ಶುಭ ಶುಕ್ರವಾರದ ದಿನ ಲಕ್ಷ್ಮಿ ನಿಮಗೆ ಒಲಿಯಬೇಕೆಂದರೆ ಏನು ಮಾಡಬೇಕು ? ಸ್ಪಷ್ಟ ಉತ್ತರ ಇಲ್ಲಿದೆ !

ಲಕ್ಷ್ಮಿ ನಮ್ಮ ಮನೆ, ಬದುಕಿನಲ್ಲಿ ಸಂಪತ್ತಿನ ಹೊಳೆ ಹರಿಸಲು ಏನು ಮಾಡಬೇಕು ಎನ್ನುವುದಕ್ಕೆ ಚಾಣಾಕ್ಷ ಚಾಣಕ್ಯನನ್ನೂ ಸೇರಿದಂತೆ ಅನೇಕರು ಮಾಹಿತಿ ಒದಗಿಸಿದ್ದಾರೆ. ಈ ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಂಡರೆ ನಿಮ್ಮ ಬಳಿ ಹೆಚ್ಚು ಹಣ ಬರುವುದು ಮಾತ್ರವಲ್ಲ, ಬಂದ ಹಣ ನಿಮ್ಮಲ್ಲಿಯೇ ಉಳಿಯುತ್ತದೆ ಎನ್ನುತ್ತಾರೆ.

ಧನಲಕ್ಷ್ಮಿ ದೇವಿ

ಧನಲಕ್ಷ್ಮಿ ದೇವಿ

 • Share this:
  Friday Lakshmi Pooja: ಶುಕ್ರವಾರ ಅನೇಕರು ಲಕ್ಷ್ಮಿ ಪೂಜೆ ಮಾಡುತ್ತಾರೆ. ಆದರೂ ಯಾಕೋ ಲಕ್ಷ್ಮಿದೇವಿ ನಮ್ಮ ಕಡೆ ಕೃಪಾಕಟಾಕ್ಷ ತೋರಿಲ್ಲ ಎಂದೇ ಅನೇಕರು ಭಾವಿಸುತ್ತಾರೆ. ಆದರೆ ನಮ್ಮ ಇತಿಹಾಸದಲ್ಲಿ ಅನೇಕ ವಿದ್ವಾಂಸರು ಈ ಬಗ್ಗೆ ಗ್ರಂಥಗಳನ್ನೇ ಬರೆದಿದ್ದಾರೆ. ಲಕ್ಷ್ಮಿ ನಮ್ಮ ಮನೆ, ಬದುಕಿನಲ್ಲಿ ಸಂಪತ್ತಿನ ಹೊಳೆ ಹರಿಸಲು ಏನು ಮಾಡಬೇಕು ಎನ್ನುವುದಕ್ಕೆ ಚಾಣಾಕ್ಷ ಚಾಣಕ್ಯನನ್ನೂ ಸೇರಿದಂತೆ ಅನೇಕರು ಮಾಹಿತಿ ಒದಗಿಸಿದ್ದಾರೆ. ಈ ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಂಡರೆ ನಿಮ್ಮ ಬಳಿ ಹೆಚ್ಚು ಹಣ ಬರುವುದು ಮಾತ್ರವಲ್ಲ, ಬಂದ ಹಣ ನಿಮ್ಮಲ್ಲಿಯೇ ಉಳಿಯುತ್ತದೆ ಎನ್ನುತ್ತಾರೆ.

  ಅಹಂಕಾರವನ್ನು ಮೊದಲು ದೂರವಿರಿಸಬೇಕು. ಅಹಂಕಾರ ಇದ್ದ ಕಡೆ ಅಭಿವೃದ್ಧಿ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಅನೇಕ ಬಾರಿ ನಮಗದು ತಿಳಿಯದೇ ಇರಬಹುದು. ಯಾವುದಾದರೂ ಪಾಸಿಟಿವ್ ವಿಚಾರ ನಮ್ಮ ಬಳಿ ಬರಬೇಕು ಎಂದರೆ ಮೊದಲು ನೆಗೆಟಿವ್ ವಿಚಾರಗಳು ನಮ್ಮಿಂದ ದೂರವಾಗಬೇಕು. ಹಳೆಯ ನೀರು ಹೋದ ಮೇಲಷ್ಟೇ ಹೊಸಾ ನೀರು ಬರಲು ಸಾಧ್ಯ ಅಲ್ಲವೇ? ಹಳೆಯ ನೀರು ಇರುವಾಗಲೇ ಹೊಸಾ ನೀರು ಬಂದರೆ ಅದೂ ಇದರೊಂದಿಗೆ ಸೇರಿ ಯಾವುದೂ ಪ್ರಯೋಜನಕ್ಕೆ ಬಾರದಂತೆ ಆಗಿಬಿಡುತ್ತದೆ. ಹಾಗಾಗಿ ನಮ್ಮೊಳಗಿನ ಅಹಂಕಾರ ಎನ್ನುವ ಕೊಳೆಯ, ಹಳೆಯ ನೀರನ್ನು ಹೊರಗೆ ಚೆಲ್ಲಬೇಕು. ಆಗ ಲಕ್ಷ್ಮಿ ಅಥವಾ ಸಂಪತ್ತು ನಮ್ಮ ಬದುಕಿನೊಳಗೆ ಬಲಗಾಲಿಟ್ಟು ಒಳಬರುತ್ತಾಳೆ.

  ಇದನ್ನೂ ಓದಿ: SBI Cash Withdrawl: ಇನ್ಮೇಲೆ ಎಸ್​ಬಿಐ ಯಾವುದೇ ಬ್ರಾಂಚ್​ನಿಂದ ಹಿಂದಿಗಿಂತ ಹೆಚ್ಚು ಹಣ ಡ್ರಾ ಮಾಡಬಹುದು !

  ಆಧ್ಯಾತ್ಮ ಮತ್ತು ಧರ್ಮಮಾರ್ಗದ ಅನುಸರಿಸುವಿಕೆ ಅಷ್ಟೇ ಮುಖ್ಯವಾದದ್ದು. ನಮ್ಮ ಎಲ್ಲಾ ಕಷ್ಟ ನಷ್ಟಗಳಿಗೆ ಕಾರಣ ನಮ್ಮ ಮನಸ್ಸು ಮತ್ತು ಬುದ್ಧಿ. ಯಾವಾಗ ಅವರೆಡನ್ನೂ ನಾವು ಶಕ್ತಿಯುತವಾಗಿ ಮಾಡಿಕೊಳ್ಳುತ್ತೇವೆಯೋ ಬದುಕಿನಲ್ಲಿ ಯಶಸ್ಸು ಸದಾ ನಮ್ಮೊಂದಿಗೆ ಇರುತ್ತದೆ. ಈ ಮಾರ್ಗದಲ್ಲಿ ಅತೀ ಯಶಸ್ವೀ ಮಾರ್ಗ ಎಂದರೆ ಆಧ್ಯಾತ್ಮ. ಭಗವಂತನ ಅಥವಾ ಲೋಕದ ಶಕ್ತಿಯನ್ನು ಕೇಂದ್ರವಾಗಿ ಇಟ್ಟುಕೊಂಡು ಆಧ್ಯಾತ್ಮ ಚಿಂತನೆಯಲ್ಲಿ ತೊಡಗಬೇಕು. ನನಗೆ ಒಳ್ಳೆಯದಾಗುತ್ತದೆ, ಲಕ್ಷ್ಮಿ ಒಲಿಯುತ್ತಾಳೆ, ಬದುಕಿನಲ್ಲಿ ಎಲ್ಲವೂ ಉತ್ತಮವಾಗಿ ಆಗುತ್ತದೆ ಎನ್ನುವುದನ್ನು ಮೊದಲು ನಾನು ನಂಬಬೇಕು. ಆನಂತರ ಅಗತ್ತು ಬ್ರಹ್ಮಾಂಡ ಅರಿಯುತ್ತದೆ. ನನಗೇ ನನ್ನ ಮೇಲೆ, ನನ್ನ ಶಕ್ತಿಯ ಮೇಲೆ, ದೇವರ ಕೃಪೆಯ ಮೇಲೆ ನಂಬಿಕೆ ಇರದಿದ್ದರೆ ಇನ್ಯಾವ ಶಕ್ತಿ ನನಗೇನು ಸಹಾಯ ಮಾಡಲು ಸಾಧ್ಯ ? ಹಣ ಅಥವಾ ಸಿರಿ ಕೂಡಾ ಒಂದು ಶಕ್ತಿಯೇ.

  ಸಿರಿಯನ್ನು ಬರಮಾಡಿಕೊಳ್ಳಲು ಪ್ರೀತಿ, ಕರುಣೆಗಳೇ ನಿಮ್ಮ ಆಸ್ತಿಯಾಗಿರಬೇಕು. ಮನಸ್ಸಿನಲ್ಲಿ ಶಾಂತಿ, ನೆಮ್ಮದಿ, ಪ್ರೀತಿ ತುಂಬಿದಾಗ ಒಳ್ಳೆಯ ಆಲೋಚನೆಗಳು ನಮ್ಮನ್ನು ಆವರಿಸಿರುತ್ತವೆ. ಅದರಿಂದ ನಮ್ಮ ಸುತ್ತಲೂ ಒಳ್ಳೆಯದೇ ಕಾಣುತ್ತಾ ಹೋಗುತ್ತದೆ. ನಮ್ಮ ಮನಸ್ಸು ಪ್ರಫುಲ್ಲವಾಗಿರುತ್ತದೆ. ಜೊತೆಗೇ ಸಿರಿಯ ಬರವಿಗೆ ಸದಾ ಸಿದ್ಧವಾಗಿರುತ್ತದೆ.

  ಲಕ್ಷ್ಮಿದೇವಿಯ ಕೃಪೆ ನಮ್ಮ ಮೇಲೆ ಇರಬೇಕು ಎಂದರೆ ಮೊದಲು ಆಕೆ ಬಂದು ನಮ್ಮಲ್ಲಿ ಇರುವ ಸ್ಥಳವನ್ನು ನಾವು ಸಿದ್ಧಮಾಡಬೇಕು. ಸಿರಿ ಎಂದರೆ ಕೇವಲ ಹಣವಲ್ಲ. ಹಣ ಕೊಳ್ಳಲಾಗದ ಸಂಪತ್ತುಗಳು ಬಹಳಷ್ಟಿವೆ. ಆ ಸಂಪತ್ತುಗಳನ್ನು ನಾವು ಪಡೆಯುತ್ತಾ ಹೋಗಬೇಕು. ಆಗ ಧನ ಕನಕಾದಿಗಳು ತಾವಾಗೇ ನಮ್ಮನ್ನು ಹಿಂಬಾಲಿಸುತ್ತವೆ. ಲಕ್ಷ್ಮಿ ಸಿರಿಯ ಅಧಿದೇವತೆ. ಎಲ್ಲಾ ಬಗೆಯ ಸಿರಿಯೂ ಆಕೆಯ ಆಣತಿಯಂತೆ ನಡೆಯುತ್ತದೆ. ಕೇವಲ ದುಡ್ಡು ಮಾತ್ರ ಬಯಸಿ ಉಳಿದ ಸಿರಿಗಳನ್ನು ತುಚ್ಛವಾಗಿ ಕಂಡಾಗಲೇ ಬಂದ ಸಂಪತ್ತು ಸದ್ದಿಲ್ಲದೇ ಸರಿದು ಹೋಗುವುದು. ಆದ್ದರಿಂದ ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಮೊದಲು ಮನಸ್ಸನ್ನು ಶುದ್ಧಿ ಮಾಡಿಕೊಳ್ಳಬೇಕು. ಶುಕ್ರವಾದ ದಿನ ಇದಕ್ಕೆಲ್ಲಾ ಬಹು ಪ್ರಶಸ್ತವಾದ ದಿನ. ಹಾಗಾಗಿ ಇಂದಿನಿಂದಲೇ ಈ ಎಲ್ಲವನ್ನೂ ಅಭ್ಯಸಿಸಿ, ಲಕ್ಷ್ಮಿಯ ಕೃಪೆಗೆ ಪಾತ್ರರಾಗಿ.
  Published by:Soumya KN
  First published: