• Home
  • »
  • News
  • »
  • trend
  • »
  • ಕ್ರಿಪ್ಟೋದಲ್ಲಿ ಹೂಡಿಕೆ ಮಾಡುವ ಮುನ್ನ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ..

ಕ್ರಿಪ್ಟೋದಲ್ಲಿ ಹೂಡಿಕೆ ಮಾಡುವ ಮುನ್ನ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ..

ಬಿಟ್​ಕಾಯಿನ್

ಬಿಟ್​ಕಾಯಿನ್

ಹಾಗಿದ್ದರೆ ಕ್ರಿಪ್ಟೋ ಮೂಲಕ ಕೂಡ ವಹಿವಾಟು ನಡೆಸಬಹುದು ಎಂಬುದಕ್ಕೆ ಪರವಾನಗಿ ಸಿಕ್ಕಿದಂತೆ.ಆರ್ಥಿಕ ವಿಶ್ಲೇಷಕರು ಹೇಳುವ ಪ್ರಕಾರ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡುವ ಮುನ್ನ ಸಾಕಷ್ಟು ಯೋಜನೆಗಳನ್ನು ಮಾಡಬೇಕು.

  • Share this:

    ಇತ್ತೀಚಿನ ದಿನಗಳಲ್ಲಿ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯನ್ನು ಆಳುತ್ತಿರುವ ಡಿಜಿಟಲ್ ಕರೆನ್ಸಿಯಾಗಿದೆ. ಇಂಟರ್‌ನೆಟ್‌ ಆಧಾರಿತವಾಗಿರುವ ಕ್ರಿಪ್ಟೋ ಕರೆನ್ಸಿಯನ್ನು ವಿನಿಮಯಕ್ಕಾಗಿ ಬಳಸುತ್ತಾರೆ. 2018ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಕ್ರಿಪ್ಟೋ ಕರೆನ್ಸಿ ಮೇಲೆ ಹಾಕಿದ್ದ ನಿರ್ಬಂಧವನ್ನು ತೆಗೆದುಹಾಕಿದೆ. ಹಾಗಿದ್ದರೆ ಕ್ರಿಪ್ಟೋ ಮೂಲಕ ಕೂಡ ವಹಿವಾಟು ನಡೆಸಬಹುದು ಎಂಬುದಕ್ಕೆ ಪರವಾನಗಿ ಸಿಕ್ಕಿದಂತೆ.ಆರ್ಥಿಕ ವಿಶ್ಲೇಷಕರು ಹೇಳುವ ಪ್ರಕಾರ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡುವ ಮುನ್ನ ಸಾಕಷ್ಟು ಯೋಜನೆಗಳನ್ನು ಮಾಡಬೇಕು. ಹಾಗಿದ್ದರೆ ಕ್ರಿಪ್ಟೋದಲ್ಲಿ ಹೂಡಿಕೆ ಮಾಡುವ ಮುನ್ನ ಕೆಲವೊಂದು ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಬೇಕಾಗುತ್ತದೆ.


    ನಷ್ಟ ಗ್ಯಾರಂಟಿ


    ಇದ್ದಕ್ಕಿದ್ದಂತೆ ಕ್ರಿಪ್ಟೋ ಕರೆನ್ಸಿ ಮುಖ್ಯವಾಹಿನಿಯಾಗಿದ್ದರೂ ಇದರಲ್ಲಿ ಕೂಡ ಹಣ ಕಳೆದುಕೊಳ್ಳಲೂಬಹುದು ಎಂಬ ಭಯ ಇದ್ದೇ ಇದೆ. ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡುವುದು ಎಂದರೆ ಒಂದು ರೀತಿಯ ಅದೃಷ್ಟದ ಆಟವಿದ್ದಂತೆ. ಕರೆನ್ಸಿಯ ಮೌಲ್ಯವು ದಿನದಿಂದ ದಿನಕ್ಕೆ ತೀವ್ರ ಏರಿಳಿತಗಳನ್ನು ಕಾಣಬಹುದು. ಈ ಕಾರಣದಿಂದ ಸಾಕಷ್ಟು ನಗದು ಸ್ಟಾಕ್ ನಿಮ್ಮಲ್ಲಿರಬೇಕಾಗುತ್ತದೆ.


    ಬೇರೆ ಬೇರೆ ಕಾಯಿನ್‌ಗಳನ್ನು ಸಂಶೋಧಿಸಿ


    ಕ್ರಿಪ್ಟೋಕರೆನ್ಸಿ ಹೆಚ್ಚು ಜನಪ್ರಿಯವಾಗಿದ್ದು ನೀವು ಸಂಭಾವ್ಯವಾಗಿ ನಿಮ್ಮದಾಗಿಸಿಕೊಳ್ಳಬಹುದಾದ ಸಾವಿರದಷ್ಟು ಡಿಜಿಟಲ್ ಕಾಯಿನ್‌ಗಳಿವೆ. ಸರಿಯಾದ ಕಾಯಿನ್‌ಗಳ ಮೇಲೆ ಹೂಡಿಕೆ ನಡೆಸಲು ಕೆಲವು ಸಮಯ ಕಾಯಿರಿ.


    ಅಪಾಯಗಳನ್ನು ಅರಿತುಕೊಳ್ಳಿ


    ನೀವು ಷೇರುಗಳನ್ನು ಖರೀದಿಸುವಾಗ ಕಾಲಾನಂತರದಲ್ಲಿ ಷೇರುಗಳು ಮೌಲ್ಯ ಕಳೆದುಕೊಳ್ಳುವ ಅಪಾಯವಿದೆ ಮತ್ತು ಇದು ಪಾವತಿಸುವುದಕ್ಕೆ ಯೋಗ್ಯವಾಗಿರುವುದಿಲ್ಲ. ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾದ ಬಾಂಡ್‌ಗಳು ಕೂಡ ಅಪಾಯವನ್ನುಂಟು ಮಾಡಬಹುದು. ಕ್ರಿಪ್ಟೋ ಕರೆನ್ಸಿ ತನ್ನದೇ ಆದ ಅಪಾಯಗಳನ್ನು ಒಳಗೊಂಡಿದ್ದು ಇದು ಸಮಯಕ್ಕೆ ಕಡಿಮೆ ಮೌಲ್ಯದ್ದಾಗಿರುವ ಅಪಾಯ ಯಾವಾಗಲೂ ಇರುತ್ತದೆ.


    ಇದನ್ನೂ ಓದಿ: Petrol Price Today| ಸಾರ್ವಕಾಲಿಕ ದಾಖಲೆ ಬರೆದ ಪೆಟ್ರೋಲ್-ಡೀಸೆಲ್; ನಿಮ್ಮ ನಗರದಲ್ಲಿ ಬೆಲೆ ಎಷ್ಟು?

    ಸಂಪೂರ್ಣ ಕಾರ್ಯತಂತ್ರಕ್ಕೆ ಹೇಗೆ ಹೊಂದಿಕೊಳ್ಳುತ್ತದೆ ಎಂಬುದನ್ನು ನಿರ್ಧರಿಸಿ


    ಸಾಮಾನ್ಯವಾಗಿ ಹೂಡಿಕೆ ಮಾಡುವಾಗ ದೀರ್ಘಾವಧಿಯಾಗಿ ಉಳಿಯುವ ಲಾಭವನ್ನು ಪಡೆಯಬಹುದೇ ಎಂಬುದನ್ನು ನಿರ್ಧರಿಸಿ. ಕ್ರಿಪ್ಟೋಕರೆನ್ಸಿಯನ್ನು ಖರೀದಿಸುವಾಗ ಇದು ಲಾಭವನ್ನೇ ತರಬಹುದು ಇಲ್ಲವೇ ನಷ್ಟವನ್ನು ತರಬಹುದು ಎಂಬುದಾಗಿ ಯೋಚಿಸದೇ ಅದೃಷ್ಟವನ್ನು ನಂಬಿ ಹೂಡಿಕೆ ಮಾಡಬೇಕಾಗುತ್ತದೆ. ಕ್ರಿಪ್ಟೋ ಜಗತ್ತು ಸರಕಾರ ಅಥವಾ ಯಾವುದೇ ಪ್ರಮಾಣಿತ ಸಂಸ್ಥೆಯಡಿಯಲ್ಲಿ ಕೆಲಸ ಮಾಡುವುದಿಲ್ಲ. ಇದಕ್ಕೆ ಮುಖ್ಯವಾಗಿ ಬೇಕಾಗಿರುವುದು ತಂತ್ರಜ್ಞಾನವಾಗಿದೆ.


    ಇದನ್ನೂ ಓದಿ: ಮುಂಗಾರು ಋತುವಿನಲ್ಲಿ ಮಧುಮೇಹಿಗಳು ಪ್ರತಿದಿನ ಅನುಸರಿಸಬೇಕಾದ 10 ಹಂತಗಳು

    ಯಾವುದೇ ನಿಖರ ನಿಬಂಧನೆಗಳಿಲ್ಲ


    ನಿಖರ ನಿಬಂಧನೆಗಳು ಈ ಮಾರುಕಟ್ಟೆಯಲ್ಲಿ ಇಲ್ಲದೇ ಇರುವುದರಿಂದ ನಿಮಗೆ ಇಷ್ಟವಾಗುವ ರೀತಿ ನೀತಿಗಳನ್ನು ನೀವು ಅಳವಡಿಸಬಹುದು. ಇಲ್ಲಿ ಎಲ್ಲವೂ ಡಿಜಿಟಲ್ ಆಗಿರುವುದರಿಂದ ನಿಮ್ಮ ಹಣ ಕೂಡ ಡಿಜಿಟಲ್ ಆಗಿರುತ್ತದೆ. ನೀವು ಒಮ್ಮೆ ಪಾಸ್‌ವರ್ಡ್ ಮರೆತಲ್ಲಿ ಅದನ್ನು ಮರಳಿ ಪಡೆಯುವುದು ಕಷ್ಟಕರವಾಗಿದೆ.




    ಇಂದಿನ ದಿನಗಳಲ್ಲಿ ಕ್ರಿಪ್ಟೋಕರೆನ್ಸಿ ಹೆಚ್ಚಿನ ಕುತೂಹಲ ಮತ್ತು ಆಕರ್ಷಣೆಗೆ ಕಾರಣವಾಗಿದೆ. ಜನರಲ್ಲಿ ಕ್ರಿಪ್ಟೋದ ಬಗೆಗೆ ಒಂದು ರೀತಿಯ ಕ್ರೇಜ್ ಉಂಟಾಗಿದೆ. ಕ್ರಿಪ್ಟೋ ಕರೆನ್ಸಿಯಲ್ಲಿ ಹಣ ಹೂಡಿಕೆ ಮಾಡುವುದು ಅಪಾಯವೆಂದು ಗೊತ್ತಿದ್ದರೂ ಹೂಡಿಕೆ ಮಾಡಿದರೆ ಲಾಭ ಸಿಗಬಹುದು ಇಲ್ಲವೇ ಹೂಡಿಕೆ ಮಾಡಿದ ಹಣ ಹಿಂತಿರುಗಬಹುದು ಎಂಬ ನಂಬಿಕೆ ಇಲ್ಲ. ದೇಶ ಇಲ್ಲವೇ ಬ್ಯಾಂಕ್‌ಗಳ ನಿಯಮಾವಳಿಗಳ ಅಡಿಯಲ್ಲಿ ಕ್ರಿಪ್ಟೋ ಕರೆನ್ಸಿಯ ಚಲಾವಣೆ ನಡೆದಲ್ಲಿ ಇದಕ್ಕೆ ಭವಿಷ್ಯವಿದೆ ಎಂದು ಹೇಳಬಹುದು.

    First published: