Viral Video: ವೈರಲ್ ಆಯ್ತು ಅಜ್ಜಿಯ ಡ್ಯಾನ್ಸ್ ವಿಡಿಯೋ; ಫಿದಾ ಆದ್ರು ನೆಟ್ಟಿಗರು

Old Lady Dance: ಅತ್ತಿಗೆ-ಮೈದುನರ ಒಂದು ಹಳೆಯ ವಿಡಿಯೋ ಆನ್‍ಲೈನ್‍ನಲ್ಲಿ ಕಾಣಿಸಿಕೊಂಡಿದೆ. ಜನಪ್ರಿಯ ಬಾಲಿವುಡ್‍ನ ಹಾಡು ಹರಿಯಾನ್ವಿ ಹಾಡು ಗಜ್ಬನ್ ಪಾನಿ ನೇ ಚಾಲಿ ಗೆ ಇಬ್ಬರು ಮಾಡಿದ ನೃತ್ಯ ನೆಟ್ಟಿಗರನ್ನು ಸಂತೋಷದ ಸಾಗರದಲ್ಲಿ ಮುಳುಗಿಸಿದೆ.

ಅಜ್ಜಿಯ ಡ್ಯಾನ್ಸ್

ಅಜ್ಜಿಯ ಡ್ಯಾನ್ಸ್

  • Share this:

ಮದುವೆಯ ಬಂಧ ಅನುರಾಗದ ಅನುಬಂಧ. ಎಲ್ಲಾ ತಲೆಮಾರುಗಳ ಕ್ರೋಢಿಕರಣದ ಶುಭಾರಂಭ. ಗಂಡು ಹೆಣ್ಣಿನ ಬಾಳಿನ ಪ್ರಮುಖ ಘಟ್ಟವಾದ ಮದುವೆಯನ್ನು ಅತಿ ಸಂತೋಷದಿಂದ ಬರಮಾಡಿಕೊಳ್ಳುತ್ತಾರೆ. ಹಾಡು, ಕುಣಿತ, ಆಟ, ತಮಾಷೆಗಳು ಈ ಸಂತಸಕ್ಕೆ ಮತ್ತಷ್ಟು ಮೆರಗು ನೀಡುತ್ತವೆ. ನೃತ್ಯ, ಸಂಗೀತ ದೊಡ್ಡವರು ಚಿಕ್ಕವರು ಎಂದೆನಿಸದೇ ಎಲ್ಲರೂ ಭಾಗಿಯಾಗುತ್ತಾರೆ. ಈ ಸಂದರ್ಭದಲ್ಲಿ ತೆಗೆದ ವಿಡಿಯೋಗಳು, ಫೋಟೋಗಳು ಆ ಸುಂದರ ಕ್ಷಣವನ್ನು ಮತ್ತಷ್ಟು ಹಸಿಹಸಿಯಾಗಿ ಜೀವಂತವಾಗಿರಿಸುತ್ತದೆ.


ಕೆಲವರು ಮದುವೆ ಸಮಾರಂಭದ ಹಳೆಯ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಇಂತಹ ಎಷ್ಟೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಂಪೂರ್ಣ ವೈರಲ್ ಆಗುತ್ತದೆ.


ಅತ್ತಿಗೆ-ಮೈದುನರ ಒಂದು ಹಳೆಯ ವಿಡಿಯೋ ಆನ್‍ಲೈನ್‍ನಲ್ಲಿ ಕಾಣಿಸಿಕೊಂಡಿದೆ. ಜನಪ್ರಿಯ ಬಾಲಿವುಡ್‍ನ ಹಾಡು ಹರಿಯಾನ್ವಿ ಹಾಡು ಗಜ್ಬನ್ ಪಾನಿ ನೇ ಚಾಲಿ ಗೆ ಇಬ್ಬರು ಮಾಡಿದ ನೃತ್ಯ ನೆಟ್ಟಿಗರನ್ನು ಸಂತೋಷದ ಸಾಗರದಲ್ಲಿ ಮುಳುಗಿಸಿದೆ. ಜನರು ಇವರಿಬ್ಬರ ನೃತ್ಯವನ್ನು ಇಷ್ಟಪಟ್ಟಿದ್ದಾರೆ.


ಈ ಅತ್ತಿಗೆಯ ಮೈದುನ ಅಂಕಿತ್ ಜಂಗಿದ್ ಅವರು ಸ್ವತಃ ಡಿಜಿಟಲ್ ಸೃಷ್ಟಿಕರ್ತ. ಅವನು ತನ್ನ ಯೂಟ್ಯೂಬ್ ಚಾನೆಲ್‍ನಲ್ಲಿ ಡ್ಯಾನ್ಸ್ ವೀಡಿಯೋವನ್ನು ಅಪ್‍ಲೋಡ್ ಮಾಡಿದ್ದಾನೆ ಮತ್ತು ಈಗಾಗಲೇ ಇದು ಭಾರೀ ಹಿಟ್ ಆಗಿದೆ. ಮದುವೆಯ ವಿಡಿಯೋ ನೃತ್ಯವು ಒಂದು ವರ್ಷದೊಳಗೆ 23,252,587 ಕ್ಕಿಂತ ಹೆಚ್ಚು ಜನರು ವೀಕ್ಷಿಸಿದ್ದಾರೆ.ಮದುವೆಗೆ ಲಾಕ್‍ಡೌನ್ ಕಾರಣ ನಿರ್ಬಂಧ ಇರುವ ಹಿನ್ನೆಲೆ ನೆಟಿಜನ್‍ಗಳು ಥ್ರೋಬ್ಯಾಕ್ ಅಥವಾ ಹಳೆಯ ವಿವಾಹದ ವೀಡಿಯೋಗಳನ್ನು ನೋಡುತ್ತಿದ್ದಾರೆ, ಇದರಿಂದಾಗಿ ಇವುಗಳು ಆನ್‍ಲೈನ್‍ನಲ್ಲಿ ವೈರಲ್ ವಿಷಯಗಳಾಗಿವೆ. ಕೆಲವು ದಿನಗಳ ಹಿಂದೆ, ವಧುವರರು ಅದೇ ಜನಪ್ರಿಯ ಹರಿಯಾನ್ವಿ ಹಾಡಿನಲ್ಲಿ ನೃತ್ಯ ಮಾಡುತ್ತಿರುವ ವಿವಾಹದ ವಿಡಿಯೋ ಕೂಡ ಅಂತರ್ಜಾಲದಲ್ಲಿ ವೈರಲ್ ಆಗಿದೆ.


ಇನ್ನು ಅಜ್ಜಿಯೊಬ್ಬರು ನೃತ್ಯ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 89 ವರ್ಷದ ಅಜ್ಜಿ ಬಾದಶಾಹ್ ಸಂಗೀತಕ್ಕೆ ಕುಣಿದಿದ್ದಾರೆ.ಆರಂಭದಲ್ಲಿ ಆಕೆ ನಿಜವಾದ ನೃತ್ಯದ ಚಲನೆಗಳನ್ನು ನಕಲಿಸಲು ಪ್ರಯತ್ನಿಸಿದರು. ಅಂದರೆ ಮೊಮ್ಮಗ ಹೇಗೆ ಹೆಜ್ಜೆ ಹಾಕುತ್ತಿದ್ದನೋ ಅದೇ ರೀತಿಯಲ್ಲಿ ನೃತ್ಯ ಮಾಡುತ್ತಿದ್ದರು. ಆದರೆ ಅಂತಿಮವಾಗಿ ತನ್ನದೇ ಲಯಕ್ಕೆ ನೃತ್ಯ ಮಾಡಲು ಪ್ರಾರಂಭಿಸಿದರು. ದಾದಿ ಆಶೀರ್ವಾದ ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಬರೆದು ವಿಡಿಯೋ ಅಪ್‍ಲೋಡ್ ಮಾಡಿದ್ದಾರೆ. ಈ ವಿಡಿಯೋವನ್ನು 2,59,910ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.


ಇದಕ್ಕೆ ನೆಟ್ಟಿಗರು ಅಜ್ಜಿ ನಿಜವಾಗಿಯೂ ಅದ್ಭುತ. ಅವರ ನೃತ್ಯ ಕೂಡ ತುಂಬಾ ಚೆನ್ನಾಗಿದೆ. ಈ ರೀತಿಯ ಅಜ್ಜಿಯನ್ನು ಹೊಂದಿರುವ ನೀವು ಅದೃಷ್ಟವಂತರು. ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ಕಮೆಂಟ್ ಮಾಡಿದ್ದಾರೆ. ಅಯ್ಯೋ ಅಜ್ಜಿ ನೀವು ಮೊಮ್ಮಗನನ್ನು ಸೋಲಿಸಿ ಬಿಟ್ರಿ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಅಜ್ಜಿಯ ವಯಸ್ಸು 89ಕ್ಕಿಂತ ಕಡಿಮೆ ಎಂದು ಅನಿಸುತ್ತಿದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿ ಅಜ್ಜಿಯ ಉತ್ಸಾಹವನ್ನು ಕೊಂಡಾಡಿದ್ದಾರೆ.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: