Claw Machine: ಮಾಲ್​​ಗಳಲ್ಲಿರುವ ಈ ಯಂತ್ರದಿಂದ ಸುಲಭವಾಗಿ ಆಟಿಕೆಗಳನ್ನು ಪಡೆಯಬಹುದು! ಹೇಗೆ ಅಂತ ಇಲ್ಲಿದೆ ನೋಡಿ

ಸಣ್ಣ ಮಕ್ಕಳಿಗೆ ಕಡಲ ತೀರಕ್ಕೆ ಹೋಗುವುದು ಇಲ್ಲವೇ, ಉದ್ಯಾನವನಕ್ಕೆ ಹೋಗುವುದು ಹೆಚ್ಚು ಸಂತಸದ ವಿಷಯವಾಗಿರುತ್ತದೆ. ಮಾಲ್‌ಗಳಿಗೆ ಭೇಟಿ ನೀಡುವುದು ಅಲ್ಲಿನ ಗೇಮ್ ಆರ್ಕೇಡ್‌ಗಳಲ್ಲಿ ಆಡವಾಡುವುದೂ ಕೂಡ ಅವರನ್ನು ಖುಷಿಗೊಳಿಸುತ್ತದೆ. ಇಂತಹ ಆರ್ಕೇಡ್‌ಗಳಲ್ಲಿ ಆಟಿಕೆಗಳ ಯಂತ್ರಗಳನ್ನು ಅಳವಡಿಸಿರುವುದನ್ನು ನೀವು ನೋಡಿರಬಹುದು. ಟೋಕನ್ ಹಾಕಿ ಈ ಯಂತ್ರದಿಂದ ಆಟಿಕೆಗಳನ್ನು ಗೆಲ್ಲುವ ಆಟ. ಇಲ್ಲಿ ಅದೃಷ್ಟ ಕೂಡ ಮುಖ್ಯವಾಗಿರುತ್ತದೆ.

ಆಟಿಕೆ ಯಂತ್ರ

ಆಟಿಕೆ ಯಂತ್ರ

  • Share this:
ಸಣ್ಣ ಮಕ್ಕಳಿಗೆ (Children) ಕಡಲ ತೀರಕ್ಕೆ ಹೋಗುವುದು ಇಲ್ಲವೇ, ಉದ್ಯಾನವನಕ್ಕೆ ಹೋಗುವುದು ಹೆಚ್ಚು ಸಂತಸದ ವಿಷಯವಾಗಿರುತ್ತದೆ. ಮಾಲ್‌ಗಳಿಗೆ (Mall) ಭೇಟಿ ನೀಡುವುದು ಅಲ್ಲಿನ ಗೇಮ್ ಆರ್ಕೇಡ್‌ಗಳಲ್ಲಿ ಆಡವಾಡುವುದೂ ಕೂಡ ಅವರನ್ನು ಖುಷಿಗೊಳಿಸುತ್ತದೆ. ಇಂತಹ ಆರ್ಕೇಡ್‌ಗಳಲ್ಲಿ ಆಟಿಕೆಗಳ ಯಂತ್ರಗಳನ್ನು ಅಳವಡಿಸಿರುವುದನ್ನು ನೀವು ನೋಡಿರಬಹುದು. ಟೋಕನ್ ಹಾಕಿ ಈ ಯಂತ್ರದಿಂದ ಆಟಿಕೆಗಳನ್ನು ಗೆಲ್ಲುವ ಆಟ (Game). ಇಲ್ಲಿ ಅದೃಷ್ಟ ಕೂಡ ಮುಖ್ಯವಾಗಿರುತ್ತದೆ. ಈ ಟೋಕನ್‌ಗಳನ್ನು ನೀವು ದುಡ್ಡು ಕೊಟ್ಟು ಖರೀದಿಸಬೇಕಾಗುತ್ತದೆ. ಅದೃಷ್ಟವಿಲ್ಲದಿದ್ದರೆ ಆಟಿಕೆ (Toys) ಯಂತ್ರದಿಂದ ಆಟಿಕೆಗಳು ಬರುವುದೇ ಇಲ್ಲ. ಇಂತಹ ಯಂತ್ರಗಳಿಂದ ಕೂಡ ಆಟಿಕೆಗಳನ್ನು ಅದೂ ಕೂಡ ಉಚಿತವಾಗಿ ಪಡೆದುಕೊಳ್ಳಬಹುದು ಎಂಬುದಾಗಿ ಬ್ರ್ಯಾಂಡನ್ ಹೆಸರಿನ ಟಿಕ್‌ಟಾಕರ್ ವಿಡಿಯೋ ಹಂಚಿಕೊಂಡಿದ್ದಾರೆ.

ಆಟಿಕೆ ಯಂತ್ರದಿಂದ ನಿತ್ಯವೂ ಆಟಿಕೆ ಗೆಲ್ಲುತ್ತಿದ್ದ ಬ್ರ್ಯಾಂಡನ್
ಬ್ರ್ಯಾಂಡೊನ್, ಆರ್ಕೇಡ್‌ಗಳಲ್ಲಿರುವ ಆಟಿಕೆಗಳ ಯಂತ್ರದಿಂದ ನಿತ್ಯವೂ ಉಚಿತ ಆಟಿಕೆಗಳನ್ನು ಹೇಗೆ ಗೆಲ್ಲುತ್ತಿದ್ದರು ಎಂಬುದನ್ನು ಟಿಕ್‌ಟಾಕ್‌ನಲ್ಲಿ ಬಹಿರಂಗಪಡಿಸಿದ್ದಾರೆ. ನೆಟ್ಟಿಗರು ಬ್ರ್ಯಾಂಡನ್ ತಿಳಿಸಿದ ಟ್ರಿಕ್‌ನಿಂದ ನಿಜವಾಗಿಯೂ ಉಚಿತ ಆಟಿಕೆಗಳನ್ನು ಪಡೆಯಬಹುದೇ ಎಂಬುದನ್ನು ಪರಿಶೀಲಿಸುವ ಪ್ರಯತ್ನವನ್ನು ಮಾಡಿದರು. ಪವಾಡ ಎಂಬಂತೆ ಕೆಲವರು ಇದರಲ್ಲಿ ಯಶಸ್ವಿಯಾದರು ಇನ್ನು ಕೆಲವರು ಯಂತ್ರವೇ ವಿಭಿನ್ನವಾಗಿ ಕಾರ್ಯನಿರ್ವಹಿಸಿತು ಎಂಬುದಾಗಿ ತಿಳಿಸಿದ್ದಾರೆ. ಬ್ರ್ಯಾಂಡನ್ ಬಳಸಿದ ಟ್ರಿಕ್ ಏನು? ನೆಟ್ಟಿಗರ ಅಭಿಪ್ರಾಯಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.

ಮಾಲ್‌ಗಳಲ್ಲಿರುವ ಗೇಮ್ಸ್ ಆರ್ಕೇಡ್‌ಗಳಲ್ಲಿ ಮಕ್ಕಳನ್ನು ಆಕರ್ಷಿಸಲು ಇಂತಹ ಆಟಿಕೆ ಯಂತ್ರಗಳನ್ನು ಅಳವಡಿಸಿರುತ್ತಾರೆ. ಮಕ್ಕಳು ಮಾತ್ರವಲ್ಲದೆ ದೊಡ್ಡವರು ಕೂಡ ಇದರಲ್ಲಿ ಟೋಕನ್ ಹಾಕಿ ಆಟಿಕೆ ಗೆಲ್ಲಬಹುದು. ಮೊದಲೇ ತಿಳಿಸಿದಂತೆ ನಿಮಗೆ ಗೆಲ್ಲುವ ಅದೃಷ್ಟವಿದ್ದರೆ ಸುಂದರ ಆಟಿಕೆ ನಿಮ್ಮ ಕೈ ಸೇರುತ್ತದೆ.

ಯಂತ್ರಗಳಿಂದ ಉಚಿತವಾಗಿ ಆಟಿಕೆಗಳನ್ನು ಪಡೆಯುವುದು ಹೇಗೆ?
ಟಿಕ್‌ಟಾಕರ್ ಆಗಿರುವ ಬ್ರ್ಯಾಂಡನ್ ಈ ಯಂತ್ರಗಳಿಂದ ಉಚಿತವಾಗಿ ಆಟಿಕೆಗಳನ್ನು ಪಡೆಯುವುದು ಹೇಗೆ ಎಂಬುದನ್ನು ಟಿಕ್‌ಟಾಕ್‌ನಲ್ಲಿ ಬಹಿರಂಗಪಡಿಸಿದ್ದಾರೆ. ಆಟಿಕೆಯನ್ನು ಹೇಗೆ ಪಡೆಯಬೇಕು ಎಂಬುದನ್ನು ಕುರಿತು ಅವರು ಹಂತ ಹಂತದ ವಿಡಿಯೋವೊಂದನ್ನು ತೋರಿಸಿದ್ದು ಆಟಿಕೆ ಯಂತ್ರವನ್ನು ಗೆಲ್ಲುವುದು ಹೇಗೆ ಎಂಬ ಶೀರ್ಷಿಕೆಯನ್ನು ವಿಡಿಯೋಗೆ ನೀಡಿದ್ದಾರೆ.

ಇದನ್ನೂ ಓದಿ: Father and Daughter: ಮಗಳ ಫೀಸ್ ಕಟ್ಟೋದ್ದಕ್ಕೆ ಈ ತಂದೆ ಏನೆಲ್ಲಾ ಕೆಲಸ ಮಾಡ್ತಾರೆ ನೋಡಿ; ನೋಡಿದ್ರೆ ಪಾಪ ಅನಿಸುತ್ತೆ

ಯಂತ್ರವನ್ನು ಕೇಂದ್ರೀಕರಿಸಿಕೊಂಡು ಬಟನ್ ಪ್ರೆಸ್ ಮಾಡಿ ಪುನಃ ಪ್ರೆಸ್ ಮಾಡಿ ಹಾಗೂ ಆಟಿಕೆಯನ್ನು ಪಡೆದುಕೊಳ್ಳಿ ಎಂದು ಬ್ರ್ಯಾಂಡನ್ ತಿಳಿಸಿದ್ದಾರೆ. ನೀವು ಪುನಃ ಬಟನ್ ಪ್ರೆಸ್ ಮಾಡದೇ ಇದ್ದರೆ ನಿಮಗೆ ಆಟಿಕೆ ದೊರೆಯುವುದಿಲ್ಲ ಎಂಬ ಸೂಚನೆಯನ್ನೂ ನೀಡಿದ್ದಾರೆ. ಈ ವಿಡಿಯೋ ಟಿಕ್‌ಟಾಕ್ ಬಳಕೆದಾರರು ಅತಿಶಯೋಕ್ತಿ ಪಟ್ಟಿದ್ದಂತೂ ಸುಳ್ಳಲ್ಲ. ಕೊನೆಯ ಹಂತವನ್ನು ಇಷ್ಟು ದಿನಗಳ ಕಾಲ ಅವರು ಅನುಸರಿಸದೇ ಇದ್ದ ಕಾರಣ ಎಂತಹ ಒಳ್ಳೆಯ ಅವಕಾಶವನ್ನು ಕಳೆದುಕೊಂಡರು ಎಂಬ ಬೇಸರ ವ್ಯಕ್ತಪಡಿಸಿದರು. ವಿಡಿಯೋ ಅಪ್‌ಲೋಡ್ ಮಾಡಿದ ಕ್ಷಣದಲ್ಲೇ ಕಾಮೆಂಟ್ ವಿಭಾಗ ನೆಟ್ಟಿಗರ ಕಾಮೆಂಟ್‌ಗಳಿಂದ ತುಂಬಿಹೋಯಿತು ಹಾಗೂ ಬ್ರ್ಯಾಂಡನ್ ತಿಳಿಸಿದ ಟ್ರಿಕ್ ಅನ್ನು ಅನುಸರಿಸಲೇಬೇಕೆಂಬ ಛಲ ಅವರಲ್ಲಿ ಮೂಡಿತು.

ವಿಡಿಯೋ ನೋಡಿ ನೆಟ್ಟಿಗರ ಕಾಮೆಂಟ್ ಹೀಗಿತ್ತು
ನಿಜಕ್ಕೂ ಬ್ರ್ಯಾಂಡನ್ ಹೇಳಿದ ವಿಧಾನ ಕಾರ್ಯನಿರ್ವಹಿಸುತ್ತಿದೆ ನಾನು 10 ಆಟಿಕೆಗಳನ್ನು ಗೆದ್ದೆ ಎಂಬುದಾಗಿ ಒಬ್ಬ ಟಿಕ್‌ಟಾಕ್ ಅನುಯಾಯಿ ತಿಳಿಸಿದರೆ, ನನ್ನ ತಾಯಿ ಆರ್ಕೇಡ್‌ನಲ್ಲಿ ಕೆಲಸ ಮಾಡುತ್ತಾರೆ ಹಾಗೂ ಆಕೆ ತಿಳಿಸಿದಂತೆ ಅವರು ಸಂಖ್ಯೆಗಳನ್ನು ಹೊಂದಿಸುತ್ತಾರೆ ಉದಾ. ಪ್ರತೀ 500ಕ್ಕೆ ಒಂದು ಬಹುಮಾನ ಹೀಗೆ..

ಇನ್ನು ಮೂರನೇ ಕಾಮೆಂಟಿಗನೂ ಕ್ಲಾ ಮೆಶೀನ್ ಬಗ್ಗೆ ಮಾತನಾಡಿದ್ದು ಅವರು ಯಂತ್ರವನ್ನು ಸಡಿಲವಾಗಿ ಫಿಕ್ಸ್ ಮಾಡುತ್ತಾರೆ ಹೀಗಾಗಿ ಅದು ಗ್ರಿಪ್ ಅನ್ನು ಹೋಲ್ಡ್ ಮಾಡುವುದಿಲ್ಲ…ಕೆಲವೊಂದು ಸಂದರ್ಭಗಳಲ್ಲಿ ಇದು ನಿಜವಾದರೂ ಎಲ್ಲಾ ಸನ್ನಿವೇಶಗಳಲ್ಲಿ ಇದು ನಿಜವಾಗಿರುವುದಿಲ್ಲ.

ಇದನ್ನೂ ಓದಿ:  Knife in Sandwich: ಸಬ್ ವೇ ಸ್ಯಾಂಡ್ವಿಚ್ ನಲ್ಲಿ ಮಹಿಳೆಗೆ ಸಿಕ್ಕಿದ್ದೇನು? ವಿಡಿಯೋ ನೋಡಿ

ಇನ್ನು ಇಂಗ್ಲೆಂಡ್‌ನ ವ್ಯಕ್ತಿಯೊಬ್ಬರು ವ್ಯಂಗ್ಯಮಯವಾಗಿ ಕಾಮೆಂಟ್ ಮಾಡಿದ್ದು ನಮ್ಮ ಮೆಶೀನ್‌ಗಳು ನಿಖರವಾಗಿರುವುದರಿಂದ ಇದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಹೀಗೆ ಬ್ರ್ಯಾಂಡನ್ ತಿಳಿಸಿದ ರಹಸ್ಯ ಹಲವಾರು ನೆಟ್ಟಿಗರನ್ನು ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳುವಂತೆ ಮಾಡಿದ್ದು ಸುಳ್ಳಲ್ಲ.
Published by:Ashwini Prabhu
First published: