• Home
  • »
  • News
  • »
  • trend
  • »
  • Flight Attendants: ಫ್ಲೈಟ್ ಅಟೆಂಡೆಂಟ್​ಗಳ ಕೈಯಲ್ಲಿರುವ ಆ ಚಿಕ್ಕ ಸೂಟ್‌ಕೇಸ್ ನಲ್ಲಿ ಏನೆಲ್ಲಾ ಇರುತ್ತೆ?

Flight Attendants: ಫ್ಲೈಟ್ ಅಟೆಂಡೆಂಟ್​ಗಳ ಕೈಯಲ್ಲಿರುವ ಆ ಚಿಕ್ಕ ಸೂಟ್‌ಕೇಸ್ ನಲ್ಲಿ ಏನೆಲ್ಲಾ ಇರುತ್ತೆ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಫ್ಲೈಟ್ ಅಟೆಂಡೆಂಟ್ ಗಳು ಅವರ ಜೊತೆಯಲ್ಲಿ ಈ ಚಿಕ್ಕ ಸೂಟ್‌ಕೇಸ್ ಏಕೆ ಇರಿಸಿಕೊಂಡಿರುತ್ತಾರೆ? ಅದರಲ್ಲಿ ಏನೆಲ್ಲಾ ಇರುತ್ತದೆ? ಅಂತ ಅನೇಕ ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಓಡಾಡುತ್ತಿರುತ್ತವೆ. ಏನೇನಿರುತ್ತೆ ಇಲ್ಲಿದೆ ನೋಡಿ

  • Share this:

ನೀವು ವಿಮಾನಗಳಲ್ಲಿ (Plane) ಹೆಚ್ಚಾಗಿ ಪ್ರಯಾಣಿಸುತ್ತಿದ್ದರೆ, ನೀವು ಒಂದು ವಿಚಾರವನ್ನು ತುಂಬಾ ಸಲ ಗಮನಿಸಿರುತ್ತೀರಿ. ಆದರೆ ಅದರ ಬಗ್ಗೆ ಯಾರ ಬಳಿಯೂ ನೀವು ಕೇಳಿರುವುದಿಲ್ಲ. ವಿಮಾನದಲ್ಲಿರುವ ಫ್ಲೈಟ್ ಅಟೆಂಡೆಂಟ್ ಗಳು (Flight attendant) ಸಾಮಾನ್ಯವಾಗಿ ತಮ್ಮ ಜೊತೆಯಲ್ಲಿ ಒಂದು ಚಿಕ್ಕ ಸೂಟ್‌ಕೇಸ್ ಅನ್ನು ಇರಿಸಿಕೊಂಡಿರುವುದನ್ನು ನಾವು ನೋಡಿರುತ್ತೇವೆ. ಅವರು ವಿಮಾನದಿಂದ ಇಳಿದು ಹೋಗುವಾಗ ಮತ್ತು ವಿಮಾನ ಹತ್ತುವಾಗ ಅವರ ಜೊತೆಯಲ್ಲಿಯೇ ಈ ಸಣ್ಣ ಸೂಟ್‌ಕೇಸ್ (Suitcase) ಇರುವುದನ್ನು ನಾವು ಒಮ್ಮೆಯಾದರೂ ವಿಮಾನ ನಿಲ್ದಾಣದಲ್ಲಿ ನೋಡಿರುತ್ತೇವೆ. ಹೀಗೆ ಫ್ಲೈಟ್ ಅಟೆಂಡೆಂಟ್ ಗಳು ಅವರ ಜೊತೆಯಲ್ಲಿ ಈ ಚಿಕ್ಕ ಸೂಟ್‌ಕೇಸ್ ಏಕೆ ಇರಿಸಿಕೊಂಡಿರುತ್ತಾರೆ? ಅದರಲ್ಲಿ ಏನೆಲ್ಲಾ ಇರುತ್ತದೆ? ಅಂತ ಅನೇಕ ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಓಡಾಡುತ್ತಿರುತ್ತವೆ.


ಫ್ಲೈಟ್ ಅಟೆಂಡೆಂಟ್ ಗಳು ಊಹೆಗೆ ಸಿಗದೇ ಇರುವಂತಹ ಒಂದು ಕೆಲಸದ ವೇಳಾಪಟ್ಟಿಯನ್ನು ಹೊಂದಿರುತ್ತಾರೆ. ಎಂದರೆ ಅವರು ಆಗಾಗ್ಗೆ ಕೆಲಸಕ್ಕೆ ಒಂದು ವಿಮಾನ ಹತ್ತಿ ಹೋದರೆ ಮತ್ತೆ ಮನೆಗೆ ಬರುವುದು ಎಷ್ಟು ದಿನಗಳು ಆಗಬಹುದು ಒಮ್ಮೊಮ್ಮೆ ಅವರಿಗೆ ತಿಳಿದಿರುವುದಿಲ್ಲ. ಏಕೆಂದರೆ ಅವರು ಒಂದರ ನಂತರ ಮತ್ತೊಂದು ಟ್ರಿಪ್ ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದ್ದರಿಂದಲೇ ವಿಮಾನಯಾನ ಉದ್ಯೋಗಿಗಳು ತಮ್ಮ ಜೊತೆಯಲ್ಲಿ ಯಾವಾಗಲೂ ಒಂದು ಚಿಕ್ಕ ಪ್ಯಾಕ್ ಮಾಡಿದ ಸೂಟ್‌ಕೇಸ್ ಅನ್ನು ಇರಿಸಿಕೊಂಡಿರುತ್ತಾರೆ.


ಫ್ಲೈಟ್ ಅಟೆಂಡೆಂಟ್ ಆ ಚಿಕ್ಕ ಸೂಟ್ಕೇಸ್ ಬಗ್ಗೆ ಏನ್ ಹೇಳಿದ್ದಾರೆ ನೋಡಿ
ವಿಮಾನ ಸಿಬ್ಬಂದಿ ತಮಗೆ ಅಗತ್ಯವಿರುವ ವಸ್ತುಗಳನ್ನು ತಮ್ಮ ಜೊತೆಗೆ ಆ ಚಿಕ್ಕ ಸೂಟ್‌ಕೇಸ್ ನಲ್ಲಿ ಪ್ಯಾಕ್ ಮಾಡಿಕೊಂಡು ತೆಗೆದುಕೊಂಡು ಹೋಗುತ್ತಾರೆ ಮತ್ತು ಇದು ಅವರಿಗೆ ದೂರದ ವಿಮಾನ ಪ್ರಯಾಣದಲ್ಲಿ ತ್ವರಿತವಾದ ಲೇಓವರ್ ಗಳಿಗಾಗಿ ತಮ್ಮ ಅಗತ್ಯ ವಸ್ತುಗಳನ್ನು ಕ್ಯಾರಿ ಆನ್ ಲಗೇಜ್ ಮತ್ತು ವೈಯಕ್ತಿಕ ಚೀಲಕ್ಕೆ ಹೊಂದಿಸುವಲ್ಲಿ ಯಶಸ್ವಿಯಾಗುತ್ತಾರೆ.


ಇದನ್ನೂ ಓದಿ: Jail Life: ಜೈಲಲ್ಲಿ ಜೀವನ ಹೇಗಿರುತ್ತೆ ಅಂತ ನೋಡ್ಬೇಕಾ? ಜಸ್ಟ್ 500 ರೂಪಾಯಿ ಕೊಡಿ, ಒಂದು ದಿನ ಕಾರಾಗೃಹದಲ್ಲಿ ಇರಿ!


ಫ್ಲೈಟ್ ಅಟೆಂಡೆಂಟ್ ಆಗಿರುವಂತಹ ಸುಸಾನ್ ಬ್ರೌನ್ ಅವರು “ತಾನು ಸಾಮಾನ್ಯವಾಗಿ ಪ್ರತಿ ಫ್ಲೈಟ್ ನಲ್ಲಿ ತನ್ನ ಎರಡರಿಂದ ಮೂರು ಸೂಟ್ ಕೇಸ್ ಗಳನ್ನು ತರುತ್ತೇನೆ, ಆದರೆ ಪ್ರತಿಯೊಂದೂ ತನಗೆ ಅಗತ್ಯವಿರುವ ನಿರ್ದಿಷ್ಟ ವಸ್ತುಗಳಿಂದ ತುಂಬಿರುತ್ತದೆ” ಎಂದು ಹೇಳುತ್ತಾರೆ. "ನೀವು ಯಾವಾಗಲೂ ಒಂದು ಕೈಚೀಲವನ್ನು ನಿಮ್ಮೊಂದಿಗೆ ಒಯ್ಯಬೇಕು ಮತ್ತು ಅದರಲ್ಲಿ ನಿಮಗೆ ಬೇಕಾದ ವಸ್ತುಗಳು ಇರಬೇಕು. ಏಕೆಂದರೆ ನಿಮ್ಮ ಬಳಿ ಲೇಓವರ್ ಇದೆಯೋ ಇಲ್ಲವೋ ಎಂಬುದು ಕೆಲವೊಮ್ಮೆ ತಿಳಿಯುವುದಿಲ್ಲ” ಎಂದು ಅವರು ಕೋರಾ ಪೋಸ್ಟ್ ನಲ್ಲಿ ಬಹಿರಂಗಪಡಿಸಿದ್ದಾರೆ.


“ನಮ್ಮ ಜೊತೆಗೆ ತೆಗೆದುಕೊಂಡು ಹೋಗುವ ಇನ್ನೊಂದು ಚಿಕ್ಕ ಕೈಚೀಲ ತುಂಬಾನೇ ಪ್ರಮುಖವಾದದ್ದು ಆಗಿರುತ್ತದೆ. ಪ್ರತಿ ಹಾರಾಟಕ್ಕೆ ಅಗತ್ಯವಿರುವ ಪ್ರಮುಖ ದಾಖಲೆಗಳು ಮತ್ತು ವಸ್ತುಗಳು ಅದರಲ್ಲಿ ಇರುತ್ತವೆ” ಎಂದು ಅವರು ಹೇಳುತ್ತಾರೆ. "ಕೈ ಚೀಲದಲ್ಲಿ, ನಾವು ಸಾಮಾನ್ಯವಾಗಿ ನಮ್ಮ ಪರ್ಸ್, ಪಾಸ್‌ಪೋರ್ಟ್ ಮತ್ತು ವಿವಿಧ ಸಿಬ್ಬಂದಿ ಪರವಾನಗಿಗಳನ್ನು ಇರಿಸಿಕೊಂಡಿರುತ್ತೇವೆ. ಸಹಜವಾಗಿಯೇ ನಾವು ಅದರಲ್ಲಿ ನಮಗೆ ಅಗತ್ಯವಿರುವ ವಸ್ತುಗಳನ್ನು ಸಹ ಇರಿಸಿಕೊಳ್ಳಬಹುದು” ಎಂದು ಅವರು ಹೇಳಿದರು.


ಏನಿದು ಕ್ಯಾರಿ-ಆನ್ ಲಗೇಜ್?
ನಂತರ ಬರುವುದು ಈ ಕ್ಯಾರಿ-ಆನ್ ಲಗೇಜ್, ಅದನ್ನು ಫ್ಲೈಟ್ ಅಟೆಂಡೆಂಟ್ ಗಳು ಯಾವಾಗಲೂ ತಮ್ಮೊಂದಿಗೆ ಇಟ್ಟುಕೊಳ್ಳುತ್ತಾರೆ. "ನಾವು ಸಣ್ಣ ಕ್ಯಾರಿ-ಆನ್ ಲಗೇಜ್ ಅನ್ನು ಸಹ ಹೊಂದಿರುತ್ತೇವೆ, ಹತ್ತಿರದ ಅಥವಾ ದೂರದ ವಿಮಾನ ಹಾರಾಟಗಳು ಮುಖ್ಯವಾಗುವುದಿಲ್ಲ. ಇದರಲ್ಲಿ, ನಾವು ನಮ್ಮ ಕೈಪಿಡಿಗಳು, ಬೂಟುಗಳು ಮತ್ತು ಅಗತ್ಯವಿರುವ ಎಲ್ಲಾ ವಸ್ತುಗಳನ್ನು ಇಡುತ್ತೇವೆ" ಎಂದು ಅವರು ಹೇಳಿದರು.


"ಉದಾಹರಣೆಗೆ, ನಾನು ವಿಮಾನ ಹಾರಾಟದಿಂದ ಸ್ವಲ್ಪ ಸಮಯದವರೆಗೆ ವಿಮಾನ ನಿಲ್ದಾಣದಲ್ಲಿ ವಿಶ್ರಾಂತಿ ಸಮಯ ಹೊಂದಿದ್ದರೇ, ಅಲ್ಲಿ ನನಗೆ ಬೇಕಾಗುವ ಕೈಗವಸುಗಳು, ನನ್ನ ಶರ್ಟ್ ಮೇಲೆ ತಿನ್ನುವಾಗ ಅಥವಾ ಅಡ್ಡಾಡುವಾಗ ಏನಾದರೂ ಬಿದ್ದರೆ, ಅದನ್ನು ಬದಲಾಯಿಸಬೇಕಾದ ಅಗತ್ಯವಿದ್ದರೆ ನಾನು ಅಲ್ಲಿ ಒಂದು ಹೆಚ್ಚುವರಿ ಶರ್ಟ್ ಇಟ್ಟುಕೊಂಡಿರುತ್ತೇನೆ" ಎಂದು ಅವರು ಹೇಳಿದರು.


ದೊಡ್ಡ ಸೂಟ್ಕೇಸ್ ಅನ್ನು ‘ಲೇಓವರ್’ ಗಳಿರುವ ವಿಮಾನಗಳಿಗೆ ಕಾಯ್ದಿರಿಸಲಾಗಿದೆ..
ದೊಡ್ಡ ಸೂಟ್‌ಕೇಸ್ ದೊಡ್ಡ ಕ್ಯಾರಿ-ಆನ್ ಆಗಿರುತ್ತದೆ, ಇದು ಸಾಮಾನ್ಯವಾಗಿ ‘ಲೇಓವರ್’ ಹೊಂದಿರುವ ವಿಮಾನಗಳಿಗೆ ಕಾಯ್ದಿರಿಸಲಾಗುತ್ತದೆ. "ಅದರಲ್ಲಿ ನಾವು ನಮ್ಮ ಎಲ್ಲಾ ಬಟ್ಟೆಗಳು, ಬೂಟುಗಳು ಮತ್ತು ನಮಗೆ ಅಗತ್ಯವಿರುವ ಎಲ್ಲವನ್ನೂ ಇಡುತ್ತೇವೆ" ಎಂದು ಅವರು ಹೇಳುತ್ತಾರೆ.


ಇದನ್ನೂ ಓದಿ:  Viral Video: ಕಾರು ಚಾಲಕನ ನಿರ್ಲಕ್ಷ್ಯದಿಂದ ನಡೆದ ಈ ಅಪಘಾತದ ವಿಡಿಯೋ ನೋಡಿದ್ರೆ ಮೈ ಜುಂ ಅನ್ನುತ್ತೆ!


"ನಾನು ವಿವಿಧ ನಗರಗಳಿಗೆ ಹೋದಾಗ ಮಾಡುವ ಎಲ್ಲಾ ಶಾಪಿಂಗ್ ಗೆ ನನ್ನ ದೊಡ್ಡ ಕ್ಯಾರಿ-ಆನ್ ನಲ್ಲಿ ಸ್ವಲ್ಪ ಸ್ಥಳವನ್ನು ಹೊಂದಿರುತ್ತೇನೆ. ಹಿಂತಿರುಗಿ ಬರುವಾಗ ನಮ್ಮ ವಿಮಾನವನ್ನು ಏರುವ ಮೊದಲು ಈ ದೊಡ್ಡ ಕ್ಯಾರಿ-ಆನ್ ಅನ್ನು ಪರಿಶೀಲಿಸುತ್ತೇವೆ" ಎಂದು ಅವರು ಹೇಳಿದರು.

Published by:Ashwini Prabhu
First published: