ಮೊದಲೆಲ್ಲಾ ಮಕ್ಕಳಿಗೆ ಮದುವೆ (Marriage) ಮಾಡಬೇಕೆಂದರೆ ಗುರುತು ಪರಿಚಯದಲ್ಲಿ ವರ ಇದ್ದಾನಾ? ವಧು (Bride) ಇದ್ದಾಳಾ ಅಂತ ಕೇಳುತ್ತಿದ್ದರು. ನಂತರ ದೂರದ ಸಂಬಂಧಗಳಲ್ಲಿ ಮದುವೆ ಮಾಡೋದೂ ಆಯಿತು. ನಂತರ ಮ್ಯಾಟ್ರಿಮೋನಿ ಅನ್ನೋ ವೇದಿಕೆ ಶುರು ಆಯಿತು. ಇನ್ನು ವಧು ವರರ ವೇದಿಕೆಯಂಥ ಅನೇಕ ಸೋಶಿಯಲ್ ಮೀಡಿಯಾ ಪೇಜ್ ಗಳಿವೆ (Social Media Page). ಆದಾಗ್ಯೂ ಜನರು ಇಂದಿಗೂ ಪತ್ರಿಕೆಗಳಲ್ಲಿ ಜಾಹೀರಾತು ಹಾಕ್ತಾರೆ. ಹೀಗೆಯೇ ವ್ಯಕ್ತಿಯೊಬ್ಬ ಹಾಕಿರುವ ಮಗಳ ಮದುವೆಗೆ ವರ (Groom) ಬೇಕಾಗಿದ್ದಾನೆ ಅನ್ನೋ ಜಾಹೀರಾತು ಇದೀಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.
ಈಗೊಂದು 10-15 ವರ್ಷಗಳ ಹಿಂದೆ ಮದುವೆ ವಯಸ್ಸಿಗೆ ಬಂದ ಬಹುತೇಕ ಹೆಣ್ಣುಮಕ್ಕಳ ಬೇಡಿಕೆ ಒಂದೇ ಆಗಿತ್ತು. ತನಗೆ ಸಾಫ್ಟ್ ವೇರ್ ಎಂಜಿನಿಯರ್ ಹುಡುಗನೇ ಬೇಕು ಅನ್ನೋದು. ಕೈತುಂಬಾ ಸಂಬಳ, ಫಾರಿನ್ ಪ್ರವಾಸ, ಕಾರು, ಮನೆ ಹೀಗೆ ಸಾಫ್ಟ್ ವೇರ್ ಎಂಜಿನಿಯರ್ ಆದ್ರೆ ಸಾಕು ಅವರ ಬಳಿ ಎಲ್ಲವೂ ಇರುತ್ತೆ ಅನ್ನೋ ಕಾಲವೊಂದಿತ್ತು. ಆದರೆ ಈಗ ಕಾಲ ಬದಲಾಗಿದೆ. ಅದು ಎಷ್ಟರ ಮಟ್ಟಿಗೆ ಅನ್ನೋದು ಈ ಜಾಹೀರಾತಿನಿಂದ ತಿಳಿಯುತ್ತೆ. ಅಷ್ಟಕ್ಕೂ ಆ ಜಾಹೀರಾತಿನಲ್ಲಿ ಏನಿದೆ ಅನ್ನೋ ಕುತೂಹಲನಾ?
ಜಾಹೀರಾತಿನಲ್ಲಿ ಏನಿದೆ?
ಆ ಜಾಹೀರಾತಿನ ಪ್ರಕಾರ, ವರನು IAS/IPS ಆಗಿರಬೇಕು, ಕೆಲಸದಲ್ಲಿರುವ ವೈದ್ಯರಾಗಿರಬೇಕು. ಅಥವಾ ಕೈಗಾರಿಕೋದ್ಯಮಿ/ಉದ್ಯಮಿಯಾಗಿರಬೇಕು ಎಂದಿದೆ. ಆದ್ರೆ ಇಂಟೆರೆಸ್ಟಿಂಗ್ ವಿಷ್ಯ ಇರೋದು ಜಾಹೀರಾತಿನ ಕೆಳಗೆ. ಅಲ್ಲಿ "ಸಾಫ್ಟ್‌ವೇರ್ ಎಂಜಿನಿಯರ್‌ಗಳು ದಯವಿಟ್ಟು ಕರೆ ಮಾಡಬೇಡಿ" ಎಂದು ಓದುವ ವಿಶೇಷ ಸೂಚನೆಯನ್ನು ಹಾಕಲಾಗಿದೆ.
ಇದನ್ನೂ ಓದಿ: Viral Video: ದಾರಿ ಮಧ್ಯೆ ಲವ್ವರ್ ಜೊತೆ ಸಿಕ್ಕ ಪತ್ನಿ; ಇದನ್ನು ನೋಡಿದ ಗಂಡ ಮಾಡಿದ್ದೇನು ನೋಡಿ
Future of IT does not look so sound. pic.twitter.com/YwCsiMbGq2
— Samir Arora (@Iamsamirarora) September 16, 2022
ಪತ್ರಿಕೆಯಲ್ಲಿ ಬಂದಂತಹ ಈ ಜಾಹೀರಾತನ್ನು ಸಮೀರ್ ಅರೋರಾ ಎಂಬುವವರು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ "ಐಟಿಯ ಭವಿಷ್ಯವು ಅಷ್ಟು ಉತ್ತಮವಾಗಿಲ್ಲ" ಎಂದು ತಮಾಷೆ ಮಾಡಿದ್ದಾರೆ. ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿದೆ.
ವೈರಲ್ ಫೋಟೋ ನೋಡಿ ನೆಟ್ಟಿಗರು ಏನು ಹೇಳಿದ್ದಾರೆ
ಸಾಕಷ್ಟು ಜನರು ಇದಕ್ಕೆ ತಕ್ಕ ಉತ್ತರ ಎಂಬಂತೆ ಕಾಮೆಂಟ್ ಮಾಡಿದ್ದಾರೆ. “ಚಿಂತೆ ಮಾಡಬೇಡಿ. ಎಂಜಿನಿಯರ್‌ಗಳು ಕೆಲವು ಪತ್ರಿಕೆಗಳ ಜಾಹೀರಾತನ್ನು ಅವಲಂಬಿಸುವುದಿಲ್ಲ. ಅವರು ಎಲ್ಲವನ್ನೂ ತಮ್ಮದೇ ಆದ ರೀತಿಯಲ್ಲಿ ಕಂಡುಕೊಳ್ಳುತ್ತಾರೆ, ” ಎಂದು ಒಬ್ಬರು ಹೇಳಿದ್ದಾರೆ. ಇನ್ನೊಬ್ಬರು, “ಈ ದಿನಗಳಲ್ಲಿ ಸಾಫ್ಟ್‌ವೇರ್ ಎಂಜಿನಿಯರ್‌ಗಳು ಆನ್‌ಲೈನ್‌ನಲ್ಲಿ ಎಲ್ಲವನ್ನೂ ಹುಡುಕುತ್ತಾರೆ (ವಧು ಸೇರಿದಂತೆ). ಆದ್ದರಿಂದ ಈ ಜಾಹೀರಾತು ಪೋಸ್ಟರ್ ಅವರ ಬಗ್ಗೆ ಚಿಂತಿಸಬೇಕಾಗಿಲ್ಲ. ಅವರು ಹೇಗಾದರೂ ಪತ್ರಿಕೆ ಜಾಹೀರಾತು ನೋಡುವುದಿಲ್ಲ” ಎಂದಿದ್ದಾರೆ.
ಇದರ ಮಧ್ಯೆ “ಕ್ಯಾ ಮೆಕ್ಯಾನಿಕಲ್ ವಾಲೆ ಕಾಲ್ ಕರ್ ಸಕ್ತೇ ಹೈ? ಅಂತ ಕೇಳಿದ್ದಾನೆ. ಮೆಕ್ಯಾನಿಕಲ್ ಎಂಜಿನಿಯರ್‌ಗಳು ಕರೆ ಮಾಡಬಹುದೇ? ತಮಾಷೆ ಮಾಡಿದ್ದಾನೆ. ಇನ್ನು “ಜಾಹೀರಾತನ್ನು ನೋಡಿದರೆ, ಇಡೀ ದೇಶದ ಭವಿಷ್ಯವು ಅಷ್ಟು ಉತ್ತಮವಾಗಿಲ್ಲ” ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಟ್ರೆಂಡ್ ಗೆ ತಕ್ಕ ಬದಲಾಗುತ್ತಿರುವ ಮನಸ್ಥಿತಿಗಳು
ಇನ್ನು ಮೊದಲಿಗೆ ಹೋಲಿಸಿದರೆ ಸಾಫ್ಟ್ ವೇರ್ ಎಂಜಿನಿಯರ್ಸ್ ಗೆ ಸ್ವಲ್ಪ ಮಟ್ಟಿಗೆ ಬೇಡಿಕೆ ಕಡಿಮೆಯಾಗಿರೋದು ನಿಜ. ಅದರಲ್ಲೂ ಒಳ್ಳೆಯ ಕಾಲೇಜು, ಒಳ್ಳೆಯ ಮಾರ್ಕ್ಸ್ ಪಡೆದವರಿಗೆ ಅವಕಾಶಗಳಿದ್ದರೂ ತುಂಬಾ ಜನರ ಫ್ರೆಶರ್ಸ್ ಕೆಲಸ ಹುಡುಕಲಾಗದೇ ಪರದಾಡುತ್ತಿರೋದನ್ನು ಕಾಣುತ್ತೇವೆ.
ಒಂದು ಕಾಲದಲ್ಲಿತುಂಬಾ ಬೇಡಿಕೆಯಿದೆ ಎಂಬ ಕಾರಣಕ್ಕೆ ಬಹಳಷ್ಟು ಜನರು ಸಾಫ್ಟ್ ವೇರ್ ಎಂಜಿನಿಯರಿಂಗ್ ಅನ್ನೇ ಆಯ್ಕೆ ಮಾಡಿಕೊಂಡಿದ್ದರು. ಸಾಲು ಸಾಲು ಎಂಜಿನಿಯರ್ಸ್ ತಯಾರಾದರು. ಇದರ ಪರಿಣಾಮ ಬೇಡಿಕೆ ತುಸು ಕಡಿಮೆಯಾಯಿತು. ಇನ್ನು ಒಂದು ಕಾಲದಲ್ಲೇ ನಮಗೆ ಸಾಫ್ಟ್ ವೇರ್ ಹುಡುಗನೇ ಬೇಕು ಎನ್ನುತ್ತಿದ್ದರು ಹುಡುಗಿಯರು. ಆದರೆ ಇಂದಿನ ಟ್ರೆಂಡ್ ಬದಲಾಗಿದೆ. ಸಾಫ್ಟ್ ವೇರ್ ಹುಡುಗ ಬೇಡ ಅನ್ನೋ ಕಾಲ ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ