HOME » NEWS » Trend » DESI INTERNET TAKES OFF WITH MEMES AFTER HILARIOUS PARAGLIDING VIDEO GOES VIRAL ZP

ನೂರು-ಇನ್ನೂರು ಜಾಸ್ತಿ ಕೊಡ್ತೀನಿ..ಪ್ಲೀಸ್ ಇಳಿಸು ಪಾ: ಭಾರೀ ವೈರಲ್ ಆಯ್ತು ಯುವಕನ ಸಾಹಸ ವಿಡಿಯೋ

Vipin sahu video: ಇನ್ನು ಒಂದು ಹೆಜ್ಜೆ ಮುಂದೋಗಿರುವ ಮಾನವ ಪ್ಯಾರಾಗ್ಲೈಡ್​ನಂತಹ ಸಾಹಸಕ್ಕೆ ಕೈ ಹಾಕಿದ್ದಾರೆ. ಆಗಸದಲ್ಲಿ ಹಾರುತ್ತಿರುವುದು ನೋಡಲು ಸುಂದರವಾಗಿ ಕಾಣುತ್ತದೆ. ಆದರೆ ಈ ಸಾಹಸಕ್ಕೆ ಕೈ ಹಾಕಲು ತುಸು ಹೆಚ್ಚೇ ದೈರ್ಯ ಬೇಕು.

zahir | news18-kannada
Updated:August 29, 2019, 12:48 PM IST
ನೂರು-ಇನ್ನೂರು ಜಾಸ್ತಿ ಕೊಡ್ತೀನಿ..ಪ್ಲೀಸ್ ಇಳಿಸು ಪಾ: ಭಾರೀ ವೈರಲ್ ಆಯ್ತು ಯುವಕನ ಸಾಹಸ ವಿಡಿಯೋ
vipin sahu
  • Share this:
ಹಕ್ಕಿಯಂತೆ ಹಾರಬೇಕು, ಮೀನಿನಂತೆ ಈಜಬೇಕು, ಶರವೇಗದಲ್ಲಿ ಓಡಬೇಕು ಎಂಬ ಬಯಕೆಗಳು ಈಗ ಹಳೆಯವು. ಏಕೆಂದರೆ ಮನುಷ್ಯನು ಪ್ರತಿಯೊಂದಕ್ಕೂ ಒಂದು ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದಾನೆ. ಹಾರಲು ಸಾಧ್ಯವಾಗದಿದ್ದರೂ ವಿಮಾನದ ಮೂಲಕ ಆಗಸದಲ್ಲಿ ಸಾಗುವ ಅಭಿಲಾಷೆ ಈಡೇರಿದೆ. ಇನ್ನು ಒಂದು ಹೆಜ್ಜೆ ಮುಂದೋಗಿರುವ ಮಾನವ ಪ್ಯಾರಾಗ್ಲೈಡ್​ನಂತಹ ಸಾಹಸಕ್ಕೆ ಕೈ ಹಾಕಿದ್ದಾರೆ. ಆಗಸದಲ್ಲಿ ಹಾರುತ್ತಿರುವುದು ನೋಡಲು ಸುಂದರವಾಗಿ ಕಾಣುತ್ತದೆ. ಆದರೆ ಈ ಸಾಹಸಕ್ಕೆ ಕೈ ಹಾಕಲು ತುಸು ಹೆಚ್ಚೇ ದೈರ್ಯ ಬೇಕು. ಇಲ್ಲದಿದ್ದರೆ ವಿಪಿನ್ ಸಾಹು ಪರಿಸ್ಥಿತಿ ನಿಮಗೂ ಬರಬಹುದು.

ಮನಾಲಿಗೆ ಪ್ರವಾಸಕ್ಕೆ ಹೋಗಿದ್ದ ಸಾಹು ಎಲ್ಲರಂತೆ ತಾನು ಪ್ಯಾರಾಗ್ಲೈಡಿಂಗ್ ಮಾಡಬೇಕು ಎಂದು ಬಯಸಿದ್ದರು. ಈ ಅಮೂಲ್ಯ ಕ್ಷಣಗಳನ್ನು ಸೆರೆಹಿಡಿಯಲು ಸೆಲ್ಫಿ ಕ್ಯಾಮೆರಾವನ್ನು ಆನ್ ಮಾಡಿಟ್ಟುಕೊಂಡಿದ್ದರು. ಅದರಂತೆ ಹಾರಾಟ ಪ್ರಾರಂಭವಾಗಿದೆ. ಅಷ್ಟರಲ್ಲೇ ಸಾಹು ಬೆಸ್ತುಬಿದ್ದಿದ್ದಾರೆ.

ಟೇಕಾಫ್‌ ಆಗುತ್ತಿದ್ದಂತೆಯೇ ಲ್ಯಾಂಡ್‌ ಮಾಡಿಬಿಡಿ ಸಾಕು ಎನ್ನಲು ಪ್ರಾರಂಭಿಸಿದ್ದಾನೆ. ಆ ಮಟ್ಟಕ್ಕೆ ಹೆದರಿದ್ದ ಸಾಹು ಅವರ ಭಯಭೀತನಾದ ಮುಖ ಭಾವಗಳು ಹಾಗೂ ಕೆಳಗಿಳಿಸಲು ಆತ ಕೇಳಿಕೊಳ್ಳುತ್ತಿರುವ ಪರಿ ವಿಡಿಯೋದಲ್ಲಿ ಸೆರೆಯಾಗಿದೆ.

ದಯವಿಟ್ಟು ನನ್ನನ್ನು ಕೆಳಗಿಳಿಸಿ. ಬೇಕಿದ್ದರೆ 100, 200ರೂ ಹೆಚ್ಚು ಕೊಡುತ್ತೀನಿ. ಐನೂರೇ ಕೊಡುವೆ ಪ್ಲೀಸ್ ನನ್ನ ಲ್ಯಾಂಡ್ ಮಾಡು ಎಂದು ಸಾಹು ಗೈಡ್​ನೊಂದಿಗೆ ಅಂಗಲಾಚುತ್ತಿರುವ ವಿಡಿಯೋ ಭಾರೀ ವೈರಲ್ ಆಗಿದೆ. ಆಗಸದಲ್ಲಿ ತೇಲುತ್ತಾ ಬೇಡಿಕೊಳ್ಳುತ್ತಿರುವ ಸಾಹು ವಿಡಿಯೋ ಇದೀಗ ಟ್ರೋಲಿಗರಿಗೆ ಆಹಾರವಾಗಿದೆ.ವಿಪಿನ್ ಸಾಹು ಅವರ ವಿಡಿಯೋ ಹಾಗೂ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಮೀಮ್ಸ್ ಟ್ರೋಲ್​ಗಳಾಗಿ  ಹರಿದಾಡುತ್ತಿದೆ. ಅಷ್ಟೇ ಅಲ್ಲದೆ ಗೂಗಲ್ ಟ್ರೆಂಡ್​ನಲ್ಲೂ ಸಾಹು ಹೆಸರು ಹಾಗೂ ಪ್ಯಾರಾ ಗ್ಲೈಡ್ ವಿಡಿಯೋಗಾಗಿ ಅನೇಕರು ಹುಡುಕಾಡಿದ್ದಾರೆ. ಇದರಿಂದಾಗಿ ಕಳೆದೆರಡು ದಿನಗಳಿಂದ ವಿಪಿನ್ ಸಾಹು ಹೆಸರು ಗೂಗಲ್ ಟ್ರೆಂಡ್​ನಲ್ಲಿ ಕಾಣಿಸಿತ್ತು. ಒಟ್ಟಿನಲ್ಲಿ ಏನೋ ಮಾಡಲು ಹೋದ ಸಾಹು ಇನ್ಯಾವುದೋ ರೀತಿಯಲ್ಲಿ ಫೇಮಸ್ ಆಗಿಬಿಟ್ಟಿದ್ದಾರೆ.

Youtube Video


 


 
View this post on Instagram
 

I was laughing like a retard while making this 😂😂😂 Pe : Extended version available on facebook 😩👌


A post shared by Memetentacion (@memetentacionnn) on
First published: August 29, 2019, 12:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories