Aamir Khans bodyguard salary: ನಟ ಅಮೀರ್ ಖಾನ್ ಬಾಡಿಗಾರ್ಡ್ ಸಂಬಳ ಎಷ್ಟು ಕೋಟಿ ಅಂತ ತಿಳಿದ್ರೆ ಶಾಕ್ ಆಗ್ತಿರ!

bodyguard Yuvraj Ghorpade : ಯುವರಾಜ್ ಘೋರ್ಪಡೆ 16ನೇ ವಯಸ್ಸಿನಲ್ಲಿಯೇ ಶಿಕ್ಷಣಕ್ಕೆ ಬೈ ಹೇಳಿ, ಸಿಕ್ಕ ಸಿಕ್ಕ ಕೆಲಸಗಳನ್ನು ಮಾಡಿಕೊಂಡು ಜೀವನ ನಡೆಸಿದ್ದಾರೆ. ತದನಂತರ ಭದ್ರತಾ ಸಿಬ್ಬಂದಿಯಾಗಿ ತಮ್ಮ ವೃತ್ತಿಯನ್ನು ಮುಂದುವರಿಸುತ್ತಿದ್ದಾರೆ.

ಅಮೀರ್​ ಖಾನ್​ ಬಾರ್ಡಿಗಾರ್ಡ್​​​ ಯುವರಾಜ್ ಘೋರ್ಪಡೆ

ಅಮೀರ್​ ಖಾನ್​ ಬಾರ್ಡಿಗಾರ್ಡ್​​​ ಯುವರಾಜ್ ಘೋರ್ಪಡೆ

  • Share this:
ಮುಂಬೈ: ಸೂಪರ್ ಸ್ಟಾರ್, ಬಾಲಿವುಡ್​​ನ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ (Aamir Khan)ಭಾರತದಲ್ಲಿ ಮಾತ್ರವಲ್ಲದೇ ಇಡೀ ವಿಶ್ವದಲ್ಲಿಯೇ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟ. ಆದ್ರೆ ಈ ಸೂಪರ್ ಸ್ಟಾರ್ ನನ್ನು ತೆರೆಯ ಮೇಲೆ ನೋಡಲು ಅಭಿಮಾನಿಗಳು ಶಬರಿಯಂತೆ ಕಾಯುತ್ತಾರೆ. ಸಾರ್ವಜನಿಕವಾಗಿ ಅಷ್ಟಾಗಿ ಕಾಣಿಸಿಕೊಳ್ಳದ ಮಿಸ್ಟರ್ ಪರ್ಫೆಕ್ಟ್ ದರ್ಶನಕ್ಕಾಗಿ ಫ್ಯಾನ್ಸ್ ಕಾಯುತ್ತಿರುತ್ತಾರೆ. ಆದ್ರೆ ಇಂತಹ ಸಂದರ್ಭದಲ್ಲಿ ಅಮೀರ್ ಖಾನ್ ಅವರ ರಕ್ಷಣೆಗೆ ಬಾಡಿಗಾರ್ಡ್ ಯುವರಾಜ್ ಘೋರ್ಪಡೆ(Yuvraj Ghorpade) ಇರ್ತಾರೆ.

ಸಿನಿಮಾ ಪ್ರಚಾರ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಮೀರ್ ಖಾನ್ ಜೊತೆಯಲ್ಲಿ ಯುವರಾಜ್ ಘೋರ್ಪಡೆ ಇರುತ್ತಾರೆ. ಜನಸಂದಣಿಗಳಲ್ಲಿ ಅಮೀರ್ ಖಾನ್ ಅವರ ಸುರಕ್ಷತೆಯನ್ನು ನೋಡಿಕೊಳ್ಳುವ ಕೆಲಸವನ್ನು ಯುವರಾಜ್ ಘೋರ್ಪಡೆ ಮಾಡ್ತಾರೆ. ಇದೀಗ ಮಾಧ್ಯಮವೊಂದು ಯುವರಾಜ್ ಘೋರ್ಪಡೆ ಪಡೆಯುವ ಸಂಬಳವನ್ನು ರಿವೀಲ್ ಮಾಡಿದೆ.

ವಾರ್ಷಿಕ ₹2 ಕೋಟಿ ಸಂಬಳ..!

ಮಾಧ್ಯಮಗಳ ವರದಿ ಪ್ರಕಾರ ಯುವರಾಜ್ ಘೋರ್ಪಡೆ ವಾರ್ಷಿಕವಾಗಿ 2 ಕೋಟಿ ರೂಪಾಯಿ ವೇತನ ಪಡೆಯುತ್ತಾರೆ. ಅಂದ್ರೆ ಪ್ರತಿ ತಿಂಗಳು 16 ಲಕ್ಷ ರೂ.ಗೂ ಅಧಿಕ ಸಂಬಳ ತೆಗೆದುಕೊಳ್ಳುತ್ತಾರೆ. ಯುವರಾಜ್ ಘೋರ್ಪಡೆ 16ನೇ ವಯಸ್ಸಿನಲ್ಲಿಯೇ ಶಿಕ್ಷಣಕ್ಕೆ ಬೈ ಹೇಳಿ, ಸಿಕ್ಕ ಸಿಕ್ಕ ಕೆಲಸಗಳನ್ನು ಮಾಡಿಕೊಂಡು ಜೀವನ ನಡೆಸಿದ್ದಾರೆ. ತದನಂತರ ಭದ್ರತಾ ಸಿಬ್ಬಂದಿಯಾಗಿ ತಮ್ಮ ವೃತ್ತಿಯನ್ನು ಮುಂದುವರಿಸುತ್ತಿದ್ದಾರೆ.

ಬಾಲಿವುಡ್ ಸ್ಟಾರ್ ಗಳ ಬಾಡಿಗಾರ್ಡ್ ಗಳ ಸಂಬಳ

ಇದಕ್ಕೂ ಮೊದಲು ಶಾರೂಖ್ ಖಾನ್, ಅಮಿತಾಬ್ ಬಚ್ಚನ್, ಅನುಷ್ಕಾ ಶರ್ಮಾ ಸೇರಿದಂತೆ ಹಲವು ಬಾಲಿವುಡ್ ತಾರೆಯರ ಭದ್ರತಾ ಸಿಬ್ಬಂದಿಯ ಸಂಬಳ ರಿವೀಲ್ ಆಗಿತ್ತು.  ಯಾರಿಗೆ ಎಷ್ಟು ವಾರ್ಷಿಕ ಸಂಬಳ ಎಂಬುದರ ಮಾಹಿತಿ ಇಲ್ಲಿದೆ

  1. ಶಾರೂಖ್ ಖಾನ್ - ಬಾಡಿಗಾರ್ಡ್ ರವಿ ಸಿಂಗ್ - 2.7 ಕೋಟಿ

  2. ಸಲ್ಮಾನ್ ಖಾನ್ - ಬಾಡಿಗಾರ್ಡ್ ಶೇರ್ - 2 ಕೋಟಿ

  3. ಅಕ್ಷಯ್ ಕುಮಾರ್ - ಬಾಡಿಗಾರ್ಡ್ ಶ್ರೇಯಸ್ ಥೇಲೆ- 1.2 ಕೋಟಿ

  4. ಅಮಿತಾಬ್ ಬಚ್ಚನ್ - ಜೀತೇಂದ್ರ ಶಿಂಧೆ - 1.5 ಕೋಟಿ

  5. ಅನುಷ್ಕಾ ಶರ್ಮಾ - ಬಾಡಿಗಾರ್ಡ್ ಪ್ರಕಾಶ್ ಸಿಂಗ್ - 1.2 ಕೋಟಿ


ಬಿಡುಗಡೆಗೆ ಸಿದ್ಧವಾದ ಲಾಲ್ ಸಿಂಗ್ ಚಡ್ಡಾ

ಇನ್ನೂ ಅಮೀರ್ ಖಾನ್ ಸಿನಿಮಾ ವಿಷಯ ನೋಡೋದಾದ್ರೆ ಸದ್ಯ ಲಾಲ್ ಸಿಂಗ್ ಚಡ್ಡಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಬಿಟೌನ್ ಬೇಬೋ, ಸೈಫ್ ಮಡದಿ ಕರೀನಾ ಕಪೂರ್ ಖಾನ್ ಸಹ ಕಾಣಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಸಿನಿಮಾದ ಪಾತ್ರದ ಲುಕ್ ನಲ್ಲಿಯಲ್ಲಿಯೇ ಆಮಿರ್ ಮತ್ತು ಕರೀನಾ ಕ್ಯಾಮೆರಾಗಳಿಗೆ ಪೋಸ್ ನೀಡಿದ್ದರು.

ಇದನ್ನೂ ಓದಿ: ಅಮೆಜಾನ್ ಪ್ರೈಮ್‌ನ 400 ಕೋಟಿ ಆಫರ್‌ ತಿರಸ್ಕರಿಸಿದ ಬಾಲಿವುಡ್‌ ನಿರ್ಮಾಪಕ Aditya Chopra

ಲಾಲ್ ಸಿಂಗ್ ಚಿತ್ರಕ್ಕೆ ನಿರ್ದೇಶಕ ಅದ್ವೈತ್ ಚಂದನ್ ಆ್ಯಕ್ಷನ್ ಕಟ್ ಹೇಳಿದ್ದು, ಕಳೆದ ವರ್ಷವೇ ಸಿನಿಮಾ ಬಿಡುಗಡೆಯಾಗಬೇಕಿತ್ತು. ಕೊರೊನಾ ಹಿನ್ನೆಲೆ ಸಿನಿಮಾ ರಿಲೀಸ್ ದಿನಾಂಕ ಮುಂದೂಡಿಕೆಯಾಗಿದ್ದು, ಈ ವರ್ಷ ಕ್ರಿಸ್‍ಮಸ್ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಅಮಿರ್ ಖಾನ್ ಮತ್ತು ಕಿರಣ್ ರಾವ್ ಜುಲೈ 3ರಂದು ತಾವು ವಿಚ್ಛೇದನ ಪಡೆದುಕೊಳ್ಳುತ್ತಿರುವ ಬಗ್ಗೆ ಬಹಿರಂಗಪಡಿಸಿದ್ದರು. ಪರಸ್ಪರ ಒಪ್ಪಿಗೆ ಮೇರೆಗೆ ಇಬ್ಬರು 15 ವರ್ಷದ ದಾಂಪತ್ಯ ಜೀವನಕ್ಕೆ ಪೂರ್ಣ ವಿರಾಮ ಇರಿಸಿದ್ದಾರೆ. ವಿಚ್ಛೇದನ ಬಳಿಕವೂ ನಾವಿಬ್ಬರೂ ಒಳ್ಳೆಯ ಗೆಳೆಯರು ಜೊತೆಯಾಗಿಯೇ ಪಾನಿ ಫೌಂಡೇಶನ್, ಸಿನಿಮಾ ಹಾಗೂ ಇತರೆ ಪ್ರೊಜೆಕ್ಟ್ ಗಳಲ್ಲಿ ಕೆಲಸ ಮಾಡುತ್ತೇವೆ ಎಂದು ಹೇಳಿಕೊಂಡಿದ್ದಾರೆ.

ವರದಿ: ಮಹ್ಮದ್ ರಫೀಕ್ ಕೆ.
Published by:Kavya V
First published: