ಕೋವಿಡ್ ಸೋಂಕು Kovid Kapoor ಅವರ ಜೀವನವನ್ನು ಹೇಗೆ ಬದಲಾಯಿಸಿದೆ ಗೊತ್ತೇ?

ಈ ಸಾಂಕ್ರಾಮಿಕ ಮಹಾಮಾರಿ ತನ್ನ ಜೀವನವನ್ನು ಕಷ್ಟಕರವಾಗಿಸುತ್ತದೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ .

ಕೋವಿಡ್‌ ಕಪೂರ್

ಕೋವಿಡ್‌ ಕಪೂರ್

  • Share this:
ಕೋವಿಡ್‌ ಕಪೂರ್ (Kovid Kapoor's) ಅವರ ಟ್ವಿಟ್ಟರ್‌ (Twitter) ಪ್ರೊಫೈಲ್ ಹೀಗಿದೆ : 'ನನ್ನ ಹೆಸರು ಕೋವಿಡ್, ಮತ್ತು ನಾನು ವೈರಸ್ (Virus) ಅಲ್ಲ!'ಹೆಸರಲ್ಲೇನಿದೆ? ಎಂದು ಷೇಕ್ಸ್‌ಪಿಯರ್ ತಮ್ಮ ಹೆಸರಾಂತ (Famous Romeo) ರೋಮಿಯೋ ಮತ್ತು ಜೂಲಿಯೆಟ್‌ ನಾಟಕದಲ್ಲಿ ಹೇಳುತ್ತಾ ಹೆಸರುಗಳು ಮುಖ್ಯವಲ್ಲ ಎಂದು ತಮ್ಮ ಅಭಿಪ್ರಾಯವನ್ನು ಆಗಲೇ ವ್ಯಕ್ತಪಡಿಸಿದ್ದರು. ಆದರೆ ಇದು ಕೋವಿಡ್ ಕಪೂರ್ (Kovid Kapoor's) ಅವರ ಜೀವನದಲ್ಲಿ ಮಹತ್ವದ ಅಂಶವಾಗಲಿದೆ ಎಂದು ಅವರಿಗೆ ಆಗ ತಿಳಿದಿರಲಿಲ್ಲ. ಹೌದು, ನೀವು ಸರಿಯಾಗೇ ಓದುತ್ತಿರುವಿರಿ . ಇದೊಂದು ವಿಶೇಷವಾದ ಹೆಸರು ಎಂಬುವುದನ್ನು ನಾವಿಲ್ಲಿ ಒಪ್ಪಿಕೊಳ್ಳಲೇಬೇಕು .

ಕೋವಿಡ್ ಕಪೂರ್ ಟ್ವೀಟ್‌
Holidify ಪ್ರವಾಸೋದ್ಯಮ ಕಂಪನಿಯ ಸಹ-ಸಂಸ್ಥಾಪಕರಾದಂತಹ, ಕೋವಿಡ್ ಕಪೂರ್, ಈ ಸಾಂಕ್ರಮಿಕ ಮಹಾಮಾರಿ ತನ್ನ ಜೀವನವನ್ನು ಕಷ್ಟಕರವಾಗಿಸುತ್ತದೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ, ಆದರೆ ಇದು ಅವರ 'ಹೆಸರಿಗೆ ಸಂಬಂಧಿಸಿದಂತೆ' ತಮಾಷೆಯ ಘಟನೆಗಳಿಂದ ಕೂಡಿದೆ ಸಹ. ಕೋವಿಡ್ -19 ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ, ಕೋವಿಡ್ ಕಪೂರ್ ROFL ಟ್ವೀಟ್‌ಗಳ ಮೂಲಕ ತಮ್ಮ ಜೀವನವನ್ನು ದಾಖಲಿಸಲು ಪ್ರಾರಂಭಿಸಿದರು ಮತ್ತು ಅವರು ಏಕೆ ಹೆಚ್ಚು ಗಮನ ಸೆಳೆಯುತ್ತಿದ್ದಾರೆ? ಎಂಬುದನ್ನು ನೀವು ಅಂದಾಜು ಮಾಡಬಹುದು. 2019 ರಿಂದ ನಮ್ಮ ಜೀವನವನ್ನು ನರಕವನ್ನಾಗಿಸಿದ ವೈರಸ್‌ನ ಹೆಸರಿನಂತೆಯೇ ಧ್ವನಿಸುವಂತಹ ಹೆಸರುಳ್ಳ ವ್ಯಕ್ತಿಯನ್ನು ನಾವು ದಿನಂ ಪ್ರತಿ ಭೇಟಿಯಾಗುವುದಿಲ್ಲ .

ಇದನ್ನೂ ಓದಿ: Name: ಈ ಅಕ್ಷರದ ಹುಡುಗಿಯರು ಅಂದ್ರೆ ಹುಡುಗರಿಗೆ ಬಲು ಇಷ್ಟ ಅಂತೆ; ಅಂತಹ ಜಾದು ಏನಿದೆ?

ಮಿನಿ-ಸೆಲೆಬ್ರಿಟಿ
ಕೋವಿಡ್‌ ಕಪೂರ್ ಅವರ ಟ್ವಿಟ್ಟರ್‌ ಬಯೋ ಹೀಗೆ ಹೇಳುತ್ತದೆ: "ನನ್ನ ಹೆಸರು ಕೋವಿಡ್ ಮತ್ತು ನಾನು ವೈರಸ್ ಅಲ್ಲ." ಅವರು ಇಲ್ಲಿ ಏನು ಮಾಡಿದರೆಂದು ನೀವು ಗಮನಿಸಿದ್ದೀರಾ? ಮಿಸ್ಟರ್ ಕೋವಿಡ್ , ನಿಮ್ಮ ಶಾರುಖ್ ಖಾನ್ ಟಚ್ ತುಂಬಾ ಚೆನ್ನಾಗಿದೆ. ಈಗ "ಮಿನಿ-ಸೆಲೆಬ್ರಿಟಿ " ಆಗಿರುವ ಕೋವಿಡ್‌ ಕಪೂರ್ (ಅವರ ಮಾತುಗಳು, ನಮ್ಮದಲ್ಲ) ಅವರು ತಾವು "ಕೊರೊನಾ ಜೋಕ್" ಗೆ ಬಲಿಯಾದ ತಮಾಷೆಯ ಮತ್ತು ಉಲ್ಲಾಸಕರವಾದ ಕಥೆಗಳನ್ನು ಹಂಚಿಕೊಂಡಿದ್ದಾರೆ.

ಅವರು ತಮ್ಮ ಪರಿಚಯವನ್ನು ಸರಳ ಮತ್ತು ಸುಲಭವಾಗಿ ಮಾಡಿಕೊಂಡಿದ್ದು ಹೀಗೆ: ಹಿಂದಿನ ಥ್ರೆಡ್ ತುಂಬಾ ಜನಪ್ರಿಯವಾದಾಗಿನಿಂದ- ಮತ್ತು ಈಗ ನಾನು 'ಮಿನಿ-ಸೆಲೆಬ್ರಿಟಿ' ಎಂಬ ಭಾವನೆಯೊಂದಿಗೆ - ಕೆಲವು ಹಾಸ್ಯಮಯ ಹೆಸರುಗಳನ್ನು ನಾನಿಲ್ಲಿ ಹಂಚಿಕೊಳ್ಳುತ್ತೇನೆ.

#COVID-30" ಎಂಬ ಸಂದೇಶ
ಅವರು ತಮ್ಮ 30ನೇ ಹುಟ್ಟುಹಬ್ಬದ ಕಥೆಯೊಂದಿಗೆ ಪ್ರಾರಂಭಿಸುತ್ತಾ , ಅವರ ಸ್ನೇಹಿತ ಅವರ ಹುಟ್ಟು ಹಬ್ಬದ ಸಲುವಾಗಿ ಕೇಕ್ ಅನ್ನು ಆರ್ಡರ್ ಮಾಡಿದಾಗ , ಬೇಕರಿಯು 'ಇದು ಒಂದು ರೀತಿಯ ತಮಾಷೆ' ಎಂದು ಭಾವಿಸಿತು , ಹಾಗೂ ಅವರ ಹೆಸರಿನ ಮೊದಲ ಅಕ್ಷರವನ್ನು ‘ಕೆ’ ಬದಲಿಗೆ ‘ಸಿ’ ಎಂದು ಬದಲಾಯಿಸಿತು. ಅವರ ಕೇಕ್ ಮೇಲೆ "ಜನ್ಮದಿನದ ಶುಭಾಶಯಗಳು #COVID-30" ಎಂಬ ಸಂದೇಶವಿತ್ತು .

ಇದನ್ನೂ ಓದಿ: Certificate: ಮಹಿಳೆಯ ಜನನ ಪ್ರಮಾಣಪತ್ರ ಉದ್ದವೆಷ್ಟು ಗೊತ್ತೇ? ಶಾಕ್‌ ಆಗ್ತೀರಾ..

ನಕಲಿ ಹೆಸರು
ಸ್ಟಾರ್‌ಬಕ್ಸ್ ಉದ್ಯೋಗಿಗಳು ಸಹ ಕೋವಿಡ್‌ ಕಪೂರ್ ತಮ್ಮ ಹೆಸರನ್ನು ಉಚ್ಚರಿಸಿದಾಗ ಅವರು ತಮಾಷೆ ಮಾಡುತ್ತಿದ್ದಾರೆ ಎಂದು ಭಾವಿಸುತ್ತಾರೆ. ಹಾಗಾಗಿ, ಈಗ ಅವರು ಅಲ್ಲಿ ನಕಲಿ ಹೆಸರನ್ನು ಬಳಸಿಕೊಳ್ಳುತ್ತಾರೆ . ಜಿಮೇಲ್ ಹುಡುಕಾಟದಲ್ಲಿ, ಕೋವಿಡ್‌ ಕಪೂರ್ ಅವರು ತಮ್ಮ ಹೆಸರನ್ನು ತಪ್ಪಾಗಿ ಬರೆದಿದ್ದಾರೆ ಎಂದು ಗೂಗಲ್ ಭಾವಿಸಿತು ಎಂದು ಟ್ವೀಟ್ ಮಾಡುತ್ತಾ ಅವರು ಗೂಗಲ್ ಸರ್ಚ್ ಫಲಿತಾಂಶದ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ. ಕೊನೆಯದಾಗಿ, ಕರೋನಾ ಬಿಯರ್ ಅನ್ನು ಹೇಗೆ ಮರೆಯಲು ಸಾಧ್ಯ..? ಕೋವಿಡ್‌ ಕಪೂರ್ ಕೊರೋನಾ ಬಿಯರ್ ಕುಡಿಯುವುದನ್ನು ನೋಡುವುದು ಸಾಮಾನ್ಯ ದೃಶ್ಯವಲ್ಲ ಓದುಗರೇ .
Published by:vanithasanjevani vanithasanjevani
First published: