ನ್ಯೂಯಾರ್ಕ್,(ಮೇ 27): 2019 ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಎರಡನೇ ಬಾರಿಗೆ ಪ್ರಧಾನಿಯಾಗಿದ್ದಕ್ಕೆ ಭಾರತದ ಕೋಟ್ಯಧಿಪತಿ ನ್ಯೂಯಾರ್ಕ್ನಲ್ಲಿ ಸಂಭ್ರಮಾಚರಣೆ ಮಾಡಿದ್ಧಾರೆ. ಅದುವೇ ತನ್ನ ಸುತ್ತಲೂ ಲಕ್ಷಾಂತರ ರೂ. ನೋಟುಗಳನ್ನು ಎಸೆದು ಗೆಲುವನ್ನು ಸಂಭ್ರಮಿಸಿದ್ದಾರೆ. ಈ ವಿಡಿಯೋ ವಾಟ್ಯ್ಸಾಪ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಈ ವಿಡಿಯೋದಲ್ಲಿ, ನರೇಂದ್ರ ಮೋದಿ ಮತ್ತೆ ಭಾರತದ ಪ್ರಧಾನಿಯಾಗಿದ್ದಕ್ಕೆ ಒಬ್ಬ ವ್ಯಕ್ತಿ 100 ಡಾಲರ್ ನೋಟುಗಳನ್ನು ಗಾಳಿಯಲ್ಲಿ ಎಸೆಯುತ್ತಿದ್ಧಾನೆ. ಅಲ್ಲಿ ಹೋಗುತ್ತಿರುವ ಜನರು ಕೆಳಗೆ ಬಿದ್ದ ನೋಟುಗಳನ್ನು ಆಯ್ದುಕೊಳ್ಳುತ್ತಿದ್ದಾರೆ.
"ನ್ಯೂಯಾರ್ಕ್ನ ಡೈಮಂಡ್ ಮಾರ್ಕೆಟ್ ಬಳಿ ಭಾರತದ ಕೋಟ್ಯಧಿಪತಿ ಹಣವನ್ನು ಗಾಳಿಯಲ್ಲಿ ಎಸೆಯುತ್ತಿದ್ದಾರೆ. ಇದು ಮೋದಿ ಮತ್ತೆ ಪ್ರಧಾನಿಯಾಗಿದ್ದಕ್ಕೆ ಸಂಭ್ರಮಿಸುತ್ತಿರುವ ಕ್ಷಣ", ಎಂದು ಟ್ಟಿಟ್ಟರ್ನಲ್ಲಿ ವ್ಯಕ್ತಿಯೊಬ್ಬರು ವಿಡಿಯೋ ಜೊತೆಗೆ ಬರೆದುಕೊಂಡಿದ್ದಾರೆ.
Happened today on 47 street ( Diamond Market) New York $100,000 given away.👇🏼👇🏼in ref to modi victory .. see how this millionaire Indian doing .. pic.twitter.com/HChNPayZ2d
— tikam nariani (@tikam53) May 24, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ