Dhoom 4: ಕಳವು ಮಾಡಿ 'ಇಟ್ಸ್ ಮಿ, ಧೂಮ್ 4’ ಅಂತ ಬರೆದು ಕಳ್ಳರು ಪರಾರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಾನು ಧೂಮ್ 4. ಶೀಘ್ರದಲ್ಲಿಯೇ ಬರುತ್ತೇನೆ ಎಂದು ಬರೆಯಲಾಗಿದ್ದು, ಇದು ಶಾಲೆಯನ್ನು ದೋಚಿದ ದರೋಡೆಕೋರರೇ ಹೋಗುವಾಗ ಈ ರೀತಿಯಾಗಿ ಬರೆದು ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

  • Share this:

ಈ ಕೆಲವೊಂದು ಕಳ್ಳತನಗಳು ತುಂಬಾನೇ ನಿಗೂಢವಾಗಿ ನಡೆದಿರುತ್ತವೆ, ಆ ಸ್ಥಳದಲ್ಲಿ ನಂತರ ಹೋದ ಪೊಲೀಸರಿಗೆ ಯಾವುದೇ ರೀತಿಯ ಚಿಕ್ಕ ಸುಳಿವು ಸಹ ಸಿಗುವುದಿಲ್ಲ. ಕಳ್ಳರು ಈ ಮನೆಗಳ ಅಥವಾ ದೊಡ್ಡ ದೊಡ್ಡ ಅಂಗಡಿಗಳ ಬಗ್ಗೆ ಮೊದಲೇ ವಿವರವಾಗಿ ತಿಳಿದುಕೊಂಡು ಅವುಗಳನ್ನು ದರೋಡೆ (Robbery) ಮಾಡಲು ಯೋಜನೆಯೊಂದನ್ನು ರೂಪಿಸುತ್ತಾರೆ. ಕೈಗೆ ಏನು ಸಿಗುತ್ತದೆಯೋ ಎಲ್ಲಾ ವಸ್ತುಗಳನ್ನು ದೋಚಿಕೊಂಡು ರಾತ್ರೋ ರಾತ್ರಿ ಪರಾರಿಯಾಗಿರುವುದನ್ನು ನಾವು ಅನೇಕ ಬಾರಿ ಈ ಟಿವಿ ನ್ಯೂಸ್​ಗಳಲ್ಲಿ ಕೇಳಿರುತ್ತೇವೆ. ಒಂದು ಚಿಕ್ಕ ಸುಳಿವು ಆ ಸ್ಥಳದಲ್ಲಿ ಸಿಗದೇ ಪೊಲೀಸರು ಕಳ್ಳರನ್ನು (Police And Thief)  ಹಿಡಿಯಲು ತುಂಬಾನೇ ಹರಸಾಹಸ ಪಡಬೇಕಾಗುತ್ತದೆ.


ಆದರೆ ಕೆಲವು ಕಳ್ಳರು ಮಾತ್ರ ಈ ಸಿನೆಮಾಗಳಲ್ಲಿ ತೋರಿಸಿರುವ ಕಳ್ಳತನದ ರೀತಿಗಳನ್ನು ಬಳಸುತ್ತಾರೆ ಮತ್ತು ಪೊಲೀಸರಿಗೆ ಸಿನೆಮಾ ರೀತಿಯಲ್ಲಿ ಸಂದೇಶವೊಂದನ್ನು ಬಿಟ್ಟು ಹೋಗಿರುತ್ತಾರೆ. ಒಟ್ಟಿನಲ್ಲಿ ಇವರ ಉದ್ದೇಶವು ಪೊಲೀಸರಿಗೆ ತಾವು ಚಳ್ಳೆಹಣ್ಣು ತಿನ್ನಿಸಿದ್ದೇವೆ ಅಂತ ತೋರಿಸುವುದಾಗಿರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗಂತೂ ಅನೇಕ ಕಳ್ಳತನಗಳ ಪ್ರಕರಣಗಳಲ್ಲಿ ಈ ರೀತಿಯಾಗಿ ಪೊಲೀಸರಿಗೆ ಸಂದೇಶವೊಂದನ್ನು ಕಳ್ಳರು ಬಿಟ್ಟು ಹೋಗುತ್ತಿರುವುದನ್ನು ನಾವು ಹೆಚ್ಚಾಗಿಯೇ ನೋಡುತ್ತಿದ್ದೇವೆ ಎಂದು ಹೇಳಬಹುದು. ಇಲ್ಲಿಯೂ ಸಹ ಇಂತಹದೇ ಒಂದು ಘಟನೆ ನಡೆದಿದೆ ನೋಡಿ.


ಕಳ್ಳತನ ಪತ್ತೆಯಾಗಿದ್ದು ಹೇಗೆ?
ಒಡಿಶಾದ ನಬರಂಗ್ಪುರ ಜಿಲ್ಲೆಯ ಹೈಸ್ಕೂಲ್ ಒಂದರಲ್ಲಿ ಪೊಲೀಸರು ಇಡೀ ಘಟನೆಯನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ಖಟಿಗುಡ ಪ್ರೌಢಶಾಲೆಯಲ್ಲಿ ಶುಕ್ರವಾರ ದರೋಡೆ ನಡೆದಿದೆ. ಶಾಲಾ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದರು. ಮೂಲಗಳ ಪ್ರಕಾರ, ಶಾಲೆಯಲ್ಲಿ ಕೆಲಸ ಮಾಡುವ ಜವಾನನೊಬ್ಬ ಶನಿವಾರ ಬೆಳಿಗ್ಗೆ ಶಾಲೆಯ ಮುಖ್ಯ ಗೇಟ್ ಅನ್ನು ಮುರಿದಿರುವುದನ್ನು ಕಂಡು ಕೂಡಲೇ ಶಾಲೆಯ ಮುಖ್ಯೋಪಾಧ್ಯಾಯರಿಗೆ ಮಾಹಿತಿ ನೀಡಿದರು. ನಂತರ, ಅವರು ಕಂಪ್ಯೂಟರ್, ಪ್ರಿಂಟರ್ ಕಮ್ ಜೆರಾಕ್ಸ್ ಯಂತ್ರ ಮತ್ತು ಇತರ ಬೆಲೆಬಾಳುವ ಕಚೇರಿ ಸ್ಟೇಷನರಿ ಶಾಲೆಯಿಂದ ಕಾಣೆಯಾಗಿರುವುದನ್ನು ಕಂಡು ಕೊಂಡರು.


ನಾನು ಧೂಮ್ 4. ಶೀಘ್ರದಲ್ಲಿಯೇ ಬರುತ್ತೇನೆ
ಆದರೆ ಪೊಲೀಸರು ಸ್ಥಳಕ್ಕೆ ಬಂದು ನೋಡಿದರೆ ಒಂದು ತರಗತಿಯಲ್ಲಿರುವ ಕಪ್ಪು ಹಲಗೆಯ ಮೇಲೆ "ಇದು ನಾನು ಧೂಮ್ 4. ಶೀಘ್ರದಲ್ಲಿಯೇ ಬರುತ್ತೇನೆ" ಎಂದು ಬರೆಯಲಾಗಿದ್ದು, ಇದು ಶಾಲೆಯನ್ನು ದೋಚಿದ ದರೋಡೆಕೋರರೇ ಹೋಗುವಾಗ ಈ ರೀತಿಯಾಗಿ ಬರೆದು ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.


ಕಪ್ಪು ಹಲಗೆಯ ಮೇಲೆ ಹಲವಾರು ಫೋನ್ ಸಂಖ್ಯೆ
ದರೋಡೆಕೋರರ ಗ್ಯಾಂಗ್ ಅವರು ಮತ್ತೆ ಈ ಶಾಲೆಗೆ ಬಂದು ಕಳುವು ಮಾಡುವುದಾಗಿ ಹೇಳಿದ್ದಾರೆ.  ಶಾಲಾ ಆಡಳಿತ ಮಂಡಳಿ ಮತ್ತು ಪೊಲೀಸರಿಗೆ ಸಾಧ್ಯವಾದರೆ ಅವರನ್ನು ಹಿಡಿಯುವಂತೆ ಸವಾಲು ಹಾಕಿ ಹೋಗಿದ್ದಾರೆ. ಅವರು ಕಪ್ಪು ಹಲಗೆಯ ಮೇಲೆ ಹಲವಾರು ಫೋನ್ ಸಂಖ್ಯೆಗಳನ್ನು ಸಹ ಬರೆದಿದ್ದಾರೆ.


ಇದನ್ನೂ ಓದಿ: Monsoon Hacks: ಮಳೆಗಾಲದಲ್ಲಿ ಬೇಗ ಬೇಗ ಬಟ್ಟೆ ಒಣಗಲು ಹೀಗೆ ಮಾಡಿ!


ಅವರನ್ನು ಸಂಪರ್ಕಿಸಲು ಅಥವಾ ಪೊಲೀಸರಿಗೆ ತನಿಖೆಯ ದಾರಿ ತಪ್ಪಿಸಲು ಈ ರೀತಿಯ ತಪ್ಪು ಸುಳಿವುಗಳನ್ನು ನೀಡಿದ್ದಾರೆ. ಏಕೆಂದರೆ ಆ ತರಗತಿಯ ಕಪ್ಪು ಹಲಗೆಯ ಮೇಲೆ ಬರೆಯಲಾದ ಫೋನ್ ಸಂಖ್ಯೆಗಳಲ್ಲಿ ಒಂದು ಅದೇ ಶಾಲೆಯ ಒಬ್ಬ ಶಿಕ್ಷಕರದ್ದು ಎಂದು ತಿಳಿದುಬಂದಿದೆ.


ಪೊಲೀಸ್ ತನಿಖೆ ಶುರು!
ಏತನ್ಮಧ್ಯೆ, ಶಾಲಾ ಅಧಿಕಾರಿಗಳು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಪ್ರಾರಂಭಿಸಿದ್ದಾರೆ. ದರೋಡೆಕೋರರ ಗ್ಯಾಂಗ್ ಬಗ್ಗೆ ಸುಳಿವುಗಳನ್ನು ಸಂಗ್ರಹಿಸಲು ಪೊಲೀಸ್ ತಂಡವು ವೈಜ್ಞಾನಿಕ ತಂಡ ಮತ್ತು ನಾಯಿಯೊಂದಿಗೆ ಶಾಲೆಗೆ ಭೇಟಿ ನೀಡಿತು.


ಇದನ್ನೂ ಓದಿ: Uber Bill: ಊಬರ್ ಬಿಲ್ ನೋಡಿದ ವ್ಯಕ್ತಿ ಶಾಕ್, ಈ ಹಣದಲ್ಲಿ ವಿಮಾನ ಪ್ರಯಾಣವೇ ಮಾಡಬಹುದು!


ಶಾಲೆಯ ಮುಖ್ಯೋಪಾಧ್ಯಾಯ ಸರ್ಬೇಶ್ವರ್ ಬೆಹೆರಾ ಅವರು ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿ "ಕಚೇರಿ ಕೊಠಡಿಯಿಂದ ಕಂಪ್ಯೂಟರ್ ಮತ್ತು ಜೆರಾಕ್ಸ್ ಯಂತ್ರವು ಕಾಣೆಯಾಗಿರುವುದನ್ನು ನಾವು ಕಂಡುಕೊಂಡಿದ್ದೇವೆ. ನಮ್ಮ ಇಬ್ಬರು ಶಿಕ್ಷಕರು ನಿವೃತ್ತರಾಗಿದ್ದರು ಮತ್ತು ನಾವು ಅವರಿಗೆ ಭೀಳ್ಕೊಡುಗೆಯನ್ನು ಆಯೋಜಿಸಿದ್ದೆವು. ಸಮಾರಂಭಕ್ಕೆ ಬಳಸಿದ ಕೆಲವು ಸಂಗೀತ ಉಪಕರಣಗಳನ್ನು ಸಹ ದುಷ್ಕರ್ಮಿಗಳು ಕದ್ದು ಪರಾರಿಯಾಗಿದ್ದಾರೆ” ಎಂದು ಹೇಳಿದ್ದಾರೆ.

Published by:guruganesh bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು