ್ಣು ಮಕ್ಕಳಿಗೆ ಗೋಲ್​​ಗಪ್ಪ (Golgappa) ಎಂದರೆ ಬಲು ಇಷ್ಟ. ಎಲ್ಲೇ ಇದ್ದರು ಸಹ ಒಂದು ಬಾರಿ ಇದರ ರುಚಿಯನ್ನು (Taste) ಸವಿಯದೇ ಇರಲಾರರು. ಉತ್ತರದಿಂದ ದಕ್ಷಿಣ ಭಾರತದವರೆಗೂ (South India) ಗೋಲ್​​ಗಪ್ಪ ತಿನ್ನದೇ ಇರುವವರ ಸಂಖ್ಯೆ ತೀರಾ ಕಡಿಮೆ ಎಂದೇ ಹೇಳಬಹುದು. ಅದರು ರುಚಿಗೆ ಫಿದಾ ಆದವರೇ ಹೆಚ್ಚು. ಅಂದಹಾಗೆಯೇ ಗೋಲ್​​ ಎಂದರೆ ರೌಂಡ್ (Round)​ ಎಂದು ಅರ್ಥ ಹಾಗಾಗಿ ಇದನನ್ನು ಕೆಲವು ಕಡೆ ಗೊಲ್ಗಪ್ಪ ಎಂದರೆ ಮತ್ತೆ ಕೆಲವೆಡೆ ಫುಚ್ಕ ಎಂದೂ ಕರೆಯುತ್ತಾರೆ. ಸಾಮಾನ್ಯವಾಗಿ ಮಸಾಲೆ ಪುರಿ (Masala Puri), ಪಾನಿ ಪುರಿ (Pani Puri) ಮಾರುವವರು ಈ ಗೋಲ್​​ಗಪ್ಪವನ್ನು ಮಾರುತ್ತಿರುತ್ತಾರೆ. ಇನ್ನು ಕೆಲವರು ಬೀದಿ ಬದಿಯಲ್ಲಿ ಇದನ್ನು ಮಾರುತ್ತಿರುತ್ತಾರೆ. ಆದರೆ ಈ ರುಚಿಕರವಾದ ಬೀದಿ ಆಹಾರದ (Street Food) ಇತಿಹಾಸ (History) ನಿಮಗೆ ತಿಳಿದಿದೆಯೇ? ಗೋಲ್​​ಗಪ್ಪ ಹೇಗೆ ಪ್ರಾರಂಭವಾಯಿತು? ಯಾರು ಅದನ್ನು ಮೊದಲು ಯಾರಿಗೆ ತಿನ್ನಿಸಿದರು ಎಂದು ಗೊತ್ತಿದೆಯಾ? ಹಾಗಿದ್ರೆ ಈ ಸ್ಟೋರಿಯನ್ನು ಕೊನೆಯವರೆಗೆ ಓದಿ.

    ಭಾರತದಲ್ಲಿ ಗೋಲ್​​ಗಪ್ಪ ಅನ್ನು ವಿವಿಧ ರೀತಿಯ ಪದಾರ್ಥಗಳಿಂದ ತಯಾರಿಸಲಾಗುತ್ತದೆ. ಇದು ಮೈದಾ, ರವೆ ಮತ್ತು ಹಿಟ್ಟನ್ನು ಒಳಗೊಂಡಿರುತ್ತದೆ. ಅವುಗಳಿಂದ ಸಣ್ಣ ಪೂರಿಗಳನ್ನು ತಯಾರಿಸಲಾಗುತ್ತದೆ ಮತ್ತು ನಂತರ ಅದರೊಳಗೆ ಮಸಾಲೆಗಳನ್ನು ತುಂಬಿಸಲಾಗುತ್ತದೆ. ನಂತರ ಬಿಸಿನೀರನ್ನು ತುಂಬಿಸಿ ತಿನ್ನಲಾಗುತ್ತದೆ.

    ಇದು ಇಂದು ನಿನ್ನೆಯದ್ದಲ್ಲ!

    ಇಂದು ಎಲ್ಲೆಂದರಲ್ಲಿ ಮಾರಾಟವಾಗುವ ಗೋಲ್​​ಗಪ್ಪ ಇತಿಹಾಸ ಇಂದು ನಿನ್ನೆಯದ್ದಲ್ಲ. ಗೋಲ್​​ಗಪ್ಪದ ಇತಿಹಾಸ ಲಕ್ಷಾಂತರ ವರ್ಷಗಳಷ್ಟು ಹಳೆಯದು. ಅಷ್ಟೇ ಏಕೆ ಪುರಾಣಗಳಲ್ಲೂ ಸಹ ಗೋಲ್​​ಗಪ್ಪದ ಹೆಸರು ಕಾಣಿಸಿಕೊಂಡಿದೆ.

    ಇದನ್ನೂ ಓದಿ: Blennies Fish: ನೀರ ಬಿಟ್ಟು ನೆಲದ ಮೇಲೆ ಮೀನು ಬದುಕದು! ಆದ್ರೆ ಈ ಮೀನು ನೆಲವ ಬಿಟ್ಟು ನೀರಲ್ಲಿ ಬದುಕಲ್ವಂತೆ!

    ಪುರಾಣದಲ್ಲಿದೆ ಗೋಲ್​​ಗಪ್ಪ!

    ಇಂದು ರಸ್ತೆಯ ಬದಿಯಲ್ಲಿ ನಿಂತುಕೊಂಡು ಆರಾಮವಾಗಿ ತಿನ್ನುವ ಗೋಲ್​​ಗಪ್ಪಗಳ ಇತಿಹಾಸವನ್ನು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದರೆ ಆಶ್ಚರ್ಯವಾಗುತ್ತದೆ. ಪೌರಾಣಿಕ ಕಥೆಗಳನ್ನು ನಂಬುವುದಾದರೆ, ಗೋಲ್​​ಗಪ್ಪವನ್ನು ಮೊದಲು ಪಾಂಡವರಿಗೆ ದ್ರೌಪದಿ ತಿನ್ನಿಸಿದಳು. ಪಾಂಡವರು ವನವಾಸದಲ್ಲಿದ್ದಾಗ ಮನೆಯಲ್ಲಿ ಅಲ್ಪಸ್ವಲ್ಪ ಆಹಾರವಿತ್ತು ಎಂದು ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಕುಂತಿಯು ತನ್ನ ಸೊಸೆಯ ಮನೆಯನ್ನು ನಡೆಸುವ ಸಾಮರ್ಥ್ಯವನ್ನು ಪರೀಕ್ಷಿಸಲು ಅವಳಿಗೆ ಸ್ವಲ್ಪ ತರಕಾರಿಗಳನ್ನು ಕೊಟ್ಟಳು. ಇದರಿಂದ ಪಾಂಡವರ ಹೊಟ್ಟೆ ತುಂಬಿಸುವುದೇ ಸವಾಲಾಗಿತ್ತು. ಹೀಗಿರುವಾಗ ದ್ರೌಪದಿ ಗೊಲ್ಲಪ್ಪಗಳನ್ನು ಮಾಡಿ ಪಾಂಡವರ ಹೊಟ್ಟೆ ತುಂಬಿಸಿದಳು.

    ಇದನ್ನೂ ಓದಿ: Money spider: ಭಾರತದಲ್ಲಿ ಮೊದಲ ಮನಿ ಸ್ಪೈಡರ್ ಪತ್ತೆ! ಅದೃಷ್ಟ ಬದಲಾಯಿಸೋ ಜೇಡ ಇದು

    400 ವರ್ಷಗಳ ಹಿಂದಿನ ಇತಿಹಾಸ!

    ಪುರಾಣಗಳಲ್ಲಿ ಗೋಲ್​​ಗಪ್ಪದ ಕುರಿತು ಮಾಹಿತಿ ಇರುವುದು ಒಂದಡೆಯಾದರೆ, ಮತ್ತೊಂದಡೆ ಇದು ಮಗಧ ಕಾಲಕ್ಕೆ ಸಂಬಂಧಿಸಿದೆ. ಇದು 3400 ವರ್ಷಗಳ ಹಿಂದೆ ಭಾರತದಲ್ಲಿ ಮಗಧದ ರಾಜನಿಂದ ನಿರ್ಮಿಸಲ್ಪಟ್ಟಿತು. ಇದನ್ನು ಭಾರತದಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಕೆಲವೆಡೆ ಇವು ಗೋಲ್​​ಗಪ್ಪಗಳು ಮತ್ತು ಕೆಲವೆಡೆ ಪಾನಿಪುರಿಗಳು ಎಂದು ಕರೆಯಲಾಗುತ್ತದೆ. ಆದರೀಗ ಕೆಲವೆಡೆ ಫುಚ್ಕಾ ಮತ್ತು ಪಾನಿ ಬಟಾಶಾ ಎಂದು ಕರೆಯಲಾಗುತ್ತದೆ. ಸ್ಥಳಕ್ಕನುಗುಣವಾಗಿ ಅದರ ರುಚಿಯೂ ಬದಲಾಗುತ್ತದೆ. ಕೆಲವೆಡೆ ಹುಳಿಯನ್ನು ಹೆಚ್ಚು ಹಾಕಿದರೆ, ಕೆಲವರು ಬಿಸಿನೀರನ್ನ ಹಾಕಿ ಸವಿಯುತ್ತಾರೆ.
    Published by:Harshith AS
    First published: