Viral video: ಈ ಮಹಿಳೆಯರು ಜಗಳವಾಡಲು ಆರಿಸಿಕೊಂಡ ಜಾಗ ಮಾತ್ರ ವಿಚಿತ್ರ! ಎಲ್ಲಿ ಅಂತ ನೀವೇ ನೋಡಿ

ನೀವು ಬೀದಿ ಜಗಳ, ಕೋಳಿ ಜಗಳದ ಬಗ್ಗೆ ಕೇಳಿರುತ್ತೀರಿ, ಆದರೆ ಚರಂಡಿ ಜಗಳದ ಬಗ್ಗೆ ಕೇಳಿದ್ದೀರಾ? ಇಲ್ಲವಾದಲ್ಲಿ, ರಾಜಸ್ಥಾನದ ಅಜ್ಮೇರ್‍ನಲ್ಲಿ ನಡೆದ ಚರಂಡಿ ಜಗಳವೊಂದರ ಸುದ್ದಿ ಇಲ್ಲಿದೆ. ಆದರೆ ಇದು ಅಂತಿಂತ ಚರಂಡಿ ಜಗಳವಲ್ಲ, ಜಡೆಗಳ ನಡುವಿನ ಚರಂಡಿ ಜಗಳ! ಅಬ್ಬಬ್ಬಾ, ಜಡೆ ಜಗಳ ಭಾರೀ ಭಯಾನಕ ಎನ್ನುತ್ತೀರಾ? ಆದರೆ ಈ ಜಗಳ ಭಯಾನಕ ಮಾತ್ರವಲ್ಲ, ಅಸಹ್ಯವಾಗಿಯೂ ಇತ್ತು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನೀವು ಬೀದಿ ಜಗಳ (Fight), ಕೋಳಿ ಜಗಳದ ಬಗ್ಗೆ ಕೇಳಿರುತ್ತೀರಿ, ಆದರೆ ಚರಂಡಿ ಜಗಳದ ಬಗ್ಗೆ ಕೇಳಿದ್ದೀರಾ? ಇಲ್ಲವಾದಲ್ಲಿ, ರಾಜಸ್ಥಾನದ ಅಜ್ಮೇರ್ ನಲ್ಲಿ (Ajmer) ನಡೆದ ಚರಂಡಿ ಜಗಳವೊಂದರ ಸುದ್ದಿ ಇಲ್ಲಿದೆ. ಆದರೆ ಇದು ಅಂತಿಂತ ಚರಂಡಿ ಜಗಳವಲ್ಲ, ಜಡೆಗಳ ನಡುವಿನ ಚರಂಡಿ (Drainage) ಜಗಳ! ಅಬ್ಬಬ್ಬಾ, ಜಡೆ ಜಗಳ ಭಾರೀ ಭಯಾನಕ ಎನ್ನುತ್ತೀರಾ? ಆದರೆ ಈ ಜಗಳ ಭಯಾನಕ ಮಾತ್ರವಲ್ಲ, ಅಸಹ್ಯವಾಗಿಯೂ ಇತ್ತು. ಯಾಕಂತೀರಾ? ಏಕೆಂದರೆ ಇದರಲ್ಲಿ ಬೈಗುಳ, ಹೊಡೆದಾಟದ ಜೊತೆಗೆ ಚರಂಡಿಯ ಕೆಸರೂ ಕೂಡ ಇತ್ತಲ್ಲ! ಹೌದು, ಆ ವಾರಗಿತ್ತಿಯರಿಬ್ಬರ ಜಗಳ ಯಾವ ಮಟ್ಟದಲ್ಲಿ ಇತ್ತೆಂದರೆ, ಜಗಳವಾಡುತ್ತಾ ಇಬ್ಬರೂ ಪಕ್ಕದಲ್ಲೇ ಇದ್ದ ಚರಂಡಿ ಕಾಲುವೆಗೆ ಬಿದ್ದರೂ, ಕಿತ್ತಾಡಿಕೊಳ್ಳುವುದನ್ನು ಮಾತ್ರ ಬಿಡಲಿಲ್ಲ.

ಅವರಿಬ್ಬರ ಜಗಳ ಸಾಲದು ಎಂಬಂತೆ, ಅವರ ಕುಟುಂಬದ ಸದಸ್ಯರು  ಕೂಡ, ಆದಾಗಲೇ ವಾರಗಿತ್ತಿಯರ ರಣಭೂಮಿಯಾಗಿ ಬದಲಾಗಿದ್ದ ಚರಂಡಿ ಕಾಲುವೆಗೆ ಇಳಿದು ಕಿತ್ತಾಡತೊಡಗಿದರು. ಈ ಘಟನೆಯ ಕುರಿತ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಆಸ್ತಿಗೆ ಸಂಬಂಧಿಸಿದ ವಿಷಯ

ಅಷ್ಟಕ್ಕೂ ಅಣ್ಣತಮ್ಮಂದಿರ ಕುಟುಂಬದ ನಡುವೆ ವೈಮನಸ್ಯವೇಕೆ ಎನ್ನುತ್ತೀರಾ? ಎಲ್ಲಾ ಕಡೆ ಇರುವಂತೆ ಇವರದ್ದೂ ಕೂಡ ಆಸ್ತಿ ಜಗಳ. ಬಹಳ ಸಮಯದಿಂದ ಪೆಟ್ರೊಲ್ ಪಂಪ್ ಮಾಲೀಕ ನರೇಂದ್ರ ಕುಮಾವತ್ ಮತ್ತು ಆತನ ಮೃತ ಸಹೋದರನ ಕುಟುಂಬ ನಡುವೆ ಆಸ್ತಿಗೆ ಸಂಬಂಧಿಸಿದಂತೆ ಜಗಳ ನಡೆಯುತ್ತಲೇ ಬಂದಿದೆ.

ಮಾಧ್ಯಮವೊಂದು ವರದಿ ಮಾಡಿರುವ ಪ್ರಕಾರ, ಮೃತ ಸಹೋದರನ ಪತ್ನಿ ಸಂಗೀತ ಕುಮಾವತ್, ಗುರುವಾರ ಸಂಜೆ ಸುಮಾರು 6 ಗಂಟೆಯ ಸಮಯದಲ್ಲಿ ತನ್ನ ತಾಯಿ ಮನೆಯವರ ಜೊತೆ ಪೆಟ್ರೋಲ್ ಪಂಪ್‍ಗೆ ಹೋಗಿ, ನರೇಂದ್ರ ಕುಮಾವತ್ ಅವರ ಕುಟುಂಬದ ಜೊತೆ ಜಗಳವಾಡತೊಡಗಿದಳು.

ಮೂರು ಮಹಿಳೆಯರ ನಡುವೆ ಜಗಳ

ನರೇಂದ್ರ ಕುಮಾವತ್ ಅವರ ಪತ್ನಿ ಚಂದಾ ಮತ್ತು ಆಕೆಯ ಸೊಸೆ ಶಿಖಾ ಸೇರಿಕೊಂಡು ಸಂಗೀತಾಳಿಗೆ ಹೊಡೆಯಲು ಆರಂಭಿಸಿದಾಗ ಜಗಳ ಇನ್ನೂ ತಾರಕಕ್ಕೇರಿತು. ಮೂರೂ ಜನ ಹೆಂಗಸರು ಪರಸ್ಪರರ ಜುಟ್ಟನ್ನು ಎಳೆಯುತ್ತಾ, ಮುಷ್ಟಿಯಲ್ಲಿ ಗುದ್ದುತ್ತಾ ಮತ್ತು ಕಾಲಿನಿಂದ ಒದೆಯುತ್ತಾ ಕಿತ್ತಾಡಿಕೊಳ್ಳತೊಡಗಿದರು.

ಇದನ್ನೂ ಓದಿ:  Agnipath Protest: ಅಗ್ನಿಪಥ್ ಕುರಿತು ಸುಳ್ಳು ಸುದ್ದಿ ಹರಡಿದ 35 ವಾಟ್ಸಾಪ್ ಗ್ರೂಪ್​​ಗಳು ಬ್ಯಾನ್; 10 ಮಂದಿ ಅರೆಸ್ಟ್

ಆ ಮಹಿಳಾಮಣಿಯರು ಜಗಳದಲ್ಲಿ ಯಾವ ರೀತಿ ಮೈಮರೆತರೆಂದರೆ, ಜಗಳವಾಡುತ್ತಾ ಪಕ್ಕದಲ್ಲೇ ಹರಿಯುತ್ತಿದ್ದ ಚರಂಡಿ ನೀರಿನ ಕಾಲುವೆಗೆ ಬಿದ್ದು ಬಿಟ್ಟರು. ಹಾಗೆಂದು ಈ ಆ ಘಟವಾಣಿಯರು ಸುಮ್ಮನಾಗಲಿಲ್ಲ, ಕಾಲ್ ಕೇಸರಾದರೆ ಬಾಯಿ ಜೋರಾಯಿತು ! ಚಂರಂಡಿಯಲ್ಲಿ ಜುಟ್ಟು ಕದನ ಮುಂದುವರೆಯಿತು.ಬೀದಿ ಜಗಳ ಚರಂಡಿ ಜಗಳವಾಗಿ ಬದಲಾದ ನಂತರವಾದರೂ ಕುಟುಂಬದವರು ಆ ಕಲಹಪ್ರಿಯ ವಾರಗಿತ್ತಿಯರ ಜಗಳವನ್ನು ನಿಲ್ಲಿಸಲು ಪ್ರಯತ್ನಿಸಿರಬಹುದು ಎಂದು ಎಂದುಕೊಂಡಿರಾ? ಖಂಡಿತಾ ಇಲ್ಲ, ಆ ಕುಟುಂಬಗಳ ಇತರ ಸದಸ್ಯರು ಕೂಡ ವಾರಗಿತ್ತಿಯರ ಜಗಳಕ್ಕೆ ಸಾಥ್ ನೀಡಲು ಚರಂಡಿಗಿಳಿದರು. ಚರಂಡಿಯ ಸುತ್ತ ನೆರೆದವರೆಲ್ಲಾ ಕುಮಾವತ್ ಕುಟುಂಬ ಮತ್ತು ಅವರ ಬೀಗರ ಮನೆಯವರ ನಡುವಿನ ಚರಂಡಿ ಕದನಕ್ಕೆ ಸಾಕ್ಷಿಯಾದರು.

ಘಟನಾ ಸ್ಥಳಕ್ಕೆ ಪೊಲೀಸರ ಭೇಟಿ

ಕೊನೆಗೂ ಈ ಜಗಳ ನಿಲ್ಲಿಸಲು, ಅಲ್ಲಿಗೆ ಪೊಲೀಸರು ಬಂದು ಮಧ್ಯೆ ಪ್ರವೇಶಿಸಬೇಕಾಯಿತು. ನರೇಂದ್ರ ಕುಮಾರ್ ಮತ್ತು ಸಂಗೀತಾ ಕುಮಾವತ್ ಅವರು ಪರಸ್ಪರರ ಮೇಲೆ ದೈಹಿಕ ಹಲ್ಲೆ, ಕಿರುಕುಳ ಮತ್ತು ವಿಧ್ವಂಸಕ ಕೃತ್ಯದ ದೂರುಗಳನ್ನು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:  Washington DC Shooting: ಅಮೆರಿಕಾದಲ್ಲಿ ಮತ್ತೊಂದು ಗುಂಡಿನ ದಾಳಿ, ರಸ್ತೆಗಳಲ್ಲಿ ಎದ್ದುಬಿದ್ದು ಓಡಿದ ಜನ!

ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು?

ಈ ಘಟನೆಯ ವಿಡಿಯೋ ನೋಡಿದ ನೆಟ್ಟಿಗರು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. “ಇವರದ್ದು ಬೇರೆಯೇ ಅಗ್ನಿಪಥ್ ನಡೆಯುತ್ತಿದೆ” ಎಂದು ಒಬ್ಬ ನೆಟ್ಟಿಗ ಬರೆದಿದ್ದರೆ, “ಮುಂದೆ ಏನಾಯಿತು ಎಂಬ ವಿಡಿಯೋ ಕೂಡ ಇದೆಯಾ?” ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ.

“ಈ ಸಂದರ್ಭದಲ್ಲಿ ಇನ್ನೊಬ್ಬ ನೆರೆಯವರು : ಹೇಗೂ ಚರಂಡಿಗೆ ಇಳಿದೇ ಬಿಟ್ಟಿದ್ದೀರಾ, ಹಾಗೇ ಸ್ವಚ್ಚ ಮಾಡಿ ಬಂದು ಬಿಡಿ” ಎಂದು ಇನ್ನೊಬ್ಬರು ಹಾಸ್ಯ ಮಾಡಿದ್ದರೆ, “ನಾನು ಬೀದಿ ಜಗಳದ ಬಗ್ಗೆ ಕೇಳಿದ್ದೇ, ಆದರೆ ಇದು ಚರಂಡಿ ಜಗಳ” ಎಂದು ಇನ್ನೊಬ್ಬ ನೆಟ್ಟಿಗರು ಬರೆದುಕೊಂಡಿದ್ದಾರೆ.
Published by:Ashwini Prabhu
First published: