Viral Video: ಐಸ್​ ಕ್ರೀಂ ದೋಸೆ ಆಯ್ತು ಈಗ ಕೊರೊನಾ ವಡೆ ಸರದಿ- ಇಲ್ಲಿದೆ ನೋಡಿ ವೈರಲ್ ವಿಡಿಯೋ

ಈ ಮಹಿಳೆ ಮಾಡಿರುವ ವಡೆಯ ಹೆಸರು ಕೊರೊನಾ ವಡೆ ಅಂತೆ, ಈ ವಡೆಯು ಸಾಮಾನ್ಯ ವಡೆಯಂತಿದ್ದು, ಆಕಾರದಲ್ಲಿ ನೋಡಿದರೆ ಇದು ನಿಮಗೆ ಭಯಂಕರ ಕೊರೊನಾ ವೈರಸ್ ಅನ್ನು ನೆನಪಿಸುವುದು ಗ್ಯಾರಂಟಿ.

Corona Vada

Corona Vada

  • Share this:
ಇತ್ತೀಚೆಗೆ ಜನರು ಈ ಸಾಮಾಜಿಕ ಮಾಧ್ಯಮಗಳಲ್ಲಿ ತಾವು ಹಾಕಿದಂತಹ ವಿಡಿಯೋಗಳಿಗೆ ಹೆಚ್ಚು ಜನರ ವೀಕ್ಷಣೆಗಳನ್ನು ಪಡೆಯಲು ಮತ್ತು ಬೇಗನೆ ಅವರು ಹಾಕಿದಂತಹ ವಿಡಿಯೋ ವೈರಲ್ ಆಗಬೇಕೆಂದು ಏನೇನೋ ಟ್ರೈ ಮಾಡುತ್ಥಾರೆ. ಈಗಂತೂ ಯಾವುದೋ ಎರಡು ವಿಭಿನ್ನವಾದ ಆಹಾರ ಪದಾರ್ಥಗಳನ್ನು ಸೇರಿಸಿ, ವಿಚಿತ್ರವಾದ ಪದಾರ್ಥ ಮಾಡುವ ಹೊಸ ಮಾರ್ಗವೊಂದನ್ನು ಕಂಡು ಕೊಂಡಿದ್ದು ನಮಗೆಲ್ಲರಿಗೂ ಗೊತ್ತೇ ಇದೆ.ನಾವು ಈಗಾಗಲೇ ಓರಿಯೋ ಬಿಸ್ಕೆಟ್ ಪಕೋಡಾ,(Biscuit Pakoda) ತಂಪು ಪಾನೀಯವಾದ ಜೊತೆಗೆ ಮ್ಯಾಗಿಯನ್ನು ಮಿಕ್ಸ್ ಮಾಡಿದ್ದು ಮತ್ತು ಇತ್ತೀಚೆಗೆ(Ice cream) ಐಸ್‌ಕ್ರೀಂ ಜೊತೆಗೆ ಮಸಾಲೆ ದೋಸೆಯನ್ನು(Spicy Casserole) ಮಿಕ್ಸ್ ಮಾಡಿ ಮಾಡಿದಂತಹ ರೋಲ್ ಮಾಡಿದ್ದನ್ನು ನಾವು ಸಾಮಾಜಿಕ(Social Media) ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋಗಳಲ್ಲಿ ನೋಡಿದ್ದೇವೆ.

ಹೊಸ ಟ್ರೆಂಡ್
ಇತ್ತೀಚೆಗೆ ಈ ರೀತಿಯಾಗಿ ಎರಡು ಆಹಾರ ಪದಾರ್ಥಗಳನ್ನು ಮಿಕ್ಸ್ ಮಾಡಿ ಒಂದು ವಿನೂತನ ಆಹಾರವನ್ನು ತಯಾರಿಸುವುದು ಒಂದು ಹೊಸ ಟ್ರೆಂಡ್ ಆಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಮತ್ತೊಮ್ಮೆ ಇದೇ ರೀತಿಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಇದರಲ್ಲಿ 2 ಆಹಾರ ಪದಾರ್ಥಗಳ ಮಿಕ್ಸಿಂಗ್ ಇಲ್ಲದೆ, ಆಹಾರ ಪದಾರ್ಥಕ್ಕೆ ಒಂದು ವಿಭಿನ್ನವಾದ ಆಕಾರ ನೀಡಿದ್ದಾರೆ. ಅದರಲ್ಲಿ ಮಹಿಳೆಯೊಬ್ಬರು ಒಂದು ವಡೆಯನ್ನು ಮಾಡಿದ್ದಾರೆ. ನೀವು ಆ ವಡೆಯ ಆಕಾರವನ್ನು ನೋಡಿದರೆ ನಿಮಗೆ ಎರಡು ವರ್ಷಗಳಿಂದ ಬೆಂಬಿಡದೇ ಕಾಡುತ್ತಿರುವ ಮತ್ತು ಜಗತ್ತನ್ನೇ ಬುಡಮೇಲು ಮಾಡಿರುವ ಕೊರೋನಾ ವೈರಸ್ ಅನ್ನು ನೆನಪಿಸುವಂತಿದೆ ಎಂದು ಹೇಳಬಹುದು.

ಭಯಂಕರ ಕೊರೊನಾ ವೈರಸ್ ನೆನೆಪು
ಈ ಮಹಿಳೆ ಮಾಡಿರುವ ವಡೆಯ ಹೆಸರು ಕೊರೊನಾ ವಡೆ ಅಂತೆ, ಈ ವಡೆಯು ಸಾಮಾನ್ಯ ವಡೆಯಂತಿದ್ದು, ಆಕಾರದಲ್ಲಿ ನೋಡಿದರೆ ಇದು ನಿಮಗೆ ಭಯಂಕರ ಕೊರೊನಾ ವೈರಸ್ ಅನ್ನು ನೆನಪಿಸುವುದು ಗ್ಯಾರಂಟಿ. ಮಿಂಪಿ ಎಂಬುವ ಮಹಿಳೆ ಈ ಕೊರೊನಾ ವಡೆಯನ್ನು ತಯಾರಿಸಿರುವ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Breakfast Recipe: ಉಳಿದ ಇಡ್ಲಿಯಲ್ಲೂ ಸಖತ್ ತಿಂಡಿ ಮಾಡ್ಬಹುದು, ಇಡ್ಲಿ ಮಂಚೂರಿ ಟ್ರೈ ಮಾಡಿ ನೋಡಿ

ಈ ವಿಡಿಯೋ ಸಾಮಾನ್ಯವಾಗಿ ಎಲ್ಲಾ ಅಡುಗೆ ಮಾಡುವ ವಿಡಿಯೋ ಅಂತೆಯೇ ಶುರುವಾಗಿ ನಂತರದಲ್ಲಿ ಈ ಅಡುಗೆ ಮಾಡುವವರು ಅಕ್ಕಿ ಹಿಟ್ಟಿನಲ್ಲಿ ಸ್ವಲ್ಪ ನೀರು ಕಲಿಸಿಕೊಂಡು ಮಿಕ್ಸ್ ಮಾಡಿಕೊಂಡು ಅದಕ್ಕೆ ಸಾಸಿವೆ ಕಾಳು, ಉಪ್ಪನ್ನು ಸೇರಿಸಿಕೊಂಡು ಅದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಲಾಗುತ್ತದೆ. ನಂತರ ಆ ಮಹಿಳೆ ಇದರಲ್ಲಿ ಹಾಕಲು ಆಲೂಗಡ್ಡೆ, ಈರುಳ್ಳಿ, ಕ್ಯಾರೆಟ್ ಮತ್ತು ಕರಿಬೇವಿನ ಎಲೆಗಳನ್ನು ಹಾಕಿಕೊಂಡು ಕೆಲವು ಮಸಾಲೆ ಪದಾರ್ಥಗಳನ್ನು ಸೇರಿಸಿಕೊಂಡು ಒಂದು ಪಲ್ಯದ ರೀತಿಯಲ್ಲಿ ಮಾಡಿಕೊಳ್ಳಲಾಗುತ್ತದೆ.

ನೆಟ್ಟಿಗರು ಹಾಸ್ಯ
ಇದು ನೋಡಲು ಸಾಮಾನ್ಯ ವಡೆ ಅಂತೆ ಇದ್ದು, ಇದರ ಹೊರ ಮೇಲ್ಮೈ ಮಾತ್ರ ನಿಮಗೆ ಕೊರೊನಾ ವೈರಸ್‌ನಂತೆ ಕಾಣಿಸುತ್ತದೆ. ಆ ಅಕ್ಕಿ ಹಿಟ್ಟಿನ ಉಂಡೆಯಲ್ಲಿ ಈ ಪದಾರ್ಥವನ್ನು ತುಂಬಿ ನಂತರ ಅದನ್ನು ಅಕ್ಕಿಯಲ್ಲಿ ಹಾಕಿ ಅದನ್ನು ಬೇಯಿಸಲಾಗುತ್ತದೆ. ಇದೆಲ್ಲಾ ಆದ ನಂತರ ಹೊರಬರುವ ವಡೆಯ ಹೊರ ಪದರವು ಕೊರೊನಾ ವೈರಸ್ ಆಕಾರದಲ್ಲಿಯೇ ಇರುವುದನ್ನು ನಾವು ನೋಡಬಹುದು.

ವಿಡಿಯೋ ನೋಡಿ:



ಈ 59 ಸೆಕೆಂಡಿನ ವೀಡಿಯೋವನ್ನು ಈಗಾಗಲೇ 4,000ಕ್ಕೂ ಹೆಚ್ಚು ಜನರು ನೋಡಿದ್ದಾರೆ ಮತ್ತು ಅನೇಕರು ತಮ್ಮ ಪ್ರತಿಕ್ರಿಯೆಯನ್ನು ಸಹ ಹಾಕಿದ್ದಾರೆ. ಇದನ್ನು ನೋಡಿದ ಸಾಮಾಜಿಕ ಬಳಕೆದಾರರೊಬ್ಬರು “ಈ ಕೊರೊನಾ ತುಂಡಾಗುವುದನ್ನು ನೋಡುವುದಕ್ಕೆ ತುಂಬಾನೇ ಖುಷಿಯಾಗಿದೆ” ಎಂದು ಬರೆದರೆ, ಇನ್ನೊಬ್ಬ ಬಳಕೆದಾರರು ತಮಾಷೆಯಾಗಿ “ಈ ಕೊರೊನಾ ವಡೆಯ ಪಾಕ ವಿಧಾನವು ಕೊರೊನಾ ವೈರಸ್ ಅನ್ನು ಸೋಲಿಸುವಂತಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Food Tips: ಮನೆಯಲ್ಲಿಯೇ ಸುಲಭವಾಗಿ ಮೊಳಕೆಕಾಳು ಹೀಗೂ ಮಾಡ್ಬೋದು

ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಮತ್ತೊಂದು ವಿಭಿನ್ನವಾದ ಆಹಾರ ಪದಾರ್ಥ ಎಂದರೆ ಅದು ಚೀಜ್ ಗೋಲ್‌ಗಪ್ಪಾ ಅಂತ ಹೇಳಬಹುದು. ಇಂದೋರ್‌ನ ಒಬ್ಬ ಬೀದಿ ಬದಿಯಲ್ಲಿ ಪಾನಿಪುರಿ ಮಾರುವ ವ್ಯಕ್ತಿ ‘ತಂದೂರಿ ಡಬಲ್ ಚೀಜ್ ಗೋಲ್‌ಗಪ್ಪಾ’ ಮಾಡಿದ್ದು, ಪುರಿ ಒಳಗಡೆ ಪಾನಿ ಇದ್ದು ಹೊರಗೆ ಮಾತ್ರ ಚೀಜ್ ಹಾಕಿರುವುದನ್ನು ಇಲ್ಲಿ ನೋಡಬಹುದಾಗಿತ್ತು.
Published by:vanithasanjevani vanithasanjevani
First published: