ನೀವೆಲ್ಲ ಸಣ್ಣ ವಯಸ್ಸಿನಲ್ಲಿ ಏನು ಮಾಡ್ತಾ ಇದ್ರಿ? ಮರ ಕೋತಿ ಆಟಗಳು, ಕಣ್ಣಾ ಮುಚ್ಚಾಲೆ, ಮಣ್ಣಿನಲ್ಲಿ ಆಟ ಮತ್ತು ಅಮ್ಮನ ಕೈಯಿಂದ ಒದೆಗಳು ಇವೆಲ್ಲ ನಡೀತಾ ಇತ್ತು ಅಲ್ವಾ? ಒಂದೊಂದು ವಯಸ್ಸಿಗೆ ಬೇರೆ ಬೇರೆ ರೀತಿಯ ಮೈಂಡ್ ಸೆಟ್ ಗಳು ಇರುತ್ತವೆ. ಸಣ್ಣ ವಯಸ್ಸನ್ನು ಎಂಜಾಯ್ (Enjoy) ಮಾಡಬೇಕು. ಅದ್ರಲ್ಲೂ ಹಳ್ಳಿ ಮನೆಯ ಕಡೆಯಲ್ಲಿ ಇರುವವರು ಫುಲ್ ಎಂಜಾಯ್ ಮೆಂಟ್ ಅಲ್ಲಿ ಜೀವನವನ್ನು ಕಳೆಯುತ್ತಾರೆ. ಅದ್ರಲ್ಲೂ ಕೆಲವೊಂದು ಮನೆಗಳಲ್ಲಿ ಮಕ್ಕಳನ್ನು ಓದಿನ ಕಡೆಗೆ ತಳ್ಳುತ್ತಾರೆ. ಬಾಲ್ಯಜೀವನವನ್ನೆ(Childhood) ಕಿತ್ತುಕೊಳ್ಳುವ ಪೋಷಕರು ಇರುತ್ತಾರೆ. ಅಂದ್ರೆ ಯಾವಾಗ್ಲೂ ಟ್ಯೂಶನ್, ಓದು, ಬರಿ ಎಂಬ ತಲೇನೋವುಗಳೆ ಹೇರಳವಾಗಿರುತ್ತದೆ. ಆದ್ರೆ ಇವುಗಳನ್ನೇಲ್ಲಾ ಮೀರಿ ಒಂದು ಪುಟ್ಟ ಬಾಲಕಿ ವೈರಲ್ (Viral) ಆಗ್ತಾ ಇದ್ದಾಳೆ. ಸಖತ್ ಇಂಟ್ರೆಸ್ಟಿಂಗ್ ಸ್ಟೋರಿ ಇದು.
ಹೌದು, ಈ ಪ್ರಕರಣವನ್ನು ಕೇಳಿದ್ರೆ ನಿಜಕ್ಕೂ ನೀವು ಒಂದು ಬಾರಿ ಶಾಕ್ ಆಗೋದಂತೂ ಪಕ್ಕಾ. ಯಾಕಂದ್ರೆ ಸಣ್ಣ ವಯಸ್ಸಿಗೆ ಇಂಥ ನ ನಿರ್ಧಾರನಾ ಅಥವಾ ಇಂತಹ ಸಾಧನೆನಾ ಅಂತ ಅನಿಸ್ಬೋದು ನಿಮಗೆ.
ಆಟವಾಡಿಕೊಂಡು ಇರಬೇಕಾದ 8 ವರ್ಷದ ಬಾಲಕಿಯ ಹೆಸರು ದೇವಾಂಶಿ ಎಂದು. ಮೂಲತಃ ಗುಜರಾತ್ನವರು. ವಜ್ರದ ವ್ಯಾಪಾರಿಯಾದ ಧನೇಶ್ ಮತ್ತು ಆಮಿ ಸಂಘ್ವಿ ದಂಪತಿಯ ಪುತ್ರಿ ಈಕೆ. ದೇವಾಂಶಿ ತನ್ನು 8 ವರ್ಷದಲ್ಲಿಯೇ ಸನ್ಯಾಸತ್ವ ಸ್ವೀಕರಿಸಿದ್ದಾರಂತೆ. ಅದ್ರಲ್ಲೂ ಡೈಮಂಡ್ ವ್ಯಾಪರಿಯ ಮಗಳು ಅಂದ್ರೆ ನಿಜಕ್ಕೂ ಮೂಗಿನ ಮೇಲೆ ಬೆರಳು ಇಡುವಂತಹ ಸಂಗತಿನೇ ಸರಿ.
ಇದನ್ನೂ ಓದಿ: 10 ತಿಂಗಳ ಗಂಡು ಮಗುವಿನ ಹೊಟ್ಟೆಯಲ್ಲಿ 3 ಭ್ರೂಣಗಳು! ಅಪರೂಪದ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು
ನೋಡಿದ್ರಲ್ವಾ ಸಣ್ಣ ವಯಸ್ಸಿಗೆ ಎಂತಹ ಸಾಧನೆಯನ್ನು ಮಾಡಿದ್ದಾರೆ ಅಂತ. ತನ್ನ ವೈಡೂರ್ಯ ಜೀವನವನ್ನು ತೊರೆದು ಅದ್ಧೂರಿಯಾಗಿಯೇ ಆಧ್ಯಾತ್ಮಿಕ ಜೀವನಕ್ಕೆ ಕಾಲಿಟ್ಟವರಿಗೆ, ನಮಸ್ಕರಿಸಲೇ ಬೇಕು.
ಚಿನ್ನದ ಚಮಚದಿಂದ ಹಾಲನ್ನು ಕುಡಿಯುತ್ತಾ ಬೆಳೆದು ಬಂದವರು ದೇವಾಂಶಿ. ಇದೀಗ ಆಕೆಯು ತನ್ನ ಲೌಕಿಕ ಜೀವನವನ್ನು ತೊರೆದು ಆಧ್ಯಾತ್ಮಿಕ ಜಗತ್ತಿನ ಕಡೆಗೆ ಜೀವನ ಸಾಗಿಸಲು ನಿರ್ಧಾರ ಮಾಡಿದ್ದಾರೆ ಎಂಬುದು ಸೋಜಿಗದ ಸಂಗತಿ ಅಂತ ಹೇಳಿದ್ರೂ ತಪ್ಪಾಗಲಾರದು.
ಈ ದಂಪತಿಗೆ 2 ಹೆಣ್ಣು ಮಕ್ಕಳು. ದೇವಾಂಶಿ ಹಿರಿಯ ಮಗಳು. ಕೋಟ್ಯಾಂತ ರೂಪಾಯಿ ಆಸ್ತಿ, ಐಷಾರಾಮಿ ಜೀವನ, ಕಾರು, ಬಂಗಲೆಗಳು ಇದ್ರೂ ಕೂಡ ಎಲ್ಲವನ್ನು ತೊರೆದು ಇದೀಗ ಶಾಂತಸ್ವರೂಪದ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಈ ಹಿಂದೆಯೇ ಸನ್ಯಾಸಿಗಳೊಂದಿಗೆ ಆಕೆ 700 ಕಿ.ಮೀ ಪಾದಯಾತ್ರೆ ಮಾಡಿದ್ದರು ದೇವಾಂಶಿ. ಇವರಿಗೆ 5 ಭಾಷೆಗಳಲ್ಲಿ ಮಾತನಾಡಲು ಬರುತ್ತದೆ. ಇವರಿಗೆ 4 ವರ್ಷದ ಸಹೋದರಿ ಕೂಡ ಇದ್ದಾರೆ.
ಈಕೆಯ ತಂದೆ ಗುಜರಾತ್ನಲ್ಲಿ ಡೈಮಂಡ್ ವ್ಯಾಪಾರಿಯಾಗಿದ್ದಾರೆ. ಪ್ರಸ್ತುತ ಸೂರತ್ನಲ್ಲಿ ಸಾಂಘ್ವಿ ಆ್ಯಂಡ್ ಸನ್ಸ್ ಡೈಮಂಡ್ ಕಂಪನಿಯ ಮುಖ್ಯಸ್ಥರಾಗಿದ್ದಾರೆ. ಇದೀಗ ಅವರ ಹಿರಿಯ ಮಗಳು ದೇವಾಂಶಿ, ತನ್ನ ಚಿಕ್ಕ ವಯಸ್ಸಿನಲ್ಲಿಯೇ ಐಷಾರಾಮಿ ಜೀವನವನ್ನು ತೊರೆದು ಆಧ್ಯಾತ್ಮಿಕ ಲೋಕಕ್ಕೆ ಪಾದಾರ್ಪಣೆ ಮಾಡುತ್ತಾ ಇದ್ದಾರೆ. ಈಕೆಯ ತಂದೆ ತಾಯುಯು ಕೂಡ ಅತ್ಯಂತ ಸಂತೋಷದಿಂದಲೇ ಈ ಜೀವನಕ್ಕೆ ಕಳುಹಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ