• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • DC Jumps to Reservoir: ಅಧಿಕಾರಿಗಳನ್ನು ಪರೀಕ್ಷಿಸಲು ಸ್ವತಃ ಜಲಾಶಯಕ್ಕೆ ಧುಮುಕಿದ ಜಿಲ್ಲಾಧಿಕಾರಿ

DC Jumps to Reservoir: ಅಧಿಕಾರಿಗಳನ್ನು ಪರೀಕ್ಷಿಸಲು ಸ್ವತಃ ಜಲಾಶಯಕ್ಕೆ ಧುಮುಕಿದ ಜಿಲ್ಲಾಧಿಕಾರಿ

ಜಲಾಶಯಕ್ಕೆ ಧುಮುಕಿದ ಜಿಲ್ಲಾಧಿಕಾರಿ

ಜಲಾಶಯಕ್ಕೆ ಧುಮುಕಿದ ಜಿಲ್ಲಾಧಿಕಾರಿ

ಸ್ವತಃ ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ ಅವರೇ ಹಾರಂಗಿ ಜಲಾಶಯದ ಹಿನ್ನೀರಿಗೆ ಧುಮುಕಿದ್ದರು. ಈ ದಿಢೀರ್ ಬೆಳವಣಿಗೆ ಹೇಗಾಯ್ತು? ಜೊತೆಗಿದ್ದವರು ಹೇಗೆ ಸ್ಪಂಧಿಸಿದರು ನೋಡಿ

  • Share this:

ಕೊಡಗು(ಮೇ.27): ಕೊಡಗು (Kodagu) ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮಳೆಗಾಲ ಬಂತೆಂದರೆ ವಿಶೇಷ ಸಿದ್ಧತೆ ಮಾಡಬೇಕಾಗಿರುವುದು ಅನಿವಾರ್ಯವಾಗಿ ಹೋಗಿದೆ. ಪ್ರವಾಹ ಮತ್ತು ಭೂಕುಸಿತ (Landslide) ಎದುರಾಗುತ್ತಲೇ ಇರುವುದರಿಂದ ಅಂತಹ ಸ್ಥಿತಿಗಳನ್ನು ಎದುರಿಸುವುದಕ್ಕಾಗಿ ಜಿಲ್ಲಾಡಳಿತ ಅಣಕು ರಕ್ಷಣಾ ಕಾರ್ಯ (Rescue Operation) ನಡೆಸುವ ಮೂಲಕ ಜಿಲ್ಲೆಯ ಪೊಲೀಸ್, ಅಗ್ನಿಶಾಮಕ ಮತ್ತು ಎಲ್ಲಾ ಅಧಿಕಾರಿಗಳನ್ನು ಅದಕ್ಕಾಗಿ ಸಿದ್ಧತೆ ಮಾಡುತ್ತಿದೆ. ಗುರುವಾರ ಕೂಡ ಕುಶಾಲನಗರ ತಾಲ್ಲೂಕಿನ ಹಾರಂಗಿ ಜಲಾಶಯದಲ್ಲಿ (Harangi) ಜಿಲ್ಲಾಡಳಿತ ಮಳೆಗಾಲದಲ್ಲಿ ಪ್ರವಾಹ (Flood) ಎದುರಾದರೆ ಅವರನ್ನು ರಕ್ಷಿಸುವುದು ಹೇಗೆ,? ಮತ್ತು ಅದಕ್ಕೆ ನಾವೆಷ್ಟು ಸಿದ್ಧರಿದ್ದೇವೆ ಎಂದು ಅಣಕು ರಕ್ಷಣಾ ಕಾರ್ಯ ಮಾಡಿ ಪರಿಶೀಲನೆ ಮಾಡಿಕೊಂಡಿತು.


ಹಾರಂಗಿ ಹಿನ್ನೀರಿಗೆ ಇಳಿದ ಅಗ್ನಿಶಾಮಕ ಮತ್ತು ಪೊಲೀಸ್ ಇಲಾಖೆಯ (Police Department) ಹತ್ತಾರು ಸಿಬ್ಬಂದಿ ಪ್ರವಾಹದ ನೀರಿನಲ್ಲಿ ಸಿಲುಕಿರುವವರನ್ನು ರಕ್ಷಣೆ ಮಾಡುವುದು ಹೇಗೆ ಎನ್ನುವುದನ್ನು ಪ್ರಯೋಗಿಕವಾಗಿ ರಕ್ಷಣಾ ಕಾರ್ಯವನ್ನು ಮಾಡಿತು.


ಒಂದು ವೇಳೆ ಪ್ರವಾಹದಲ್ಲಿ ಸಿಲುಕಿಕೊಂಡು ಕರೆ ಬಂತೆಂದರೆ ರಕ್ಷಣಾ ಸಿಬ್ಬಂದಿ ಹೇಗೆ ಸಿದ್ಧವಾಗಿರುತ್ತಾರೆ, ಎಷ್ಟು ಬೋಟುಗಳು ರೆಡಿ ಇರುತ್ತವೆ. ಮತ್ತು ಎಷ್ಟು ವೇಗವಾಗಿ ಕಾರ್ಯಾಚರಣೆ ನಡೆಸುತ್ತವೆ ಎಂಬುದನ್ನು ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ್ ಅವರಿಗೆ ಅಗ್ನಿಶಾಮಕ ದಳದ ಅಧಿಕಾರಿ ಚಂದನ್ ಮಾಹಿತಿ ನೀಡಿದರು.


ಇದಾಗುತ್ತಿದ್ದಂತೆ ಅಪಾಯದ ಸೈರನ್ ಹೊಡೆಯುತ್ತಿದ್ದಂತೆ ಅಗ್ನಿ ಶಾಮಕ ಸಿಬ್ಬಂದಿ ಎರಡು ನಿಮಿಷದಲ್ಲಿ ಬೋಟುಗಳನ್ನು ರೆಡಿಮಾಡಿಕೊಂಡು ಹಾರಂಗಿ ಜಲಾಶಯದ ಹಿನ್ನೀರಿಗೆ ಇಳಿದೇ ಬಿಟ್ಟರು. ಜಲಾಶಯದ ಹಿನ್ನೀರನ್ನು ದಾಟಿ ಮತ್ತೊಂದು ದಡದಲ್ಲಿ ಇದ್ದ ಮಡಿಕೇರಿ ತಹಸೀಲ್ದಾರ್ ಸೇರಿದಂತೆ ವಿವಿಧ ಅಧಿಕಾರಿಗಳನ್ನು ರಕ್ಷಿಸಿ ಈ ದಡಕ್ಕೆ ಸೇರಿಸಿದರು.


ಸ್ವತಃ ನೀರಿಗೆ ಹಾರಿದ ಜಿಲ್ಲಾಧಿಕಾರಿ


ಜೊತೆಗೆ ಪ್ರವಾಹದ ನೀರಿನಲ್ಲೇ ಸಿಲುಕಿದ್ದವರನ್ನು ಹೇಗೆ ರಕ್ಷಣೆ ಮಾಡುತ್ತಾರೆ ಎಂಬುದನ್ನು ಪರಿಶೀಲಿಸುವುದಕ್ಕೆ ಸ್ವತಃ ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ ಅವರೇ ಹಾರಂಗಿ ಜಲಾಶಯದ ಹಿನ್ನೀರಿಗೆ ಧುಮುಕಿದ್ದರು. ಅವರ ಹಿಂದೆಯೇ ಮೋಟಾರು ಬೋಟಿನಲ್ಲಿ ತೆರಳುತ್ತಿದ್ದ ಅಗ್ನಿ ಶಾಮಕ ಸಿಬ್ಬಂದಿ ಕೂಡಲೇ ಕಾರ್ಯಪ್ರವೃತ್ತರಾದರು. ಕೂಡಲೇ ಲೈಫ್ ಜಾಕೆಟ್‍ಗಳನ್ನು ನೀಡಿ ಅವರನ್ನು ಬೋಟಿಗೆ ಅತ್ತಿಸಿಕೊಂಡು ರಕ್ಷಣೆ ಮಾಡುವ ಕೆಲಸ ನಡೆಯಿತು.


2018ರಿಂದಲೂ ನಿರಂತರ ಪ್ರವಾಹ, ಅದಕ್ಕಾಗಿ ಪೂರ್ವ ಸಿದ್ಧತೆ


ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಜಿಲ್ಲೆಯಲ್ಲಿ 2018 ರಿಂದಲೂ ನಿರಂತರವಾಗಿ ಪ್ರವಾಹ ಮತ್ತು ಭೂಕುಸಿತ ನಡೆಯುತ್ತಲೇ ಇದೆ. ನೀರಿನಲ್ಲಿ ಮುಳುಗಿದರೆ ಹೇಗೆ ತಕ್ಷಣವೇ ರಕ್ಷಣ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತರಬೇತಿ ಮಾಡುತಿದ್ದೇವೆ.


ಇದನ್ನೂ ಓದಿ: Viral Video: ಮಕ್ಕಳನ್ನು ಅಕ್ಕರೆಯಿಂದ ಶಾಲೆಗೆ ಕರೆದೊಯ್ಯುವ ಅಪ್ಪ! ಪ್ರೀತಿ ಮುಂದೆ ವಿಕಲಾಂಗತೆ ಸಮಸ್ಯೆಯೇ ಅಲ್ಲ


ಭಾರತೀಯ ಭೂವಿಜ್ಞಾನ ಇಲಾಖೆ ಈಗಾಗಲೇ ಸರ್ವೆ ಮಾಡಿ ಜಿಲ್ಲೆಯಲ್ಲಿ ಎಲ್ಲೆಲ್ಲ್ಲಿ ಭೂಕುಸಿತ ಮತ್ತು ಪ್ರವಾಹ ಎದುರಾಗಬಹುದು ಎಂಬುದನ್ನು ಅಧ್ಯಯನ ಮಾಡಿ ಹೇಳಿದೆ. ಜೊತೆಗೆ ಈ ಹಿಂದೆ ಭೂಕುಸಿತ ಮತ್ತು ಪ್ರವಾಹ ಆಗಿರುವ ಸ್ಥಳಗಳು ಈಗಾಗಲೇ ವೀಕ್ ಝೋನ್ಸ್ ಎಂದು ಗುರುತ್ತಿಸಿದೆ. ಹೀಗಾಗಿ ರಕ್ಷಣಾ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ. ಎನ್‍ಡಿಆರ್ ಎಫ್ ತಂಡ ಮುಂದಿನ ವಾರದಲ್ಲಿ ಬರಲಿದ್ದು, ಅದು ಬಂದ ಬಳಿಕ ಎಲ್ಲೆಲ್ಲಿ ತೀವ್ರ ಅಪಾಯದ ಸ್ಥಳಗಳೆಂದು ಇವೆಯೋ ಅಲ್ಲಿ ಮತ್ತೆ ಪ್ರಾಯೋಗಿಕ ರಕ್ಷಣಾ ಕಾರ್ಯ ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಿದೆ ಎಂದಿದ್ದಾರೆ.


ಅಗ್ನಿಶಾಮಕ ಸಿಬ್ಬಂದಿ ಎನ್‍ಡಿಆರ್ ಎಫ್ ತಂಡದಿಂದ ತರಬೇತಿ


ಇನ್ನು ಜಿಲ್ಲಾ ವಿಪತ್ತು ನಿರ್ವಹಣಾ ತಂಡದ ಅಧಿಕಾರಿ ಅನನ್ಯ ವಾಸುದೇವ್ ಅವರು ಮಾತನಾಡಿ, ಈಗಾಗಲೇ ಜಿಲ್ಲೆಯ ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಎನ್‍ಡಿಆರ್ ಎಫ್ ತಂಡದಿಂದ ತರಬೇತಿ ಕೊಡಿಸಲಾಗಿದೆ.


ಇದನ್ನೂ ಓದಿ: Girl Suicide: ಮದುವೆ ಆಗಲು ಮತಾಂತರದ ಕಂಡಿಷನ್; ಲವ್ ಜಿಹಾದ್​ಗೆ ಯುವತಿ ಬಲಿ; ಆರೋಪಿ ಪರಾರಿ


ಸದ್ಯ ಜಿಲ್ಲೆಯ ಜನರ ರಕ್ಷಣೆಗೆ ಬೇಕಾದ ಅಗತ್ಯ ಸಲಕರಣೆಗಳನ್ನೆಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ಈ ತಿಂಗಳ ಅಂತ್ಯದಲ್ಲಿ ಕೇರಳಕ್ಕೆ ಮುಂಗಾರು ಎಂಟ್ರಿಯಾಗಲಿದ್ದು, ಅದರ ನಂತರದ ನಾಲ್ಕೈದು ದಿನಗಳಲ್ಲಿ ಮುಂಗಾರು ಜಿಲ್ಲೆಗೆ ಎಂಟ್ರಿಯಾಗಬಹುದು. ಅದಕ್ಕಾಗಿ ನಾವು ಸಿದ್ಧವಿದ್ದೇವೆ ಎಂದು ಹೇಳಿದ್ದಾರೆ.

top videos
    First published: