• Home
  • »
  • News
  • »
  • trend
  • »
  • ಮಹಿಳೆಯರೇ…ಪುರುಷರು ಮೊದಲು ಹೈ-ಹೀಲ್ಸ್ ಧರಿಸಿದ್ದು, ನಿಮ್ಮಾಣೆಗು ನಿಜ!

ಮಹಿಳೆಯರೇ…ಪುರುಷರು ಮೊದಲು ಹೈ-ಹೀಲ್ಸ್ ಧರಿಸಿದ್ದು, ನಿಮ್ಮಾಣೆಗು ನಿಜ!

High Heels

High Heels

High Heels: ಸದ್ಯ ಮಹಿಳೆಯರೇ ಹೆಚ್ಚು  ಹೈ ಹೀಲ್ಸ್​ ಧರಿಸುತ್ತಾರೆ. ಆದರೆ ನಿಜವಾಗಿಯೂ ಪುರುಷರು ಮಹಿಳೆಯರಿಗಿಂತ ಮೊದಲೇ ಹೈ ಹೀಲ್ಸ್​ ಧರಿಸುತ್ತಿದ್ದರೆ? ಎಂಬ ಪ್ರಶ್ನೆ ನಿಮ್ಮ ತಲೆಯಲ್ಲಿ ಓಡಾಡುತ್ತಿರಬಹುದು ಅದರ ಕುರಿತಾದ ಇಂಟ್ರಸ್ಟಿಂಗ್​ ಮಾಹಿತಿ ಇಲ್ಲಿದೆ.

  • Share this:

    ಹೈ ಹೀಲ್ಸ್​ ಧರಿಸುವ ಬಹುತೇಕ ಮಹಿಳೆಯರಿಗೆ ಇಲ್ಲೊಂದು ಶಾಕಿಂಗ್​ ವಿಚಾರವಿದೆ. ಅದೇನೆಂದರೆ ಹೈ ಹೀಲ್ಸ್​ ಅನ್ನು ಮಹಿಳೆಯರಿಗಿಂತ ಮೊದಲು ಧರಿಸಿದ್ದು ಪುರುಷರು. ನಂತರದ ದಿನಗಳಲ್ಲಿ ಅದು ಮಹಿಳೆಯರ ಕಾಲಿಗೆ ಬಂತು. ಆ ಬಳಿಕ ಫ್ಯಾಷನ್​ ಲೋಕದಲ್ಲಿ ಮಹಿಳೆಯರ ಅಂದಕ್ಕೆ ಚಂದಕ್ಕೆ ತಕ್ಕಂತೆ ಹೈ ಹೀಲ್ಸ್​ಗಳನ್ನು ತಯಾರಿಸಲಾಯಿತು. ಸದ್ಯ ಮಹಿಳೆಯರೇ ಹೆಚ್ಚು  ಹೈ ಹೀಲ್ಸ್​ ಧರಿಸುತ್ತಾರೆ. ಆದರೆ ನಿಜವಾಗಿಯೂ ಪುರುಷರು ಮಹಿಳೆಯರಿಗಿಂತ ಮೊದಲೇ ಹೈ ಹೀಲ್ಸ್​ ಧರಿಸುತ್ತಿದ್ದರೆ? ಎಂಬ ಪ್ರಶ್ನೆ ನಿಮ್ಮ ತಲೆಯಲ್ಲಿ ಓಡಾಡುತ್ತಿರಬಹುದು ಅದರ ಕುರಿತಾದ ಇಂಟ್ರಸ್ಟಿಂಗ್​ ಮಾಹಿತಿ ಇಲ್ಲಿದೆ.


    ಸದ್ಯ ನಾನಾ ಕಂಪನಿಗಳು ಮಹಿಳೆಯರಿಗೆಂದೇ ಹೀಲ್ಸ್​ ಅಥವಾ ಸ್ಟಿಲೆಟ್ಟೋಸ್​ ಅನ್ನು ಸಿದ್ಧ ಪಡಿಸಿ ಮಾರುಕಟ್ಟೆಗೆ ಪರಿಚಯಿಸುತ್ತಿವೆ. ದುಬಾರಿ ಬೆಲೆ ಹೀಲ್ಸ್​ಗಳು ಮಾರುಕಟ್ಟೆಯಲ್ಲಿವೆ. ಆದರೆ ಅನೇಕರಿಗೆ ಗೊತ್ತಿಲ್ಲ. 10ನೇ ಶತಮಾನದಿಂದ ಹೀಲ್ಸ್​ ಬಳಕೆಗೆ ಬಂತು. ಪುರುಷರು ಇದನ್ನು ಧರಿಸುತ್ತಿದ್ದರು!


    ಹೌದು. 10ನೇ ಶತಮಾನದಲ್ಲಿ ಪರ್ಷಿಯನ್​ ಸೈನಿಕರು ಪಾದಗಳನ್ನು ಮೇಲೆತ್ತಲು ಸಹಾಯವಾಗುತ್ತದೆ ಎಂಬ ಕಾರಣಕ್ಲೆ ಹೀಲ್ಸ್​ ಧರಿಸುತ್ತಿದ್ದರು. ಬಿಲ್ಲು ಅಥವಾ ಬಾಣ ಬಿಡುವಾಗ ಸ್ಥಿರತೆಯನ್ನು ಕಾಪಾಡಲು ಹೀಲ್ಸ್​ ಧರಿಸುತ್ತಿದ್ದರು. ಆದರೀಗ ಹೀಲ್ಸ್​ ಅನ್ನೊಂದು ಫ್ಯಾಷನ್​ ಆಗಿ ಬಿಟ್ಟಿದೆ. ಹೀಲ್ಸ್​ ಧರಿಸೋದು ಅದರ ಮೂಲಕ ಬೆಕ್ಕಿನ ನಡಿಗೆ ​ನಡಿಯೋದು ಸದ್ಯ ಯುವತಿಯರ ಕನಸಾಗಿದೆ.


    ಇನ್ನು ಪರ್ಷಿಯನ್​ ಸವಾರರು ಒಂದು ಇಂಚಿನ ಹೀಲ್ಸ್​ ಶೂ ಧರಿಸುತ್ತಿದ್ದರು.  ಅಂದಿನ ಕಾಲದಲ್ಲಿ ಹೀಲ್ಸ್​ ಸಂಪತ್ತಿನ ಮತ್ತು ಅಧಿಕಾರದ ಸಂಕೇತವನ್ನು ಸೂಚಿಸುತ್ತಿತ್ತು. ಆ ಬಳಿಕ ಪರ್ಷಿಯನ್​ ಸೈನಿಕರು ಮತ್ತು ವಲಸಿಗರು ಹೀಲ್ಸ್​ ಟ್ರೆಂಡ್​ ಅನ್ನು ಯುರೋಪಿಗೆ ಪರಿಚಯಿಸಿದರು. ನಂತರ ಫ್ಯಾಷನ್​ ಆಗಿ ಬದಲಾಯಿತು.


    ಅಂದಿನ ರಾಜನಾಗಿದ್ದ ರಾಜ ಲೂಯಿಸ್​ XIV ಹೀಲ್ಸ್​ ಧರಿಸುತ್ತಿದ್ದ. ಅವನ ಅಳ್ವಿಕೆಯಲ್ಲಿ ಎತ್ತರದ ಮತ್ತು ಕೆಂಪು ಬಣ್ಣದ ಹೀಲ್ಸ್​ ಬಳಕೆಯಲ್ಲಿತ್ತು.  ಇದನ್ನು ಧರಿಸಿದವರು ಶಕ್ತಿಶಾಲಿಯೆಂದು ಪರಿಗಣಿಸಲಾಗಿತ್ತು. 1670ರಲ್ಲಿ ಕಾನೂನುವೊಂದನ್ನು ಜಾರಿಗೊಳಿಸಿ ಶ್ರೀಮಂತರು ಮಾತ್ರ ಹೀಲ್ಸ್​ ಧರಿಸಬೇಕೆಂಬ ಕಾನೂನು ಜಾರಿಗೆ ಬಂತು. ಈ ಸಮಯದಲ್ಲಿ ಮಹಿಳೆಯರು ಕೂಡ ಪುರುಷರು ಧರಿಸಿರುವ ಚಿಕ್ಕ ಟೋಪಿ ಧರಿಸುವುದು, ಹೇರ್​​ ಟ್ರಿಮ್​ ಮಾಡಲು ಮುಂದಾದರು. ಬರುಬರುತ್ತಾ ಪುರುಷರ ಶೈಲಿಯನ್ನು ಅಳವಡಿಸುತ್ತಾ ಬಂದರು.



    17ನೇ ಶತಮಾನದಲ್ಲಿ ಪುರುಷರು ಪ್ರಕಾಶಮಾನವಾದ ಬಟ್ಟೆ, ಆಭರಣ ಧರಿಸುವುದನ್ನು ತ್ಯಜಿಸಲು ಮುಂದಾದರು. ಅಂದು ಮಾಡಿದ ಪುರುಷರ ತ್ಯಾಗವನ್ನು ಮಹಿಳೆಯರು ಅನುಸರಿಸಿಕೊಂಡು ಅದನ್ನೇ ಫ್ಯಾಷನ್ನಾಗಿ ಬದಲಾಯಿಸಿಕೊಂಡಿದ್ದಾರೆ. ಸದ್ಯ ಹೀಲ್ಸ್​ ಧರಿಸಿದ ಯುವತಿಯರನ್ನು ಕಂಡಾರೆ ಒಂದು ಬಾರಿ ಪುರುಷರ ಕಣ್ಣು ಅತ್ತ ಕಡೆ ಹೋಗದಿರದು.

    Published by:Harshith AS
    First published: