Spanish Courts: ದಂಪತಿಗಳು ವಿಚ್ಛೇದನ ಪಡೆದರೂ ತಮ್ಮ ಸಾಕು ಪ್ರಾಣಿಯ ಪಾಲನೆ ಮಾಡುವುದು ಕಡ್ಡಾಯ ಎಂದ ನ್ಯಾಯಾಲಯ

ದಂಪತಿ ಜಂಟಿ ಒಪ್ಪಂದಕ್ಕೆ ಬರಲು ಸಾಧ್ಯವಾಗದಿದ್ದ ಪಕ್ಷದಲ್ಲಿ ಸಾಕುಪ್ರಾಣಿಗಳ ನಿರ್ವಹಣಾ ವೆಚ್ಚವನ್ನು ಮತ್ತು ಯಾವ ಸಂಗಾತಿಯೊಂದಿಗೆ ಅದು ವಾಸಿಸಬೇಕು ಅನ್ನುವ ನಿರ್ಧಾರವನ್ನು ನ್ಯಾಯಾಧೀಶರು ತೆಗೆದುಕೊಳ್ಳಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಫ್ರೆಂಚ್ (French) ಮತ್ತು ಪೋರ್ಚುಗೀಸ್ (Portuguese) ವಿಚ್ಛೇದನ ಪ್ರಕರಣಗಳಲ್ಲಿ ಈಗಾಗಲೇ ಸಾಕುಪ್ರಾಣಿಗಳನ್ನು ವಸ್ತುಗಳಂತೆ ಪರಿಗಣಿಸದೆ ಅವುಗಳನ್ನು ಭಾವನಾತ್ಮಕ ಜೀವಿಗಳಾಗಿ ಪರಿಗಣಿಸಿದೆ. ಈಗ, ದಂಪತಿ ವಿಚ್ಛೇದನ (Divorce) ಮತ್ತು ಬೇರ್ಪಡಿಕೆಯಂತಹ (Separation) ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಯದಲ್ಲಿ ಸ್ಪೇನ್‌ನ (Spain Court) ನ್ಯಾಯಾಲಯಗಳು ದಂಪತಿಯ ಸಾಕುಪ್ರಾಣಿಗಳ ಯೋಗಕ್ಷೇಮವನ್ನು ಪರಿಗಣನೆಗೆ ತೆಗೆದುಕೊಳ್ಳಲಿರುವುದು. ಹೌದು, ಇಂತಹ ಕಾನೂನನ್ನು ಸ್ಪೇನ್ ಇತ್ತೀಚೆಗಷ್ಟೇ ಅಳವಡಿಸಿಕೊಂಡಿದೆ. ಕಾನೂನಿನ ಈ ಬದಲಾವಣೆಯೊಂದಿಗೆ, ದಂಪತಿಗಳು ತಮ್ಮ ಸಾಕುಪ್ರಾಣಿಗಳ ಪಾಲನೆಯ ಹಂಚಿಕೆ ಪಡೆಯುವುದು ಸುಲಭವಾಗಲಿದೆ.

ಭಾವನಾತ್ಮಕ ಜೀವಿಗಳಾಗಿ ಪರಿಗಣಿಸಿ
ಈ ನಿರ್ಧಾರವು ಫ್ರಾನ್ಸ್ ಮತ್ತು ಪೋರ್ಚುಗಲ್‌ನಲ್ಲಿ ನ್ಯಾಯಾಧೀಶರನ್ನು ಇದೇ ರೀತಿಯ ಕ್ರಮಗಳನ್ನು ಅನುಸರಿಸುವಂತೆ ಮಾಡಲು ಮತ್ತು ಸಾಕುಪ್ರಾಣಿಗಳನ್ನು ಅವುಗಳ ಮಾಲೀಕರ ಒಡೆತನದ ವಸ್ತುಗಳಂತೆ ಕಾಣದೆ, ಭಾವನಾತ್ಮಕ ಜೀವಿಗಳಾಗಿ ಪರಿಗಣಿಸುವಂತೆ ಮಾಡಲು ನಿರ್ಬಂಧಿಸುತ್ತದೆ. ಈ ಪ್ರವೃತ್ತಿ ಈಗಾಗಲೇ ಪ್ರಾರಂಭವಾಗಿದೆ.

ಸಾಕು ಪ್ರಾಣಿಗಳ ಭವಿಷ್ಯವನ್ನು ಇತರ ಕುಟುಂಬ ಸದಸ್ಯರ ಭವಿಷ್ಯದಂತೆಯೇ ಅದೇ ಆದ್ಯತೆಯೊಂದಿಗೆ ನಿಯಂತ್ರಿಸಬೇಕು ಎಂದು 42 ವರ್ಷದ ವಕೀಲ ಲೋಲಾ ಗಾರ್ಸಿಯಾ ಹೇಳಿದರು. ತಾವು ಬೇರ್ಪಟ್ಟ ನಂತರ ತಮ್ಮ ನಾಯಿ ಯಾರೊಂದಿಗೆ ವಾಸಿಸಬೇಕು? ಎಂಬುದರ ಕುರಿತು ತೀರ್ಪು ನೀಡುವಂತೆ ಕೋರಿದ್ದ ಅವಿವಾಹಿತ ದಂಪತಿಗೆ ಮ್ಯಾಡ್ರಿಡ್ ನ್ಯಾಯಾಧೀಶರು ನಾಯಿಯ ಜಂಟಿ ಪಾಲನೆಯ ತೀರ್ಪು ನೀಡಿದರು.

ಇದನ್ನೂ ಓದಿ: ಅನಾರೋಗ್ಯ ಮುಚ್ಚಿಟ್ಟು ಮದುವೆಯಾಗುವುದು ಅಪರಾಧ: High Court ಮಹತ್ವದ ತೀರ್ಪು

ಪ್ರಾಣಿಗಳ ಹಕ್ಕು
ಗಾರ್ಸಿಯಾ, ಅವರ ರೈಟ್ಸ್ & ಅನಿಮಲ್ಸ್ ಸಂಸ್ಥೆಯು ಪ್ರಕರಣವನ್ನು ನಿರ್ವಹಿಸಿದೆ, ಮಾನವ-ಪ್ರಾಣಿ ಸಂಬಂಧಗಳನ್ನು ನಿಯಂತ್ರಿಸುವ ಭವಿಷ್ಯದ ಕಾನೂನು ಬದಲಾವಣೆಗಳ ಸರಣಿಯಲ್ಲಿ ಸುಧಾರಣೆಯು ಪ್ರಮುಖ ಹೆಜ್ಜೆಯಾಗಿದೆ ಎಂದು ಅವರು ನಂಬಿದ್ದಾರೆ . ಇತರ ಯುರೋಪಿಯನ್ ದೇಶಗಳಿಗೆ ಹೋಲಿಸಿದರೆ ಸ್ಪೇನ್‌ನಲ್ಲಿ ಸಾಕುಪ್ರಾಣಿಗಳ ಮಾಲೀಕತ್ವವು ಹೆಚ್ಚು, ಹಾಗಾಗಿ ಸ್ಪೇನ್‌ನ ಎಡಪಂಥೀಯ ಸಮ್ಮಿಶ್ರ ಸರ್ಕಾರವು ಸರ್ಕಸ್‌ಗಳಲ್ಲಿ ಕಾಡು ಪ್ರಾಣಿಗಳನ್ನು ನಿಷೇಧಿಸುವ ಹಾಗೂ ಅಂಗಡಿಗಳಲ್ಲಿ ಸಾಕುಪ್ರಾಣಿಗಳ ಮಾರಾಟ ತಡೆಗಟ್ಟುವ ಮೂಲಕ ಪ್ರಾಣಿಗಳ ಹಕ್ಕುಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಸಾಕುಪ್ರಾಣಿಗಳ ಪಾಲನೆ
ಇತ್ತೀಚಿನವರೆಗೂ, ಸಾಕುಪ್ರಾಣಿಗಳ ಜಂಟಿ ಪಾಲನೆಯನ್ನು ಕೋರುವ ವಕೀಲರು, ದಂಪತಿಗಳಿಬ್ಬರೂ ಪ್ರಾಣಿಯನ್ನು ವಸ್ತುವಿನ ರೀತಿಯಲ್ಲಿ ಹೊಂದಿದ್ದಾರೆಂದು ಸಾಬೀತು ಪಡಿಸಬೇಕಾಗಿತ್ತು ಮತ್ತು ಈ ಕಾನೂನು ಸಾಕುಪ್ರಾಣಿಯನ್ನು ಯಾರ ಹೆಸರಲ್ಲಿ ನೋಂದಾಯಿಸಲಾಗಿದಿಯೋ ಅವರಿಗೆ ಅನುಕೂಲಕರವಾಗಿತ್ತು.
ಪ್ರಸ್ತುತ ಪರಿಸ್ಥಿತಿಯಲ್ಲಿ, ಪ್ರಾಣಿ ಯಾರ ಜೊತೆಯಲ್ಲಿ ಉತ್ತಮ ರೀತಿಯಲ್ಲಿ ಇರಬಲ್ಲದು ಎಂಬುದನ್ನು ನ್ಯಾಯಾಧೀಶರು ನಿರ್ಧರಿಸಬೇಕು. ಅದು ಅದರ ಯೋಗಕ್ಷೇಮದಿಂದ ನಿರ್ಧರಿಸಲ್ಪಡುತ್ತದೆ ಎಂದು ಗಾರ್ಸಿಯಾ ವಿವರಿಸಿದರು. ಮಕ್ಕಳು ಮತ್ತು ಪ್ರಾಣಿಗಳ ನಡುವೆ ಬಲವಾದ ಬಂಧವಿರುವುದರಿಂದ, ಆರ್ಥಿಕ ಸ್ಥಿರತೆ ಹೊಂದಿದ ಅಥವಾ ಮಕ್ಕಳ ಪಾಲನೆಯ ಹಕ್ಕನ್ನು ಹೊಂದಿದ ಪಾಲುದಾರನು ಸಾಕುಪ್ರಾಣಿಗಳ ಪಾಲನೆಯ ಹಕ್ಕನ್ನು ಪಡೆಯಲು ಸಾಧ್ಯವಾಗುತ್ತದೆ.

ನಿರ್ವಹಣಾ ವೆಚ್ಚ
ದಂಪತಿ ಜಂಟಿ ಒಪ್ಪಂದಕ್ಕೆ ಬರಲು ಸಾಧ್ಯವಾಗದಿದ್ದ ಪಕ್ಷದಲ್ಲಿ ಸಾಕುಪ್ರಾಣಿಗಳ ನಿರ್ವಹಣಾ ವೆಚ್ಚವನ್ನು ಮತ್ತು ಯಾವ ಸಂಗಾತಿಯೊಂದಿಗೆ ಅದು ವಾಸಿಸಬೇಕು ಅನ್ನುವ ನಿರ್ಧಾರವನ್ನು ನ್ಯಾಯಾಧೀಶರು ತೆಗೆದುಕೊಳ್ಳಬಹುದು. ಪೋಷಕರಲ್ಲಿ ಒಬ್ಬರು ಹಿಂದೆ ಪ್ರಾಣಿಗಳ ನಿಂದನೆ ಅಥವಾ ನಿರ್ಲಕ್ಷ್ಯದ ಆಪಾದನೆಗೆ ಒಳಪಟ್ಟಿದ್ದ ಪಕ್ಷದಲ್ಲಿ , ಅವರು ತಮ್ಮ ಮಗುವಿನ ಜಂಟಿ ಪಾಲನೆಯ ಹಕ್ಕನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಸಾಮಾನ್ಯವಾಗಿ, ಕಳೆದುಹೋದ ಪ್ರಾಣಿಯನ್ನು ಕಂಡುಕೊಂಡ ಯಾರಾದರೂ ಅದನ್ನು ಅದರ ಮಾಲೀಕರಿಗೆ ಹಿಂತಿರುಗಿಸಬೇಕು ಅಥವಾ ನಿರ್ಲಕ್ಷ್ಯ ಅಥವಾ ತ್ಯಜಿಸುವಿಕೆಯ ಸ್ಪಷ್ಟ ಚಿಹ್ನೆಗಳು ಕಂಡುಬಂದರೆ ಅದನ್ನು ಅಧಿಕಾರಿಗಳಿಗೆ ವರದಿ ಮಾಡಬೇಕು.

ಇದನ್ನೂ ಓದಿ: Divorce Law: ಈ ವ್ಯಕ್ತಿ 8,000 ವರ್ಷ ದೇಶ ಬಿಟ್ಟು ಹೋಗುವಂತಿಲ್ಲ, ಕಾರಣ ವಿಚ್ಛೇದನ!

ಪ್ರಾಣಿಯನ್ನು ಅದರ ಮಾಲೀಕರಿಗೆ ಹಿಂದಿರುಗಿಸಿದ ನಂತರ, ಅದನ್ನು ಕಂಡುಕೊಂಡ ವ್ಯಕ್ತಿಯು ಅದರ ಆರೈಕೆಯ ವೆಚ್ಚವನ್ನು ಪರಿಹಾರವನ್ನಾಗಿ ಪಡೆಯಬಹುದು. ಯುರೋಪ್‌ನ ಬಹುಭಾಗಕ್ಕೆ ಹೋಲಿಸಿದರೆ ಪ್ರಾಣಿಗಳ ಉದ್ದೇಶಿತ 'ಡಿ-ಆಬ್ಜೆಕ್ಟಿಫಿಕೇಶನ್' ನಲ್ಲಿ ಸ್ಪೇನ್ ಹಿಂದೆ ಉಳಿದಿದೆ .
Published by:vanithasanjevani vanithasanjevani
First published: