ಕೈ ಬೆರಳಿಗೆ ಆಭರಣ ಚುಚ್ಚಿಸುವ ಹೊಸ ಫ್ಯಾಷನ್ ವೈರಲ್

ಇತ್ತೀಚಿನ ದಿನಗಳಲ್ಲಿ ಕೈಬೆರಳಿಗೆ ಆಭರಣಗಳನ್ನು ಚುಚ್ಚಿಸಿಕೊಳ್ಳುವ ಹೊಸ ಫ್ಯಾಷನ್​ ಬಂದಿದೆ. ಯುವ ಜೋಡಿಗಳಲ್ಲಿ ಇಂತಹ ಫ್ಯಾಷನ್​ ಕಂಡುಬರುತ್ತಿದ್ದು, ಕೈಬೆರಳಿಗೆ ವಜ್ರ ಅಥವಾ ಬಂಗಾರದ ಆಭರಣವನ್ನು ಚುಚ್ಚಿಸಿಕೊಳ್ಳುತ್ತಿದ್ದಾರೆ. ಈ ಹೊಸ ಫ್ಯಾಷನ್​ ಜನಪ್ರೀಯವಾಗುತ್ತಿದ್ದು, ವೈರಲ್​ ಆಗುತ್ತಿದೆ.

news18
Updated:March 4, 2019, 3:20 PM IST
ಕೈ ಬೆರಳಿಗೆ ಆಭರಣ ಚುಚ್ಚಿಸುವ ಹೊಸ ಫ್ಯಾಷನ್ ವೈರಲ್
ಕೈ ಬೆರಳಿಗೆ ಆಭರಣ ಚುಚ್ಚಿಸಿರುವುದು
  • News18
  • Last Updated: March 4, 2019, 3:20 PM IST
  • Share this:
ಫ್ಯಾಷನ್​ ಲೋಕವೇ ವಿಭಿನ್ನ. ದೈನಂದಿನ ಜೀವನದಲ್ಲಿ ಹೊಸ-ಹೊಸ ಫ್ಯಾಷನ್​ಗಳು ಜನಪ್ರೀಯವಾಗುತ್ತಿರುತ್ತವೆ. ಯುವ ಜನತೆಯಂತೂ ಫ್ಯಾಷನ್​ ಲೋಕಕ್ಕೆ ಮಾರುಹೋಗದವರಿಲ್ಲ. ಒಂದಲ್ಲ ಒಂದು ಫ್ಯಾಷನ್​ಗಳನ್ನು ರೂಢಿಸಿಕೊಂಡು ಹೋಗುತ್ತಾರೆ.

ಭಾರತೀಯರು ಧರಿಸುವ ಮೂಗುತಿ ವಿದೇಶಿಗರಿಗೆ ವಿಭಿನ್ನ ಅನಿಸಿಕೊಂಡು ಅದನ್ನು ಧರಿಸಲು ಶುರುಮಾಡಿದರು. ಹೊಕ್ಕಳಿಗೆ, ಕಣ್ಣ ಹುಬ್ಬಿಗೆ, ತುಟಿಯ ಮೇಲ್ಬಾಗಕ್ಕೆ ಚುಚ್ಚಿಕೊಳ್ಳಲು ಪ್ರಾರಂಭಿಸಿದರು. ಭಾರತೀಯ ಮೂಗುತಿ ಅಂದಿನಿಂದ  ಫ್ಯಾಷನ್​ ಆಗಿ ಮಾರ್ಪಟ್ಟಿದೆ.

 

ಚರ್ಮಕ್ಕೆ ಆಭರಣಗಳನ್ನು ಚುಚ್ಚಿಕೊಳ್ಳುವ ಸಂಪ್ರದಾಯ ಹಿಂದಿನಿಂದಲೂ ಬಂದ ಪದ್ಧತಿಯಾಗಿದೆ. ಭಾರತೀಯರು ಕಿವಿ, ಮೂಗಿಗೆ ಆಭರಣವನ್ನು ಚುಚ್ಚುವ ಸಂಪ್ರದಾಯ ಹಿಂದಿನಿಂದಲೂ ರೂಢಿಯಲ್ಲಿದೆ.  ಆದರೆ ಅವು ಈಗ ಫ್ಯಾಷನ್​ ಆಗಿ ಮಾರ್ಪಟ್ಟಿದೆ.ಇತ್ತೀಚಿನ ದಿನಗಳಲ್ಲಿ ಕೈಬೆರಳಿಗೆ ಆಭರಣಗಳನ್ನು ಚುಚ್ಚಿಸಿಕೊಳ್ಳುವ ಹೊಸ ಫ್ಯಾಷನ್​ ಬಂದಿದೆ. ಯುವ ಜೋಡಿಗಳಲ್ಲಿ ಇಂತಹ ಫ್ಯಾಷನ್​ ಕಂಡುಬರುತ್ತಿದ್ದು, ಕೈಬೆರಳಿಗೆ ವಜ್ರ ಅಥವಾ ಬಂಗಾರದ ಆಭರಣವನ್ನು ಚುಚ್ಚಿಸಿಕೊಳ್ಳುತ್ತಿದ್ದಾರೆ. ಈ ಹೊಸ ಫ್ಯಾಷನ್​ ಜನಪ್ರೀಯವಾಗುತ್ತಿದ್ದು, ವೈರಲ್​ ಆಗುತ್ತಿದೆ.

ಇದನ್ನೂ ಓದು: ಪಾಕ್​ ಸೈನ್ಯದಲ್ಲಿದ್ದಾರೆ ಹಿಂದೂ-ಸಿಖ್ ಸೈನಿಕರು: ಒಟ್ಟು ಎಷ್ಟು ಮಂದಿಯಿದ್ದಾರೆ ಗೊತ್ತೆ?ಅಪಾಯವು ಹೌದು..?

ಕೈಬೆರಳಿನ ಮಧ್ಯ ಭಾಗದಲ್ಲಿ ಮೃದುವಾಗಿರುವ ಸ್ನಾಯುಗಳು ಇರುವುದು. ಮೃದುವಾದ ಕೈ ಬೆರಳಿನ ಚರ್ಮಕ್ಕೆ ಆಭರಣವನ್ನು ಚುಚ್ಚಿಸಿಕೊಂಡಾಗ ಗಾಯ ವಾಸಿಯಾಗದೆ ಇರಬಹುದು.ಟ್ರೆಂಡ್​/ವೈರಲ್​

ಕೈ ಬೆರಳಿಗೆ ಆಭರಣ ಚುಚ್ಚಿಸಿಕೊಳ್ಳುವ ಟ್ರೆಂಡ್​ ಯುವಜನರನ್ನು ಹೆಚ್ಚು ಆಕರ್ಷಿಸಿದೆ. ಆಭರಣ ಚುಚ್ಚಿಸಿಕೊಳ್ಳುವ ನೋವು ಮತ್ತು ಮುಂಬರುವ ಅಪಾಯವನ್ನು ಲೆಕ್ಕಿಸದೆ ಈ ಫ್ಯಾಷನ್​ ಅನ್ನು ಅನುಸರಿಸುತ್ತಿದ್ದಾರೆ. ಕೈಬೆರಳಿಗೆ ಆಭರಣ ಚುಚ್ಚಿಸಿಕೊಳ್ಳವ ಸಾಹಸವು ಇನ್ಟ್​ಗ್ರಾಂನಲ್ಲಿ ವೈರಲ್​ ಆಗುತ್ತಿದೆ.
First published:March 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ