Dhanteras 2021: ಆನ್‌ಲೈನ್‌ನಲ್ಲಿ ಚಿನ್ನ ಖರೀದಿಸುವಾಗ ಯಾವ ಅಂಶಗಳನ್ನು ಪರಿಗಣಿಸಬೇಕು? ಇಲ್ಲಿದೆ ಸಂಪೂರ್ಣ ವಿವರ

Diwali 2021: ಸಾಮಾನ್ಯ ಚಿನ್ನದಂತೆಯೇ ಡಿಜಿಟಲ್ ಚಿನ್ನವನ್ನು ಆನ್‌ಲೈನ್‌ನಲ್ಲಿ ಖರೀದಿಸಬಹುದು ಹಾಗೂ ಗ್ರಾಹಕರ ಪರವಾಗಿ ಚಿನ್ನ ಮಾರಾಟಗಾರರು ವಿಮೆ ಮಾಡಿದ ಡಿಜಿಟಲ್ ವಾಲ್ಟ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ.

Gold (Photo: Google)

Gold (Photo: Google)

 • Share this:
  ದೀಪಾವಳಿ (Diwali) ಹಾಗೂ ಧನ್‌ತೆರಾಸ್ (Dhanteras) ಸಂದರ್ಭಗಳಲ್ಲಿ ಚಿನ್ನ (Gold) ಖರೀದಿಸುವುದು ಶುಭ ಎಂಬ ನಂಬಿಕೆ ಇದೆ. ಹಾಗಾಗಿ ಈ ಹಬ್ಬಗಳ ಸಂದರ್ಭಗಳಲ್ಲಿ ಚಿನ್ನ ಖರೀದಿಯು ಭಾರತದಲ್ಲಿ ಒಂದು ಸಂಪ್ರದಾಯವಾಗಿದೆ. ಅದರಲ್ಲೂ ಆಭರಣ ಹಾಗೂ ನಾಣ್ಯಗಳ(Coin) ರೂಪದಲ್ಲಿರುವ ಚಿನ್ನಕ್ಕೆ ತುಸು ಬೇಡಿಕೆ ಹೆಚ್ಚು. ಆದರೂ, ಕೊರೋನಾ (Covid) ಸಾಂಕ್ರಾಮಿಕದ ಸಮಯದಲ್ಲಿ ನೇರವಾಗಿ ಚಿನ್ನದ ಅಂಗಡಿಗೆ ಭೇಟಿ ನೀಡಿ ಆಭರಣಗಳ ಖರೀದಿ ತುಸು ಅಪಾಯವೆಂದು ಪರಿಗಣಿಸಲಾಗಿರುವುದರಿಂದ ಭಾರತದಲ್ಲಿ ಡಿಜಿಟಲ್ ಚಿನ್ನದಲ್ಲಿ ಹೆಚ್ಚು ಹೆಚ್ಚು ಜನರು ಹೂಡಿಕೆ ಮಾಡುತ್ತಿದ್ದಾರೆ. ಬೇರೆ ಬೇರೆ ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾರಾಟಗಾರರು ಹಾಗೂ ಅಕ್ಕಸಾಲಿಗರಿಂದ ಜನರು ಚಿನ್ನ ಖರೀದಿಸುತ್ತಿದ್ದಾರೆ.

  ಸಾಮಾನ್ಯ ಚಿನ್ನದಂತೆಯೇ ಡಿಜಿಟಲ್ ಚಿನ್ನವನ್ನು ಆನ್‌ಲೈನ್‌ನಲ್ಲಿ ಖರೀದಿಸಬಹುದು ಹಾಗೂ ಗ್ರಾಹಕರ ಪರವಾಗಿ ಚಿನ್ನ ಮಾರಾಟಗಾರರು ವಿಮೆ ಮಾಡಿದ ಡಿಜಿಟಲ್ ವಾಲ್ಟ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ.

  ಈ ಸಂಬಂಧಿತವಾಗಿ ಡಿಜಿಟಲ್ ರೂಪದಲ್ಲಿ ಚಿನ್ನ ವಿತರಿಸುವ 3 ಸಂಸ್ಥೆಗಳನ್ನು ಇಲ್ಲಿ ಹೆಸರಿಸಬಹುದು. ಅಗ್ಮಾಂಟ್ ಗೋಲ್ಡ್; MMTC-PAMP ಇಂಡಿಯಾ ಪ್ರೈವೇಟ್ ಲಿಮಿಟೆಡ್ - ಇದು ರಾಜ್ಯ ನಡೆಸುತ್ತಿರುವ MMTC ಲಿಮಿಟೆಡ್ ಮತ್ತು ಸ್ವಿಸ್ ಸಂಸ್ಥೆ MKS PAMP ನಡುವಿನ ಜಂಟಿ ಉದ್ಯಮವಾಗಿದೆ; ಹಾಗೂ ತನ್ನ ಸೇಫ್‌ಗೋಲ್ಡ್ ಬ್ರ್ಯಾಂಡ್‌ನೊಂದಿಗೆ ಡಿಜಿಟಲ್ ಗೋಲ್ಡ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (Digital Gold India Pvt. Ltd) ಅದಲ್ಲದೆ ಜನಪ್ರಿಯ ವ್ಯಾಲೆಟ್‌ಗಳಾದ (ಪಾವತಿ ವಿಧಾನ) ಪೇಟಿಎಂ, ಅಮೆಜಾನ್ ಪೇ, ಗೂಗಲ್ ಪೇ ಹಾಗೂ ಫೋನ್‌ ಪೇ ಮೂಲಕ ಕೂಡ ಡಿಜಿಟಲ್ ಚಿನ್ನ ಖರೀದಿಸಬಹುದಾಗಿದೆ.

  ಡಿಜಿಟಲ್ ಚಿನ್ನವು ಹೂಡಿಕೆದಾರರನ್ನು ಹೆಚ್ಚು ಆಕರ್ಷಿಸಿದ್ದು ಚಿನ್ನದ ಎಲ್ಲಾ ಪ್ರಯೋಜಗಳನ್ನು ಇದು ಒದಗಿಸುತ್ತದೆ. ಚಿನ್ನವನ್ನು ಸುಲಭವಾಗಿ ಡಿಜಿಟಲ್ ರೂಪದಲ್ಲಿ ಮೊಬೈಲ್ ಆ್ಯಪ್‌ಗಳ ಮೂಲಕ ಖರೀದಿಸಬಹುದಾದ್ದರಿಂದ ಅಂಗಡಿಗೆ ಭೇಟಿ ನೀಡುವ ಅಗತ್ಯವಿರುವುದಿಲ್ಲ ಎಂದು ಡಿಜಿಟಲ್ ಸ್ವಿಸ್ ಗೋಲ್ಡ್ & ಗಿಲ್ಡೆಡ್‌ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶ್ರಫ್ ರಿಜ್ವಿ ಹೇಳುತ್ತಾರೆ.

  ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಚಿನ್ನಕ್ಕಿರುವ ಅಪಾರ ಜನಪ್ರಿಯತೆಯನ್ನು ಎರಡು ಅಂಶಗಳು ಬಣ್ಣಿಸಿವೆ. ಸುಲಭವಾಗಿ ದೊರೆಯುವುದು ಹಾಗೂ ಕಡಿಮೆ ಬೆಲೆ ಎಂಬುದಾಗಿ ಈ ಅಂಶಗಳನ್ನು ಪರಿಗಣಿಸಬಹುದಾಗಿದೆ. ಡಿಜಿಟಲ್ ಚಿನ್ನವನ್ನು ನೀವು ಖರೀದಿಸುತ್ತೀರಿ ಎಂದಾದಲ್ಲಿ ಕೆಲವೊಂದು ಅಂಶಗಳತ್ತ ನೀವು ಗಮನ ಹರಿಸುವುದು ಪ್ರಮುಖವಾಗಿದೆ.

  ಶುದ್ಧತೆ:

  ಡಿಜಿಟಲ್ ಚಿನ್ನ ಖರೀದಿಸುವ ಮುನ್ನ ಹೂಡಿಕೆದಾರರು ಚಿನ್ನದ ಶುದ್ಧತೆಯನ್ನು ಪರಿಶೀಲಿಸಬೇಕಾಗುತ್ತದೆ. "MMTC-PAMP ನಿಂದ ಖರೀದಿಸಿದ ಡಿಜಿಟಲ್ ಚಿನ್ನವು ಸೇಫ್‌ಗೋಲ್ಡ್ ಸಹಯೋಗದೊಂದಿಗೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಂದ ಖರೀದಿಸುವುದಕ್ಕಿಂತ ಹೆಚ್ಚು ಶುದ್ಧವಾಗಿರುತ್ತದೆ" ಎಂದು ಫಿನಾಲಜಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಾಂಜಲ್ ಕಮ್ರಾ ತಿಳಿಸಿದ್ದಾರೆ.

  ಬೆಲೆಯು ಕನಿಷ್ಠ ಮೌಲ್ಯ 1 ರೂ. ನಿಂದ ಆರಂಭಗೊಳ್ಳುತ್ತದೆ:

  ಡಿಜಿಟಲ್ ಚಿನ್ನದ ಬೆಲೆಯು 1 ರೂ. ನಿಂದ ಆರಂಭವಾಗುತ್ತದೆ. ಡಿಜಿಟಲ್ ಚಿನ್ನದಲ್ಲಿ ಗ್ರಾಹಕರು ಹೂಡಿಕೆ ಮಾಡುವುದರಿಂದ ಸಣ್ಣ ಹೂಡಿಕೆಯಲ್ಲಿ ಭಾಗಶಃ ಭೌತಿಕ ಚಿನ್ನ (physical gold) ಖರೀದಿಸಲು ಅನುವು ಮಾಡಿಕೊಡುತ್ತದೆ ಎಂದು ಡಿಜಿಟಲ್ ಸ್ವಿಸ್ ಗೋಲ್ಡ್ ಮತ್ತು ಗಿಲ್ಡೆಡ್‌ನ ಅಶ್ರಫ್ ರಿಜ್ವಿ ಹೇಳುತ್ತಾರೆ.

  ಸಂಗ್ರಹಣೆ:

  ನೀವು ಖರೀದಿಸಿದ ಚಿನ್ನವನ್ನು ಕೇಂದ್ರೀಯವಾಗಿ ಸಂಗ್ರಹಿಸಲಾಗುತ್ತದೆ ಹಾಗೂ ನಿಮ್ಮ ಒಡೆತನದಲ್ಲಿರುವ ಗ್ರಾಮ್‌ಗಳ ಸಂಖ್ಯೆಯ ಡಿಜಿಟಲ್ ವಾಲ್ಟ್ ತುಲನೆಯಂತೆ ನಿಮಗೆ ತೋರಿಸಲಾಗುತ್ತದೆ. ಡಿಜಿಟಲ್ ವಾಲ್ಟ್ ಎನ್ನುವುದು ಸುರಕ್ಷಿತ ಆನ್‌ಲೈನ್ ಪ್ಲಾಟ್‌ಫಾರ್ಮ್ ಆಗಿದ್ದು ನಿಮ್ಮ ಡಿಜಿಟಲ್ ಸ್ವತ್ತುಗಳು ಹಾಗೂ ಲಾಗಿನ್‌ಗಳನ್ನು ನೀವಿಲ್ಲಿ ಸಂಗ್ರಹಿಸಬಹುದು ಹಾಗೂ ನಿರ್ವಹಿಸಬಹುದಾಗಿದೆ. ಈ ಚಿನ್ನದ ಡೆಲಿವರಿಯನ್ನು ನಿಮಗೆ ತೆಗೆದುಕೊಳ್ಳಬಹುದು. ಇಲ್ಲದಿದ್ದರೆ ನಿಮ್ಮ ವಾಲ್ಟ್‌ನಿಂದ ನೇರವಾಗಿ ಅಪ್ಲಿಕೇಶನ್‌ನಲ್ಲಿ ಮಾರಾಟ ಮಾಡುವ ಆಯ್ಕೆ ನಿಮಗಿರುತ್ತದೆ ಎಂದು 5Paisaದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ಗಗ್ದಾನಿ ತಿಳಿಸಿದ್ದಾರೆ.

  Read Also: Diwali 2021: ಧನ್​ತೇರಸ್​ನಿಂದ ಪಾಡ್ಯಮಿವರೆಗೆ ಐದು ದಿನಗಳ ದೀಪಾವಳಿ ಹಬ್ಬದ ಆಚರಣೆ ಮಹತ್ವ

  GST ಹಾಗೂ ಇತರೆ ಶುಲ್ಕಗಳು:

  ಭೌತಿಕ ಚಿನ್ನ ಖರೀದಿಯಂತೆಯೇ ಡಿಜಿಟಲ್ ಚಿನ್ನ ಖರೀದಿಸುವುದು ನಿಮ್ಮ ಚಿನ್ನದ ಬೆಲೆಗಿಂತ 3%ನಷ್ಟು GSTಗೆ ಅನುವು ಮಾಡಿಕೊಡುತ್ತದೆ. ಡಿಜಿಟಲ್ ಚಿನ್ನ ಪೂರೈಸುವ ಪೂರೈಕೆದಾರರು ಸಂಗ್ರಹಣಾ ವೆಚ್ಚ, ವಿಮೆ ಮತ್ತು ಟ್ರಸ್ಟಿ ಶುಲ್ಕದಂತಹ ವೆಚ್ಚಗಳಿಗೆ 2-3 % ದಷ್ಟು ಹೆಚ್ಚುವರಿ ಶುಲ್ಕ ವಿಧಿಸುತ್ತಾರೆ. ಗ್ರಾಹಕರು ಡಿಜಿಟಲ್ ಚಿನ್ನವನ್ನು ಭೌತಿಕ ಚಿನ್ನಕ್ಕೆ ಪರಿವರ್ತಿಸಲು ಬಯಸಿದಲ್ಲಿ ಪ್ರಮಾಣ ಆಧರಿಸಿ ಮೇಕಿಂಗ್ ಶುಲ್ಕಗಳನ್ನು ವಿಧಿಸಲಾಗುತ್ತದೆ. ನಿಮ್ಮ ಮನೆಗಳಿಗೆ ಚಿನ್ನವನ್ನು ಡೆಲಿವರಿ ಮಾಡಿಕೊಳ್ಳಲು ಹೂಡಿಕೆದಾರರು ಹೆಚ್ಚು ಶುಲ್ಕ ಪಾವತಿಸಬೇಕಾಗುತ್ತದೆ.

  ಗರಿಷ್ಠ ಹಿಡುವಳಿ ಅವಧಿ:

  ಡಿಜಿಟಲ್ ಚಿನ್ನದ ಉತ್ಪನ್ನಗಳು ಗರಿಷ್ಠ ಹಿಡುವಳಿ ಅವಧಿಯನ್ನು ಹೊಂದಿರುತ್ತವೆ, ನಂತರ ಹೂಡಿಕೆದಾರರು ಚಿನ್ನದ ಡೆಲಿವರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ ಅಥವಾ ಅದನ್ನು ಮರಳಿ ಮಾರಾಟ ಮಾಡಬೇಕಾಗುತ್ತದೆ. ವಿಭಿನ್ನ ವ್ಯಾಪಾರಿಗಳು ಡಿಜಿಟಲ್ ಚಿನ್ನಕ್ಕಾಗಿ ವಿಭಿನ್ನ ಹಿಡುವಳಿ ಅವಧಿಯ ಷರತ್ತುಗಳನ್ನು ವಿಧಿಸುತ್ತಾರೆ.

  MMTC-PAMP ಯೊಂದಿಗೆ 5 ವರ್ಷಗಳ ಕಾಲ ನಿಮ್ಮ ಡಿಜಿಟಲ್ ಚಿನ್ನ ಹಿಡುವಳಿ ಮಾಡಿಕೊಂಡ ನಂತರ ನೀವು ಚಿನ್ನವನ್ನು ಮಾರಾಟ ಮಾಡಬೇಕಾಗುತ್ತದೆ ಅಥವಾ ಅದನ್ನು ಚಿನ್ನದ ನಾಣ್ಯಗಳಾಗಿ ಪರಿವರ್ತಿಸಬೇಕಾಗುತ್ತದೆ. ಹಾಗಾಗಿ, ಡಿಜಿಟಲ್ ಚಿನ್ನ ಖರೀದಿಸುವ ಮೊದಲು ನೀವು FAQ ಗಳನ್ನು (ಪ್ರಶ್ನೋತ್ತರ) ಎಚ್ಚರಿಕೆಯಿಂದ ಪರಿಶೀಲಿಸಬೇಕು, ಅದರಲ್ಲೂ ವಿಶೇಷವಾಗಿ ಹಿಡುವಳಿ ಅವಧಿ ಮತ್ತು ಹೂಡಿಕೆಯ ಮೇಲಿನ ಮಿತಿಯ ಬಗ್ಗೆ ವಿವರವಾಗಿ ತಿಳಿದುಕೊಂಡಿರಬೇಕು ಎಂದು ಫಿನಾಲಜಿಯ ಪ್ರಾಂಜಲ್ ಕಮ್ರಾ ಹೇಳುತ್ತಾರೆ.

  Read Also: Viral News: ಬೆಲೆ ಗೊತ್ತಿಲ್ಲದೇ ₹20 ಕೋಟಿ ವಜ್ರದ ಉಂಗುರ ಬಿಸಾಡೋಕೆ ಹೊರಟಿದ್ಲು ಮಹಾತಾಯಿ!

  ಡಿಜಿಟಲ್ ಚಿನ್ನದ ಮೇಲಿನ ತೆರಿಗೆ:

  ಡಿಜಿಟಲ್ ಚಿನ್ನದ ಹಿಡುವಳಿ ಅವಧಿಯು ಹೂಡಿಕೆದಾರರು ಪಾವತಿಸಬೇಕಾದ ತೆರಿಗೆಗಳ ಮೊತ್ತವನ್ನು ನಿರ್ಧರಿಸುತ್ತದೆ. ಡಿಜಿಟಲ್ ಚಿನ್ನವನ್ನು 36 ತಿಂಗಳಿಗಿಂತ ಕಡಿಮೆ ಅವಧಿಗೆ ಹಿಡಿದಿಟ್ಟುಕೊಂಡರೆ, ಆದಾಯಕ್ಕೆ ನೇರವಾಗಿ ತೆರಿಗೆ ವಿಧಿಸಲಾಗುವುದಿಲ್ಲ. ಡಿಜಿಟಲ್ ಚಿನ್ನದಿಂದ ದೀರ್ಘಾವಧಿಯ ಬಂಡವಾಳ ಲಾಭಗಳಿಗೆ ಅನ್ವಯವಾಗುವ ದಂಡ ತೆರಿಗೆ ಮತ್ತು 4 % ಸೆಸ್ ಜೊತೆಗೆ ಆದಾಯದ ಮೇಲೆ 20% ದಷ್ಟು ತೆರಿಗೆ ವಿಧಿಸಲಾಗುತ್ತದೆ.

  ಅನಾನುಕೂಲತೆ:

  ಚಿನ್ನದ ನಿಧಿಗಳು ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಯ ನಿಯಂತ್ರಕ ಅಧಿಕಾರ ವ್ಯಾಪ್ತಿಗೆ ಬರುವುದರಿಂದ ಡಿಜಿಟಲ್ ಚಿನ್ನ ಖರೀದಿಸುವ ಪ್ರಮುಖ ಅನಾನುಕೂಲತೆ ಎಂದರೆ ನಿಯಂತ್ರಕ ಕಾರ್ಯವಿಧಾನದ ಕೊರೆತಯಾಗಿದೆ. ಹೂಡಿಕೆದಾರರು ಚಿನ್ನದ ನಿಧಿಗಳಲ್ಲಿ ಸುಲಭವಾಗಿ ಹೂಡಿಕೆ ಮಾಡಬಹುದು ಮತ್ತು ಮೊಬೈಲ್ ಆ್ಯಪ್‌ಗಳು ಅಥವಾ ವಿವಿಧ ಮ್ಯೂಚುಯಲ್ ಫಂಡ್ ಹೌಸ್‌ಗಳು, ಹೂಡಿಕೆ ವೇದಿಕೆಗಳು ಮತ್ತು ಮಾರುಕಟ್ಟೆ ಸ್ಥಳಗಳ ವೆಬ್‌ಸೈಟ್‌ಗಳ ಮೂಲಕ ಅವುಗಳನ್ನು ರಿಡೀಮ್‌ ಮಾಡಬಹುದು ಎಂಬುದು Paisabazaar.comನ ಸಹ-ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಕ್ರೇಜಾ ಅಭಿಪ್ರಾಯವಾಗಿದೆ.
  First published: