• Home
  • »
  • News
  • »
  • trend
  • »
  • Jacket Rate: ಕ್ಯಾಬೇಜ್​ನಂತೆ ಇರುವ ಜಾಕೆಟ್​ ನಿಮ್ಗೆ ಬೇಕಾ? ಹಾಗಾದ್ರೆ 60 ಸಾವಿರ ರೂಪಾಯಿ ರೆಡಿಮಾಡಿಕೊಳ್ಳಿ!

Jacket Rate: ಕ್ಯಾಬೇಜ್​ನಂತೆ ಇರುವ ಜಾಕೆಟ್​ ನಿಮ್ಗೆ ಬೇಕಾ? ಹಾಗಾದ್ರೆ 60 ಸಾವಿರ ರೂಪಾಯಿ ರೆಡಿಮಾಡಿಕೊಳ್ಳಿ!

ಕ್ಯಾಬೆಜ್​ ಜಾಕೆಟ್​

ಕ್ಯಾಬೆಜ್​ ಜಾಕೆಟ್​

ನಿಮ್​ ಜೊತೆ ಜಾಕೆಟ್​ ಇದ್ಯಾ? ಎಷ್ಟು ಬೆಲೆ ಬಾಳುವ ಜಾಕೆಟ್​ ಅದು? ಯಾಕಂದ್ರೆ ಒಲ್ಲೊಂದು ಜಾಕೆಟ್ನ ರೇಟ್​​ ಸಖತ್​ ವೈರಲ್​ ಆಗ್ತಾ ಇದೆ

  • Share this:

ಚಳಿಗಾಲದಲ್ಲಿ (Winter Seson) ನಾವಿದ್ದೇವೆ. ಒಂದು ದಿನಕ್ಕಿಂತ ಇನ್ನೊಂದು ದಿನಕ್ಕೆ ಚಳಿಯು ಹೆಚ್ಚಾಗ್ತಾ ಇರುತ್ತದೆ. ಹಾಗಾದ್ರೆ ಚಳಿಗಾಲದ ಸಮಯದಲ್ಲಿ ನೀವು ನಿಮ್ಮನ್ನು ಬೆಚ್ಚಗೆ ಇರುಸಿಕೊಳ್ಳಲು ಏನು ಮಾಡ್ತೀರಾ? ಚಹಾ, ಕಾಫಿ ಕುಡಿತೀರಾ? ಅಥವಾ ಬಿಸಿ ಪಾನೀಯಗಳನ್ನು (Drinks) ಕುಡಿತೀರಾ? ಇನ್ನೂ ಬೆಚ್ಚಗೆ ಇರಲು ಸ್ವೆಟರ್​, ಸಾಕ್ಸ್​ಗಳನ್ನು ಹಾಕಿಕೊಳ್ಳುತ್ತೀರ ಅಲ್ವಾ? ಮೊದಲೆಲ್ಲಾ ಕಂಬಳಿ, ರಗ್ಗು, ಶಾಲುಗಳನ್ನು ಹೊದ್ದುಕೊಳ್ಳುತ್ತಾ ಇದ್ದರು. ಆದರೆ, ಈಗ ಜರ್ಕಿನ್​, ಸಾಕ್ಸ್​, ಗ್ಲೌಸ್​ ಮತ್ತು ನಾನಾ ರೀತಿಯ ಉಣ್ಣೆ ಬಟ್ಟೆಗಳು ಮಾರುಕಟ್ಟೆಗಳಿಗೆ ಲಗ್ಗೆ ಇಟ್ಟಿದೆ. ಇನ್ನೂ ಕೆಲವೊಬ್ಬರಿಗೆ ಬ್ರ್ಯಾಂಡೆಡ್​ಸ್ವೆಟರ್​, ಜಾಕೆಟ್​ಗಳನ್ನು ಹಾಕಬೇಕು ಅಂತ ಇರುತ್ತೆ ಅಲ್ವಾ?


ಈ ಬ್ಯಾಂಡೆಡ್​   ಜಾಕೆಟ್​ ಮತ್ತು ಸ್ವೆಟರ್​ಗಳಿಗೆ ನೀವು ಎಷ್ಟು ಹಣವನ್ನು ಕೊಟ್ಟಿರ್ತೀರಾ?  ಅಬ್ಬಬ್ಬಾ ಅಂದ್ರೂ 2 ಸಾವಿರ, ಹೆಚ್ಚು ಅಂದ್ರೂ 6ಸಾವಿರ ಅಲ್ವಾ? ಇದನ್ನು  ಕೇಳ್ತಾನೇ ನಮ್ಮ ಹಿರಿಯರಿಗೆ ಶಾಕ್​ ಆಗಿರುತ್ತೆ. ಯಾಕಂದ್ರೆ, ಒಂದು ಚಳಿಯಿಂದ ರಕ್ಷಣೆ ಪಡೆಯಲು ಇಷ್ಟೆಲ್ಲಾ ದುಬಾರಿ ಹಣವನ್ನು ವ್ಯರ್ಥ ಮಾಡ್ಬೇಕಾ? ಅಂತ.


ನಿಜ, ಅದೆಷ್ಟೋ ಬಾರಿ ನಿಮಗೂ ಕೂಡ ಹೀಗೆ ಅನಿಸಿದ್ಯಾ? ಒಂದು ದೇಹದವನ್ನು ಬೆಚ್ಚಗೆ ಇಡಲು ಅಥವಾ ಮುಖಕ್ಕೆ ಕ್ರೀಮ್​ಗಳನ್ನು ಲೇಪನ ಮಾಡಲು ಇಷ್ಟೆಲ್ಲಾ ದುಂದುವೆಚ್ಚ ಮಾಡಬೇಕಾ ಅಂತ ನಿಮಗೂ ಅನಿಸಿದ್ಯಾ? ಆದ್ರೂ ಕೂಡ ಸಾಕಷ್ಟು ಹಣವನ್ನು ಕೊಟ್ಟು ತಗೋತೀರ. ಯಾಕಂದ್ರೆ ಸಮಾಜಕ್ಕಾಗಿ, ಅದರ ಬ್ರ್ಯಾಂಡ್​ಗಾಗಿ.


ಡೆಕಾತ್ಲಾನ್​, ಪೂಮಾ, ಲಿವೀಸ್​, ವುಡ್​ಲ್ಯಾಂಡ್​ ಈ ರೀತಿಯಾದ ಹಲವಾರು ಬ್ರ್ಯಾಂಡ್​ಗಳಿವೆ. ಅದರಲ್ಲಿ  ಡೀಸಲ್​ ಕಂಪನಿ ಕೂಡ ಒಂದು. ನಾನಾ ರೀತಿಯ  ವಸ್ತ್ರವಿನ್ಯಾಸಗಳನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ತಂದು ಕೊಡುವಲ್ಲಿ ಈ ಡೀಸಲ್​ ಕಂಪನಿ ಎತ್ತಿದ ಕೈ ಅಂತಾನೆ ಹೇಳಬಹುದು.


ಆದರೆ ಈ ಕಂಪನಿ ಬಿಡುಗಡೆಮಾಡಿದ ಒಂದ ಜಾಕೆಟ್​ ಬಾರೀ ಸದ್ದನ್ನು ಮಾಡ್ತಾ ಇದೆ. ಯಾಕೆ ಗೊತ್ತಾ? ಹೂಕೋಸು/ ಕ್ಯಾಬೇಜಿನ ಹಾಗೆ ಇರುವ ಜಾಕೆಟ್​. ಯೆಸ್​, ನೋಡಲು ಸೇಮ್​ ಕ್ಯಾಬೇಜಿನ ಹಾಗೆಯೇ ಇರುವ ಈ ಜಾಕೆಟ್ನನ್ನು ಡೀಸಲ್​ ಕಂಪೆನಿ ಬಿಡುಗಡೆ ಮಾಡಿದೆ. ಇದನ್ನು ಹಾಕಿಕೊಂಡು ಹೋಗ್ತಾ ಇದ್ರೆ, ಅಯ್ಯೋ ಕ್ಯಾಬೇಜ್​ ಬಂತೇನೋ ಅಂತ ಅನಿಸ್ಬೋದು.  ಈ ರೀತಿಯಾಗಿದೆ ಜಾಕೆಟ್​.


ಕೇವಲ ಇಷ್ಟೇ ಆಗಿದಿದ್ರೆ ಮ್ಯಾಟರ್​ ಆಗ್ತಾ ಇರ್ಲಿಲ್ವೇನೋ? ಇದರ ಬೆಲೆಯನ್ನು ಕೇಳಿದ್ರೆ ನಿಜಕೂ ತಲೆ ತಿರುಗುತ್ತೆ. ಯಾಕೆ ಅಂದ್ರೆ ನೋಡಲು ಕ್ಯಾಬೆಜ್​ ತರ ಇರುವ  ಜಾಕೆಟ್​ನ ಬೆಲೆ ಬರೋಬ್ಬರಿ 60, ಸಾವಿರ ರೂಪಾಯಿಯಂತೆ. ಈ ಸುದ್ಧಿ ಕೇಳಿ ಉಫ್​! ಒಂದು ದೇಹವನ್ನು ಮುಚ್ಚಲು, ಚಳಿಯಿಂದ ಪಾರಾಗಲು 60 ಸಾವಿರ ರುಪಾಯಿಗಳನ್ನು ಕೊಡಬೇಕಾ ಅಂತ ಹುಬ್ಬೇರಿಸಿದ್ರಾ?  ಈ ವಿಷ್ಯನೇ ಈಗ ಭಾರೀ ಚರ್ಚೆಗೆ ಭಾಗಿ ಆಗಿರುವುದು.


ಇದು ಎಷ್ಟು ಜನರು ತಗೊಂಡ್ರೋ ಬಿಟ್ರೋ ಗೊತ್ತಿಲ್ಲ. ಆದರೆ ಈ ರೇಟ್​ಗೆ ಅಂತೂ  ಸಖತ್  ಪಾಪ್ಯುಲರ್​ ಸಿಗ್ತಾ ಇದೆ. ಇದನ್ನು ನಮ್ಮ ಹಿರಿಯರಿಗೆ ಹೇಳಿದ್ರೆ ಮಾತ್ರ ಅವರೂ ಕೂಡ ಶಾಕ್​ ಆಗ್ತಾರೆ. ಕೇವಲ ಒಂದು ಜಾಕೆಟ್​ ಅಥವಾ ಸ್ವೆಟರ್​ಗೆ 60 ಸಾವಿರ ಅಂದ್ರೆ ಸುಮ್ಮನೆನಾ? ಅಂತ.


ಇದನ್ನೂ ಓದಿ: ಸೀರೆಯನ್ನು ಉಟ್ಟುಕೊಂಡು ಸಖತ್ತಾಗಿ ಜಿಮ್​ನಲ್ಲಿ ವರ್ಕ್​ಔಟ್​ ಮಾಡಿದ ಮಹಿಳೆ!


ಜಾಕೆಟ್​ ಕ್ಯಾಬೇಜ್​ನಂತೆ ಕಾಣಲು ರೂ. 60,000 ತೆರಬೇಕೆ? ಎಂಬ ಶೀರ್ಷಿಕೆಯೊಂದಿಗೆ ಈ ಫೋಟೋ ಟ್ವೀಟ್ ಮಾಡಲಾಗಿದೆ. ಮೂರು ದಿನಗಳ ಹಿಂದೆ ಅಪ್​ಲೋಡ್ ಮಾಡಲಾದ ಈ ಪೋಸ್ಟ್​ ಗೆ ಅನೇಕರು ಪ್ರತಿಕ್ರಿಯಿಸಿದ್ದಾರೆ. ಈ ಬೆಲೆಯಲ್ಲಿ ಆ್ಯಕ್ಟಿವಾ ಗಾಡಿ ಖರೀದಿಸಬಹುದಿತ್ತು. ಯಾರು ಇಷ್ಟು ದುಬಾರಿ ಜಾಕೆಟ್​ ಖರೀದಿಸುತ್ತಾರೆ? ಎಂದು ಕೇಳುತ್ತಿದ್ದಾರೆ ನೆಟ್ಟಿಗರು.ರೂ. 2,000 ಬೆಲೆಯ ಜಾಕೆಟ್​ ಇದು, ಉಳಿದದ್ದು ರೂ. 58,000 ಬ್ರ್ಯಾಂಡಿಂಗ್​. ನೋಡಿ ಬ್ರ್ಯಾಂಡ್ ಹೇಗೆ ಕೆಲಸ ಮಾಡುತ್ತದೆ ಎಂದಿದ್ದಾರೆ ಒಬ್ಬರು. ಕ್ಯಾಬೇಜ್​ನ ಎಲೆಗಳು ಕೂಡ ತಾಜಾತನದಿಂದ ಕೂಡಿಲ್ಲವಲ್ಲ ಎಂದಿದ್ದಾರೆ ಮತ್ತೊಬ್ಬರು. ಇದರ ಬದಲಾಗಿ ಆದಿಮಾನವನಂತೆ ಎಲೆ ಹೊದ್ದುಕೊಂಡಿರುವುದು ಉತ್ತಮ ಎಂದಿದ್ಧಾರೆ ಮಗದೊಬ್ಬರು. ಒಟ್ಟಿನಲ್ಲಿ ಈ ಬ್ರ್ಯಾಂಡ್​ ಸಖತ್​ ಚರ್ಚೆಗಂತೂ ಪಾತ್ರವಾಗಿದೆ ಅಂತ ಹೇಳಬಹುದು.

First published: