• Home
  • »
  • News
  • »
  • trend
  • »
  • Anand Mahindra: ಆನಂದ್‌ ಮಹೀಂದ್ರಾ  ಅವರು ಶೇರ್​ ಮಾಡಿರುವ ವೈರಲ್​​ ಫೋಟೋ ಹೇಗಿದೆ ಗೊತ್ತಾ?

Anand Mahindra: ಆನಂದ್‌ ಮಹೀಂದ್ರಾ  ಅವರು ಶೇರ್​ ಮಾಡಿರುವ ವೈರಲ್​​ ಫೋಟೋ ಹೇಗಿದೆ ಗೊತ್ತಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಫುಟ್ಬಾಲ್ ಮಾಯೆ ಎಲ್ಲಿ ಇಲ್ಲ ಹೇಳಿ. ಎಲ್ಲ ಕಡೆಯೂ ಈಗ ಫುಟ್ಬಾಲ್ ಕ್ರೇಜ್‌ ಸಕತ್‌ ಆಗಿ ಸದ್ದು ಮಾಡುತ್ತಿದೆ. ಫುಟ್ಬಾಲ್ ಆಟಕ್ಕೆ ಜಗತ್ತಿನ ಎಲ್ಲ ಕಡೆಯೂ ಅಭಿಮಾನಿಗಳಿದ್ದಾರೆ. ಒಂದೇ ಒಂದು ಆಟವನ್ನು ಸಹ ಫುಟ್ಬಾಲ್ ಅಭಿಮಾನಿಗಳು ಯಾವುದೇ ಕಾರಣಕ್ಕೂ ಮಿಸ್‌ ಮಾಡಿಕೊಳ್ಳುವುದೇ ಇಲ್ಲ. ಈ ಮಾತು ಸತ್ಯ ಅಂತ ಒರ್ವ ವ್ಯಕ್ತಿ ಪ್ರೂವ್​ ಮಾಡಿದ್ದಾರೆ.

ಮುಂದೆ ಓದಿ ...
  • Share this:

    ಫುಟ್ಬಾಲ್ (Football) ಮಾಯೆ ಎಲ್ಲಿ ಇಲ್ಲ ಹೇಳಿ. ಎಲ್ಲ ಕಡೆಯೂ ಈಗ ಫುಟ್ಬಾಲ್ ಕ್ರೇಜ್‌ (Football craze) ಸಕತ್‌ ಆಗಿ ಸದ್ದು ಮಾಡುತ್ತಿದೆ. ಫುಟ್ಬಾಲ್ ಆಟಕ್ಕೆ (Game) ಜಗತ್ತಿನ ಎಲ್ಲ ಕಡೆಯೂ ಅಭಿಮಾನಿಗಳಿದ್ದಾರೆ (Fans). ಒಂದೇ ಒಂದು ಆಟವನ್ನು ಸಹ ಫುಟ್ಬಾಲ್ ಅಭಿಮಾನಿಗಳು ಯಾವುದೇ ಕಾರಣಕ್ಕೂ ಮಿಸ್‌ ಮಾಡಿಕೊಳ್ಳುವುದೇ ಇಲ್ಲ. ಆದ್ರೆ ಕೆಲವರಿಗೆ ತಮ್ಮ ಬ್ಯುಸಿ ಶ್ಯೆಡೂಲ್‌ ನಲ್ಲಿ (Busy Schedule) ಫುಟ್ಬಾಲ್ ಲೈವ್‌ (Football live) ಅನ್ನು ನೋಡಕ್ಕೆ ಆಗದೇ ತಮ್ಮ ಕೆಲಸದ ಮಧ್ಯೆದಲ್ಲಿಯೇ ಈ ಆಟವನ್ನು ವೀಕ್ಷಿಸುತ್ತಾರೆ. ಅದಕ್ಕೆ ಸಂಬಂಧಿಸಿದಂತೆ ಕುತೂಹಲಕರ ಸುದ್ದಿಯೊಂದು ಈಗ ಹೊರಬಂದಿದೆ.


    ಫುಟ್ಬಾಲ್ ಕ್ರೇಜ್‌ ಎಷ್ಟಿರುತ್ತೆ ಅನ್ನೋದಕ್ಕೆ ಒಮ್ಮೊಮ್ಮೆ ಹೇಳಲು ಸಾಧ್ಯವೇ ಇಲ್ಲ. ಅಂತಹದರಲ್ಲಿ ಫುಟ್ಬಾಲ್ ಆಟದ ಅಭಿಮಾನಿಯೊಬ್ಬರು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳುವಾಗಲೇ ಆಟವನ್ನು ವೀಕ್ಷಿಸುವ ಮೂಲಕ ಫೀಫಾ ಫುಟ್ಬಾಲ್‌ ವಿಶ್ವಕಪ್ ಆಟದ ಹುಚ್ಚು ಎಷ್ಟಿದೆ ನೋಡಿ ಎಂಬುದನ್ನು ತೋರಿಸಿದ್ದಾರೆ. ಈ ಪೋಟೊ ಈಗ ಸಖತ್‌ ವೈರಲ್‌ ಆಗ್ತಿದೆ.


    “ಶಸ್ತ್ರಚಿಕಿತ್ಸೆಯ ವೇಳೆ  ಫುಟ್ಬಾಲ್ ವೀಕ್ಷಣೆ ಮಾಡುತ್ತಿರುವ ವ್ಯಕ್ತಿಯ ಫೋಟೋ” ಶೇರ್‌ ಮಾಡಿಕೊಂಡಿರುವ ಆನಂದ್‌ ಮಹೀಂದ್ರಾ


    ಇಂತಹ ಹುಚ್ಚು ಕ್ರೇಜ್‌ ಇರೋ ಫೋಟೋ ಭಾರತದ ಹೆಸರಾಂತ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರ ಗಮನವನ್ನು ಸೆಳೆದಿದೆ. ಆದ್ದರಿಂದ ಅವರು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ.


    ಅಷ್ಟೇ ಅಲ್ಲದೇ, ಈ ವ್ಯಕ್ತಿ ಕೆಲವು ಟ್ರೋಫಿಗಳಿಗೆ ಅರ್ಹನೇ? ಎಂದು ತಮ್ಮ ಫಾಲೋವರ್ಸ್‌ಗಳನ್ನು ಪ್ರಶ್ನೆ ಮಾಡಿದ್ದಾರೆ.


    Do you know how the viral photo shared by Anand Mahindra
    ಸಾಂದರ್ಭಿಕ ಚಿತ್ರ


    ಈ ವ್ಯಕ್ತಿಯ ಫುಟ್ಬಾಲ್‌ ಹುಚ್ಚಿಗೆ ಹ್ಯಾಟ್ಸ್‌ಅಪ್‌ ಅನ್ನುತ್ತ ಆನಂದ್‌ ಮಹೀಂದ್ರಾ ಅವರು ಈ ವೈರಲ್ ಫೋಟೋವನ್ನು ತಮ್ಮ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.


    ಈ ಫೋಟೋವನ್ನು ಪೋಲಿಷ್ ನಗರದ ಕೀಲ್ಸ್‌ನಲ್ಲಿರುವ ಆಸ್ಪತ್ರೆಯೊಂದರಲ್ಲಿ ತೆಗೆಯಲಾಗಿದೆ. ಅದೇ ಆಸ್ಪತ್ರೆಯೇ ಆ ಫೋಟೋವನ್ನು ಶೇರ್‌ ಮಾಡಿಕೊಂಡಿದೆ ಎಂದು ವರದಿಯಾಗಿದೆ.


    ಆನಂದ್‌ ಮಹೀಂದ್ರಾ  ಅವರ  ಟ್ವೀಟ್​​ ಹೀಗಿತ್ತು


    ಆನಂದ್‌ ಮಹೀಂದ್ರಾ ಅವರು ಪೋಲೆಂಡ್‌ನ ಟ್ವೀಟ್‌ನಿಂದ ಕೆಲವು ನೋಟ್‌ಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಅದರ ಶೀರ್ಷಿಕೆಯು, "ಪೋಲೆಂಡ್‌ನಲ್ಲಿರುವ ವ್ಯಕ್ತಿಯೊಬ್ಬರು ಬೆನ್ನುಮೂಳೆಯ ಆಪರೇಷನ್ ಮಾಡಿಸಿಕೊಳ್ಳುವಾಗಲೂ ಸಹ ಫಿಫಾ ಪುಟ್ಬಾಲ್‌ ವಿಶ್ವಕಪ್ ಆಟವನ್ನು ವೀಕ್ಷಣೆ ಮಾಡಲೇಬೇಕೆಂದು ಹಠ ಮಾಡಿದರ ಪರಿಣಾಮ ಅದಕ್ಕೆ ವೈದ್ಯರು ಸಹ ಅನುಮತಿ ನೀಡಿದ್ದಾರೆ.


    ಈ ಫೋಟೋವನ್ನು ಕೀಲ್ಸ್‌ನಲ್ಲಿರುವ SP ZOZ MSWiA ಎಂಬ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯು ಶೇರ್‌ ಮಾಡಿಕೊಂಡಿದೆ.


    ವೈದ್ಯರು ಆಪರೇಷನ್‌ ಅನ್ನು ಮುಂದುವರಿಸಿದಾಗಲೂ ಸಹ ಆಪರೇಟಿಂಗ್ ಥಿಯೇಟರ್‌ನೊಳಗಿನ ಟಿವಿ ಪರದೆ ಮೇಲೆ ಫಿಫಾ ವಿಶ್ವಕಪ್ ಪಂದ್ಯ ಬರುತ್ತಿರುವುದು ಮತ್ತು ರೋಗಿಯು ಅದನ್ನು ತದೇಕ ಚಿತ್ತದಿಂದ ವೀಕ್ಷಿಸುತ್ತಿರುವ ದೃಶ್ಯವು ಫೋಟೋದಲ್ಲಿ ಸೆರೆಯಾಗಿದೆ.


    ಪೋಲೆಂಡ್‌ನ ಕೀಲ್ಸ್‌ನಲ್ಲಿರುವ SP ZOZ MSWiA ಎಂಬ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯಿಂದ ಈ ಘಟನೆ ವರದಿಯಾಗಿದೆ ಎಂದು ಟ್ವೀಟ್‌ನಲ್ಲಿ ತಿಳಿಸಲಾಗಿದೆ. ನವೆಂಬರ್ 25 ರಂದು ಕೀಲ್ಸ್‌ನ ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬರು ಬೆನ್ನುಮೂಳೆಯ ಆಪರೇಷನ್‌ಗೆ ಒಳಗಾಗಿದ್ದರು.


    ಆಗ ಆ ರೋಗಿಯು ಆಪರೇಷನ್‌ ಮಾಡುವಾಗ ವೇಲ್ಸ್ ಮತ್ತು ಇರಾನ್ ನಡುವಿನ ಫುಟ್ಬಾಲ್‌ ಪಂದ್ಯವನ್ನು ವೀಕ್ಷಿಸಬಹುದೇ ಎಂದು ಅವರು ಶಸ್ತ್ರಚಿಕಿತ್ಸಕರನ್ನು ಕೇಳಿದರು.


    ಅವರ ಕೋರಿಕೆಯನ್ನು ವೈದ್ಯರು ಸಹ ಒಕೆ ಅಂದಿದ್ದಾರೆ. ಆಪರೇಷನ್ ಥಿಯೇಟರ್‌ಗೆ ಟಿವಿಯನ್ನು ತರಿಸಲಾಯಿತು. ಆದರೆ ರೋಗಿಗೆ ಅರಿವಳಿಕೆಯ ಔಷಧಿಯನ್ನು ನೀಡಲಾಯಿತು.


    ಇದನ್ನೂ ಓದಿ: Anand Mahindra: ಹೇಗಿದೆ ನೋಡಿ ಮಲ್ಟಿರೈಡರ್ ಪ್ಯಾಸೆಂಜರ್ ವಾಹನ, ಗ್ರಾಮೀಣ ಆವಿಷ್ಕಾರಕ್ಕೆ ನೆಟ್ಟಿಗರು ಫಿದಾ


    ಹರಿದು ಬರುತ್ತಿರುವ ಕಮೆಂಟ್‌ಗಳ ಮಹಾಪೂರ


    ಈ ಫೋಟೋಗೆ ಅನೇಕ ಸೋಷಿಯಲ್‌ ಮೀಡಿಯಾ ಬಳಕೆದಾರರು ಕಮೆಂಟ್‌ ಮಾಡಿದ್ದಾರೆ. "ರೋಗಿಯ ಜೊತೆಗೆ, ವೈದ್ಯಕೀಯ ವೃತ್ತಿಪರರು ಶಸ್ತ್ರಚಿಕಿತ್ಸೆ ಮಾಡುವಾಗ ಅವರಿಗೆ ಫುಟ್ಬಾಲ್‌ ನೋಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಅವರು ಸಹ ದೊಡ್ಡ ದೊಡ್ಡ ಟ್ರೋಫಿಗೆ ಅರ್ಹರು” ಎಂದು ಬರೆದುಕೊಂಡಿದ್ದಾರೆ.


    "ಈಗಿನ ದಿನಗಳಲ್ಲಿ OT ಗಳಲ್ಲಿ ಇದು ತುಂಬಾ ಸಾಮಾನ್ಯವಾಗಿದೆ ಸರ್. ರೋಗಿಯ ಆತಂಕವನ್ನು ನಿವಾರಿಸಲು, ನಾವು ಅಂತಹ ಅಭ್ಯಾಸಗಳನ್ನು ಮಾಡಬೇಕಾಗಿದೆ.


    ಉತ್ತಮ ಸಂಗೀತ, ವೆಬ್ ಸರಣಿಯ ಸಂಚಿಕೆ ಅಥವಾ ಲೈವ್ #Fifa ಪಂದ್ಯಗಳನ್ನು ನೋಡುವ ಮೂಲಕ ಸಮಸ್ಯೆಯನ್ನು ಪರಿಹರಿಸಬಹುದು.'' ಎಂದು ವೈದ್ಯರೊಬ್ಬರು ಕಮೆಂಟ್‌ ಬರೆದಿದ್ದಾರೆ.

    Published by:Gowtham K
    First published: