ದುಬೈನಲ್ಲಿ ಸಿಗುವ ವಿಶ್ವದ ದುಬಾರಿ ಐಸ್‌ಕ್ರೀಮ್ ಬೆಲೆ ಕೇಳಿದರೆ ನೀವು ದಂಗಾಗ್ತೀರಾ..!

ವಿಶ್ವದ ದುಬಾರಿ ಐಸ್​ಕ್ರೀಮ್​ ಎಲ್ಲಿ ಸಿಗುತ್ತೆ, ಹೇಗಿರುತ್ತೆ ಅಂತ ಗೊತ್ತಾ ನಿಮಗೆ. ನೋಡಿ ನಟಿ ಹಾಗೂ ಟ್ರಾವೆಲ್​ ಬ್ಲಾಗರ್​ ಶೆನಾಜ್ ಅವರು ಅದರ ಬಗ್ಗೆ ಮಾಹಿತಿ ನೀಡಿದ್ದಾರೆ.

ದುಬಾರಿ ಐಸ್​ಕ್ರೀಮ್​

ದುಬಾರಿ ಐಸ್​ಕ್ರೀಮ್​

  • Share this:

ಐಸ್‌ಕ್ರೀಮ್ ಪ್ರಿಯರು ತಮಗೆ ಇಷ್ಟವಾದ ಬಣ್ಣದ, ರುಚಿಯ ಐಸ್‌ಕ್ರೀಮ್ ಕಡಿಮೆ ಬೆಲೆಗೆ ತೆಗೆದುಕೊಂಡು ತಿನ್ನುವುದುಂಟು. ಆದರೆ ದುಬೈನಲ್ಲಿ ಒಂದು ಐಸ್​ಕ್ರೀಮ್​ ಇದೆ ಅದರ ಹೆಸರು 'ಬ್ಲ್ಯಾಕ್ ಡೈಮಂಡ್' ಐಸ್‌ಕ್ರೀಮ್ ಅಂತೇ. ಅದರ ಬೆಲೆ ಕೇಳಿದರೆ ನೀವು ಅದನ್ನು ಕೊಂಡುಕೊಳ್ಳೋದು ಇರಲಿ ಅದರ ಹತ್ತಿರಕ್ಕೂ ಹೋಗಲ್ಲ. ಏಕೆಂದರೆ ಅದರ ಬೆಲೆ ಬರೋಬ್ಬರಿ 60,000 ರೂಪಾಯಿ ಅಂತೆ.ಮಡಗಾಸ್ಕರ್ ವೆನಿಲ್ಲಾಐಸ್‌ಕ್ರೀಮ್‌ನಲ್ಲಿ ಇರಾನಿನ ಕೇಸರಿ, ಕಪ್ಪು ಟ್ರಫಲ್ ಮತ್ತು ವಿಶೇಷವಾದ ಪದಾರ್ಥಗಳನ್ನು ಹಾಕಿ ಈ ಐಸ್‌ಕ್ರೀಮ್ ಅನ್ನು ತಯಾರಿಸಲಾಗಿದ್ದು, ಅದರ ಬೆಲೆಯು ಅಷ್ಟೊಂದು ದುಬಾರಿಯಾಗಿರಲು ಕಾರಣವಾಗಿದೆ. ಈ ಐಸ್‌ಕ್ರೀಮ್ ಅನ್ನು ಅದೆಂಥಾ ಪದಾರ್ಥಗಳನ್ನು ಹಾಕಿ ಮಾಡಿದ್ದಾರೋ ನೋಡೋಣ ಬನ್ನಿ.ಒಂದು ಸ್ಕೂಪ್ ಐಸ್‌ಕ್ರೀಮ್ ಮೇಲೆ 23 ಕ್ಯಾರೆಟ್ ತಿನ್ನಬಹುದಾದ ಚಿನ್ನವನ್ನು ಚಿಮುಕಿಸಲಾಗುವುದು, ಆದ್ದರಿಂದಲೇ ಐಸ್‌ಕ್ರೀಮ್ ಅಷ್ಟೊಂದು ದುಬಾರಿಯಾಗಿದ್ದು, ಇದು ಪ್ರಪಂಚದಲ್ಲಿಯೇ ಅತ್ಯಂತ ದುಬಾರಿ ಬೆಲೆಯ ಐಸ್‌ಕ್ರೀಮ್ ಆಗಿದೆ.ಇತ್ತೀಚೆಗೆ, ನಟಿ ಮತ್ತು ಪ್ರವಾಸಿ ಬ್ಲಾಗರ್ ಆದ ಶೆನಾಜ್ ಟ್ರೇಸರಿ ತನ್ನ ಇತ್ತೀಚಿನ ದುಬೈ ಪ್ರವಾಸದಲ್ಲಿ ಈ ದುಬಾರಿಯಾದ ಐಸ್‌ಕ್ರೀಮ್ ನ ಬಗ್ಗೆ ತಿಳಿದುಕೊಂಡು, ಆಸಕ್ತಿಯಿಂದ ‘ಬ್ಲ್ಯಾಕ್ ಡೈಮಂಡ್’ ಅನ್ನು ತಿನ್ನಲು ದುಬೈನಲ್ಲಿರುವ ಸ್ಕೂಪಿ ಕೆಫೆಗೆ ಹೋಗಿದ್ದರು.ಆ ದುಬಾರಿ ಐಸ್‌ಕ್ರೀಮ್ಗೆ ಯಾವ ಯಾವ ಪದಾರ್ಥಗಳನ್ನು ಹಾಕಿ ಮಾಡುತ್ತಾರೆ ಮತ್ತು ಅದರ ವಿಶೇಷತೆಯ ಬಗ್ಗೆ ತಮ್ಮ ವಿಡಿಯೋದಲ್ಲಿ ಹೇಳಿದ್ದು ವಿಡಿಯೋ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು,ಇದು ವಿಶ್ವದ ಅತ್ಯಂತ ದುಬಾರಿ ಐಸ್‌ಕ್ರೀಮ್ ಎಂದು ಇವರು ಹೇಳಿದ್ದಾರೆ.
ನಟಿ ಶೆನಾಜ್ ಟ್ರೇಸರಿ ತಮ್ಮಚಿನ್ನದ ಐಸ್‌ಕ್ರೀಮ್ ತಿಂದ ಅನುಭವದ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಾಕಿಕೊಂಡಿದ್ದು, ಹಣ ಖರೀದಿಸಲಾಗದೇ ಇರುವ ಒಂದು ವಿಷಯ ಯಾವುದು? ಒಂದೇ ಒಂದು ಐಸ್‌ಕ್ರೀಮ್​ಗೆ 60,000 ರೂಪಾಯಿಗಳು..! ದುಬೈನಲ್ಲಿ ಮಾತ್ರ ಚಿನ್ನವನ್ನು ತಿನ್ನುವುದಕ್ಕೆ ಸಾಧ್ಯ ಎಂದು ಬರೆದುಕೊಂಡಿದ್ದಾರೆ.


ವಿಶ್ವದ ಅತ್ಯಂತ ದುಬಾರಿಐಸ್‌ಕ್ರೀಮ್. ಇದು ತುಂಬಾ ರುಚಿಯಾಗಿತ್ತು ಮತ್ತು ಹೌದು ಅವರು ಅದನ್ನು ಉಚಿತವಾಗಿ ನನಗೆ ಕೊಟ್ಟರು ಎಂದು ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. 2015ರಲ್ಲಿ ಕೆಫೆಯಿಂದ ಬ್ಲ್ಯಾಕ್​ ಡೈಮಂಡ್​ಐಸ್‌ಕ್ರೀಮ್​ಅನ್ನು ಪ್ರಾರಂಭಿಸಲಾಯಿತು. ಇದರಲ್ಲಿ ತಿನ್ನಬಹುದಾದಂತ 23 ಕ್ಯಾರೆಟ್ ಚಿನ್ನವನ್ನು ಮಡಗಾಸ್ಕರ್ ವೆನಿಲ್ಲಾ ಐಸ್‌ಕ್ರೀಮ್ಮೇಲೆ ಚಿಮುಕಿಸಲಾಗುತ್ತದೆ. ಇರಾನಿನ ಕೇಸರಿ ಮತ್ತು ಕಪ್ಪು ಟ್ರಫಲ್ ಅನ್ನು ಸಹ ಇದು ಒಳಗೊಂಡಿರುತ್ತದೆ ಎಂದು ನಟಿ ಹೇಳಿದ್ದಾರೆ.
ಇವರು ಹಾಕಿದ ವಿಡಿಯೋಗೆ ಕಮೆಂಟ್ ಮಾಡಿ ಇನ್‌ಸ್ಟಾಗ್ರಾಂ ಬಳಕೆದಾರರು ದುಬೈಗೆ ಪ್ರವಾಸಕ್ಕೆ ಹೋಗುವುದು ಈ ದುಬಾರಿಯಾದ ಐಸ್‌ಕ್ರೀಮ್ ತಿನ್ನುವುದಕ್ಕಿಂತಲೂ ಉತ್ತಮವಾದ ಆಯ್ಕೆಯಾಗಿರುತ್ತದೆ, ಮತ್ತು ಇನ್ನೊಬ್ಬ ಬಳಕೆದಾರರು ದುಡ್ಡಿನಿಂದ ಪ್ರೀತಿ, ಸ್ನೇಹಿತರನ್ನು, ಕುಟುಂಬವನ್ನು ಪಡೆಯಲು ಆಗುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.Published by:Anitha E
First published: