Viral Video: ನೀವು ಎಂದಾದರೂ ದಾಲ್ ಮಖ್ನಿ ಐಸ್ ಕ್ರೀಮ್ ರೋಲ್‌ ಬಗ್ಗೆ ಕೇಳಿದ್ದೀರಾ? ಇಲ್ಲಿದೆ ನೋಡಿ

ಈಗಂತೂ ಹೊಸ ಹೊಸ ರುಚಿಗಳನ್ನು ಚಪ್ಪರಿಸಲು ಜನ ಹೋಟೆಲ್, ಬೀದಿ ಬದಿಯ ಅಂಗಡಿ ಹೀಗೆ ಎಲ್ಲವನ್ನೂ ಅನ್ವೇಷಿಸುತ್ತಾರೆ. ಜನರ ಬಯಕೆಗಳನ್ನು ತಣಿಸಲೆಂದೇ ಹೋಟೆಲ್ ಅವರು ಕೂಡ ಬಗೆಬಗೆಯ ರುಚಿಗಳನ್ನು ಕಂಡುಹಿಡಿಯುತ್ತಾರೆ. ಮತ್ತು ಇವು ಈ ಫುಡ್ ಬ್ಲಾಗರ್ ಗಳಿಂದ ಬೇಗ ಜನಪ್ರಿಯ ಕೂಡ ಆಗುತ್ತವೆ. ಹಾಗಾದರೆ ಸದ್ಯದ ಹೊಸ ರುಚಿ ಯಾವುದು ಅಂತಾ ಕೇಳ್ತಿದ್ದೀರಾ?. ಇದೇ ಇಲ್ಲಿದೆ ನೋಡಿ ಹೊಸ ರುಚಿ ದಾಲ್ ಮಖ್ನಿ ಐಸ್ ಕ್ರೀಮ್ ರೋಲ್‌.

ದಾಲ್ ಮಖಾನಿ ಐಸ್ಕ್ರೀಮ್ ರೋಲ್

ದಾಲ್ ಮಖಾನಿ ಐಸ್ಕ್ರೀಮ್ ರೋಲ್

  • Share this:
ಈಗಂತೂ ಹೊಸ ಹೊಸ ರುಚಿಗಳನ್ನು (New Taste) ಚಪ್ಪರಿಸಲು ಜನ ಹೋಟೆಲ್, ಬೀದಿ ಬದಿಯ ಅಂಗಡಿ ಹೀಗೆ ಎಲ್ಲವನ್ನೂ ಅನ್ವೇಷಿಸುತ್ತಾರೆ. ಜನರ ಬಯಕೆಗಳನ್ನು ತಣಿಸಲೆಂದೇ ಹೋಟೆಲ್ (Hotel) ಅವರು ಕೂಡ ಬಗೆಬಗೆಯ ರುಚಿಗಳನ್ನು ಕಂಡುಹಿಡಿಯುತ್ತಾರೆ. ಮತ್ತು ಇವು ಈ ಫುಡ್ ಬ್ಲಾಗರ್ ಗಳಿಂದ (Food Blogger) ಬೇಗ ಜನಪ್ರಿಯ ಕೂಡ ಆಗುತ್ತವೆ. ಹಾಗಾದರೆ ಸದ್ಯದ ಹೊಸ ರುಚಿ ಯಾವುದು ಅಂತಾ ಕೇಳ್ತಿದ್ದೀರಾ?. ಇದೇ ಇಲ್ಲಿದೆ ನೋಡಿ ಹೊಸ ರುಚಿ ದಾಲ್ ಮಖ್ನಿ ಐಸ್ ಕ್ರೀಮ್ (Dal Makhani Ice Cream) ರೋಲ್‌. ಈ ಹಿಂದೆ ನೀವು ನೋಡಿರಬಹುದು, ಐಸ್ ಕ್ರೀಮ್ ದೋಸೆ, ಐಸ್ ಕ್ರೀಮ್ ಇಡ್ಲಿಗಳೆಲ್ಲಾ ಬಂದು ಹೋಗಿವೆ. ಈಗ ಹೊಸದಾಗಿ ಬಾಣಸಿಗರೊಬ್ಬರು ದಾಲ್ ಮಖ್ನಿ ಐಸ್ ಕ್ರೀಮ್ ರೋಲ್ ಪರಿಚಯಿಸಿದ್ದಾರೆ.

ಭಾರತೀಯ ಮನೆಗಳಲ್ಲಿ ದಾಲ್ ಮಖ್ನಿ ಯನ್ನು ಚಪಾತಿ, ಅನ್ನ, ಜೀರಾ ರೈಸ್ ಇಂತಹುಗಳ ಜೊತೆ ಸವಿಯುತ್ತೇವೆ, ಅದು ಇವುಗಳ ಜೊತೆಗೆ ಚೆನ್ನಾಗಿರುತ್ತದೆ ಕೂಡ. ಆದರೆ ಐಸ್ ಕ್ರೀಮ್ ಜೊತೆ ದಾಲ್ ಮಖ್ನಿಯನ್ನು ಊಹೆ ಮಾಡುವುದು ಕೂಡ ಕೆಲವರಿಗೆ ಕಷ್ಟವಾಗಬಹುದು. ಆದರೆ ಇದರ ಟೇಸ್ಟ್ ನಿಜಕ್ಕೂ ಚೆನ್ನಾಗಿದೆ ಅಂತಿದ್ದಾರೆ ಫುಡ್ ಬ್ಲಾಗರ್.

ವೈರಲ್ ಆಯ್ತು ದಾಲ್ ಮಖ್ನಿಐಸ್ ಕ್ರೀಮ್ ರೋಲ್‌ ವಿಡಿಯೋ
ದಿ ಗ್ರೇಟ್ ಇಂಡಿಯನ್ ಫುಡೀ (thegreatindianfoodie) ಎಂಬ ಬಳಕೆದಾರರ ಹೆಸರಿನೊಂದಿಗೆ ಆಹಾರ ವ್ಲಾಗರ್, ಇತ್ತೀಚೆಗೆ ಈ ದಾಲ್ ಮಖ್ನಿ ಐಸ್ ಕ್ರೀಮ್ ರೋಲ್‌ನ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಬಾಣಸಿಗ ದಾಲ್ ಮಖ್ನಿ ಐಸ್ ಕ್ರೀಮ್ ರೋಲ್ ಅನ್ನು ಹೇಗೆ ಹಂತ ಹಂತವಾಗಿ ತಯಾರಿಸುತ್ತಾನೆ ಎಂಬುದನ್ನು ನೋಡಬಹುದು.

ಇದನ್ನೂ ಓದಿ:Viral Bride: ತನ್ನದೇ ಮದುವೆಯಲ್ಲಿ ಊಟ ಮಾಡುವಾಗ ವಧುವಿಗೆ ಖುಷಿಯೋ ಖುಷಿ! ಯುವತಿಯ ಹ್ಯಾಪಿ ಡ್ಯಾನ್ಸ್​ಗೆ ನೆಟ್ಟಿಗರೂ ಹ್ಯಾಪಿ  
ಹೇಗೆ ತಯಾರಾಗುತ್ತೆ ಗೊತ್ತಾ ದಾಲ್ ಮಖ್ನಿ ಐಸ್ ಕ್ರೀಮ್ ರೋಲ್?
ಈ ವಿಭಿನ್ನವಾದ ದಾಲ್ ಮಖ್ನಿ ಐಸ್ ಕ್ರೀಮ್ ರೋಲ್ ತಯಾರಿಸಲು ಬಾಣಸಿಗ ಮೊದಲಿಗೆ ಐಸ್ ಕ್ರೀಮ್ ರೋಲ್ ಯಂತ್ರದ ತಣ್ಣನೆಯ ಪ್ಯಾನ್‌ನಲ್ಲಿ ದಾಲ್ ಮಖ್ನಿಯನ್ನು ಸುರಿಯುವುದನ್ನು ಕಾಣಬಹುದು. ನಂತರ ಬಾಣಸಿಗ ದಾಲ್ ಮಖ್ನಿಯ ಮೇಲೆ ಸ್ವಲ್ಪ ನೀರಾದ ಐಸ್ ಕ್ರೀಮ್ ಹಾಕಿ ಎರಡೂ ಗಟ್ಟಿ ಹದಕ್ಕೆ ಬರುವವರೆಗೂ ಮಿಶ್ರಣ ಮಾಡುತ್ತಾನೆ. ಹೀಗೆ ಮಿಶ್ರಣವಾದ ದಾಲ್ ಮಖ್ನಿ ಪೇಸ್ಟ್ ಅನ್ನು ಸರಿಯಾಗಿ ಪ್ಯಾನ್ ಮೇಲೆ ಹರಡುತ್ತಾನೆ. ಮಿಶ್ರಣವು ನಿಧಾನವಾಗಿ ಗಟ್ಟಿ ಆಗುವುದನ್ನು ನಾವಿಲ್ಲಿ ನೋಡಬಹುದು. ಹೀಗೆ ಗಟ್ಟಿಯಾದ ಮಿಶ್ರಣದ ಮೇಲೆ ಮತ್ತೆ ದಾಲ್ ಮಖ್ನಿಯನ್ನು ಸೇರಿಸಿ ನಿಧಾನವಾಗಿ ಈ ಗಟ್ಟಿಯಾದ ಮಿಶ್ರಣವನ್ನು ರೋಲ್ ಮಾಡುತ್ತಾನೆ. ನಂತರ ಈ ರುಚಿಯಾದ ದಾಲ್ ಮಖ್ನಿ ಐಸ್ ಕ್ರೀಮ್ ರೋಲ್ ಅನ್ನು ಈರುಳ್ಳಿ ಜೊತೆಗೆ ಬಡಿಸುತ್ತಾನೆ.

ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ನೋಡಿ ಏನಂದ್ರು ಜನ 
ಪ್ರಸಕ್ತ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋವನ್ನು ಈಗಾಗ್ಲೇ 239 ಸಾವಿರ ಜನ ವೀಕ್ಷಿಸಿದ್ದಾರೆ ಮತ್ತು 5742 ಲೈಕ್ಸ್, 745 ಕಾಮೆಂಟ್ಸ್ ಕೂಡ ಬಂದಿವೆ. ಬಳಕೆದಾರನೊಬ್ಬ ಇದರ ರುಚಿ ಹೇಗಿರುತ್ತದೆಯೋ ಗೊತ್ತಿಲ್ಲ, ಆದರೆ ಅವರ ಪ್ರಯತ್ನಕ್ಕೆ ಅಭಿನಂದನೆಗಳು ಎಂದು ಬರೆದಿದ್ದಾರೆ. ಇನ್ನೂ ಕೆಲವರು ಈ ದಾಲ್ ಮಖ್ನಿ ಐಸ್ ಕ್ರೀಮ್ ರೋಲ್ ವಿಡಿಯೋವನ್ನು ಅಸಹ್ಯ ಎನ್ನುವಂತೆ ಭಾವಿಸಿ, ಈ ವಿಡಿಯೋವನ್ನು ತೆಗೆದು ಹಾಕಲು ನಿಮಗೆ ಇನ್ನೂ ಸಮಯವಿದೆ ಎಂದು ಬರೆದಿದ್ದಾರೆ.

ಇದನ್ನೂ ಓದಿ:  Plane Meal: ವಿಮಾನದಲ್ಲಿ ನೀಡಿದ ಆಹಾರದಲ್ಲಿ ಹಾವಿನ ತಲೆ ಪತ್ತೆ; ತಲೆ ಸುತ್ತಿ ಬೀಳೋದೊಂದೇ ಬಾಕಿ!

ಆದರೆ, ಈ ರೀತಿಯ ಖಾದ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. ಈ ಹಿಂದೆ, ಐಸ್ ಗೋಲ್ಗಪ್ಪಾ, ನುಟೆಲ್ಲಾ ಬಿರಿಯಾನಿ, ಚಾಕೊಲೇಟ್ ಫ್ರೈಡ್ ಚಿಕನ್, ಮ್ಯಾಗಿ ಲಾಡೂ, ಬನಾನಾ ಪಿಜ್ಜಾ, ಬಿಯರ್ ಮ್ಯಾಗಿ ಮತ್ತು ಮೇಲೆ ಹೇಳಿದಂತೆ ದೋಸೆ ಐಸ್ ಕ್ರೀಮ್, ಐಡ್ಲಿ ಐಸ್ ಕ್ರೀಮ್ ಮುಂತಾದ ಭಕ್ಷ್ಯಗಳು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಸಂಚಲನವನ್ನು ಸೃಷ್ಟಿಸಿದ ಅನನ್ಯ ಆಹಾರ ಆವಿಷ್ಕಾರಗಳ ಕೆಲವು ಉದಾಹರಣೆಗಳಾಗಿವೆ. ಕೆಲವರು ಇವುಗಳ ಹೊಸ ರುಚಿಯನ್ನು ಮೆಚ್ಚಿಕೊಂಡರೆ ಇನ್ನು ಕೆಲವರು ಇದೆಂತಾ ವಿಚಿತ್ರ ಪ್ರಯತ್ನ ಅಂತಾ ಮೂಗು ಮುರಿಯುತ್ತಾರೆ.
Published by:Ashwini Prabhu
First published: