ಮದುವೆಯ(marriage) ಬಗ್ಗೆ ಪ್ರತಿಯೊಬ್ಬರಲ್ಲೂ ತಮ್ಮದೇ ಆದ ಕನಸುಗಳಿರುತ್ತವೆ(Dream)..ಮದುವೆಯ ದಿನ ಹೀಗೆ ಕಾಣಿಸಿಕೊಳ್ಳಬೇಕು ಹಾಗೆ ಕಾಣಿಸಿಕೊಳ್ಳಬೇಕು ಎಂಬ ಆಸೆ ಆಕಾಂಕ್ಷೆ ಇರುತ್ತದೆ.. ಇದಕ್ಕಾಗಿ ತಿಂಗಳಿನಿಂದಲೇ(Months) ಮೊದಲೇ ತಯಾರಿ ನಡೆಸಿಕೊಂಡಿರುತ್ತಾರೆ.. ಅದರಲ್ಲೂ ಹೆಣ್ಣು ಮಕ್ಕಳ ಪಾಲಿಗೆ ಮಹತ್ವದ ದಿನವಾಗಿರುವ ಕಾರಣ, ಹೆಣ್ಣುಮಕ್ಕಳು ಎಷ್ಟು ಸಾಧ್ಯವೋ ಅಷ್ಟು ಸುಂದರವಾಗಿ ಕಾಣಿಸಿಕೊಳ್ಳಲು ಬಯಸುತ್ತಾರೆ. ಹೀಗಾಗಿ ತಮ್ಮ ಸೌಂದರ್ಯ(Beauty) ಕಾಳಜಿ ಮಾಡುವ ಹೆಣ್ಣು ಮಕ್ಕಳು, ತೊಡುವ ಉಡುಗೆಯಿಂದ ಮೇಕಪ್ ವರೆಗೂ ಸಾಕಷ್ಟು ಜಾಗೃತಿ ವಹಿಸಿರುತ್ತಾರೆ.. ಹೀಗಾಗಿ ಮದುಮಗಳು(Bride) ಮದುವೆ ಸೀರೆ ಡಿಸೈನ್ಗೆ ಪ್ರತ್ಯೇಕ ಬೊಟಿಕ್, ಮೇಕಪ್ಗೆ ಹೆಸರಾಂತ ಬ್ಯೂಟಿಷಿಯನ್, ಮೇಕಪ್ ಆರ್ಟಿಸ್ಟ್ಗಳನ್ನು ಮೊದಲೇ ಬುಕ್ ಮಾಡಿಕೊಳ್ಳುತ್ತಾರೆ. ಸ್ವರ್ಗದ ಅಪ್ಸರೆ ಯರೇ ಕೆಳಗಿಳಿದು ಬಂದರೇನು ಹೇಳುವಂತೆ ತಮ್ಮ ವಿವಾಹದ ದಿನ ಹೆಣ್ಣುಮಕ್ಕಳು ಕಾಣಿಸಿಕೊಳ್ಳುತ್ತಾರೆ.. ಇದಕ್ಕಾಗಿ ಸಾಕಷ್ಟು ದುಡ್ಡು ಕೂಡ ಖರ್ಚು ಮಾಡಿರುತ್ತಾರೆ.. ಆದರೆ ಇಂಥವರ ಮಧ್ಯೆ ವಿಭಿನ್ನ ಎನ್ನುವಂತೆ, ತನ್ನ ವಾಸ್ತವವನ್ನು ಮರೆಮಾಚದೆ ಹೆಣ್ಣುಮಗಳೊಬ್ಬಳು ಮದುವೆಯಾಗಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ..
ತಲೆಯಲ್ಲಿ ಬಿಳಿ ಕೂದಲು ಇದ್ದರೂ ಮದುವೆ ಮಂಟಪಕ್ಕೆ ಬಂದ ವಧು
ತಲೆಯಲ್ಲಿ ಒಂದು ಬೆಳ್ಳಿ ಕೂದಲು ಕಾಣಿಸಿಕೊಂಡರೆ ಆಕಾಶವೇ ಕಳಚಿ ಬಿತ್ತು ಎನ್ನುವಂತೆ ಆಡುವ ಹೆಣ್ಣು ಮಕ್ಕಳ ಮುಂದೆ, ಯುವತಿಯೊಬ್ಬಳು ತಲೆತುಂಬಾ ಬಿಳಿ ಕೂದಲು ಇದ್ದರೂ ಸಹ ತಲೆಕೆಡಿಸಿಕೊಳ್ಳದೆ ನಾನು ಇರುವುದು ಹೀಗೆ ಎನ್ನುವಂತೆ ಮದುವೆ ಮಂಟಪಕ್ಕೆ ಬಂದು ಮದುವೆಯಾಗಿದ್ದಾಳೆ.. ಝಗಮಗಿಸುವ ಲೆಹಂಗಾ, ಸೀರೆ, ಹೆವಿ ಮೇಕಪ್, ಆಭರಣ ಲಕ್ಷಾಂತರ ರೂ. ಖರ್ಚು ಮಾಡದೆ ಮದುವೆ ಆಗಲು ಸಾಧ್ಯವೇ ಇಲ್ಲವೇನೋ ಎನ್ನುವ ಕಾಲದಲ್ಲಿ ಮದುಮಗಳು ಸಹಜವಾಗಿಯೇ, ಮದುವೆಯಾಗಿವುದು ಈಗ ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಹೌದು, ಹಿಂದಿ ಧಾರಾವಾಹಿ 'ತಾರಕ್ ಮೆಹ್ತಾ' ನಟ ದಿಲೀಪ್ ಜೋಶಿಯವರ ಮಗಳು ಮದುವೆ ಮಂಟಪದಲ್ಲಿ ಸಹಜವಾಗಿ ತಲೆಯಲ್ಲಿರುವ ಬಿಳಿ ಕೂದಲಿನೊಂದಿಗೇ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಹಿಂದಿ ಕಿರುತೆರೆ ನಟ ದಿಲೀಪ್ ಜೋಶಿಯವರು ಸುಂದರವಾಗಿ ರೆಡಿಯಾದ ತಮ್ಮ ಮಗಳು ನಿಯತಿ ಜತೆ ಮದುವೆ ಮನೆಯಲ್ಲಿ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಿದ್ದಾರೆ.
ಇದನ್ನೂ ಓದಿ: ಈ ದೇಶದಲ್ಲಿ 12 ವರ್ಷದವರಿಗೂ ಮದುವೆ; ಚೀನಾ ಸೇರಿ ವಿವಿಧ ದೇಶಗಳಲ್ಲಿ ಹೀಗಿದೆ ಸ್ಥಿತಿ
ಬೋಲ್ಡ್ ನಡೆಯಿಂದಲೇ ಗಮನ ಸೆಳೆದ ಮದುಮಗಳು
ದಿಲೀಪ್ ಪುತ್ರಿ ನಿಯತಿ ಯಶೋವರ್ಧನ್ ಮಿಶ್ರ ಎನ್ನುವವರ ಜೊತೆ ಗುಜರಾತಿ ಸಂಪ್ರದಾಯದಂತೆಯೇ ನಾಸಿಕ್ ನಲ್ಲಿ ವೈವಾಹಿಕ ಬಂಧನಕ್ಕೆ ಕಾಲಿಟ್ಟರು.ಎಲ್ಲಾ ಮದುವೆ ಗಳಂತೆ ಮದುವೆ ಸಹ ಅದ್ದೂರಿಯಾಗಿ ನಡೆದರು, ಮದುವೆಯಲ್ಲಿ ಆಕರ್ಷಣೆ ಅನಿಸಿದ್ದು ಮಾತ್ರ ವಧುವಿನ ಬೋಲ್ಡ್ ಲುಕ್.ಲಕ್ಷ ಲಕ್ಷ ಕೊಟ್ಟು ಮದುವೆಗಾಗಿ ರೆಡಿಯಾಗುವ ಹೆಣ್ಣುಮಕ್ಕಳ ಮುಂದೆ, ತನ್ನ ತಲೆಯಲ್ಲಿ ಮೂಡಿದ ಬಿಳಿಕೂದಲಿಗೆ ಯಾವುದೇ ರೀತಿಯ ಕಲರಿಂಗ್ ಮಾಡಿಸಿದೆ ನಿಯತಿ ಮಂಟಪಕ್ಕೆ ಬಂದಿದ್ದಾರೆ.. ನಿಯತಿಯ ಬೋಲ್ಡ್ ನಡೆ ನೋಡಿ ಮದುವೆ ಮಂಟಪದಲ್ಲಿ ಇದ್ದವರೆಲ್ಲರೂ ಅಚ್ಚರಿಗೊಂಡಿದ್ದಾರೆ .
ವೈರಲ್ ಆಗುತ್ತಿರುವ ನಿಯತಿಯ ಬ್ರೈಡಲ್ ಲುಕ್
ಫೋಟೋದಲ್ಲಿ ಮದುಮಗಳು ನಿಯತಿ ಬನಾರಸಿ ಸೀರೆಯುಟ್ಟು, ಆಭರಣಗಳು ಧರಿಸಿ ಮೇಕಪ್ ಮಾಡಿಕೊಂಡಿದ್ದರೂ ಕೂದಲಿಗೆ ಕೃತಕ ಬಣ್ಣ ಹಚ್ಚಿಕೊಂಡಿಲ್ಲ. ಬದಲಾಗಿ ತಮ್ಮ ಬಿಳಿ ಕೂದಲಿನ ಮೇಲೆಯೇ ಮಾಂಗ್ ಟೀಕಾ ಆಭರಣವನ್ನು ಧರಿಸಿದ್ದಾರೆ. ಈ ಮೂಲಕ ಮದುಮಗಳು ಅಂದರೆ ಹೀಗೆ ಇರಬೇಕು ಅನ್ನೋ ಸ್ಟೀರಿಯೋ ಟೈಪ್ ಮನೋಭಾವವನ್ನು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಯೋಜನೆಯ ಲಾಭ ಪಡೆಯಲು ಸ್ವಂತ ತಂಗಿಯನ್ನೇ ಮದುವೆಯಾದ ಅಣ್ಣ
ಮದುಮಗಳು ನಿಯತಿ ಫೋಟೋಗೆ ಸಾವಿರಾರು ಲೈಕ್ಸ್, ಕಮೆಂಟ್ಸ್ ಬಂದಿದ್ದು ಹಲವರು ಬ್ಯೂಟಿಫುಲ್, ಪ್ರೆಟ್ಟೀ, ಗಾರ್ಜಿಯಸ್ ಬ್ರೈಡ್ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು, ನಿಮ್ಮ ಸೌಂದರ್ಯದ ಬಗ್ಗೆ ನಿಮಗಿರುವ ಆತ್ಮವಿಶ್ವಾಸ. ಬಿಳಿ ಕೂದಲಿನಲ್ಲೇ ನೀವು ಮದುಮಗಳಾಗಿ ಸಿದ್ಧಗೊಂಡಿರುವ ರೀತಿ ಮೆಚ್ಚುವಂತದ್ದು ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬರು ತಮ್ಮ ಕಮೆಂಟ್ನಲ್ಲಿ ಎಲ್ಲರೂ ಯಾರನ್ನೋ ಮೆಚ್ಚಿಸಲು ರೆಡಿಯಾಗುವ ಈ ದಿನಗಳಲ್ಲಿ ನೀವು ಯಾರನ್ನೂ ಮೆಚ್ಚಿಸದೆ ನಿಮ್ಮ ಖುಷಿಗಾಗಿ ರೆಡಿಯಾಗಿರುವುದು ಅತ್ಯಂತ ಖುಷಿಯ ವಿಚಾರ ಎಂದು ಕಮೆಂಟಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ