Interesting Facts: ಎಲ್ಲಾ ಕಂಪನಿಗಳ ಬ್ಲೇಡ್ ವಿನ್ಯಾಸ ಒಂದೇ ರೀತಿ ಇದೆಯಲ್ಲಾ! ಏನಿದು ಸೀಕ್ರೆಟ್​?

Balde: 1901ರಲ್ಲಿ ಜಿಲೆಟ್ ಕಂಪನಿ ಸಂಸ್ಥಾಪಕ ಕಿಂಗ್ ಕ್ಯಾಂಪ್ ಜಿಲೆಟ್ ತಮ್ಮ ಸಹದ್ಯೋಗಿ ವಿಲಿಯಂ ನಿಕರ್ಸನ್ ಜತೆಗೆ ಸೇರಿಕೊಂಡು ಬ್ಲೇಡ್​ ವಿನ್ಯಾಸ ಮಾಡುತ್ತಾರೆ.

Do you know the real secret of this blade design HG

Do you know the real secret of this blade design HG

 • Share this:
  ಶೇವಿಂಗ್​​ ಬ್ಲೇಡ್ ನೋಡಿದ್ದೀರಾ? ಪ್ರಸ್ತುತ ಮಾರುಕಟ್ಟೆಯಲ್ಲಿ ನಾನಾ ಕಂಪನಿಗಳ ಶೇವಿಂಗ್​ ಬ್ಲೇಡ್ ಗಳಿವೆ. ಆದರೆ ಎಲ್ಲಾ ಕಂಪನಿಗಳು ಒಂದೇ ವಿನ್ಯಾಸದ ಶೇವಿಂಗ್​ ಬ್ಲೇಡ್ ಉತ್ಪಾದಿಸುತ್ತವೆ. ಅದು ಯಾಕೆ? ಇಂತಹದೊಂದು ಕುತೂಹಲತೆಯ ಪ್ರಶ್ನೆ ಹೊಳೆದಿದ್ದರೆ ಆ ಪ್ರಶ್ನೆಗೆ ಉತ್ತರ ಇಲ್ಲಿದೆ.


  ಮೊದಲೆಲ್ಲಾ ಕ್ಷೌರ ಮಾಡಲು, ಶೇವ್ ಮಾಡಲು ಬ್ಲೇಡ್ ಬಳಸುತ್ತಿದ್ದರು. ಹಾಗಾಗಿ ಒಂದೇ ವಿನ್ಯಾಸದ ಬ್ಲೇಡ್​ಗಳು ಮಾರುಕಟ್ಟೆಯಲ್ಲಿದ್ದವು. ಆ ಬಳಿಕ ಬ್ಲೇಡ್ ತಯಾರಿಸವ ಕಂಪನಿಗಳು ಹೆಚ್ಚಾಗತೊಡಗಿತು. ಆದರೆ ಬ್ಲೇಡ್ ವಿನ್ಯಾಸದಲ್ಲಿ ಮಾತ್ರ ಯಾವುದೇ ಬದಲಾವಣೆ ಆಗಲಿಲ್ಲ.


  1901ರಲ್ಲಿ ಜಿಲೆಟ್ ಕಂಪನಿ ಸಂಸ್ಥಾಪಕ ಕಿಂಗ್ ಕ್ಯಾಂಪ್ ಜಿಲೆಟ್ ತಮ್ಮ ಸಹದ್ಯೋಗಿ ವಿಲಿಯಂ ನಿಕರ್ಸನ್ ಜತೆಗೆ ಸೇರಿಕೊಂಡು ಬ್ಲೇಡ್​ ವಿನ್ಯಾಸ ಮಾಡುತ್ತಾರೆ.


  ಅದೇ ವರ್ಷ ಅವರು ಪೇಟೆಂಟ್ ಕೂಡ ಪಡೆಯುತ್ತಾರೆ. 1904ರಲ್ಲಿ ಬ್ಲೇಡ್ ಉತ್ಪಾದನೆ ಶುರು ಮಾಡುತ್ತಾರೆ.


  ಆರಂಭದಲ್ಲಿ ಜಿಲೆಟ್ ಕಂಪನಿ ಮಾತ್ರ ಬ್ಲೇಡ್ ಹಾಗೂ ರೇಜರ್ ತಯಾರಿಸುತ್ತಿತ್ತು. ರೇಜರ್ ಒಳಗಡೆ ಬ್ಲೇಡ್ ಕೂರಿಸುವಂತೆ ವಿನ್ಯಾಸ ಮಾಡಲಾಗಿತ್ತು.


  ನಂತರದ ದಿನಗಳಲ್ಲಿ ಅನೇಕ ಕಂಪನಿಗಳು ಬ್ಲೇಡ್ ತಯಾರಿಸಲು ಮುಂದಾದವು. ಆದರೆ ಆ ಕಂಪನಿಗಳು ಜಿಲೆಟ್ ಕಂಪನಿ ರೇಸರ್ ಅನ್ನು ಅನುಸರಿಸಿದವು.


  ಮಾತ್ರವಲ್ಲದೆ, ಮಾರುಕಟ್ಟೆಯಲ್ಲೂ ಜಿಲೆಟ್ ಕಂಪನಿ ರೇಜರ್ ಹೆಚ್ಚು ಜನಪ್ರಿಯಗಳಿಸಿತ್ತು. ಬ್ಲೇಡ್ ತಯಾರಿಸುತ್ತಿದ್ದ ಕಂಪನಿಗಳಿಗೆ ತನ್ನ ಮಾರುಕಟ್ಟೆಯನ್ನು ವೃದ್ಧಿಸಲು ಜಿಲೆಟ್ ಕಂಪನಿಯ ರೇಸರ್ಗೆ ತಕ್ಕಂತೆ ವಿನ್ಯಾಸ ಮಾಡಬೇಕಾದ ಅನಿವಾರ್ಯವಾಯ ಸೃಷ್ಟಿಯಾಗಿತ್ತು.


  ಹಾಗಾಗಿ ಉಳಿದ ಕಂಪನಿಗಳು ಜಿಲೆಟ್ ಮಾದರಿಯಲ್ಲೇ ಬ್ಲೇಡ್ ತಯಾರಿಸಲು ಮುಂದಾದವು.
  Published by:Harshith AS
  First published: