IPL 2018: ಆರ್​ಸಿಬಿಗೆ ಪ್ಲೇಆಫ್​ ಕನಸು ಇನ್ನೂ ಜೀವಂತ?!

news18
Updated:May 9, 2018, 1:35 PM IST
IPL 2018: ಆರ್​ಸಿಬಿಗೆ ಪ್ಲೇಆಫ್​ ಕನಸು ಇನ್ನೂ ಜೀವಂತ?!
courtesy: iplt20.com
news18
Updated: May 9, 2018, 1:35 PM IST
ನ್ಯೂಸ್​ 18 ಕನ್ನಡ 

ಬೆಂಗಳೂರು: ಐಪಿಎಲ್​ ಆರಂಭವಾದಾಗಿನಿಂದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ ಅಭಿಮಾನಿಗಳ ಪ್ರೋತ್ಸಾಹದ ಮುಂದೆ ಉಳಿದೆಲ್ಲಾ ಟೀಂಗಳು ಚೈತನ್ಯ ಕುಗ್ಗಿದಂತೆ ಕಾಣುತ್ತಿತ್ತು. ಆದರೆ ಕಳಪೆ ಆಟದಿಂದ ಆರ್​ಸಿಬಿ ಟೂರ್ನಮೆಂಟ್​ನಿಂದಲೇ ಹೊರ ಬೀಳುವ ಸಂಭವವಿದ್ಧರೂ ತಂಡದ ಡೈ ಹಾರ್ಡ್​ ಅಭಿಮಾನಿಯೊಬ್ಬ ಆರ್​ಸಿಬಿಯ ಪ್ಲೇ ಆಫ್​ ಕನಸಿಗೆ ಜೀವ ತುಂಬಿದ್ದಾನೆ.

ಹೈದರಾಬಾದ್​ ತಂಡದ ವಿರುದ್ಧ ಸೋಲುವ ಮೂಲಕ ಟೂರ್ನಿಯಿಂದಲೇ ಬೆಂಗಳೂರು ತಂಡ ಹೊರಬಿದ್ದಿದೆ. ಈ ಮೂಲಕ ಪ್ಲೇಆಫ್​ಗೆ ಸೇರುವ ಎಲ್ಲಾ ಅವಕಾಶವನ್ನು ಕೈ ಚೆಲ್ಲಿತ್ತು. ಆದರೆ ಈ ಅವಕಾಶಕ್ಕೆ ಜೀವ ತುಂಬಿದ ಅಭಿಮಾನಿಯೊಬ್ಬ ಹೇಗೆ ಆರ್​ಸಿಬಿ ತಂಡವನ್ನು ಪ್ಲೇಆಫ್​ ದಡ ಸೇರಬಹುದು ಎಂಬ ಊಹೆಗೂ ನಿಲುಕದ ನಕ್ಷೆಯೊಂದನ್ನು ಸಿದ್ಧಪಡಿಸಿದ್ದಾನೆ.



ಈ ನಕ್ಷೆಯ ಪ್ರಕಾರ ಮುಂದಿನ ನನಾಲ್ಕು ಪಂದ್ಯದಲ್ಲಿ ಆರ್​ಸಿಬಿ ಗೆದ್ದು, ಈಗಾಗಲೇ ಪ್ಲೇಆಫ್​ಗೆ ಲಗ್ಗೆಯಿಟ್ಟಿರುವ ಮೂರು ತಂಡಗಳು ಒಂದೊಂದು ಪಂದ್ಯದಲ್ಲಿ ಸೋತರೆ ಕೋಹ್ಲಿ ತಂಡ ಪ್ಲೇಆಫ್​ ಸೇರ್ಪಡೆಯಾಗಬಹುದಂತೆ. ಸದ್ಯ ಆತ ಶೇರ್​ ಮಾಡಿರುವ ಚಿತ್ರ ಬಾರೀ ವೈರಲ್​ ಆಗಿದೆ.
First published:May 9, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ