Ants: ಭೂಮಿಯ ಮೇಲೆ ಎಷ್ಟು ಇರುವೆಗಳಿವೆ ನಿಮಗೇನಾದ್ರೂ ಗೊತ್ತಾ? ಈ ವಿಜ್ಞಾನಿಗಳು ಲೆಕ್ಕ ಹಾಕಿದ್ದಾರೆ ನೋಡಿ

ಪುಟ್ಟ ಕೀಟಗಳ ಸಾಲಿಗೆ ಸೇರುವ ಇರುವೆ ಜಗತ್ತು ಇನ್ನಷ್ಟು ಇಂಟೆರೆಸ್ಟಿಂಗ್.‌ ಶಿಸ್ತಿಗೆ ಹೆಸರಾಗಿರುವ ಇರುವೆ ಗಳ ಬಗ್ಗೆ ಈಗಾಗಲೇ ಸಾಕಷ್ಟು ಸಂಶೋಧನೆಗಳು, ಅಧ್ಯಯನಗಳು ನಡೆದಿವೆಯಾದರೂ ವಿಜ್ಞಾನಿಗಳು ಮತ್ತೊಂದು ಹೊಸ ಅಂಶವನ್ನು ಕಂಡುಹಿಡಿದಿದ್ದಾರೆ. ಅದೇ ಭೂಮಿಯ ಮೇಲೆ ಇರುವೆಗಳ ಸಂಖ್ಯೆ ಎಷ್ಟಿದೆ ಅನ್ನೋದು.

ಇರುವೆಗಳು

ಇರುವೆಗಳು

  • Share this:
ಭೂಮಿಯ (Earth) ಮೇಲಿರುವ ಸಕಲ ಜೀವಚರಗಳ ಬದುಕೂ ಒಂದೊಂದು ವಿಸ್ಮಯ. ಅದನ್ನು ಮನುಷ್ಯ ಹುಡುಕುತ್ತಲೇ ಇದ್ದಾನೆ. ಪ್ರಾಣಿ - ಪಕ್ಷಿಗಳ ಬದುಕಿನ ಬಗ್ಗೆ ಬಗೆದಷ್ಟೂ ಕುತೂಹಲಕಾರಿ ವಿಷಯಗಳು ಹೊರಬರುತ್ತಲೇ ಇರುತ್ತವೆ. ಇನ್ನು ಭೂಮಂಡಲದಲ್ಲಿ ಗುರುತಿಸಲ್ಪಟ್ಟಿರುವ ಪ್ರಾಣಿಗಳು (Animals) ಅನೇಕ. ಇನ್ನೂ ಮನುಷ್ಯನ ಕಣ್ಣಿಗೆ ಕಾಣಿಸಿಕೊಳ್ಳದೇ ಇರುವಂಥ ಪ್ರಾಣಿ ಪಕ್ಷಿಗಳೂ (Birds) ಅನೇನಾನೇಕ ಇವೆ ಅನ್ನೋದು ಸುಳ್ಳಲ್ಲ. ಇನ್ನು ಹೀಗೆ ಗುರುತಿಸಲ್ಪಟ್ಟಿರುವ ಪ್ರಾಣಿಗಳಲ್ಲಿ ಯಾವ ಯಾವ ಪ್ರಾಣಿ ಎಷ್ಟೆಷ್ಟು ಸಂಖ್ಯೆಯಲ್ಲಿದೆ ಅನ್ನೋದು ನಮಗೆ ಲೆಕ್ಕ ಸಿಗುತ್ತದೆ. ಅದರಲ್ಲೂ ಆನೆ, ಹುಲಿ, ಕರಡಿಗಳಂತ ಪ್ರಾಣಿಗಳ ಲೆಕ್ಕ ಹಾಕೋಕೆ ಕಷ್ಟವಾಗೋದಿಲ್ಲ. ಆದ್ರೆ ಚಿಕ್ಕ ಪ್ರಾಣಿಗಳಿದ್ದಾವಲ್ಲ.. ಅವುಗಳ ಲೆಕ್ಕ ತುಂಬಾನೇ ಕಷ್ಟ.

ಭೂಮಿಯಲ್ಲಿ ಒಟ್ಟು ಇರುವೆಗಳು ಎಷ್ಟಿವೆ?
ಇನ್ನು ಪುಟ್ಟ ಕೀಟಗಳ ಸಾಲಿಗೆ ಸೇರುವ ಇರುವೆ ಜಗತ್ತು ಇನ್ನಷ್ಟು ಇಂಟೆರೆಸ್ಟಿಂಗ್.‌ ಶಿಸ್ತಿಗೆ ಹೆಸರಾಗಿರುವ ಇರುವೆ ಗಳ ಬಗ್ಗೆ ಈಗಾಗಲೇ ಸಾಕಷ್ಟು ಸಂಶೋಧನೆಗಳು, ಅಧ್ಯಯನಗಳು ನಡೆದಿವೆಯಾದರೂ ವಿಜ್ಞಾನಿಗಳು ಮತ್ತೊಂದು ಹೊಸ ಅಂಶವನ್ನು ಕಂಡುಹಿಡಿದಿದ್ದಾರೆ. ಅದೇ ಭೂಮಿಯ ಮೇಲೆ ಇರುವೆಗಳ ಸಂಖ್ಯೆ ಎಷ್ಟಿದೆ ಅನ್ನೋದು. ಇದಕ್ಕೆ ಅವರು ಕೊಡುವ ಉತ್ತರ “ಊಹಿಸಲಾಗದ್ದು” ಅನ್ನೋದು.

ಇದನ್ನೂ ಓದಿ:  Viral Video: ಮುನಿಸಿಕೊಂಡ ನಾಯಿಯನ್ನು ಖುಷಿಪಡಿಸಿದ ಕೀಟ! ಈ ಕ್ಯೂಟ್ ವಿಡಿಯೋ ನೀವೂ ನೋಡಿ

ಹೌದು.. ಈ ವಿಜ್ಞಾನಿಗಳ ಪ್ರಕಾರ ಇದೊಂದು ದಿಗ್ಭ್ರಮೆಗೊಳಿಸುವ ಮೊತ್ತ. 20,000,000,000,000,000, ಅಥವಾ 20,000 ಟ್ರಿಲಿಯನ್ ಗೂ ಹೆಚ್ಚು ಇರುವೆಗಳಿವೆ ಅಂತ ಹೇಳುತ್ತಾರೆ. ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರೊಸೀಡಿಂಗ್ಸ್ ಇತ್ತೀಚಿಗೆ ಬಿಡುಗಡೆ ಮಾಡಿದ ಪತ್ರಿಕೆಯಲ್ಲಿ ಈ ಬಗ್ಗೆ ವಿವರಿಸಿದೆ. ಹಾಂಗ್ ಕಾಂಗ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ಗುಂಪು ಇರುವೆಗಳ ಕುರಿತಾಗಿ 489 ಅಧ್ಯಯನಗಳನ್ನು ನಡೆಸಿ ವಿಶ್ಲೇಷಣೆ ಮಾಡಿದೆ.

ಇರುವೆಗಳ ಒಟ್ಟು ತೂಕ ಎಷ್ಟು 
ಭೂಮಿಯ ಮೇಲಿನ ಇರುವೆಗಳ ಒಟ್ಟು ತೂಕವೂ ಸುಮಾರು 12 ಮೆಗಾಟನ್ ಒಣ ಇಂಗಾಲದ ತೂಕವನ್ನು ಹೊಂದಿದೆ ಎಂದು ತೀರ್ಮಾನಿಸಿದೆ. ಇನ್ನು ಜರ್ಮನಿಯ ವುಜ್‌ ಬರ್ಗ್‌ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿದ್ದ ಪ್ಯಾಟ್ರಿಕ್‌ ಶುಲ್ತೀಸ್‌ ಅವರ ಪ್ರಕಾರ ಇದು ಊಹೆಗೂ ನಿಲುಕದ್ದು. "ನಾವು ಸರಳವಾಗಿ ಒಂದು ಜೀವ ರಾಶಿಯಲ್ಲಿ 20 ಕ್ವಾಡ್ರಿಲಿಯನ್ ಇರುವೆಗಳಿವೆ ಅನ್ನೋದನ್ನು ಊಹಿಸಲು ಸಾಧ್ಯವಿಲ್ಲ ಮತ್ತು ಈ ಊಹೆ ಕೆಲಸಕ್ಕೆ ಬರೋದಿಲ್ಲ. ಆ ಎಲ್ಲಾ ಕೀಟಗಳನ್ನು ಎಣಿಸುವುದಕ್ಕೆ ಹಾಗೂ ಒಂದು ಪರಿಹಾರಕ್ಕೆ ಬರಲು ಒಂದು ಶತಮಾನದ ಅವಧಿಯಲ್ಲಿ ಬೇರೆ ಬೇರೆ ದೇಶಗಳ ಸಾವಿರಾರು ಸಂಶೋಧಕರು ಪ್ರಯತ್ನಿಸಿದ್ದಾರೆ" ಅಂತ ಹೇಳಿದ್ದಾರೆ.

ಇರುವೆಗಳನ್ನು ಲೆಕ್ಕ ಹಾಕಲು ಎಷ್ಟೇ ಪ್ರಯತ್ನ ಪಟ್ಟಿದ್ದರೂ ಆಫ್ರಿಕಾ ಹಾಗೂ ಏಷ್ಯಾದ ಕೆಲ ತಾಣಗಳಲ್ಲಿನ ಇರುವೆಗಳ ಸಂಖ್ಯೆ ಇನ್ನೂ ಸಿಕ್ಕಿಲ್ಲ. ಆದರೆ ಇರುವೆಗಳು, ಮನುಷ್ಯರಂತೆ, ವಾಸ್ತವಿಕವಾಗಿ ಪ್ರತಿಯೊಂದು ಖಂಡ ಮತ್ತು ಎಲ್ಲಾ ರೀತಿಯ ಪ್ರದೇಶಗಳಲ್ಲೂ ಕಾಣಸಿಗುತ್ತವೆ. ಸಂಶೋಧನಾ ತಂಡದ ಪ್ರಕಾರ ಉಷ್ಣವಲಯದ ಮತ್ತು ಉಪ ಉಷ್ಣವಲಯದ ಪ್ರದೇಶಗಳಲ್ಲಿ ನೆಲದ-ವಾಸಿಸುವ ಇರುವೆಗಳು ಹೆಚ್ಚು ಹೇರಳವಾಗಿವೆ. ಆದರೆ ಅವು ಭೂಮಿಯ ಅತ್ಯಂತ ತಂಪಾದ ಭಾಗಗಳನ್ನು ಹೊರತುಪಡಿಸಿ ಬಹುತೇಕ ಎಲ್ಲೆಡೆ ಕಂಡುಬರುತ್ತವೆ.

ಈ ಬಗ್ಗೆ ಇರುವ ವಿಜ್ಞಾನಿ ಏನು ಹೇಳಿದ್ದಾರೆ ?
ಹೆಸರಾಂತ ಲೇಖಕ ಮತ್ತು ಮೈರ್ಮೆಕಾಲಜಿಸ್ಟ್ ಆಗಿ (ಇರುವೆ ವಿಜ್ಞಾನಿ) ಇ.ಒ. ವಿಲ್ಸನ್ ಒಮ್ಮೆ ಹೀಗೆ ಹೇಳ್ತಾರೆ, “ಅಂಟಾರ್ಕ್ಟಿಕಾ ಅಥವಾ ಎತ್ತರದ ಆರ್ಕ್ಟಿಕ್ ಹೊರತುಪಡಿಸಿ ನಾನು ಎಲ್ಲಿಗೆ ಹೋದರೂ - ಬಹುಶಃ - ಮಾನವ ಸಂಸ್ಕೃತಿ ಅದೆಷ್ಟೇ ಭಿನ್ನವಾಗಿರಲಿ, ನೈಸರ್ಗಿಕ ಪರಿಸರವು ಎಷ್ಟು ಭಿನ್ನವಾಗಿರಲಿ ಅಲ್ಲಿ ಇರುವೆಗಳು ಇದ್ದೇ ಇರುತ್ತವೆ."

ಇದನ್ನೂ ಓದಿ:  Indonesia: ಇಂಡೋನೇಷಿಯಾದ ಕರೆನ್ಸಿಯಲ್ಲಿ ಗಣೇಶನ ಚಿತ್ರ ಇರುವುದು ಏಕೆ? ಇಲ್ಲಿದೆ ಇಂಟ್ರಸ್ಟಿಂಗ್​ ಮಾಹಿತಿ

ಇರುವೆಗಳ ಮೇಲೆ ಇನ್ನೂ ಒಂದಷ್ಟು ಅಧ್ಯಯನಗಳು, ಸಂಶೋಧನೆಗಳು ನಡೆಯುತ್ತಲೇ ಇವೆ. ಇದರೊಂದು ಈ ಕೀಟದ ಮತ್ತೊಂದಿಷ್ಟು ಹೊಸ ಹೊಸ ವಿಚಾರಗಳು ಬೆಳಕಿಗೆ ಬರುತ್ತವೆ. ಒಟ್ಟಾರೆ, ಇರುವೆಗಳ ಸಂಖ್ಯೆ ಎಷ್ಟೇ ಇರಲಿ… ಕಡಿಮೆ ಜೀವಿತಾವಧಿಯಲ್ಲಿ ತುಂಬಾ ಶಿಸ್ತಿನಿಂದ ಬದುಕನ್ನ ನಡೆಸುತ್ತವೆ ಅನ್ನೋದಂತೂ ಸತ್ಯ.
Published by:Ashwini Prabhu
First published: