Viral News: ಅಬ್ಬಾ ಸಖತ್ ಡೇಂಜರ್ ಮೀನು ಇದು..! ಡೈವರ್ ಮೇಲೆ ಹೇಗೆ ದಾಳಿ ಮಾಡಿದೆ ನೋಡಿ

ಬಣ್ಣ ಬಣ್ಣದ ಸಣ್ಣ ಸಣ್ಣ ಮೀನುಗಳು (Small Fishes) ಮನಸ್ಸಿಗೆ ಎಷ್ಟೊಂದು ಮುದವನ್ನು ನೀಡುತ್ತದೆಯೋ, ಅಷ್ಟೇ ಅಪಾಯಕಾರಿ ಕೆಲವು ದೈತ್ಯ ಮೀನುಗಳು (Big Fishes) ಸಹ ಸಮುದ್ರದಾಳದಲ್ಲಿ (Deep Sea) ಇರುತ್ತವೆ ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.

ಕತ್ತಿ ಮೀನು

ಕತ್ತಿ ಮೀನು

  • Share this:
ಸಾಮಾನ್ಯವಾಗಿ ನಾವು ಯಾವುದಾದರೂ ಸಮುದ್ರದಲ್ಲಿ (Sea) ಸ್ಕೂಬಾ ಡೈವಿಂಗ್‌ಗೆ (Scuba Diving) ಹೋದರೆ ನೀರಿನಾಳದಲ್ಲಿರುವ ಅನೇಕ ಜಲಚರಗಳಲ್ಲಿ ಈ ಬಣ್ಣ ಬಣ್ಣದ ಮೀನುಗಳು ಆ ನೀರಿನಾಳದಲ್ಲಿ ಅತ್ತಿಂದಿತ್ತ ಓಡಾಡಿಕೊಂಡು ಇರುವುದನ್ನು ನೋಡಿ ತುಂಬಾನೇ ಖುಷಿ ಪಟ್ಟಿರುತ್ತೇವೆ. ಆದರೆ ಈ ಬಣ್ಣ ಬಣ್ಣದ ಸಣ್ಣ ಸಣ್ಣ ಮೀನುಗಳು (Small Fishes) ಮನಸ್ಸಿಗೆ ಎಷ್ಟೊಂದು ಮುದವನ್ನು ನೀಡುತ್ತದೆಯೋ, ಅಷ್ಟೇ ಅಪಾಯಕಾರಿ ಕೆಲವು ದೈತ್ಯ ಮೀನುಗಳು (Big Fishes) ಸಹ ಸಮುದ್ರದಾಳದಲ್ಲಿ (Deep Sea) ಇರುತ್ತವೆ ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.

ಇಲ್ಲಿಯೂ ಸಹ ಒಬ್ಬ ಡೈವರ್ (Diver) ಮೇಲೆ ಹೇಗೆ ಒಂದು ಕತ್ತಿ ಮೀನು (Sword Fish) ಹಠಾತ್ತನೆ ಬಂದು ಇವರ ಮೇಲೆ ದಾಳಿ ಮಾಡಿದೆ ನೋಡಿ. ಈ ವಿಡಿಯೋ (Video) ತುಂಬಾ ಹಳೆಯದು ಎಂದು ಹೇಳಲಾಗುತ್ತಿದ್ದು, ಈಗ ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ (Social Media) ಯಾರೋ ಹಂಚಿಕೊಂಡಿದ್ದು, ಮತ್ತೆ ಭಾರಿ ಸದ್ದು ಮಾಡುತ್ತಿದೆ.

ಡೈವರ್ ಮೇಲೆ ದಿಢೀರ್ ದಾಳಿ

ಕತ್ತಿ ಮೀನು ಎಲ್ಲಿಂದಲೋ ಬಂದು ಡೈವರ್ (Diver) ಮೇಲೆ ಹಲ್ಲೆ ನಡೆಸಿದ ಹಳೆಯ ವಿಡಿಯೋ ಟ್ವಿಟ್ಟರ್‌ನಲ್ಲಿ ಮತ್ತೆ ಸಂಚಲನವನ್ನು ಮೂಡಿಸಿದ್ದು, ಈ ವಿಡಿಯೋ ಮತ್ತೆ ಸಾವಿರಾರು ಜನರನ್ನು ದಿಗ್ಬ್ರಮೆಗೊಳಿಸಿದೆ ಎಂದು ಹೇಳಬಹುದು.





ಬ್ರೆಜಿಲ್ ಕರಾವಳಿಯಲ್ಲಿರುವ (Coastal area) ಒಂದು ಸಮುದ್ರದ ತಳದಲ್ಲಿ ಸಣ್ಣ ರಿಪೇರಿ ಮಾಡುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸ್ಯಾಚುರೇಶನ್ ಡೈವರ್ ಪಾವೊಲೊ ಎಡ್ವರ್ಡೊ ಅವರ ಮೇಲೆ ಕತ್ತಿ ಮೀನು ದಾಳಿ ಮಾಡಿತು. ಮೂಲತಃ ಇದು ನಡೆದಿದ್ದು ಏಪ್ರಿಲ್ 2016 ರಲ್ಲಿ ಎಂದು ಹೇಳಲಾಗುತ್ತಿದ್ದು, ಮತ್ತೆ ಈಗ ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಹಡಗಿನಿಂದ ಇಳಿದು ಕೆಲಸ ಮಾಡುತ್ತಿದ್ದ ವ್ಯಕ್ತಿ

ಈ ಘಟನೆ ನಡೆದಾಗ ಎಡ್ವರ್ಡೊ ಡೈವರ್ ಸಪೋರ್ಟ್ ಹಡಗಿನಿಂದ ಇಳಿದು ಕೆಲಸ ಮಾಡುತ್ತಿದ್ದರು. ಸ್ಯಾಚುರೇಶನ್ ಡೈವರ್‌ಗಳು ಆಳವಾದ ನೀರಿನಲ್ಲಿ ಇಳಿದು ಕೆಲಸ ಮಾಡುತ್ತಾರೆ. ಸಮುದ್ರದಾಳಕ್ಕೆ ಇಳಿದು ಹೇಗೆ ಕೆಲಸ ಮಾಡುವುದು ಎಂದು ಅವರಿಗೆ ವಿಶೇಷವಾದ ತರಬೇತಿಯನ್ನು ನೀಡಲಾಗಿರುತ್ತದೆ.

ಇದನ್ನೂ ಓದಿ: Viral News: 2 ತಲೆ, 2 ಹೃದಯ, 3 ಕೈ ಇರೋ ಮಗು, ನೋಡಿ ದಿಗ್ಭ್ರಮೆಗೊಂಡ ವೈದ್ಯರು..!

ಟ್ವಿಟ್ಟರ್‌ನಲ್ಲಿ ಸಾಕಷ್ಟು ಸಂಚಲನವನ್ನು ಸೃಷ್ಟಿಸಿದ 57 ಸೆಕೆಂಡಿನ ಕ್ಲಿಪ್ ನೋಡಿದಾಗ ಎಡ್ವರ್ಡೊ ಸಾಗರ ತಳದಲ್ಲಿ ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದಾರೆ. ಕೆಲವೇ ಕ್ಷಣಗಳ ನಂತರ, ಕತ್ತಿ ಮೀನು ಹಿಂದಿನಿಂದ ಬಂದು ಎಡ್ವರ್ಡೊ ಅವರ ಬೆನ್ನ ಹಿಂದೆ ಇರುವಂತಹ ಡೈವಿಂಗ್ ಉಪಕರಣಗಳ ಮೇಲೆ ದಾಳಿ ಮಾಡುತ್ತದೆ. ಅಷ್ಟಕ್ಕೇ ಸುಮ್ಮನಿರದೆ ಕತ್ತಿ ಮೀನು ತನ್ನನ್ನು ತಾನು ಅದರಿಂದ ಮುಕ್ತಗೊಳಿಸಿಕೊಳ್ಳಲು ತುಂಬಾನೇ ಪ್ರಯತ್ನಿಸುತ್ತದೆ, ಆದರೆ ಅದು ವಿಫಲವಾಗುತ್ತದೆ. ಅಲ್ಲಿ ಸಾಕಷ್ಟು ಅಹಿತಕರವಾಗಿ ಕಾಣುವ ಎಡ್ವರ್ಡೊ, ಅವನಿಗೆ ಆಮ್ಲಜನಕವನ್ನು ಪೂರೈಸುತ್ತಿದ್ದ ಇಬ್ಬರ ಕಡೆಗೆ ಹೋಗುತ್ತಿರುವುದನ್ನು ಸಹ ಇದರಲ್ಲಿ ಕಾಣಬಹುದು.

21 ಸಾವಿರಕ್ಕೂ ಅಧಿಕ ವೀಕ್ಷಣೆ

ಒಂದು ವರದಿಯ ಪ್ರಕಾರ, 2016ರ ಏಪ್ರಿಲ್‌ನಲ್ಲಿ ನಡೆದ ಈ ಘಟನೆಯನ್ನು ರಿಮೋಟ್ಲಿ ಆಪರೇಟೆಡ್ ಅಂಡರ್‌ವಾಟರ್‌ ವೆಹಿಕಲ್ ದಾಖಲಿಸಿದೆ. ಇದರಲ್ಲಿ ಸಮಯ, ಡೈವಿಂಗ್ ಹಡಗಿನ ಬಗ್ಗೆ ಕೆಲವು ವಿವರಗಳನ್ನು ನಾವು ನೋಡಬಹುದಾಗಿದೆ. ವ್ಯಾಟ್ ಕ್ಯಾಂಡಿಸ್, 2013 ರಲ್ಲಿ ನಿರ್ಮಿಸಲಾದ ಅಮೆರಿಕನ್ ಹಡಗು. ಈ ಕ್ಲಿಪ್ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಲ್ಲಿ 21 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ದಾಖಲಿಸಿದೆ. ಒಬ್ಬ ವ್ಯಕ್ತಿಯು ಇದನ್ನು ನೋಡಿ "ಸರಿ, ನನ್ನ ಸ್ಕೂಬಾ ತರಬೇತಿದಾರನು ನನಗೆ ಸುಳ್ಳು ಹೇಳಿದನು. ಕೋಪೋದ್ರಿಕ್ತರಾದಾಗ ಮಾತ್ರ ಸಮುದ್ರ ಜೀವಿಗಳು ಮನುಷ್ಯರ ಮೇಲೆ ದಾಳಿ ಮಾಡುತ್ತವೆ ಎಂದು ಅವರು ಹೇಳಿದ್ದರು" ಎಂದು ಬರೆದಿದ್ದಾರೆ.

ಭಯಾನಕ ವಿಡಿಯೋ

"ಈ ಮೀನು ನಿಜವಾಗಿಯೂ ಆ ಡೈವರ್ ಮೇಲೆ ದಾಳಿ ಮಾಡಲು ಹೊರಟಿದೆ, ಅದು ತುಂಬಾನೇ ಭಯಾನಕವಾಗಿದೆ" ಎಂದು ಇನ್ನೊಬ್ಬರು ಬರೆದಿದ್ದಾರೆ. ಇಡೀ ಎಪಿಸೋಡ್‌ನಲ್ಲಿ ಎಡ್ವರ್ಡೊ ಅವರಿಗೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ವರದಿಯೊಂದು ಹೇಳಿದೆ ಮತ್ತು ಅವರ ಆಮ್ಲಜನಕದ ಪೂರೈಕೆಗೂ ಸಹ ಯಾವುದೇ ತೊಂದರೆಯಾಗಿಲ್ಲ ಎಂದು ಹೇಳಿದೆ.
Published by:Divya D
First published: