• Home
  • »
  • News
  • »
  • trend
  • »
  • Zero Rupees Note: ಸೊನ್ನೆ ರೂಪಾಯಿ ನೋಟು ಕೂಡ ಇದೆ..! ಭ್ರಷ್ಟ ಅಧಿಕಾರಿಗಳು ಹಣ ಕೇಳಿದ್ರೆ ಇದನ್ನು ಕೊಡ್ಬೋದಂತೆ..!

Zero Rupees Note: ಸೊನ್ನೆ ರೂಪಾಯಿ ನೋಟು ಕೂಡ ಇದೆ..! ಭ್ರಷ್ಟ ಅಧಿಕಾರಿಗಳು ಹಣ ಕೇಳಿದ್ರೆ ಇದನ್ನು ಕೊಡ್ಬೋದಂತೆ..!

ಸೊನ್ನೆ ರೂಪಾಯಿ ನೋಟು

ಸೊನ್ನೆ ರೂಪಾಯಿ ನೋಟು

ನಮ್ಮ ದೇಶದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕರೆನ್ಸಿ ನೋಟುಗಳನ್ನು ಮುದ್ರಿಸುತ್ತದೆ ಎಂಬ ವಿಚಾರ ಸಹ ಎಲ್ಲರಿಗೂ ತಿಳಿದಿದೆ, ಆದರೆ ಶೂನ್ಯ ರೂಪಾಯಿ ನೋಟುಗಳನ್ನು ಆರ್‌ಬಿಐ ಮುದ್ರಿಸುವುದಿಲ್ಲ.

  • Share this:

ಈಗಂತೂ ಯಾವ ಸುದ್ದಿ(News) ಮತ್ತು ವಿಡಿಯೋ(Video)ವನ್ನು ಸಾಮಾಜಿಕ ಮಾಧ್ಯಮ(Social Media)ಗಳಲ್ಲಿ ಜನರು ತುಂಬಾ ನೋಡಿ ಇಷ್ಟ ಪಡುತ್ತಾರೆ ಮತ್ತು ಬೇರೆಯವರೊಂದಿಗೆ ಹಂಚಿಕೊಳ್ಳುತ್ತಾರೆ ಎಂದು ಊಹಿಸಲು ಸಾಧ್ಯವಿಲ್ಲ. ಪ್ರತಿದಿನ ಏನೋ ಒಂದು ವಿಭಿನ್ನವಾದ, ವಿಶಿಷ್ಟವಾದ ವಿಡಿಯೋಗಳು(Special Videos) ಮತ್ತು ಸುದ್ದಿಗಳು ಹೊರ ಬರುತ್ತಿರುತ್ತವೆ. ಕೆಲವೊಂದು ನಮಗೆ ಗೊತ್ತಿರುವುದಿಲ್ಲ ಅಂತಹ ವಿಚಾರಗಳು ನಮಗೆ ಈ ಸುದ್ದಿ(News)ಗಳಿಂದ ತಿಳಿಯುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ನಾವು ಹೇಳಲು ಹೊರಟಿರುವ ಸುದ್ದಿ ಕೇಳಿದರೆ ನೀವು ಆಶ್ಚರ್ಯ(Shock) ಪಡುವುದಂತೂ ನಿಜ. ಅದೇನಪ್ಪಾ ಅಂತಹ ಸುದ್ದಿ ಅಂತೀರಾ? ಮುಂದೆ ಓದಿ.


ಸೊನ್ನೆ ರೂಪಾಯಿ ನೋಟು ನೋಡಿದ್ದೀರಾ?


ನಾವು ನಮ್ಮ ದೇಶದಲ್ಲಿ ಈಗಾಗಲೇ 5, 10, 20, 50 ಬೆಲೆಯಿಂದ ಹಿಡಿದು ಹೀಗೆ 2000 ರೂಪಾಯಿಯವರೆಗೂ ಬಣ್ಣ ಬಣ್ಣದ ನೋಟುಗಳಿರುವುದನ್ನು ನಾವು ಈಗಾಗಲೇ ನೋಡಿರುತ್ತೇವೆ. ಆದರೆ ನಾವು ಹೇಳಲು ಹೊರಟಿರುವ ಈ ನೋಟನ್ನು ನೀವು ಎಲ್ಲಾದರೂ ನೋಡಿರಲು ಸಾಧ್ಯವೇ? ಹೌದು.. ನಾವು ಮಾತಾಡುತ್ತಿರುವುದು ಶೂನ್ಯ ರೂಪಾಯಿ ನೋಟು.


ಇದನ್ನೂ ಓದಿ: Post Office: ಹೊಸ ವರ್ಷಕ್ಕೆ IPBP ಗ್ರಾಹಕರಿಗೆ ಶಾಕ್, 10,000 ಮೀರಿದ ಠೇವಣಿ ಶುಲ್ಕ


ಭಾರತದಲ್ಲೇ ಇದೆ ಸೊನ್ನೆ ರೂಪಾಯಿ ನೋಟು


ಕೆಲವು ವರ್ಷಗಳ ಹಿಂದೆಯಷ್ಟೇ ನಮ್ಮ ದೇಶದಲ್ಲಿ ತುಂಬಾ ದಿನಗಳಿಂದ ಚಲಾವಣೆಯಲ್ಲಿರುವಂತಹ 10 ರೂಪಾಯಿಯ, 20 ರೂಪಾಯಿಯ, 50 ರೂಪಾಯಿಯ, 100 ರೂಪಾಯಿಯ, 500 ಮತ್ತು 2000 ರೂಪಾಯಿಯ ಮುಖ ಬೆಲೆಯ ಕರೆನ್ಸಿ ನೋಟುಗಳನ್ನು ಬದಲಾವಣೆ ಮಾಡಿದ್ದು ನಮಗೆಲ್ಲಾ ಗೊತ್ತಿರುವ ವಿಚಾರವೇ ಆಗಿದೆ. ನೀವು ಆಶ್ಚರ್ಯಪಡುವ ಈ ಶೂನ್ಯ ರೂಪಾಯಿ ನೋಟುಗಳು ಒಂದು ದಶಕದಿಂದ ಭಾರತದಲ್ಲಿವೆಯಂತೆ ಎಂದರೆ ನೀವು ನಂಬುವುದಿಲ್ಲ.


ಆರ್​​ಬಿಐ ಈ ನೋಟನ್ನು ಮುದ್ರಿಸುವುದಿಲ್ಲ


ನಮ್ಮ ದೇಶದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕರೆನ್ಸಿ ನೋಟುಗಳನ್ನು ಮುದ್ರಿಸುತ್ತದೆ ಎಂಬ ವಿಚಾರ ಸಹ ಎಲ್ಲರಿಗೂ ತಿಳಿದಿದೆ, ಆದರೆ ಶೂನ್ಯ ರೂಪಾಯಿ ನೋಟುಗಳನ್ನು ಆರ್‌ಬಿಐ ಮುದ್ರಿಸುವುದಿಲ್ಲ ಎಂಬುದನ್ನು ನಾವೆಲ್ಲರೂ ಗಮನಿಸಬೇಕು. ಶೂನ್ಯ ರೂಪಾಯಿ ನೋಟಿನ ಬಗ್ಗೆ ಇನ್ನಷ್ಟು ತಿಳಿಯೋಣ ಬನ್ನಿ.


ಈ ಶೂನ್ಯ ರೂಪಾಯಿ ನೋಟಿನ ಉದ್ದೇಶ ಏನು ಗೊತ್ತೇ?


ಶೂನ್ಯ ರೂಪಾಯಿ ನೋಟನ್ನು ಮೊದಲ ಬಾರಿಗೆ 2007ರಲ್ಲಿ ‘ಫಿಫ್ತ್ ಪಿಲ್ಲರ್’ ಎಂಬ ಎನ್‌ಜಿಒ ಪರಿಚಯಿಸಿತು. ಲಂಚ ತಡೆಯಲು ಹಿಂಭಾಗದಲ್ಲಿ ಸರ್ಕಾರಿ ಅಧಿಕಾರಿಗಳ ಸಂಪರ್ಕ ವಿವರಗಳೊಂದಿಗೆ ಶೂನ್ಯ ರೂಪಾಯಿ ನೋಟನ್ನು ಪರಿಚಯಿಸಲಾಯಿತು. ನೀವು ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಹೋದಾಗ ಭ್ರಷ್ಟ ಸರ್ಕಾರಿ ಅಧಿಕಾರಿಗಳು ಯಾರಾದರೂ ನಿಮ್ಮ ಕೆಲಸ ಮಾಡಿಕೊಡುವುದಾಗಿ ಹೇಳಿ ಲಂಚ ಕೇಳಿದರೆ ಈ ಶೂನ್ಯ ರೂಪಾಯಿ ನೋಟನ್ನು ಅವರಿಗೆ 'ಪಾವತಿಸುವಂತೆ' ಎನ್‌ಜಿಒ ನಾಗರಿಕರನ್ನು ಪ್ರೋತ್ಸಾಹಿಸುತ್ತದೆ.


ಇದನ್ನೂ ಓದಿ: Gold Price Today: ಚಿನ್ನ ಖರೀದಿಸುವ ಹೆಣ್ಮಕ್ಕಳಿಗೆ ಗುಡ್​ನ್ಯೂಸ್​, ಇಂದು ಬೆಲೆ ಕಡಿಮೆಯಾಗಿದೆ ನೋಡಿ


ಲಕ್ಷಾಂತರ ಶೂನ್ಯ ನೋಟು ಮುದ್ರಣ


‘ಫಿಫ್ತ್ ಪಿಲ್ಲರ್’ ತಮಿಳುನಾಡು ಮೂಲದ ಎನ್‌ಜಿಒ ಆಗಿದ್ದು, ಇದು ಲಕ್ಷಾಂತರ ಶೂನ್ಯ ರೂಪಾಯಿ ನೋಟನ್ನು ಮುದ್ರಿಸಿದೆ. ಕುತೂಹಲಕಾರಿ ಸಂಗತಿಯೆಂದರೆ, ಈ ನೋಟುಗಳನ್ನು ಹಿಂದಿ, ತೆಲುಗು, ಕನ್ನಡ ಮತ್ತು ಮಲಯಾಳಂನಂತಹ ವಿವಿಧ ಭಾಷೆಗಳಲ್ಲಿ ಮುದ್ರಿಸಲಾಯಿತು ಮತ್ತು ಈ ಶೂನ್ಯ ರೂಪಾಯಿ ನೋಟುಗಳನ್ನು ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳು ಮತ್ತು ಮಾರುಕಟ್ಟೆಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ‘ಫಿಫ್ತ್ ಪಿಲ್ಲರ್’ ದಿಂದ ವಿತರಿಸಲಾಯಿತು.

Published by:Latha CG
First published: