news18-kannada Updated:March 3, 2021, 5:14 PM IST
ಮಗು ಬೀಳುತ್ತಿರುವ ಚಿತ್ರ
12ನೇ ಅಂತಸ್ತಿನಿಂದ ಮಗುವೊಂದು ಕಾಲು ಜಾರಿ ಬಿದ್ದಿದ್ದು, ಅದೃಷ್ಟವಶಾತ್ ಡೆಲಿವರಿ ಬಾಯ್ ಅದರ ಪ್ರಾಣ ರಕ್ಷಣೆ ಮಾಡಿ ಸಾಹಸ ಮೆರೆದಿದ್ದಾನೆ. 12ನೇ ಅಂತಸ್ತಿನ ಮನೆಯ ಬಾಲ್ಕನಿಯಲ್ಲಿ ಅಂಬೆಗಾಲಿಡುತ್ತಿದ್ದ ಮಗು ಸರಳುಗಳ ಮಧ್ಯೆ ನುಸುಳಿ ಕೆಳಗೆ ಬಿದ್ದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಯೆಟ್ನಾಂನಲ್ಲಿ ಈ ಘಟನೆ ನಡೆದಿದ್ದು, 31 ವರ್ಷದ ನ್ಗುಯೆನ್ ನ್ಗೋಕ್ ಮ್ಯಾನ್ ಸಾಹಸಕ್ಕೆ ಜನರು ಅಭಿನಂದನೆ ಮಹಾಪೂರ ಹರಿಸಿದ್ದಾರೆ. ಇಲ್ಲಿನ ಹನೋಯಿಯಲ್ಲಿ ಪ್ಯಾಕೇಜ್ ತಲುಪಿಸಲು ಬಂದ ಡೆಲಿವರಿ ಬಾಯ್ಗೆ ದುದುರಿನ ಕಟ್ಟಡದಲ್ಲಿ ಮಗು ಅಳುವುದು ಕೇಳಿಸಿದೆ. ಆಗ ಆತ ಕಿಟಿಕಿಯಲ್ಲಿ ನೋಡಿದಾಗ ಮಗು 12ನೇ ಮಹಡಿಯಲ್ಲಿ ತೂಗಾಡುತ್ತಿರುವುದನ್ನು ಗಮನಿಸಿದ್ದಾನೆ. ತಕ್ಷಣಕ್ಕೆ ಎಚ್ಚೆತ್ತ ಆತ ತಕ್ಷಣಕ್ಕೆ ಆರು ಅಡಿ ಕಟ್ಟಡ ಹಾರಿ ಮಗುವಿನ ರಕ್ಷಣೆಗೆ ಧಾವಿಸಿದ್ದಾನೆ.
ಈ ವೇಳೆ ಕೆಳಗಿನ ಮನೆಯಲ್ಲಿ ಮೆಟಲಿಕ್ ಮೇಲ್ಛಾವಣಿ ಮೇಲೆ ಬೀಳುವ ಸಾಧ್ಯತೆ ಅರಿತ ಡೆಲಿವರಿ ಬಾಯ್ ಅಲ್ಲಿಗೆ ತಕ್ಷಣಕ್ಕೆ ಹೋಗಿದ್ದಾನೆ. ಬಾಲ್ಕನಿಯಿಂದ ತೂಗಾಡುತ್ತಿದ್ದ ಮಗು ಬಿದ್ದ ತಕ್ಷಣ ಡೆಲಿವರಿ ಬಾಯ್ ಕೆಳಗೆ ತನ್ನ ಕಾಲ ಮೇಲೆ ಬೀಳುವಂತೆ ನೋಡಿಕೊಂಡು, ಗಟ್ಟಿಯಾಗಿ ಹಿಡಿದು ಮಗುವನ್ನು ರಕ್ಷಿಸಿದ್ದಾನೆ.
ಮಗು 12ನೇ ಮಹಡಿಯಿಂದ ಮಗು ಬಿದ್ದಿರುವ ಈ ಎದೆ ಝಲ್ಲೆನಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮಗುವನ್ನು ದೇವರಂತೆ ರಕ್ಷಿಸಿದ ಡೆಲಿವರಿ ಬಾಯ್ ಸಮಯಪ್ರಜ್ಞೆಗೆ ಜನರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.
ಇದಾದ ತಕ್ಷಣ ಮಗುವನ್ನು ತಕ್ಷಣಕ್ಕೆ ಆಸ್ಪತ್ರೆಗೆ ಸೇರಿಸಲಾಗಿದ್ದು, ಮಗು ಸುರಕ್ಷಿತವಾಗಿದೆ ಎಂದು ತಿಳಿದುಬಂದಿದೆ.
Published by:
Seema R
First published:
March 3, 2021, 5:14 PM IST