ಐಪಿಎಲ್​ ಟ್ರೋಪಿ ಗೆದ್ಧ ಬೆನ್ನಲ್ಲೇ ಧೋನಿ ಮಗಳ ವೀಡಿಯೋ ವೈರಲ್​!


Updated:May 29, 2018, 3:31 PM IST
ಐಪಿಎಲ್​ ಟ್ರೋಪಿ ಗೆದ್ಧ ಬೆನ್ನಲ್ಲೇ ಧೋನಿ ಮಗಳ ವೀಡಿಯೋ ವೈರಲ್​!
Twitter

Updated: May 29, 2018, 3:31 PM IST
ಮುಂಬೈ: ಕೆಲದಿನಗಳ ಹಿಂದೆಯಷ್ಟೇ ಅಂತ್ಯಗೊಂಡ ಐಪಿಎಲ್​ ಟೂರ್ನಮೆಂಟ್​ನ ಪೈನಲ್​​ ಪಂದ್ಯದಲ್ಲಿ  ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದ ಬಳಿಕ ಚೆನ್ನೈ ಪಡೆ ಸಂಭ್ರಮಾಚರಣೆ ನಡೆಸಿತ್ತು. ಈ ವೇಳೆ ತಂಡದ ನಾಯಕ ಧೋನಿ ತಮ್ಮ ಮಗಳು ಝೀವಾ ಜೊತೆ ಸೆಲಿಬ್ರೇಷನ್ ಮಾಡಿರುವ ವಿಡಿಯೋ ಟ್ರೆಂಡ್ ಆಗಿದೆ.

ಈ ಹಿಂದೆ ಧೋನಿ ಮಗಳು ಮೈದಾನದಲ್ಲಿ ಆಟವಾಡುವ ಬಯಕೆಯನ್ನು ಹೇಳಿಕೊಂಡಿದ್ದಳು ಎಂದು ಸ್ವತಃ ಧೋನಿಯೇ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ಫೈನಲ್​ ಪಂದ್ಯ ಮುಗಿದ ಬಳಿಕ ಜೀವಾ ಮೈದಾನದಲ್ಲಿ ಆಡುತ್ತಾ ಬಂದಿದ್ದಾಳೆ. ಇದನ್ನು ಕಂಡ ಧೋನಿ ಆಕೆಯನ್ನು ಎತ್ತಿ ಹಿಡಿದು ಖುಷಿಯಲ್ಲಿ ಸಂಭ್ರಮಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.Loading...


ಮುಂಬೈನಲ್ಲಿ ನಡೆದಿದ್ದ ಪಂದ್ಯದಲ್ಲಿ ಹೈದರಾಬಾದ್ ನೀಡಿದ 179 ರನ್ ಗಳ ಸವಾಲಿನ ಗುರಿಯನ್ನು ಮೆಟ್ಟಿನಿಂತ ಧೋನಿ ಪಡೆಯ ಸ್ಫೋಟಕ ಬ್ಯಾಟ್ಸಮನ್ ಶೇನ್ ವಾಟ್ಸನ್ ಭರ್ಜರಿ ಶತಕದ ಮೂಲಕ 8 ವಿಕೆಟ್ ಗಳ ಭರ್ಜರಿ ಗೆಲುವು ತಂದಿತ್ತರು. ಕೇವಲ 57 ಎಸೆತ ಎದುರಿಸಿದ ವಾಟ್ಸನ್ 8 ಸಿಕ್ಸರ್ ಮತ್ತು 11 ಬೌಂಡರಿಗಳ ನೆರವಿನಿಂದ 117 ರನ್ ಕಲೆ ಹಾಕಿ ಅಜೇಯರಾಗಿ ಉಳಿದರು.
First published:May 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...