ಆಟದಲ್ಲಿ ಭಾರತದ ಸಂಸ್ಕೃತಿ: ಸಂಸ್ಕೃತ ಕ್ರಿಕೆಟ್ ವಿಡಿಯೋ ಈಗ ಫುಲ್ ವೈರಲ್

ಸಂಸ್ಕೃತ ವಿಶ್ವವಿದ್ಯಾಲಯದ 70ನೇ ವರ್ಷದ ಸವಿ ನೆನಪಿಗಾಗಿ ಕ್ರಿಕೆಟ್ ಆಟವನ್ನು ಆಯೋಜಿಸಲಾಗಿದ್ದು, ಆಟಗಾರರು ಕಚ್ಚೆ, ಸಾಂಪ್ರದಾಯಿಕ ವಸ್ತ್ರಗಳನ್ನು ಧರಿಸಿ ಕಣಕ್ಕಿಳಿದಿದ್ದು ವಿಶೇಷವಾಗಿತ್ತು.

Vinay Bhat | news18
Updated:February 13, 2019, 8:56 PM IST
ಆಟದಲ್ಲಿ ಭಾರತದ ಸಂಸ್ಕೃತಿ: ಸಂಸ್ಕೃತ ಕ್ರಿಕೆಟ್ ವಿಡಿಯೋ ಈಗ ಫುಲ್ ವೈರಲ್
ಸಾಂಪ್ರದಾಯಿಕ ವಸ್ತ್ರ ಧರಿಸಿ ಕ್ರಿಕೆಟ್ ಆಡುತ್ತಿರುವ ಫೋಟೋ
  • News18
  • Last Updated: February 13, 2019, 8:56 PM IST
  • Share this:
ಕ್ರಿಕೆಟ್ ಅಂದ್ರೆ ಈಗ ಗಲ್ಲಿಯಿಂದ ಹಿಡಿದು ವಿಶ್ವದ ಎಲ್ಲಾ ಕಡೆ ಆವರಿಸಿದೆ. ಈಗೀಗ ಹೊಸ ದಾಖಲೆ ಸೇರಿದಂತೆ ಅನೇಕ ವಿಷಯಗಳಿಂದ ಕ್ರಿಕೆಟ್ ಭಾರೀ ಸುದ್ದಿಯಲ್ಲಿರುತ್ತದೆ. ಅಂತೆಯೆ ಭಾರತೀಯ ಹಿಂದು ನಂಬಿಕೆಗಳಲ್ಲಿ ಪ್ರಮುಖ ಸ್ಥಾನವಿರುವ ವಾರಣಾಸಿ ಕ್ಷೇತ್ರದಲ್ಲಿ ವಿಶೇಷವಾಗಿ ಸಂಸ್ಕೃತ ಕ್ರಿಕೆಟ್ ಆಡಿದ್ದು ಎಲ್ಲರ ಗಮನ ಸೆಳೆಯುತ್ತಿದೆ.

ಇಲ್ಲಿನ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯದ 70ನೇ ವರ್ಷದ ಸವಿ ನೆನಪಿಗಾಗಿ ಕ್ರಿಕೆಟ್ ಆಟವನ್ನು ಆಯೋಜಿಸಲಾಗಿದ್ದು, ಆಟಗಾರರು ಕಚ್ಚೆ, ಸಾಂಪ್ರದಾಯಿಕ ವಸ್ತ್ರಗಳನ್ನು ಧರಿಸಿ ಕಣಕ್ಕಿಳಿದಿದ್ದು ವಿಶೇಷವಾಗಿತ್ತು. ಅಷ್ಟೆ ಅಲ್ಲದೆ ಕಾಮೆಂಟರಿ ಕೂಡ ಸಂಸ್ಕೃತದಲ್ಲಿ ಇದ್ದು, ಅಂಪೈರ್ ಕೂಡ ಸಂಸ್ಕೃತದಲ್ಲೇ ಸಂಭಾಷಣೆ ನಡೆಸುತ್ತಿದ್ದರು.

ಒಟ್ಟು ಐದು ತಂಡಗಳು ಈ ಟೂರ್ಮೆಂಟ್​ನಲ್ಲಿ ಭಾಗವಹಿಸಿದ್ದು, ಮಾಜಿ ರಣಜಿ ಆಟಗಾರ ಧೀರಜ್​ ಮಿಶ್ರಾ ಹಾಗೂ ಸಂಜೀವ್ ತಿವಾರಿ ಹಾಜರಾಗಿದ್ದರು.

ಇದನ್ನೂ ಓದಿ: ಟೀಂ ಇಂಡಿಯಾ ಸೇರುವ ಮೊದಲೇ ಸಚಿನ್ ಪಾಕಿಸ್ತಾನ ತಂಡದಲ್ಲಿ ಆಡಿದ್ದರು!

First published:February 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ