ಅಪ್ಪ ಒಳ್ಳೆಯವರಾ? ಕೆಟ್ಟವರಾ? ಪ್ರಶ್ನೆಗೆ ಧೋನಿ ಮಗಳು ಜೀವಾ ಕೊಟ್ಟ ಉತ್ತರವೇನು..?

news18
Updated:August 22, 2018, 6:42 PM IST
ಅಪ್ಪ ಒಳ್ಳೆಯವರಾ? ಕೆಟ್ಟವರಾ? ಪ್ರಶ್ನೆಗೆ ಧೋನಿ ಮಗಳು ಜೀವಾ ಕೊಟ್ಟ ಉತ್ತರವೇನು..?
news18
Updated: August 22, 2018, 6:42 PM IST
ನ್ಯೂಸ್ 18 ಕನ್ನಡ

ಆನ್ ಫೀಲ್ಡ್ ಹಾಗೂ ಆಫ್ ಫೀಲ್ಡ್​​ನಲ್ಲಿ ಸದಾ ಸುದ್ದಿಯಲ್ಲಿರುವ ಕೂಲ್ ಕ್ಯಾಪ್ಟನ್ ಎಂ. ಎಸ್. ಧೋನಿ ಸದ್ಯ ಇನ್​​ಸ್ಟಗ್ರಾಂನಲ್ಲಿ ವಿಡಿಯೋ ಒಂದನ್ನು ಹರಿಬಿಟ್ಟು ಮತ್ತೆ ಸುದ್ದಿಯಲ್ಲಿದ್ದಾರೆ.

ತನ್ನ ಮುದ್ದಿನ ಮಗಳು ಜೀವಾ ಜೊತೆ ತಾನು ಆಟವಾಡುತ್ತಿರುವ ವಿಡಿಯೋವನ್ನು ಧೋನಿ ತಮ್ಮ ಇನ್​​​​ಸ್ಟಾದಲ್ಲಿ ಹಂಚಿಕೊಂಡಿದ್ದು ಸಾಮಾಜಿ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಧೋನಿ ಮಗಳು ಜೀವಾ ತಲೆಗೆ ಬಲೂನ್​​​ನಿಂದ ಹೊಡೆದು ಆಟವಾಡುತ್ತಿದ್ದು, ಧೋನಿ ಮಡದಿ ಸಾಕ್ಷಿ ಅವರು ವಿಡಿಯೋವನ್ನು ರೆಕಾರ್ಡ್​​ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸಾಕ್ಷಿ ಅವರು ಅಪ್ಪ ಒಳ್ಳೆಯವರಾ? ಅಥವಾ ಕೆಟ್ಟವರಾ? ಎಂಬ ಪ್ರಶ್ನೆಗೆ, ಎಲ್ಲರೂ ಒಳ್ಳೆಯವರೇ ಎಂದು ಜೀವಾ ಮುದ್ದಾಗಿ ಉತ್ತರಿಸುತ್ತಾಳೆ.

 Loading...

Very smart


A post shared by M S Dhoni (@mahi7781) on


ಧೋನಿ ಅವರು ಅಪ್​ಲೋಡ್ ಮಾಡಿದ ಕೇವಲ 2 ಗಂಟೆಗಳಲ್ಲೇ ಈ ವಿಡಿಯೋ 10 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, ಸಾಕಷ್ಟು ಕಮೇಂಟ್​ಗಳು ಬಂದಿವೆ.
First published:August 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...