ಮಗಳ ಮದುವೆ ದಿನಕ್ಕಿಂತ ಅಪ್ಪ ಸಂತೋಷ ಪಡುವ ದಿನ ಬೇರೆ ಇದೆಯೇ? ಪ್ರಪಂಚದಲ್ಲಿರುವ ಪ್ರತಿ ತಂದೆಗೂ ಮಗಳ ಮದುವೆ (Marriage) ಎನ್ನುವುದು ಒಂದು ಕನಸು. ಅತ್ಯಂತ ಸಂಭ್ರಮದ ದಿನ. ಅಂದು ನೋ ಟೆನ್ಶನ್, ಮಗಳನ್ನು ಸಂಭ್ರಮದಿಂದ ಮದುವೆ ಮಾಡಿ ಕಳಿಸೋ ದಿನ ಅಪ್ಪಂದಿರ ಖುಷಿಗೆ ಮಿತಿ ಇದೆಯಾ? ಇಲ್ಲೊಬ್ಬರು ತಂದೆ ತಮ್ಮ ಮಗಳ ಮದುವೆ ದಿನ ಫುಲ್ ಖುಷಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಫೇಮಸ್ ಸಿನಿಮಾ ಪುಷ್ಪಾದ (Pushpa) ಸಮಂತಾರ ಹಿಟ್ ಸಾಂಗ್ಗೆ ತಂದೆ ಡ್ಯಾನ್ಸ್ ಮಾಡಿದ್ದಾರೆ. ಮಗಳ ಮದುವೆ ಖುಷಿಯಲ್ಲಿದ್ದ ತಂದೆಯೊಬ್ಬರು ಸಮಂತಾರಾ ಫೇಮಸ್ ಐಟಂ ಸಾಂಗ್ ಊ ಅಂಟಾವಾ (Oo Antava) ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಅವರ ವಿಡಿಯೋ ಈಗ ವೈರಲ್ (Viral) ಆಗಿದೆ.
ನವ ವಧುವಿನ ಮದುವೆಯ ಸಂಭ್ರಮದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮದುವೆಯ ಸಂಭ್ರಮದಲ್ಲಿ ಗಮನ ಸೆಳೆದಿದ್ದು ವಧುವಲ್ಲ, ವಧುವಿನ ತಂದೆ ಎನ್ನುವುದು ಇನ್ನೊಂದು ಸ್ಪೆಷಲ್ ವಿಚಾರ.
4 ಲಕ್ಷಕ್ಕೂ ಹೆಚ್ಚು ವೀಕ್ಷಣೆ
ವಧುವಿನ ತಂದೆ ಪುಷ್ಪಾ ಹಾಡು ಊ ಅಂತಾವಾ ಹಾಡಿಗೆ ನೃತ್ಯ ಮಾಡಿದ್ದಾರೆ. ತಂದೆಯ ಕಿಲ್ಲಿಂಗ್ ಮೂವ್ಸ್ ಬಗ್ಗೆ ಇಂಟರ್ನೆಟ್ ಮಾತನಾಡಲು ಶುರು ಮಾಡಿದೆ. ಅನುಷಾ ವೆಡ್ಡಿಂಗ್ ಕೊರಿಯೋಗ್ರಫಿಯಿಂದ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಲಾಗಿದ್ದು, 4 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ.
ಡ್ಯಾನ್ಸ್ ಫ್ಲೋರ್ ಚಿಂದಿ ಮಾಡಿದ ತಂದೆ
ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ವಧುವಿನ ತಂದೆ ಸಮಂತಾ ರುತ್ ಪ್ರಭು ಮತ್ತು ಅಲ್ಲು ಅರ್ಜುನ್ ಕಾಣಿಸಿಕೊಂಡ ಫೇಮಸ್ ಐಟಂ ಸಾಂಗ್ ಓ ಅಂತವಾ ಹಾಡಿಗೆ ಹೆಜ್ಜೆ ಹಾಕುವುದನ್ನು ಕಾಣಬಹುದು. ವಧುವಿನ ತಂದೆ ಡ್ಯಾನ್ಸ್ ಫ್ಲೋರ್ ಪುಡಿ ಪುಡಿ ಮಾಡಿದ್ದಾರೆ. ಜನರು ಅವನನ್ನು ಹುರಿದುಂಬಿಸುವುದನ್ನು ಮತ್ತು ಕೂಗುವುದನ್ನು ನಾವು ವಿಡಿಯೋದಲ್ಲಿ ಕೇಳಬಹುದು.
ವಧುವಿನ ತಂದೆ ಡ್ಯಾನ್ಸ್ ಫ್ಲೋರ್ ತೆಗೆದುಕೊಂಡಾಗ" ಎಂದು ವೀಡಿಯೊಗೆ ಶೀರ್ಷಿಕೆಯನ್ನು ನೀಡಲಾಗಿದೆ. ಸಹಜವಾಗಿ, ಇಂಟರ್ನೆಟ್ ಸಂಪೂರ್ಣವಾಗಿ ನೃತ್ಯ ವೀಡಿಯೊವನ್ನು ಇಷ್ಟಪಟ್ಟಿದೆ.
ಇದನ್ನೂ ಓದಿ: Viral Story: 46 ವರ್ಷಗಳ ಅಂತರವಿದ್ದರೂ ಪ್ರೇಮಕ್ಕೆ ಕೊರತೆಯಿಲ್ಲ, ಪ್ರೀತಿ ಕುರುಡು ಅನ್ನೋದನ್ನ ಸಾರುವ ಕಹಾನಿ ಇಲ್ಲಿದೆ ನೋಡಿ
ಬಾದ್ ಶಾ ಸಾಂಗ್ಗೆ ದೇಸಿ ಹುಡುಗಿಯ ಡ್ಯಾನ್ಸ್
ನ್ಯೂಯಾರ್ಕ್ ನಗರದ (New York Town) ಮಿಡ್ಟೌನ್ ಮ್ಯಾನ್ಹ್ಯಾಟ್ಟನ್ನಲ್ಲಿರುವ ಟೈಮ್ಸ್ ಸ್ಕ್ವೇರ್ನಲ್ಲಿ ಯುವತಿಯೊಬ್ಬಳು ತೇರೆ ನಾಲ್ ನಾಚ್ನಾ ಹಾಡಿಗೆ ಚೆಂದವಾಗಿ ಡ್ಯಾನ್ಸ್ (Dance) ಮಾಡಿದ್ದಾಳೆ. ಯುವತಿ ಡ್ಯಾನ್ಸ್ ಮಾಡುತ್ತಿದ್ದಂತೆ ಅಲ್ಲಿ ಇದ್ದ ಯುವತಿಯರು ಸಹ ಭಾರತೀಯ ಮಹಿಳೆ ಜೊತೆ ಸೇರಿಕೊಂಡು ಸ್ಟೆಪ್ ಹಾಕಿದ್ದಾರೆ. ಈ ಕ್ಯೂಟ್ ವಿಡಿಯೋವನ್ನು (Video) ಯುವತಿ ತನ್ನ ಇನ್ಸ್ಟಾಗ್ರಾಮ್ನಲ್ಲಿ (Instagram) ಹಂಚಿಕೊಂಡಿದ್ದಾಳೆ.
ಇದನ್ನೂ ಓದಿ: Viral Video: ಈ ಪಾಂಡಾದ ತುಂಟಾಟ ನೋಡಿದ್ರೆ ಮನಸ್ಸಿಗೆ ಮುದ ಸಿಗುತ್ತೆ!
ರೀಲ್ಸ್ ವಿಡಿಯೋ ಬಂದ ಮೇಲೆ ಹೀಗೆ ಎಲ್ಲೆಂದರಲ್ಲಿ ಡ್ಯಾನ್ಸ್ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಕೆಲವು ಗೋ ವಿತ್ ಟ್ರೆಂಡ್ಸ್ ವಿಡಿಯೋಗಳು ಸಾಕಷ್ಟು ಮೆಚ್ಚುಗೆ ಪಡೆದುಕೊಳ್ಳುತ್ತವೆ.
ರೀಲ್ಸ್ ಬಂದ ಮೇಲೆ ಹಳೆಯ, ಹೊಸ ಹಾಡುಗಳು ಬಹುಬೇಗ ಜನರಿಗೆ ರೀಚ್ ಆಗುತ್ತಿವೆ. ಕೆಲ ಇಂತಹ ವಿಡಿಯೋಗಳು ಬೇಗ ವೈರಲ್ ಕೂಡ ಆಗುತ್ತಿವೆ. ಇದೇ ರೀತಿ ವಿಡಿಯೋ ಬ್ಲಾಗರ್ ಪೂಜಾ ಜೈಸ್ವಾಲ್ ಡ್ಯಾನ್ಸ್ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಕ್ಯೂಟ್ ವಿಡಿಯೋ ಎಂದು ಮೆಚ್ಚುಗೆ ಪಡೆದುಕೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ