Viral Video: ನೀವು ಆರ್ಡರ್ ಮಾಡಿದ ಪಾರ್ಸೆಲ್​ನ್ನು ಹೇಗೆಲ್ಲಾ ಎಸೆಯಲಾಗುತ್ತೆ ಗೊತ್ತಾ?ವಿಡಿಯೋ ನೋಡಿ

ನಮಗೆ ಬೇಕಾದ ವಸ್ತುಗಳನ್ನು ಆನ್​ಲೈನ್​ನಲ್ಲಿ ಆರ್ಡರ್ ಮಾಡಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ತುಂಬಾನೇ ಸಾಮಾನ್ಯವಾಗಿದೆ. ನೀವು ಅಂತಹ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರೆ, ಈ ವೈರಲ್ ವಿಡಿಯೋ ನಿಮ್ಮನ್ನು ಆತಂಕಕ್ಕೀಡು ಮಾಡಬಹುದು.

ರೈಲ್ವೆ ನಿಲ್ದಾಣದಲ್ಲಿ ಎಸೆಯುತ್ತಿರುವ ಪಾರ್ಸೆಲ್

ರೈಲ್ವೆ ನಿಲ್ದಾಣದಲ್ಲಿ ಎಸೆಯುತ್ತಿರುವ ಪಾರ್ಸೆಲ್

  • Share this:
ಮೊದಲೆಲ್ಲಾ ಜನರು ಒಂದು ಚಿಕ್ಕ ಕರವಸ್ತ್ರ ಬೇಕಾಗಿದ್ದರೂ ಮಾರ್ಕೆಟ್ ಗೆ (Market) ಹೋಗಿ ಒಂದೆರಡು ಅಂಗಡಿ ಸುತ್ತಾಡಿ ಅದರ ಬೆಲೆಗಳನ್ನು (Price) ಹೋಲಿಸಿ ಖರೀದಿ ಮಾಡುತ್ತಿದ್ದರು. ಆದರೆ ಈಗ ಎಲ್ಲವೂ ಒಂದು ಬಟನ್ ಒತ್ತುವುದರ ಮೇಲೆ ನಿರ್ಧಾರ ಆಗುತ್ತದೆ.  ಹೌದು.. ಈಗೆಲ್ಲಾ ಬಹುತೇಕರು ಮನೆಯಲ್ಲಿಯೇ ಕುಳಿತು ತಮ್ಮ ಮೊಬೈಲ್ ಫೋನ್ ನಲ್ಲಿ (Mobile Phone) ಆನ್​ಲೈನ್ ಶಾಪಿಂಗ್ ಆಪ್ ಗಳನ್ನು (Online Shopping App) ತೆರೆದು ತಮಗೆ ಬೇಕಾದ ವಸ್ತುಗಳ ಬೆಲೆಗಳನ್ನು ಹೋಲಿಸಿ ನೋಡಿ ಆನ್ಲೈನ್ ನಲ್ಲಿಯೇ ಖರೀದಿ (Purchase)  ಮಾಡುತ್ತಿದ್ದಾರೆ.  ನಮಗೆ ಬೇಕಾದ ಒಂದು ಚಿಕ್ಕ ಹಲ್ಲುಜ್ಜುವ ಬ್ರಷ್ ನಿಂದ ಹಿಡಿದು ಮನೆಗೆ ಬೇಕಾದ ಎಲ್ಲಾ ವಸ್ತುಗಳನ್ನು ನಾವು ಆನ್​ಲೈನ್ ನಲ್ಲಿಯೇ ಖರೀದಿ ಮಾಡುತ್ತಿದ್ದೇವೆ. 

ಆನ್​​ಲೈನ್ ಪಾರ್ಸೆಲ್ ಗಳನ್ನು ಹೇಗೆಲ್ಲಾ ಅನ್ಲೋಡ್ ಮಾಡುತ್ತಾರೆ
ನಮಗೆ ಬೇಕಾದ ವಸ್ತುಗಳನ್ನು ಆನ್​ಲೈನ್​ನಲ್ಲಿ ಆರ್ಡರ್ ಮಾಡಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ತುಂಬಾನೇ ಸಾಮಾನ್ಯವಾಗಿದೆ.  ನೀವು ಅಂತಹ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರೆ, ಈ ವೈರಲ್ ವಿಡಿಯೋ ನಿಮ್ಮನ್ನು ಆತಂಕಕ್ಕೀಡು ಮಾಡಬಹುದು.

ಇಂಟರ್ನೆಟ್ ನಲ್ಲಿ ನಿಮ್ಮ ಎರಡು ಕಣ್ಣುಗಳ ಹುಬ್ಬುಗಳನ್ನು ಏರಿಸಿಕೊಳ್ಳುವ ಒಂದು ವಿಡಿಯೋದಲ್ಲಿ ನಾವು ಈ ರೈಲು ನಿಲ್ದಾಣದಲ್ಲಿ ನಿಂತಿರುವ ಒಂದು ರೈಲಿನ ಬೋಗಿಯನ್ನು ಅನ್ಲೋಡ್ ಮಾಡುವಾಗ ಅಜಾಗರೂಕತೆಯಿಂದ ಈ ಆನ್​ಲೈನ್ ಪಾರ್ಸೆಲ್ ಗಳನ್ನು ಹುಡುಗರು ಹೇಗೆಲ್ಲಾ ಎಸೆಯುತ್ತಿದ್ದಾರೆ ಒಮ್ಮೆ ನೋಡಿ.

ಈ ವೈರಲ್ ವಿಡಿಯೋದಲ್ಲೇನಿದೆ ?
ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಲಾದ ಕ್ಲಿಪ್ ಅನ್ನು ರೈಲ್ವೆ ನಿಲ್ದಾಣದಲ್ಲಿ ಚಿತ್ರೀಕರಿಸಲಾಗಿದೆ ಮತ್ತು ಪ್ಲಾಟ್​​ಫಾರ್ಮ್​ ನಲ್ಲಿ ಹಲವಾರು ಆನ್​ಲೈನ್ ನಲ್ಲಿ ಆರ್ಡರ್ ಮಾಡಿದ ಪ್ಯಾಕೇಜ್ ಗಳನ್ನು ರಾಶಿ ರಾಶಿ ಹಾಕಿರುವುದನ್ನು ನಾವು ನೋಡಬಹುದು. ಹಲವಾರು ಪುರುಷರು ರೈಲಿನಿಂದ ಪಾರ್ಸೆಲ್ ಗಳನ್ನು ಅವರಿಗೆ ಮನಬಂದಂತೆ ಎಸೆದಿದ್ದಾರೆ.

ಇದನ್ನೂ ಓದಿ: Turkey Teeth: ಹಲ್ಲಿನ ಸಮಸ್ಯೆಗೆ ಟರ್ಕಿ ಟೀತ್ ಟ್ರೀಟ್ಮೆಂಟ್!​ ಎಲ್ಲೆಡೆ ಫುಲ್​ ವೈರಲ್​



34 ಸೆಕೆಂಡುಗಳ ಈ ಕ್ಲಿಪ್ ನ ಒಂದು ಹಂತದಲ್ಲಿ, ಪೋರ್ಟರ್ ಎಸೆದ ನಂತರ ಪಾರ್ಸೆಲ್ ನಿಲ್ದಾಣದಲ್ಲಿರುವ ಒಂದು ಸೀಲಿಂಗ್ ಫ್ಯಾನ್ ಗೆ ಡಿಕ್ಕಿ ಹೊಡೆಯುತ್ತದೆ. ಅಮೆಜಾನ್ ಲೋಗೋವನ್ನು ಹೊಂದಿರುವ ಅನೇಕ ಪ್ಯಾಕೇಜ್ ಗಳನ್ನು ನಾವು ಇಲ್ಲಿ ನೋಡಬಹುದು.

ವಿಡಿಯೋ ನೋಡಿ ನೆಟ್ಟಿಗರು ಏನಂದ್ರು
ಈ ವಿಡಿಯೋ ತುಣುಕು ಟ್ವಿಟ್ಟರ್ ನಲ್ಲಿ 2 ಮಿಲಿಯನ್ ಗೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ ಮತ್ತು ಬಳಕೆದಾರರನ್ನು ಬೆಚ್ಚಿ ಬೀಳಿಸಿರುವುದಂತೂ ನಿಜ. ಅನೇಕರು ತಮ್ಮನ್ನು ತಲುಪುವ ಈ ಪಾರ್ಸೆಲ್ ಗಳು ಅವರ ಕೈಗೆ ಸೇರುವ ಮುನ್ನ ಹೇಗೆಲ್ಲಾ ಆಗುತ್ತವೆ ಅಂತ ಈ ವಿಡಿಯೋದಲ್ಲಿ ನೋಡಿ ಅನೇಕರು ಆಶ್ಚರ್ಯಪಟ್ಟಿದ್ದಾರೆ.

"ನಾನು ನನ್ನ ಪಾರ್ಸೆಲ್ ಅನ್ನು ಸ್ವೀಕರಿಸಿದಾಗ ನನಗೆ ತುಂಬಾನೇ ಖುಷಿಯಾಗುತ್ತದೆ, ಆದರೆ ನನಗೆ ಖುಷಿ ನೀಡುವ ವಸ್ತುವನ್ನು ಹೀಗೆಲ್ಲಾ ಬಿಸಾಡುತ್ತಾರೆ ಅಂತ ನೋಡಿ ಬೇಸರ ಆಯ್ತು" ಎಂದು ಇನ್ನೊಬ್ಬ ದಿಗ್ಭ್ರಮೆಗೊಂಡ ಬಳಕೆದಾರರು ಬರೆದಿದ್ದಾರೆ.

ಇದನ್ನೂ ಓದಿ: Coconut Husk: ತೆಂಗಿನ ಸಿಪ್ಪೆಗೂ ಡಿಮ್ಯಾಂಡ್! ರೈತರಿಗೆ ಮತ್ತು ಉದ್ಯಮಗಳಿಗೆ ಹೊಸ ದಾರಿ

"ಇದು ಮಾರ್ಚ್ 2022 ರ ಹಳೆಯ ವಿಡಿಯೋ ಆಗಿದ್ದು, ಗುವಾಹಟಿ ರೈಲ್ವೆ ನಿಲ್ದಾಣದಲ್ಲಿ ರಾಜಧಾನಿ ಎಕ್ಸಪ್ರೆಸ್ ನಿಂದ ಈ ಪಾರ್ಸೆಲ್ ಗಳನ್ನು ಹೊರ ತೆಗೆಯುವ ಸಂದರ್ಭದಲ್ಲಿ ಚಿತ್ರೀಕರಿಸಿದ ವೀಡಿಯೋ" ಎಂದು ಟ್ವೀಟ್ ನಲ್ಲಿ ತಿಳಿಸಲಾಗಿದೆ. ನಂತರದ ಟ್ವೀಟ್ ನಲ್ಲಿ ರೈಲ್ವೆ ಒಳಗೆ ಪಾರ್ಸೆಲ್ ಗಳನ್ನು ಲೋಡ್ ಮಾಡುವುದು ಮತ್ತು ಅಲ್ಲಿಂದ ಕೆಳಗಿಳಿಸುವ ಕೆಲಸವನ್ನು ಖಾಸಗಿ ಕಂಪನಿಗಳಿಗೆ ನೀಡಿರುತ್ತಾರೆ ಮತ್ತು ರೈಲ್ವೆಯ ಜವಾಬ್ದಾರಿ ಅಲ್ಲ ಎಂದು ಬರೆದಿದೆ.
Published by:Ashwini Prabhu
First published: