ಜಪಾನ್‌ನ (Japan) ದೇಶೀಯ ವಿಮಾನವು ಟೋಕಿಯೊದಿಂದ ಫುಕುವೊಕಾಗೆ 7 ಗಂಟೆಗಳ ಹಾರಾಟದ ನಂತರವೂ ತನ್ನ ಗಮ್ಯಸ್ಥಾನವನ್ನು ತಲುಪಲು ಸಾಧ್ಯವಾಗಲಿಲ್ಲ. ವಾಸ್ತವವಾಗಿ, ಜಪಾನಿನ ವಿಮಾನಯಾನ ಸಂಖ್ಯೆ JL331 ಟೋಕಿಯೋದ ಹನೆಡಾ ವಿಮಾನ ನಿಲ್ದಾಣದಿಂದ ಸಂಜೆ 6.30 ಕ್ಕೆ ಟೇಕಾಫ್ ಆಗಿತ್ತು, ಆದರೆ 4 ಗಂಟೆಗಳ ನಂತರ, ಕೆಟ್ಟ ಹವಾಮಾನ ಮತ್ತು ಕರ್ಫ್ಯೂ ಕಾರಣ ವಿಮಾನವನ್ನು ಫುಕುವೊಕಾ ವಿಮಾನ ನಿಲ್ದಾಣದಲ್ಲಿ ಇಳಿಸಲು ಸಾಧ್ಯವಾಗಲಿಲ್ಲ. ನಂತರ ವಿಮಾನವನ್ನು ಹಿಂತಿರುಗಿ ಟೋಕಿಯೋ ವಿಮಾನ ನಿಲ್ದಾಣದಲ್ಲೇ (Tokyo Airport) ಇಳಿಸಲಾಯಿತು. ಹನೇಡಾದಿಂದ ಫುಕುವೋಕಾಕ್ಕೆ (Haneda to Fukuoka) ಸುಮಾರು ಎರಡು ಗಂಟೆಗಳ ಪ್ರಯಾಣವಿದ್ದು, ವಾಣಿಜ್ಯ ವಿಮಾನಗಳು ಈ ನಿಲ್ದಾಣಕ್ಕೆ ಬಂದಿಳಿಯಲು ರಾತ್ರಿ 10 ಗಂಟೆಯವರೆಗೆ ಮಾತ್ರ ಅವಕಾಶವಿದೆ. ಈ ಕಾರಣಕ್ಕೆ ಹಿಂದಿರುಗಿಸಲಾಗಿಯಿತು.
300 ಪ್ರಯಾಣಿಕರನ್ನು ಹೊತ್ತುಕೊಂಡು ಟೇಕ್ ಆಫ್ ಆಗಿದ್ದ ಜಪಾನಿನ ಸ್ಥಳೀಯ ವಿಮಾನವೊಂದು ಮತ್ತೇ ಅದೇ ವಿಮಾನ ನಿಲ್ದಾಣಕ್ಕೆ ವಾಪಾಸಾಗಿದೆ. ಕಾರಣವೇನು ಎಂಬದರ ಮಾಹಿತಿ ಇಲ್ಲಿದೆ.
ವಾಪಾಸಾಗಲು ಕಾರಣವೇನು?
ಜಪಾನ್ ಏರ್‌ಲೈನ್ಸ್ ಕಂಪೆನಿಯ ಜೆಎಲ್331 ಹೆಸರಿನ ವಿಮಾನವು ಭಾನುವಾರ ಸ್ಥಳೀಯ ಕಾಲಮಾನ ಸಂಜೆ 6.30ರ ವೇಳೆಗೆ ಟೋಕಿಯಾದ ಹನೇಡಾ ವಿಮಾನ ನಿಲ್ದಾಣದಿಂದ ಫುಕುವೊಕಾಕ್ಕೆ ಟೇಕ್ ಆಫ್ ಆಗಿತ್ತು. ಆದರೆ ವಿಮಾನ ಬದಲಾವಣೆಯ ಕಾರಣದಿಂದಾಗಿ 90 ನಿಮಿಷಗಳಷ್ಟು ಲೇಟಾಯ್ತು. ಹನೇಡಾದಿಂದ ಫುಕುವೋಕಾಕ್ಕೆ 1000 ಕಿ.ಮೀ ದೂರವಿದ್ದು ಸುಮಾರು 2 ಗಂಟೆಗಳ ಸಮಯ ಬೇಕಾಗುತ್ತದೆ.
ಇದನ್ನೂ ಓದಿ: ಚಾಟ್ಜಿಪಿಟಿ ಹೆಸರಲ್ಲಿ ನಡೀತಿದೆ ದೊಡ್ಡ ಹಗರಣ! ಬಳಕೆದಾರರೇ ಎಚ್ಚರ
ಇನ್ನು ವಾಣಿಜ್ಯ ವಿಮಾನಗಳು ಈ ನಿಲ್ದಾಣಕ್ಕೆ ಬಂದಿಳಿಯಲು ರಾತ್ರಿ 10 ಗಂಟೆಯವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇನ್ನು ಈ ನಿಲ್ದಾಣಕ್ಕೆ ಲ್ಯಾಂಡಿಂಗ್ ಆಗಲು ಕೊನೆಯದಾಗಿ 4 ನಿಮಿಷಗಳ ಹೆಚ್ಚುವರಿ ಕಾಲಾವಕಾಶವನ್ನು ನೀಡುತ್ತಾರೆ. ಅದನ್ನೂ ಮೀರಿದ್ದರಿಂದ ವಾಪಾಸಾಗುವುದೇ ಒಳ್ಳೆಯದು ಎಂದು ಪೈಲಟ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ತಡವಾಗಲು ಕಾರಣ
ಹನೇಡಾದಲ್ಲಿ ಜೋರಾದ ಗಾಳಿ ಬೀಸುತ್ತಿದ್ದರಿಂದ ನಗರಕ್ಕೆ ಆಗಮಿಸುವ ಅನೇಕ ವಿಮಾನಗಳ ಸಂಚಾರ ಆದಿನ ತಡವಾಗಿತ್ತು. ತಡವಾಗಿ ಆಗಮಿಸುವ ವಿಮಾನಗಳಿಗೆ ಫುಕುವೊಕಾದಲ್ಲಿ ಕರ್ಫ್ಯೂ ಅಂದರೆ ರಾತ್ರಿ ವೇಳೆ ಸಂಚಾರದ ನಿರ್ಬಂಧವನ್ನು ಹೇರಲಾಗಿತ್ತು. ಅದೇ ರೀತಿ ಜೆಎಲ್ 331 ವಿಮಾನ ಸಹ ತಡವಾಗಿ ಬಂದ ಕಾರಣ ಇವರ ಅನುಮತಿಯನ್ನು ನಿರಾಕರಿಸಲಾಗಿತ್ತು.
ಬೇರೆ ಸ್ಥಳಗಳಿಗೆ ಹೋಗಲು ಯೋಚನೆ
ಈ ಎಲ್ಲಾ ನಿಯಮವನ್ನು ಮನಗಂಡ ವಿಮಾನದ ಪೈಲಟ್ ನಂತರ ಟೋಕಿಯೋಗೆ ಮರಳಿ ಹೋಗಬೇಕಾದುದು ಅನಿವಾರ್ಯವಾಗಿತ್ತು. ಆದರೆ ಆರಂಭದಲ್ಲಿ ಸಮೀಪದ ಕಿಟಾಕ್ಯುಶು ನಗರದ ಏರ್‌ಪೋರ್ಟ್‌ಗೆ ಹೋಗುವುದೆಂದು ಆಲೋಚಿಸಲಾಗಿತ್ತು. ಆದರೆ 335 ಪ್ರಯಾಣಿಕರನ್ನು ಕರೆದೊಯ್ಯಲು ಅಲ್ಲಿ ಬಸ್ ವ್ಯವಸ್ಥೆ, ವಸತಿ ವ್ಯವಸ್ಥೆ ಇಲ್ಲದ ಕಾರಣ ಆ ಯೋಚನೆಯನ್ನು ಕೈಬಿಡಲಾಯಿತು.
JAL331 ダイバート
羽田発→福岡行
これ羽田着いた後ホテル用意してくれるんかな? pic.twitter.com/KRwKTEpzko
— うぱ💎🐬 (@pococha_upa) February 19, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ