ಯುರೇಕಾ ಯುರೇಕಾ.. ಸೂರ್ಯನ ಸಮೀಪವೇ ಪತ್ತೆಯಾಯ್ತು ಹೊಸ Planet! ಕೌತುಕಗಳ ಕಣಜವಿದೆಯಾ ಅದರಲ್ಲಿ?

ಈ ಗ್ರಹವು ಇದುವರೆಗೆ ಕಂಡು ಬಂದ ಅತ್ಯಂತ ಹಗುರವಾದ ದ್ರವ್ಯರಾಶಿಯ ಗ್ರಹಗಳಲ್ಲಿ ಒಂದಾಗಿದೆ. ಈ ಹೊಸ ಸದಸ್ಯ ಖಗೋಳಶಾಸ್ತ್ರಜ್ಞರ ಕತೂಹಲವನ್ನು ಇಮ್ಮಡಿಗೊಳಿಸಿದೆ. ಈ ಬಗ್ಗೆ ಸ್ಪೆಷಲ್ ರಿಪೋರ್ಟ್ ಇಲ್ಲಿದೆ ಓದಿ...

ಅಂತರ್ಜಾಲ ಚಿತ್ರ

ಅಂತರ್ಜಾಲ ಚಿತ್ರ

 • Share this:
  ಸೌರಮಂಡಲ (Solar System) ಮತ್ತು ಖಗೋಳ (Astronomy) ವಿಸ್ಮಯಗಳ ತಾಣ. ಇಲ್ಲಿ ಬಗೆದಷ್ಟು ಕೂತಹಲಕಾರಿ ವಿಚಾರಗಳು ಸಿಗುತ್ತವೆ. ಪ್ರಸ್ತುತ ಖಗೋಳಶಾಸ್ತ್ರಜ್ಞರು (Astronomers) ಹೊಸ ಗ್ರಹವೊಂದರ (New Planet) ಬಗ್ಗೆ ತಿಳಿದುಕೊಂಡಿದ್ದಾರೆ. ಸೂರ್ಯನಿಗೆ (Sun) ಸಮೀಪವಿರುವ ನಕ್ಷತ್ರದ (Satrs) ಸುತ್ತಲೂ ಈ ಹೊಸ ಗ್ರಹ ಪತ್ತೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ. ಕೇವಲ ನಾಲ್ಕು ಬೆಳಕಿನ ವರ್ಷಗಳ (Four Light Years) ದೂರದಲ್ಲಿದೆ ಎನ್ನಲಾಗಿದೆ. ಖಗೋಳಶಾಸ್ತ್ರಜ್ಞರ ತಂಡ ಚಿಲಿಯಲ್ಲಿ ಯುರೋಪಿಯನ್ ಸದರ್ನ್ ವೀಕ್ಷಣಾಲಯದ ಅತಿ ದೊಡ್ಡ ದೂರದರ್ಶಕ (ESO's VLT) ಬಳಸಿಕೊಂಡು ಹೊಸ ಗ್ರಹವಿರುವ ಬಗ್ಗೆ ಕಂಡುಕೊಂಡಿದ್ದಾರೆ. ಈ ಗ್ರಹವು ಪ್ರಾಕ್ಸಿಮಾ ಸೆಂಟಾರಿ ಬಳಿ ಸುತ್ತುತ್ತಿರುವ ಬಗ್ಗೆ ತಜ್ಞರು ಪುರಾವೆಗಳನ್ನು ಕಂಡುಕೊಂಡಿದ್ದಾರೆ. ಪ್ರಾಕ್ಸಿಮಾ ಸೆಂಟಾರಿ ನಮ್ಮ ಸೌರವ್ಯೂಹಕ್ಕೆ ಹತ್ತಿರವಿರುವ ನಕ್ಷತ್ರ. ಇದು ಸೂರ್ಯನಿಂದ 4.2465 ಜ್ಯೋತಿರ್‌ವರ್ಷ ದೂರದಲ್ಲಿದೆ. ಹೊಸಗ್ರಹಕ್ಕೆ ಪ್ರಾಕ್ಸಿಮಾ ಡಿ ಅಂತ ನಾಮಕರಣ

  ಖಗೋಳಶಾಸ್ತ್ರಜ್ಞರ ತಂಡ ಹೊಸದಾಗಿ ಪತ್ತೆಯಾದ ಗ್ರಹವನ್ನು ಪ್ರಾಕ್ಸಿಮಾ ಡಿ ಎಂದು ಹೆಸರಿಸಿದ್ದಾರೆ. ಸುಮಾರು ನಾಲ್ಕು ಮಿಲಿಯನ್ ಕಿಲೋಮೀಟರ್‌ಗಳು ದೂರದಲ್ಲಿ ಪ್ರಾಕ್ಸಿಮಾ ಸೆಂಟಾರಿ ನಕ್ಷತ್ರವನ್ನು ಈ ಹೊಸ ಪ್ರಾಕ್ಸಿಮಾ ಡಿ ಗ್ರಹ ಸುತ್ತುತ್ತಿದ್ದು, ಇದು ಸೂರ್ಯನಿಂದ ಬುಧದ ದೂರದ ಹತ್ತನೇ ಒಂದು ಭಾಗಕ್ಕಿಂತ ಕಡಿಮೆಯಾಗಿದೆ.

  ಇದು ತುಂಬಾ ಹಗುರವಾಗಿರುವ ಗ್ರಹ

  ಈ ಪತ್ತೆಯಾದ ಹೊಸ ಗ್ರಹವು ಪ್ರಾಕ್ಸಿಮಾ ಸೆಂಟಾರಿ ನಕ್ಷತ್ರವನ್ನು ಪರಿಭ್ರಮಿಸುವ ಮೂರನೇಯದ್ದಾಗಿದ್ದು, ಹಗುರವಾಗಿರುವ ಗ್ರಹವಾಗಿದೆ. ಅಷ್ಟೇ ಅಲ್ಲ ಭೂಮಿಯ ದ್ರವ್ಯರಾಶಿಯ ಕೇವಲ ಕಾಲು ಭಾಗದಷ್ಟು ಈ ಹೊಸ ಪ್ರಾಕ್ಸಿಮಾ ಡಿ ಗ್ರಹವೂ ಇದೆ.

  ಈ ಗ್ರಹವೂ ಇದುವರೆಗೆ ಕಂಡು ಬಂದ ಅತ್ಯಂತ ಹಗುರವಾದ ದ್ರವ್ಯರಾಶಿಯ ಗ್ರಹಗಳಲ್ಲಿ ಒಂದಾಗಿದೆ. ಈ ಸಂಶೋಧನೆ ಬಗ್ಗೆ ಖಗೋಳವಿಜ್ಞಾನ ಮತ್ತು ಆಸ್ಟ್ರೋಫಿಸಿಕ್ಸ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

  ಇದನ್ನೂ ಓದಿ: ರಾಜಪಥವನ್ನು ಬೆಳಗಿಸಿದ Droneಗಳನ್ನು ತಯಾರಿಸುವಲ್ಲಿ IIT ವಿಜ್ಞಾನಿಗಳಿಗೆ ಸಹಾಯ ಮಾಡಿದ್ದು ಪೊರಕೆ ತಯಾರಕರಂತೆ

  ಹೊಸ ಪ್ರಪಂಚದ ಬಗ್ಗೆ ಚಿಗುರಿದ ಭರವಸೆ

  "ನಮ್ಮ ಹತ್ತಿರದ ನಾಕ್ಷತ್ರಿಕ ನೆರೆಹೊರೆಯವರು ಕೂತುಹಲವಾದ ಹೊಸ ಪ್ರಪಂಚಗಳಿಂದ ತುಂಬಿರುವಂತೆ ತೋರುತ್ತಿದೆ” ಎಂದು ಆವಿಷ್ಕಾರವು ಹೇಳಿದೆ. ಇದು ಹೆಚ್ಚಿನ ಅಧ್ಯಯನ ಮತ್ತು ಭವಿಷ್ಯದ ಅನ್ವೇಷಣೆಯ ವ್ಯಾಪ್ತಿಯನ್ನು ತಲುಪುತ್ತದೆ ಎಂದು ಇನ್ಸ್ಟಿಟ್ಯೂಟೊ ಡಿ ಆಸ್ಟ್ರೋಫಿಸಿಕಾ ಇ ಸಂಶೋಧಕ ಜೋವೊ ಫರಿಯಾ ಹೇಳಿದರು.

  ಸೂರ್ಯನಿಂದ ಕೇವಲ 4 ಜ್ಯೋತಿರ್‌ವರ್ಷ ದೂರ

  ಪ್ರಾಕ್ಸಿಮಾ ಡಿ ಗ್ರಹವು ನಕ್ಷತ್ರ ಸೂರ್ಯ ಮತ್ತು ವಾಸಯೋಗ್ಯ ವಲಯ ಭೂಮಿ ನಡುವೆ ಪರಿಭ್ರಮಿಸುತ್ತದೆ. ಅಲ್ಲದೇ ಸೂರ್ಯನಿಂದ ಕೇವಲ 4 ಜ್ಯೋತಿರ್‌ ವರ್ಷ ದೂರದಲ್ಲಿ ಈ ಗ್ರಹವಿದೆ.

  ಒಂದು ಕಕ್ಷೆ ಸುತ್ತಲು 5 ದಿನ ಸಾಕು

  ಪ್ರಾಕ್ಸಿಮಾ ಸೆಂಟಾರಿಯ ಸುತ್ತ ಒಂದು ಕಕ್ಷೆಯನ್ನು ಪೂರ್ಣಗೊಳಿಸಲು ಈ ಗ್ರಹವು ಕೇವಲ ಐದು ದಿನಗಳನ್ನು ತೆಗೆದುಕೊಳ್ಳುತ್ತದೆ. ಈ ನಕ್ಷತ್ರ ವ್ಯವಸ್ಥೆಯು ಈಗಾಗಲೇ ಪ್ರಾಕ್ಸಿಮಾ ಬಿ ಮತ್ತು ಪ್ರಾಕ್ಸಿಮಾ ಸಿ ಈ ಎರಡು ಇತರ ಗ್ರಹಗಳನ್ನು ಹೊಂದಿದೆ.

  ಪ್ರಾಕ್ಸಿಮಾ ಬಿ ಈ ನಕ್ಷತ್ರಕ್ಕೆ ಹೋಲಿಸಬಹುದಾದ ದ್ರವ್ಯರಾಶಿಯನ್ನು ಹೊಂದಿರುವ ಗ್ರಹವಾಗಿದೆ. ಪ್ರತಿ 11 ದಿನಗಳಿಗೊಮ್ಮೆ ನಕ್ಷತ್ರವನ್ನು ಸುತ್ತುವ ಭೂಮಿಯ ಮತ್ತು ವಾಸಯೋಗ್ಯ ವಲಯದೊಳಗೆ ಕಂಡುಬರುತ್ತದೆ. ಮತ್ತು ಪ್ರಾಕ್ಸಿಮಾ ಸಿ ನಕ್ಷತ್ರದ ಸುತ್ತ ಐದು ವರ್ಷಗಳ ದೀರ್ಘ ಕಕ್ಷೆಯಲ್ಲಿ ಸುತ್ತುತ್ತದೆ.

  ಹೊಸ ಉಪಕರಣದ ಮೂಲಕ ಸಂಶೋಧನೆ

  ESO ನ 3.6-ಮೀಟರ್ ದೂರದರ್ಶಕದಲ್ಲಿ HARPS ಉಪಕರಣವನ್ನು ಬಳಸಿಕೊಂಡು ಕೆಲವು ವರ್ಷಗಳ ಹಿಂದೆ Proxima b ಅನ್ನು ಕಂಡುಹಿಡಿಯಲಾಯಿತು. ಹೊಸ ಉಪಕರಣದೊಂದಿಗೆ ಪ್ರಾಕ್ಸಿಮಾ ವ್ಯವಸ್ಥೆಯನ್ನು ವಿಜ್ಞಾನಿಗಳು ವೀಕ್ಷಿಸಿದಾಗ 2020ರಲ್ಲಿ ಈ ಆವಿಷ್ಕಾರವನ್ನು ದೃಢಪಡಿಸಲಾಯಿತು.

  ಈ ಇತ್ತೀಚಿನ VLT ಅವಲೋಕನಗಳ ಸಮಯದಲ್ಲಿ ಖಗೋಳಶಾಸ್ತ್ರಜ್ಞರು ಹೊಸ ಗ್ರಹದ ಸಂಕೇತದ ಮೊದಲ ಸುಳಿವುಗಳನ್ನು ಗುರುತಿಸಿದರು.

  ಇದನ್ನೂ ಓದಿ: Yoga ಅಲ್ಲ ಕಣ್ರೀ ಇದು 'ಡೋಗಾ'! ಯೋಗಾಸನ ಮಾಡುತ್ತೆ ನೋಡಿ ಈ ಶ್ವಾನ, ವೈರಲ್ ಆಗಿದೆ ವಿಡಿಯೋ

  ಹೊಸ ಅವಲೋಕನಗಳನ್ನು ಅಧ್ಯಯನ ಮಾಡಿದ ನಂತರ, ನಾವು ಈ ಸಂಕೇತವನ್ನು ಹೊಸ ಗ್ರಹದ ಸದಸ್ಯ ಎಂದು ಖಚಿತಪಡಿಸಲು ಸಾಧ್ಯವಾಯಿತು ಎಂದು ಫರಿಯಾ ಹೇಳಿದ್ದಾರೆ.

  ಪ್ರಾಕ್ಸಿಮಾ ಡಿ ಭೂಮಿಯ ದ್ರವ್ಯರಾಶಿಯ ಕೇವಲ ಕಾಲು ಭಾಗದಷ್ಟಿದ್ದು, ರೇಡಿಯಲ್ ಬಳಸಿ ಅಳೆಯಲಾದ ಅತ್ಯಂತ ಹಗುರವಾದ ಎಕ್ಸೋಪ್ಲಾನೆಟ್ ಆಗಿದೆ. ಇದರ ವೇಗ ತಂತ್ರ, ಇತ್ತೀಚೆಗೆ L 98-59 ಗ್ರಹಗಳ ವ್ಯವಸ್ಥೆಯಲ್ಲಿ ಪತ್ತೆಯಾದ ಗ್ರಹವನ್ನು ಮೀರಿಸುತ್ತದೆ ಎಂದು ಖಗೋಳ ತಜ್ಞರು ತಿಳಿಸಿದ್ದಾರೆ.
  Published by:Annappa Achari
  First published: