ಇವರೇ ನೋಡಿ ತದ್ರೂಪಿ ಗೊಂಬೆಗಳ ತಾಯಿ ‘ಲಿಜ್ ವಾಟ್ಸಾನ್’..!

ಲಿಜ್ ತನ್ನ ಮಕ್ಕಳ ಬಗ್ಗೆ ಚಿಂತಿಸುತ್ತಲೇ ಐದು ತಿಂಗಳ ನಂತರ ಮಗುವಿನ ರೀತಿಯ ತದ್ರೂಪಿ ಗೊಂಬೆಯನ್ನು ಕೊಂಡು ತಂದಾಗ ಕೊಂಚ ಸಮಾಧಾನಗೊಂಡರು. ನಂತರ ಅವಳ ಗೊಂಬೆಗಳ ಸಂಗ್ರಹದ ಅಭ್ಯಾಸ ವರ್ಷ ವರ್ಷ ಮುಂದುವರೆಯುತ್ತಲೇ ಹೋಯಿತು. ಇದೀಗ ತದ್ರೂಪಿ ಗೊಂಬೆಗಳ ತಾಯಿಯೇ ಆಗಿ ಹೋಗಿದ್ದಾರೆ.

ತದ್ರೂಪಿ ಗೊಂಬೆಗಳು

ತದ್ರೂಪಿ ಗೊಂಬೆಗಳು

 • Share this:
  42 ವರ್ಷದ ಲಿಜ್ ವಾಟ್ಸಾನ್ 2010ರಲ್ಲಿ ತನ್ನ ಪತಿಯಿಂದ ವಿಚ್ಛೇದನ ಪಡೆದು ಹೊರಬಂದರು. ಆದರೆ ಅವರ ಮಕ್ಕಳು ಮಾತ್ರ ತಾಯಿಯ ತೊರೆದು ತಂದೆ ಜೊತೆ ಇರಲು ತೀರ್ಮಾನಿಸಿದಾಗ ಸಂಪೂರ್ಣವಾಗಿ ಎದೆಗುಂದಿದರು. ಮುಂದೆ ದಿಕ್ಕು ತೋಚದಂತಾಯಿತು. ನಂತರ 2016ರಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಾವಿರಾರು ಡಾಲರ್‌ಗಳನ್ನು ಗೊಂಬೆಗಳ ಮೇಲೆ ಖರ್ಚು ಮಾಡಿದರು. ಇದು ದೂರಾದ ಇಬ್ಬರ ಮಕ್ಕಳ ಪ್ರೀತಿಯನ್ನು ಮರು ತುಂಬಿಕೊಳ್ಳಲು ನೆರವಾಯಿತು ಎನ್ನುತ್ತಾರೆ ಲಿಜ್.

  ಡೈಲಿ ಮೇಲ್ ವರದಿ ಪ್ರಕಾರ, ಲಿಜಿ ಅವರು ಯೂಟ್ಯೂಬ್ ಮತ್ತು ಆನ್‍ಲೈನ್‍ನಲ್ಲಿ ನೋಡಿ ಗೊಂಬೆಗಳನ್ನು ತಯಾರಿಸುವ ಹವ್ಯಾಸ ರೂಢಿಸಿಕೊಂಡು ಇದೀಗ ಮರುಸೃಷ್ಟಿ ಗೊಂಬೆಗಳ ನರ್ಸರಿಯನ್ನೇ ತೆರೆದಿದ್ದಾರೆ. ನಿಜವಾದ ಮಾನವನ ರೂಪಗಳನ್ನು ಹೋಲುವ ಈ ಗೊಂಬೆಗಳನ್ನು ಸಿಲಿಕಾನ್ ಮತ್ತು ವಿನಿಲ್‍ನಿಂದ ತಯಾರಿಸುತ್ತಾರೆ ಲಿಜ್.

  ಲಿಜ್ ಅವರು ವಿಚ್ಛೇದನ ತೆಗೆದುಕೊಂಡರು. ಮೂರು ವರ್ಷಗಳ ನಂತರ ಜೆಫ್ ಎಂಬುವವರನ್ನು ಮದುವೆಯಾದರು. ಇವರ ಹಾಗೂ 18 ತಿಂಗಳ ಮಗುವಿನ ಜೊತೆ ದೇಶದ ಮೂಲೆ ಮೂಲೆ ಸುತ್ತಿದರೂ ಲಿಜ್‌ಗೆ ಮೊದಲ ಪತಿ ಮತ್ತು ಮಕ್ಕಳಾದ ಡೈಲನ್(15), ಆಶರ್ (13) ಅವರ ಅನುಪಸ್ಥಿತಿ ಕಾಡುತ್ತಲೇ ಇತ್ತು. ಆದ್ದರಿಂದ ನಂತರ ಕಾನ್ಸಾಸ್‍ನಲ್ಲಿರುವ ಮಾಜಿ ಪತಿಯ ಜೊತೆಗೆ ವಾಸಿಸಲು ನಿರ್ಧರಿಸಿದರು.

  Radhe: ಐಎಂಡಿಬಿಯಲ್ಲಿ ಸಲ್ಮಾನ್​ ಅಭಿನಯದ ರಾಧೆ ಚಿತ್ರಕ್ಕೆ ಸಿಕ್ತು ಅತಿ ಕೆಟ್ಟ ರೇಟಿಂಗ್: ಚಿತ್ರದ ಪೈರೆಸಿಯಲ್ಲಿ ಭಾಗಿಯಾದವರಿಗೆ ಸಲ್ಲು ಎಚ್ಚರಿಕೆ..!

  ಮಕ್ಕಳಾದ ಡೈಲನ್(15), ಆಶರ್ (13) ತಂದೆಯ ಜೊತೆ ವಾಸಿಸುವ ನಿರ್ಧಾರ ನನ್ನ ಜೀವನದಲ್ಲಿ ಎದುರಾದ ಅತ್ಯಂತ ಕಠಿಣ ಸಂದರ್ಭ. ಇದು ಹೇಗೆಂದರೆ ಹೆತ್ತ ಮಕ್ಕಳನ್ನೇ ದತ್ತು ಕೊಟ್ಟಂತೆ ಆಗಿತ್ತು ಎಂದು ಲಿಜ್ ಅವರು ಆ ಸಂದರ್ಭವನ್ನು ಉಲ್ಲೇಖಿಸಿ ತಮ್ಮ ಜೀವನದಲ್ಲಿ ಎದುರಾದ ಕಷ್ಟವನ್ನು ನೆನೆಸಿಕೊಂಡರು.

  ಲಿಜ್ ತನ್ನ ಮಕ್ಕಳ ಬಗ್ಗೆ ಚಿಂತಿಸುತ್ತಲೇ ಐದು ತಿಂಗಳ ನಂತರ ಮಗುವಿನ ರೀತಿಯ ತದ್ರೂಪಿ ಗೊಂಬೆಯನ್ನು ಕೊಂಡು ತಂದಾಗ ಕೊಂಚ ಸಮಾಧಾನಗೊಂಡರು. ನಂತರ ಅವಳ ಗೊಂಬೆಗಳ ಸಂಗ್ರಹದ ಅಭ್ಯಾಸ ವರ್ಷ ವರ್ಷ ಮುಂದುವರೆಯುತ್ತಲೇ ಹೋಯಿತು. ಇದೀಗ ತದ್ರೂಪಿ ಗೊಂಬೆಗಳ ತಾಯಿಯೇ ಆಗಿ ಹೋಗಿದ್ದಾರೆ.

  ಇವರು ಕೊನೆಯದಾಗಿ ಮರುಸೃಷ್ಟಿಸಿದ್ದು 12 ತಿಂಗಳ ಗೊಂಬೆಯನ್ನು. ಈಕೆ ತನ್ನ ಎಲ್ಲಾ ಮರುಸೃಷ್ಟಿಯ ಗೊಂಬೆಗಳಿಗೆ ಹೆಸರಿಟ್ಟಿದ್ದಾರೆ. ಒಂದೊಂದು ಹೆಸರು ವಿಭಿನ್ನವಾಗಿದೆ. ಜೂನಿಯರ್ ಆನ್, ವಿಲ್ಲಾ ಜೇನ್, ನಿಕ್ಸನ್ ಗ್ರೇ, ಬೆನೆಡಿಕ್ಟ್ ಆರ್ಥರ್, ಜಾಕ್ಸ್ ಈಥನ್, ಕ್ರೆವಾನ್ ರಿಡ್ಜ್, ಪೈಸ್ಲೆ ರೈ, ಇಸ್ಲಾ ಬ್ಲೂಂಡ್ ಒಕ್ಲಿನ್ ಎಲೈಸ್ ಇವೆಲ್ಲವೂ ಈಕೆ ಮರುಸೃಷ್ಟಿಸಿದ ಗೊಂಬೆಗಳ ಹೆಸರುಗಳು.

  ಕೆಲವೊಮ್ಮೆ ಹಾರರ್ ಸಿನಿಮಾಗಳಲ್ಲೂ ಲಿಜ್‌ ಗೊಂಬೆಗಳನ್ನು ಕಾಣಬಹುದು. ಲಿಜ್‌ ಅವರು ತಮ್ಮ ಜೀವನವನ್ನು ಮರುಸೃಷ್ಟಿಯ ಗೊಂಬೆಗಳ ರೀತಿಯಲ್ಲಿ ಸುಂದರವಾಗಿ ಕಟ್ಟಿಕೊಂಡಿದ್ದಾರೆ. ಲಿಜ್‌ ತಯಾರಿಕೆಯ ಗೊಂಬೆಗಳಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಅಷ್ಟೊಂದು ಸುಂದರವಾಗಿರುತ್ತದೆ. ಆದರೆ ಇವರ ತಯಾರಿಕೆ ಗೊಂಬೆಗಳ ಮಾರುಕಟ್ಟೆಯ ದರ 25,655 ರೂ.ನಿಂದ 1,09,950 ರೂಗಳವರೆಗೂ ಇದೆ.
  Published by:Latha CG
  First published: