ಮನೆಯಲ್ಲಿ ಯಾವುದಾದ್ರೂ ವಸ್ತುಗಳು ಖಾಲಿ ಆಯ್ತು ಅಂದ್ರೆ ಅಥವಾ ಫುಡ್ ರೆಡಿ (Food Ready) ಮಾಡಲು ಬೋರ್ ಆಯ್ತು ಅಂದ್ರೆ ನಗರದ ಕೆಲವೊಂದಷ್ಟು ಪ್ರದೇಶಗಳಲ್ಲಿ ಆನ್ಲೈನ್ ಫುಡ್ಗಳೇ ಹೊಟ್ಟೆ ಪಾಡಾಗಿದೆ. ಮೊಬೈಲ್ನಲ್ಲೇ ಯಾವ ರೀತಿಯಾದಂತಹ ಫುಡ್ ಗಳು ಬೇಕು ಎಲ್ಲವನ್ನ ಕ್ಷಣ ಮಾತ್ರದಲ್ಲಿ ಆರ್ಡರ್ ಮಾಡಿಕೊಂಡು ತಿನ್ನಬಹುದು. ಅಂತಹ ಕಾಲದಲ್ಲಿ ನಾವಿದ್ದೇವೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಸ್ವಿಗ್ಗಿ(Swiggy), ಝೊಮ್ಯಾಟೊಗಳದ್ದೇ (Zomato) ಹಾವಳಿ ಅಂತ ಹೇಳಿದ್ರು ತಪ್ಪಾಗಲಾರದು. ಇದೀಗ ಇದೆ ಆನ್ಲೈನ್ ಫುಡ್ ಡೆಲಿವರಿಯಾ ಕುರಿತಾಗಿ ಒಂದು ವಿಷಯ ಸಕ್ಕತ್ ವೈರಲ್ ಆಗ್ತಾ ಇದೆ. ಏನು ಅಂತ ಕೇಳಿದ್ರೆ ನೀವು ಕೂಡ ಶಾಕ್ ಆಗ್ತೀರಾ!
ಈ ಆನ್ಲೈನ್ ಡೆಲಿವರಿಯ ಮೂಲಕ ತರಕಾರಿಗಳನ್ನು ಕೂಡ ಖಾರಿದೆಸಬಹುದು. ಅಷ್ಟರ ಮಟ್ಟಿಗೆ ಟೆಕ್ನಾಲಜಿ ಮುಂದುವರೆದಿದೆ. ಜನಸಾಮಾನ್ಯರಿಗೆ ಹೆಲ್ಪ್ ಆಗ್ಲಿ ಅಂತ ಈ ಪ್ರತಿಯೊಂದು ಯೋಜನೆಗಳು ಬರ್ತಾ ಇದೆ. ಇದನ್ನ ಯುಟಿಲಿಸ್ ಮಾಡಿಕೊಳ್ಳುವುದು ಜನರದ್ದೆ ಕರ್ತವ್ಯ ಅಂತ ಹೇಳಬಹುದು.
ಈ ಹಿಂದೆ ಸ್ವಿಗ್ಗಿ ಕೂಡ ಒಂದು ವಿಷಯದಲ್ಲಿ ತುಂಬಾ ಪಾಪ್ಯುಲರ್ ಆಗಿತ್ತು. ಸ್ವಿಗ್ಗಿಯ ಮೂಲಕ ಹುಡುಗಿಯರು ತಮ್ಮ ಪೇರೆಂಟ್ಸ್ ಟೈಮ್ನಲ್ಲಿ ಸ್ಯಾನಿಟರಿ ಪ್ಯಾಡ್ ಅನ್ನು ಆರ್ಡರ್ ಮಾಡಿದ್ರೆ ಅದರ ಜೊತೆ ಫ್ರೀಯಾಗಿ ಡಾರ್ಕ್ ಚಾಕಲೇಟ್ ಕೂಡ ಬರುತ್ತೆ ಅಂತ ವೈರಲ್ ಆಗಿತ್ತು. ಇದು ಸತ್ಯ ಕೂಡ. ಪಿರಿಯಡ್ಸ್ ಸಮಯದಲ್ಲಿ ನೋವು ಇರುವುದು ಕಾಮನ್. ಹೀಗಾಗಿ ಸ್ವಿಗ್ಗಿ ಡಾರ್ಕ್ ಚಾಕಲೇಟನ್ನ ಕೊಡಲು ಮುಂದಾಗಿತ್ತು.
ಇದನ್ನೂ ಓದಿ: ನಷ್ಟದ ಸುಳಿಯಲ್ಲಿ ಸಿಲುಕಿದ ಮತ್ತೊಂದು ಕಂಪನಿ, 225 ನಗರಗಳಲ್ಲಿ ಝೊಮ್ಯಾಟೊ ಸೇವೆ ಸ್ಥಗಿತ!
ಸ್ವಿಗ್ಗಿ ಮತ್ತು ಝೊಮ್ಯಾಟೊ ಪಾಸಿಟಿವ್ ಆಗಿ ಸ್ಟೋರಿ ಆಗ್ತಾವೋ ಅದೇ ರೀತಿಯಾಗಿ ನೆಗೆಟಿವ್ ಆಗಿ ಕೂಡ ಹಲವಾರು ಬಾರಿ ವೈರಲಾಗಿತ್ತು. ಅವರ ತಪ್ಪುಗಳನ್ನೆಲ್ಲ ತಿದ್ದುಕೊಂಡು ಹೋಗ್ತಾರೆ ಎಂಬುದೇ ಜನರ ನಂಬಿಕೆ. ಇದರ ಮಧ್ಯೆ ಇದೀಗ ಮತ್ತೊಂದು ತಪ್ಪು ನಡೆದೆ ಬಿಟ್ಟಿದೆ.
ಏನಿದು ಘಟನೆ?
ಮಲ್ಲೇಶ್ವರಂನ 28ರ ಹರೆಯದ ವ್ಯಕ್ತಿಯೊಬ್ಬರು ಝೊಮ್ಯಾಟೋದಲ್ಲಿ ಚೋಲೆ ಥಾಲಿಯನ್ನು ಆರ್ಡರ್ ಮಾಡಿದ್ದರು. ಆದರೆ ಎಷ್ಟು ಹೊತ್ತಾದರೂ ಅವರ ಆರ್ಡರ್ ಕೈ ಸೇರಿಲ್ಲ. ಹೀಗಾಗಿ ಹೊಟೇಲ್ ಮತ್ತು ಝೊಮ್ಯಾಟೊ ವಿರುದ್ಧ ಆಹಾರ ವಿತರಣಾ ವೇದಿಕೆ ಮತ್ತು ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದು, ಸಂಗ್ರಾಹಕ ಮತ್ತು ರೆಸ್ಟೋರೆಂಟ್‌ಗೆ ಜಂಟಿಯಾಗಿ 3,000 ರೂಪಾಯಿ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಏಪ್ರಿಲ್ 14ರಂದು ಅಭಿಷೇಕ್ ಎಂ.ಆರ್ ಎಂಬವರು ಝೊಮ್ಯಾಟೋದಲ್ಲಿ ಅಮೃತಸರ ಚೋಲೆ ಬಟೂರೆಯನ್ನು ಆರ್ಡರ್ ಮಾಡಿದ್ದರು. ರಾಜಾಜಿನಗರದ ಬಾಕ್ಸ್ 8 ದೇಸಿ ಮಸಾಲ ರೆಸ್ಟೋರೆಂಟ್‌ನಿಂದ ಇದನ್ನು ಆರ್ಡರ್ ಮಾಡಲಾಗಿತ್ತು. ರಾತ್ರಿ 8.46ಕ್ಕೆ ಅಭಿಷೇಕ್ 256 ರೂ. ಪಾವತಿಸಿ ಫುಡ್ ಆರ್ಡರ್ ಮಾಡಿದ್ದರು. ಆದ್ರೆ ಸಮಯ ರಾತ್ರಿ 9.45 ಆದರೂ ಫುಡ್ ಡೆಲಿವರಿ ಆಗಿಲ್ಲ. ಈ ಬಗ್ಗೆ ಝೊಮ್ಯಾಟೊ ಏಜೆಂಟ್‌ಗೆ ಕರೆ ಮಾಡಿ ವಿಚಾರಿದರೂ ಯಾವುದೇ ಸ್ಪಷ್ಟ ಉತ್ತರ ಸಿಕ್ಕಿರಲ್ಲಿಲ್ಲ.
ಈ ಪ್ರಕರಣದ ಬಗ್ಗೆ ತಿಳಿದ ಫುಡ್ ಡೆಲಿವರಿ ಆಪ್ ತನ್ನಿಂದಾದ ತಪ್ಪಿಗೆ ಕ್ಷಮೆಯಾಚಿಸಿದ್ದು, ಹಣವನ್ನು ರಿಫಂಡ್ ಮಾಡಿದೆ. ಮಾತ್ರವಲ್ಲ ವಾಲೆಟ್‌ಗೆ ಸಾವಿರ ರೂಪಾಯಿಯನ್ನು ಕ್ರೆಡಿಟ್ ಮಾಡಿದೆ. ಆದರೆ ಅಭಿಷೇಕ್ ಈ ಕುರಿತು ನ್ಯಾಯಾಲಯಕ್ಕೆ ದೂರು ನೀಡಲು ನಿರ್ಧರಿಸಿದರು ಮತ್ತು ಒಂದು ಲಕ್ಷ ಪರಿಹಾರ ಕೋರಿ ಅರ್ಜಿ ಸಲ್ಲಿಸಿದರು. ಆದರೆ ಜೊಮ್ಯಾಟೋದ ಲಾಯರ್ ಇಷ್ಟು ಮೊತ್ತದ ಪರಿಹಾರವನ್ನು ನೀಡಲು ನಿರಾಕರಿಸುವುದಾಗಿ ಹೇಳಿದರು. ರೆಸ್ಟೋರೆಂಟ್‌ನ ತಪ್ಪಿನಿಂದ ಹೀಗಾಗಿದ್ದು, ಝೊಮ್ಯಾಟೊ ಇದಕ್ಕಾಗಿ ಈಗಾಗಲೇ ಒಂದು ಸಾವಿರ ರೂ. ನೀಡಿದೆ ಎಂದು ತಿಳಿಸಿದರು.
ಆದರೆ ಡಿಸೆಂಬರ್ 31, 2022ರಂದು ನೀಡಿದ ಕೋರ್ಟ್‌ನಲ್ಲಿ ನ್ಯಾಯಾಲಯ ಜೊಮ್ಯಾಟೋ ಸಂಸ್ಥೆ ವ್ಯಕ್ತಿಗೆ ಮೂರು ಸಾವಿರ ಪಾವತಿಸುವಂತೆ ಸೂಚಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ