Unconditional Love ಅಂದ್ರೆ ಇದು...!;  ಆಕ್ಸಿಜನ್​ ಸಪೋರ್ಟ್​​ನಿಂದ ಅಡುಗೆ ಮಾಡುತ್ತಿರುವ ತಾಯಿಯ ಫೋಟೋ ನೋಡಿ ನೆಟ್ಟಿಗರು ಹೇಳಿದ್ದೇನು?

ಇದು ‘ತಾಯಿಯ ಪ್ರೀತಿ’ ಅಲ್ಲ. ಇದು ಕ್ರೂರವಾಗಿದೆ. ವಿಶೇಷವಾಗಿ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವಾಗ ಅಂತಹ ತೊಂದರೆಗಳಿಗೆ ಒಳಗಾಗುವ ಬದಲು ವ್ಯಕ್ತಿಯ ಕುಟುಂಬವು ಮಹಿಳೆಗೆ ಸಹಾಯ ಮಾಡಬೇಕಾಗಿತ್ತು ಎಂದು ಅನೇಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಅಡುಗೆ ಮಾಡುತ್ತಿರುವ ತಾಯಿ

ಅಡುಗೆ ಮಾಡುತ್ತಿರುವ ತಾಯಿ

 • Share this:

  ಇಂಟರ್‌ನೆಟ್‌ನಲ್ಲಿ ಹೆಚ್ಚಾಗಿ, ವೈಯಕ್ತಿಕದಿಂದ ರಾಜಕೀಯದವರೆಗಿನ ವಿಷಯಗಳ ಬಗ್ಗೆ ಅಭಿಪ್ರಾಯವನ್ನು ಹೊಂದಿರುವಾಗ ಪರ - ವಿರೋಧ ಅಭಿಪ್ರಾಯಗಳೆಂಬ ಎರಡು ದೃಷ್ಟಿಕೋನಗಳಿರುವುದನ್ನು ವಿಂಗಡಿಸಬಹುದು. ಆದರೆ, ಇತ್ತೀಚಿನ ಘಟನೆಯೊಂದರಲ್ಲಿ ಮಹಿಳೆ ಆಕ್ಸಿಜನ್‌ ಸಿಲಿಂಡರ್‌ ಬಳಸುವಾಗಲೂ ಅಡುಗೆ ಮಾಡುತ್ತಿರುವ ಫೋಟೋವನ್ನು ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದಕ್ಕೆ ನೆಟ್ಟಿಗರೆಲ್ಲರೂ ಈ ಫೋಟೋಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇತರರನ್ನು ಮೆಚ್ಚಿಸಲು ಮಹಿಳೆಯರು ಹೇಗೆ ತಮ್ಮ ಜೀವನವನ್ನು ಅಕ್ಷರಶಃ ಇತರರಿಗೆ ಮೀಸಲಿಡುತ್ತಾರೆಂಬ ಅಭಿಪ್ರಾಯ ಬರುವಂತೆ ಫೋಟೋ ಹಂಚಿಕೊಂಡಿದ್ದಾರೆ. ಅಲ್ಲದೆ, ತಾಯಿ ಎಂದಿಗೂ ಕರ್ತವ್ಯದಿಂದ ಹೊರಗುಳಿಯುವುದಿಲ್ಲ ಎಂದು ಹೇಳುವ ಮೂಲಕ ಬಳಕೆದಾರರು ಈ ಕೃತ್ಯವನ್ನು ವೈಭವೀಕರಿಸಿದ್ದಾರೆ. ಇದಕ್ಕೆ ನೆಟ್ಟಿಗರು ಆ ಫೋಟೋ ಹಂಚಿಕೊಂಡ ಸಾಮಾಜಿಕ ಬಳಕೆದಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


  ಈ ಚಿತ್ರದಲ್ಲಿ ಮಧ್ಯವಯಸ್ಕ ಮಹಿಳೆಯೊಬ್ಬಳು ಭಾರತೀಯರ ಬ್ರೆಡ್ ಅಂದರೆ ರೋಟಿಯನ್ನು ಒಲೆಯ ಮೇಲೆ ಬೇಯಿಸುವುದನ್ನು ನೋಡಬಹುದು. ಆ ಮಹಿಳೆ ಆಕ್ಸಿಜನ್‌ ಸಪೋರ್ಟ್‌ ಮಾಸ್ಕ್‌ ಅನ್ನು ಧರಿಸಿದ್ದಾರೆ ಮತ್ತು ಆಮ್ಲಜನಕದ ಸಾಂದ್ರತೆ (ಆಕ್ಸಿಜನ್‌ ಕಾನ್ಸನ್ಟ್ರೇಟರ್‌) ಅನ್ನು ಆಕೆಯ ಪಕ್ಕದಲ್ಲಿಯೇ ಗುರುತಿಸಬಹುದು. ಅದಕ್ಕಿಂತಲೂ ಆಶ್ಚರ್ಯಕರ ಸಂಗತಿಯೆಂದರೆ, ಅಂತಹ ಪರಿಸ್ಥಿತಿಯಲ್ಲಿಯೂ ಸಹ ಆಕೆಗೆ ಸಹಾಯ ಮಾಡುವಂತೆ ಚಿತ್ರದಲ್ಲಿ ಬೇರೆ ಯಾರೂ ಇಲ್ಲ.

  ಈ ಹಿನ್ನೆಲೆ ಅಂತಹ ಪರಿಸ್ಥಿತಿಯಲ್ಲಿ ಮಹಿಳೆಯನ್ನು ಕೆಲಸ ಮಾಡಿಸುವುದು ಕ್ರೂರ ಎಂದು ಬಹುಪಾಲು ಇಂಟರ್ನೆಟ್ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದಾಗಲೂ ಕೆಲಸ ಮಾಡುವ ಮಹಿಳೆಯರನ್ನು ಸಮಾಜವು ಹೇಗೆ ವೈಭವೀಕರಿಸಿದೆ ಎಂಬ ಮಾರ್ಗದಲ್ಲಿ ಅನೇಕ ಜನರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.


  ಇದನ್ನೂ ಓದಿ:Remdesivir Black Marketing: ಗದಗದಲ್ಲಿ ರೆಮ್ಡಿಸಿವರ್ ಇಂಜೆಕ್ಷನ್ ಅಕ್ರಮ ಮಾರಾಟ ಜಾಲ ಪತ್ತೆ; ನಾಲ್ವರ ಬಂಧನ, ಓರ್ವ ಪರಾರಿ

  ಇನ್ನು, ಕೆಲವು ನೆಟ್ಟಿಗರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಳ್ಳುವ ವ್ಯಕ್ತಿಗೆ ಸಾಕಷ್ಟು ವಯಸ್ಸಾಗಿರಬಹುದು. ಈ ಹಿನ್ನೆಲೆ ಅವರೇ ತಮ್ಮ ತಾಯಿಗೆ ಅಡುಗೆಮನೆಯಲ್ಲಿ ಸಹಾಯ ಮಾಡುವಷ್ಟು ಪ್ರಬುದ್ಧರಾಗಿರಬೇಕು. ಆದರೆ, ಅದರ ಬದಲು ಫೋಟೋ ತೆಗೆಯುತ್ತಿದ್ದಾರೆ ಎಂದು ಆಕ್ಷೇಪ ಹಂಚಿಕೊಂಡಿದ್ದಾರೆ.


  ಇದು ‘ತಾಯಿಯ ಪ್ರೀತಿ’ ಅಲ್ಲ. ಇದು ಕ್ರೂರವಾಗಿದೆ. ವಿಶೇಷವಾಗಿ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವಾಗ ಅಂತಹ ತೊಂದರೆಗಳಿಗೆ ಒಳಗಾಗುವ ಬದಲು ವ್ಯಕ್ತಿಯ ಕುಟುಂಬವು ಮಹಿಳೆಗೆ ಸಹಾಯ ಮಾಡಬೇಕಾಗಿತ್ತು ಎಂದು ಅನೇಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ.


  ಅಲ್ಲದೆ, ಗ್ಯಾಸ್‌ ಸ್ಟೌ ಪಕ್ಕದಲ್ಲಿ ಆಮ್ಲಜನಕದ ಪೈಪ್‌ಲೈನ್‌ನಂತಹ ವಸ್ತುವನ್ನು ಇಡುವುದು ಸಹ ಸೂಕ್ತವಲ್ಲ. ಇದು ಅಪಾಯಕಾರಿಯಾಗಬಹುದು ಎಂಬುದನ್ನೂ ಜನರು ನೆನಪಿನಲ್ಲಿಟ್ಟುಕೊಳ್ಳಬೇಕು.
  ಈ ಮಧ್ಯೆ, ಭಾರತದಲ್ಲಿ ಕೊರೋನಾ ವೈರಸ್‌ ಎರಡನೇ ಅಲೆಯ ಪರಿಸ್ಥಿತಿ ಸಾಕಷ್ಟು ಭಯಾನಕವಾಗಿದೆ. ಆರೋಗ್ಯ ಮೂಲಸೌಕರ್ಯಗಳ ಕೊರತೆಯಿಂದಾಗಿ ಗಮನಾರ್ಹ ಸಂಖ್ಯೆಯ ಕೋವಿಡ್ - 19 ರೋಗಿಗಳು ಪ್ರಾಣ ಕಳೆದುಕೊಂಡಿದ್ದಾರೆ. ವೈರಸ್ ಹರಡುವುದನ್ನು ತಡೆಯಲು ದೇಶಾದ್ಯಂತ ವಿವಿಧ ರಾಜ್ಯಗಳು ಲಾಕ್‌ಡೌನ್ ಮತ್ತು ಕರ್ಫ್ಯೂ ವಿಧಿಸಿವೆ. ಪ್ರಕರಣಗಳ ಸಂಖ್ಯೆ ಹೆಚ್ಚಾಗುವುದನ್ನು ತಡೆಯುವ ಮತ್ತೊಂದು ಕ್ರಮದಲ್ಲಿ, ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಕೊರೋನಾ ವೈರಸ್‌ ವಿರುದ್ಧ ಹೋರಾಟ ನಡೆಸುವ ಲಸಿಕೆ ಹಾಕಲು ಸರ್ಕಾರ ಅವಕಾಶ ನೀಡಿತು. ಆದರೂ, ಲಸಿಕೆ ಕೊರತೆಯ ಕಾರಣದಿಂದ 18 - 44 ವರ್ಷದೊಳಗಿನವರ ಪೈಕಿ ಬಹುತೇಕರು ಲಸಿಕೆ ಹಾಕಿಸಿಕೊಂಡಿಲ್ಲ.
  Published by:Latha CG
  First published: