ನಿಮ್ಮ ಮುಖದಲ್ಲಿ ತುಂಬಾ ಕೊಬ್ಬಿನಾಂಶ ಇದೆಯೇ? ನಿಮ್ಮ ಮುಖ ತೆಳ್ಳಗೆ ಕಾಣಲು ಹೀಗೆ ಮಾಡಿ..

ನೀವು ದಿನನಿತ್ಯ ಸಾಕಷ್ಟು ನೀರು ಕುಡಿಯುವುದರಿಂದಲೂ ನಿಮ್ಮ ಮುಖದಲ್ಲಿರುವಂತಹ ಕೊಬ್ಬಿನಾಂಶವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ನೀರು ಕುಡಿಯುವುದರಿಂದಲೂ ನಿಮ್ಮ ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದಾಗಿದೆ. ಒಂದು ಕಿರು ಅಧ್ಯಯನದ ಪ್ರಕಾರ ಊಟಕ್ಕೆ ಮುಂಚೆ ನೀರು ಕುಡಿಯುವುದರಿಂದ ನೀವು ಕಡಿಮೆ ಊಟ ಮಾಡುತ್ತೀರಿ ಎಂದು ತಿಳಿದು ಬರುತ್ತದೆ.

 • Share this:
  ನಿಮ್ಮ ದೇಹದಲ್ಲಿರುವ ಕೊಬ್ಬಿನಾಂಶವನ್ನು ಕಡಿಮೆ ಮಾಡಿಕೊಳ್ಳುವುದು ದೊಡ್ಡ ಸಾಹಸದ ಕೆಲಸ ಮತ್ತು ಅದಕ್ಕಾಗಿ ನಾವೆಲ್ಲಾ ಪಡುವ ಪರಿಶ್ರಮ ನಮಗೆ ತಿಳಿದಿರುತ್ತದೆ, ಅದರಲ್ಲಿಯೂ ಜನರು ತಮ್ಮ ಮುಖದಲ್ಲಿ, ಹೊಟ್ಟೆಯ, ತೊಡೆಯ ಮತ್ತು ಎದೆಯ ಭಾಗದಲ್ಲಿ ಅತಿಯಾಗಿ ಶೇಖರಣೆಯಾಗುವಂತಹ ಕೊಬ್ಬಿನಾಂಶ ಕಡಿಮೆ ಮಾಡಿಕೊಳ್ಳಲು ಹಲವು ಮಾರ್ಗಗಳನ್ನು ಅನುಸರಿಸುವುದುಂಟು.ಮುಖದಲ್ಲಿ ಕೊಬ್ಬಿನಾಂಶ ಜಾಸ್ತಿಯಾಗಿ ಶೇಖರಣೆ ಆಗುವುದರಿಂದ ಮುಖ ದಪ್ಪಗೆ ಕಾಣುತ್ತದೆ ಮತ್ತು ಕೆಳಗೆ ಜೋತು ಬಿದ್ದಂತೆ ಕಾಣುತ್ತದೆ. ಇದರಿಂದ ಜನರು ಬೇಸರಗೊಂಡಿರುವುದನ್ನು ನಾವೆಲ್ಲಾ ನೋಡಿರುತ್ತೇವೆ. ಆದರೆ ಅದೃಷ್ಟವಶಾತ್ ನಿಮ್ಮ ಮುಖದಲ್ಲಿರುವಂತಹ ಕೊಬ್ಬಿನಾಂಶ ಕಡಿಮೆ ಮಾಡಿಕೊಳ್ಳಲು ಹಲವಾರು ದಾರಿಗಳಿವೆ.

  1. ಮುಖದ ವ್ಯಾಯಾಮ ಮಾಡಿ

  ನೀವು ದಿನನಿತ್ಯ ಮಾಡುವಂತಹ ವ್ಯಾಯಾಮದ ವೇಳೆ ಮುಖದ ವ್ಯಾಯಾಮ ಮಾಡುವುದರಿಂದ ನಿಮ್ಮ ಮುಖ ತೆಳ್ಳಗೆ ಕಾಣಲು ಸಹಾಯ ಮಾಡುತ್ತದೆ ಮತ್ತು ಮುಖದಲ್ಲಿರುವಂತಹ ಸ್ನಾಯುಗಳು ಬಲಗೊಳ್ಳುತ್ತವೆ.  ಕೆಲವು ಜನಪ್ರಿಯ ವ್ಯಾಯಾಮಗಳಲ್ಲಿ ನಿಮ್ಮ ಕೆನ್ನೆಗಳನ್ನು ಊದಿಸಿಕೊಂಡು ಮತ್ತು ಅದರಲ್ಲಿ ಹಿಡಿದಿಟ್ಟ ಗಾಳಿಯನ್ನು ಎರಡು ಬದಿಗಳಲ್ಲಿ ತಳ್ಳುವುದು, ನಿಮ್ಮ ತುಟಿಗಳನ್ನು ಮುಂದಕ್ಕೆ ಮತ್ತು ಎರಡು ಬದಿಯಲ್ಲಿ ಒಯ್ಯುವುದು ಮತ್ತು ಹಲವಾರು ಸೆಕೆಂಡುಗಳ ಕಾಲ ನಿಮ್ಮ ಹಲ್ಲುಗಳನ್ನು ಬಿಗಿಯಾಗಿ ಹಿಡಿದುಕೊಂಡು ನಗುವುದನ್ನೂ ಅಭ್ಯಾಸ ಮಾಡಬಹುದಾಗಿದೆ.

  ಈ ರೀತಿಯಲ್ಲಿಮುಖದ ವ್ಯಾಯಾಮಗಳು ನಿಮ್ಮ ಮುಖದಲ್ಲಿರುವಂತಹ ಸ್ನಾಯುವನ್ನು ಬಲಪಡಿಸುತ್ತದೆ ಎಂದು ಅಧ್ಯಯನವು ತಿಳಿಸಿದೆ. ಇನ್ನೊಂದು ಅಧ್ಯಯನದ ಪ್ರಕಾರ 8 ವಾರಗಳವರೆಗೆ ದಿನಕ್ಕೆ ಎರಡು ಬಾರಿ ಮುಖದ ಸ್ನಾಯುವಿನ ವ್ಯಾಯಾಮ ಮಾಡುವುದರಿಂದ ಮುಖವು ನವ ಚೈತನ್ಯವನ್ನು ಪಡೆಯುತ್ತದೆ ಎಂದು ಹೇಳಲಾಗಿದೆ.

  2.ನಿಮ್ಮ ದಿನಚರಿಗೆ ಕಾರ್ಡಿಯೋ ಸೇರಿಸಿಕೊಳ್ಳಿ

  ಸಾಮಾನ್ಯವಾಗಿ, ನಿಮ್ಮ ಮುಖದಲ್ಲಿನ ಹೆಚ್ಚುವರಿ ಕೊಬ್ಬು ದೇಹದ ಹೆಚ್ಚುವರಿ ಕೊಬ್ಬಿನ ಪರಿಣಾಮವಾಗಿದೆ. ನೀವು ದೇಹದತೂಕವನ್ನು ಕಡಿಮೆ ಮಾಡಿಕೊಂಡರೆ ನಿಮ್ಮ ಮುಖದಲ್ಲಿರುವಂತಹ ಕೊಬ್ಬಿನ ಅಂಶವನ್ನು ಕಡಿಮೆ ಮಾಡಿಕೊಳ್ಳಬಹುದು. ಕಾರ್ಡಿಯೋ, ಅಥವಾ ಏರೋಬಿಕ್ ವ್ಯಾಯಾಮ ಜಾಸ್ತಿ ಮಾಡುವುದರಿಂದ ಬೇಗನೆ ನಿಮ್ಮ ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದು.

  ಅನೇಕ ಅಧ್ಯಯನಗಳು ಕಾರ್ಡಿಯೋ ಮಾಡುವುದರಿಂದ ದೇಹದಲ್ಲಿರುವ ಕೊಬ್ಬಿನಾಂಶ ಕಡಿಮೆ ಮಾಡಲು ತುಂಬಾ ಸಹಾಯಕವಾಗಿದೆ ಎಂದು ಹೇಳಿವೆ. ಪ್ರತಿ ವಾರ 150-300 ನಿಮಿಷಗಳ ಕಾಲ ಕಠಿಣವಾದಂತಹ ವ್ಯಾಯಾಮ ಮಾಡಲು ಪ್ರಯತ್ನಿಸಿ. ಕಾರ್ಡಿಯೋ ವ್ಯಾಯಾಮವು ಸಾಮಾನ್ಯವಾಗಿ ಓಡುವುದು, ನೃತ್ಯ ಮಾಡುವುದು, ವಾಕಿಂಗ್ ಮಾಡುವುದು, ಈಜುವುದನ್ನು ಸಹ ಒಳಗೊಂಡಿರುತ್ತದೆ.

  3. ಸಾಕಷ್ಟು ನೀರು ಕುಡಿಯಿರಿ

  ನೀವು ದಿನನಿತ್ಯ ಸಾಕಷ್ಟು ನೀರು ಕುಡಿಯುವುದರಿಂದಲೂ ನಿಮ್ಮ ಮುಖದಲ್ಲಿರುವಂತಹ ಕೊಬ್ಬಿನಾಂಶವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ನೀರು ಕುಡಿಯುವುದರಿಂದಲೂ ನಿಮ್ಮ ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದಾಗಿದೆ. ಒಂದು ಕಿರು ಅಧ್ಯಯನದ ಪ್ರಕಾರ ಊಟಕ್ಕೆ ಮುಂಚೆ ನೀರು ಕುಡಿಯುವುದರಿಂದ ನೀವು ಕಡಿಮೆ ಊಟ ಮಾಡುತ್ತೀರಿ ಎಂದು ತಿಳಿದು ಬರುತ್ತದೆ.

  4. ಮದ್ಯಪಾನ ಮಾಡುವುದು ಕಡಿಮೆ ಮಾಡಿ

  ಮದ್ಯಪಾನ ಅತಿಯಾಗಿ ಮಾಡುವುದರಿಂದ ನಿಮ್ಮ ದೇಹದ ತೂಕ ಹೆಚ್ಚಾಗುತ್ತದೆ ಮತ್ತು ನಿಮ್ಮ ಮುಖದಲ್ಲಿಯೂ ಕೊಬ್ಬಿನಾಂಶ ಜಾಸ್ತಿಯಾಗುತ್ತದೆ. ರಾತ್ರಿ ಊಟದ ಜೊತೆ ಸ್ವಲ್ಪ ಮದ್ಯಪಾನ ಮಾಡಿದರೆ ಅಂತಹ ಪರಿಣಾಮ ಬೀರುವುದಿಲ್ಲ, ಆದರೆ ಸ್ನೇಹಿತರ ಜೊತೆಗೆ ಕುಳಿತು ಗಂಟೆಗಟ್ಟಲೆ ಕುಡಿಯುವುದರಿಂದ ತೂಕ ಜಾಸ್ತಿಯಾಗುತ್ತದೆ. ಅಲ್ಲದೆ ಆ ಕೊಬ್ಬಿನಾಂಶದಿಂದ ಮುಖ ತುಂಬಾ ದಪ್ಪವಾಗಿ ಕಾಣುತ್ತದೆ. ಮದ್ಯಪಾನದಲ್ಲಿ ತುಂಬಾ ಹೆಚ್ಚಿನ ಕ್ಯಾಲೋರಿಗಳಿದ್ದು ದೇಹದ ತೂಕ ಬೇಗನೆ ಹೆಚ್ಚಾಗುತ್ತದೆ.

  5. ಎಣ್ಣೆ ಪದಾರ್ಥ ತಿನ್ನುವುದನ್ನು ಕಡಿಮೆ ಮಾಡಿ

  ನೀವು ಮನೆಯಲ್ಲಿ ನಿಮಗೆ ಬೇಕಾದಂತಹ ತಿಂಡಿ ತಿನಿಸುಗಳನ್ನು ಮಾಡಿಕೊಂಡು ತಿಂದರೆ ಅಂತಹ ವ್ಯತ್ಯಾಸ ಕಾಣಿಸುವುದಿಲ್ಲ, ಅದೇ ನೀವು ಹೊರಗಡೆ ಎಣ್ಣೆಯಲ್ಲಿ ಕರಿದಂತಹ ಪದಾರ್ಥಗಳನ್ನು ತಿಂದರೆ ನಿಮ್ಮ ತೂಕ ಹೆಚ್ಚಾಗುತ್ತದೆ ಮತ್ತು ನಿಮ್ಮ ಮುಖದಲ್ಲೂ ಎದ್ದು ಕಾಣುತ್ತದೆ.

  6. ಚೆನ್ನಾಗಿ ನಿದ್ದೆ ಮಾಡಿ

  ನೀವು ಚೆನ್ನಾಗಿ ವ್ಯಾಯಾಮ ಮಾಡಿದರೆ ನಿಮಗೆ ಚೆನ್ನಾಗಿ ನಿದ್ರೆ ಬರುತ್ತದೆ. ಅದೇ ನಿಮ್ಮ ನಿದ್ದೆಯಲ್ಲಿ ನಿಮಗೆ ಅಡಚಣೆಯಾದರೆ ಅದು ನಿಮ್ಮ ದೇಹದ ತೂಕ ನಿಯಂತ್ರಿಸುವಲ್ಲಿ ಸಹಾಯ ಮಾಡುವುದಿಲ್ಲ. ಹಾಗಾಗಿ ಚೆನ್ನಾಗಿ ನಿದ್ದೆ ಮಾಡುವುದು ತುಂಬಾ ಮುಖ್ಯ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  Published by:HR Ramesh
  First published: