ಬಸ್​​ ಮೂಲಕವೇ Delhi to London ಪ್ರವಾಸ ನಡೆಸಿ ; ಹೇಗಿರತ್ತೆ ಗೊತ್ತಾ ಈ ರೋಚಕ Road Trip

70 ದಿನಗಳ ಈ ಪ್ರವಾಸದಲ್ಲಿ ಸುಮಾರು 18 ದೇಶಗಳನ್ನು ಹಾದು ಹೋಗಬೇಕು. 20,000 ಕಿ.ಮೀ ಈ ಪ್ರಯಾಣ ಜೀವನದಲ್ಲಿ ಮರೆಯಲಾಗದ ಅನುಭವ

 ದೆಹಲಿ ಟೂ ಲಂಡನ್​ ಬಸ್​

ದೆಹಲಿ ಟೂ ಲಂಡನ್​ ಬಸ್​

 • Share this:
  ಲಂಡನ್ ಪ್ರವಾಸ (London Trip) ಮಾಡುವ ಅದ್ಬುತ ಕನಸು ಇದ್ದು, ವಿಮಾನ ದರ ಜಾಸ್ತಿ ಆಯಿತು ಅನ್ನಿಸಿದ್ರೆ ಈಗ ನೀವು ರಸ್ತೆ ಮೂಲಕ ಕೂಡ ಪ್ರವಾಸ ಕೈಗೊಳ್ಳಬಹುದು. ಈ ರಸ್ತೆ ಮಾರ್ಗದ ಬಸ್​ ಪ್ರಯಾಣದಲ್ಲಿ ಲಂಡನ್​ ಜೊತೆಗೆ ಅನೇಕ ದೇಶಗಳ ಸೊಬಗನ್ನು ಕೂಡ ಕಣ್ತುಂಬಿಕೊಳ್ಳಬಹುದು. 70 ದಿನಗಳ ಈ ಪ್ರವಾಸ ರೋಚಕ. ದೆಹಲಿ ಟೂ ಲಂಡನ್ (Delhi To London)​ ಸಾಗುವ ಈ ಪ್ರವಾಸ ಕುರಿತ ಮಾಹಿತಿ ಇಲ್ಲಿದೆ. ಇದು ಅಡ್ವೆಂಚರ್ಸ್ ಓವರ್‌ಲ್ಯಾಂಡ್‌ (Adventures Overland ) ಬಸ್ ಸೇವೆ ದೆಹಲಿಯಿಂದ ಲಂಡನ್​​ಗೆ ಪ್ರವಾಸ ನಡೆಸುವ ಕಂಪನಿಯಾಗಿದೆ. ಈ ಸೆಪ್ಟೆಂಬರ್​ನಲ್ಲಿ ಈ ಪ್ರವಾಸ ನಡೆಸುವ ಸಾಧ್ಯತೆ ಇದೆ. 70 ದಿನಗಳ ಈ ಪ್ರವಾಸದಲ್ಲಿ ಸುಮಾರು 18 ದೇಶಗಳನ್ನು ಹಾದು ಹೋಗಬೇಕು. 20,000 ಕಿ.ಮೀ ಈ ಪ್ರಯಾಣ ಜೀವನದಲ್ಲಿ ಮರೆಯಲಾಗದ ಅನುಭವ ಎಂದ್ರೆ ತಪ್ಪಾಗಲಾರದು

  46 ವರ್ಷಗಳ ಬಳಿಕ ಈ ಸೇವೆ
  ಕಳೆದ 46 ವರ್ಷಗಳಲ್ಲಿ ದೆಹಲಿಯಿಂದ ಲಂಡನ್‌ಗೆ ಜನರು ಬಸ್ ಸೇವೆಯನ್ನು ಆನಂದಿಸಲು ಸಾಧ್ಯವಾಗುತ್ತಿರುವುದು ಇದು ಎರಡನೇ ಬಾರಿಗೆ. ವಾಸ್ತವವಾಗಿ 1957 ರಲ್ಲಿ ಬ್ರಿಟಿಷ್ ಕಂಪನಿಯು ದೆಹಲಿ ಮತ್ತು ಕೋಲ್ಕತ್ತಾ-ಲಂಡನ್ ನಡುವೆ ಬಸ್ ಸೇವೆಯನ್ನು ಪ್ರಾರಂಭಿಸಿತು. ಆದರೆ ಅಪಘಾತದಿಂದಾಗಿ ಬಸ್ ಸೇವೆ ಸ್ಥಗಿತಗೊಂಡಿತು.
  ಕೆಲವು ವರ್ಷಗಳ ನಂತರ, ಆಲ್ಬರ್ಟ್ ಟೂರ್ಸ್ ಎಂಬ ಕಂಪನಿಯು ಡಬಲ್ ಡೆಕ್ಕರ್ ಬಸ್ ಅನ್ನು ಪರಿಚಯಿಸಿತು. ಸಿಡ್ನಿ-ಭಾರತ-ಲಂಡನ್ ಮೂಲಕ ಬಸ್ ಅನ್ನು ಪ್ರಾರಂಭಿಸಲಾಯಿತು. ಅದು 1976ರ ಪ್ರಾರಂಭವಾದ ಈ ಪ್ರವಾಸ ಇರಾನ್, ಭಾರತ-ಪಾಕಿಸ್ತಾನದಲ್ಲಿ ಅಂತರ್ಯುದ್ಧದ ನಂತರ ಸ್ಥಗಿತಗೊಳಿಸಲಾಯಿತು.

  ಪ್ರವಾಸದ ಬಸ್​


  ಮತ್ತೆ ಸಂಚಾರ ಆರಂಭ
  ಇದೀಗ ಮುಂದಿನ ವರ್ಷಗಳಲ್ಲಿ ಮತ್ತೆ ಈ ಬಸ್ ಸಂಚಾರ ಆರಂಭವಾಗಲಿದೆ. ರಸ್ತೆ ಮೂಲಕ ವಿದೇಶಕ್ಕೆ ಪ್ರಯಾಣಿಸಲು ಬಯಸುವವರಿಗೆ ಇದು ಉತ್ತಮ ಅನುಭವ ನೀಡಲಿದೆ
  ಮ್ಯಾನ್ಮಾರ್ ಗಡಿಯಲ್ಲಿ ಸಹಜ ಸ್ಥಿತಿಗೆ ಮರಳುತ್ತಿದ್ದಂತೆ ಈ ಸೇವೆಯು ಮ್ಯಾನ್ಮಾರ್‌ನ ಮೂಲಕ ಆರಂಭವಾಗಲಿದೆ. ಹಿಂದೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಮೂಲಕ ಲಂಡನ್‌ಗೆ ಪ್ರಯಾಣಿಸಲಾಗುತ್ತಿತ್ತು. ಆದರೆ ಈಗ ಅಲ್ಲಿನ ಪರಿಸ್ಥಿತಿ ಹಿನ್ನೆಲೆಯಲ್ಲಿ ಮಾರ್ಗ ಬದಲಾಗಿದೆ.

  ಪ್ರವಾಸದ ರಸ್ತೆ ಮಾರ್ಗ
  ಪ್ರಯಾಣದ ಮಾರ್ಗ
  ದೆಹಲಿಯಿಂದ ಕೋಲ್ಕತ್ತಾ ಮಾರ್ಗಾವಾಗಿ ಬಸ್​​ ಮ್ಯಾನ್ಮಾರ್ ತಲುಪುತ್ತದೆ. ಅಲ್ಲಿಂದ ಥೈಲ್ಯಾಂಡ್, ಲಾವೋಸ್, ಚೀನಾ, ಕಿರ್ಗಿಸ್ತಾನ್, ಉಜ್ಬೇಕಿಸ್ತಾನ್, ಕಝಾಕಿಸ್ತಾನ್, ರಷ್ಯಾ, ಲಾಟ್ವಿಯಾ, ಲಿಥುವೇನಿಯಾ, ಪೋಲೆಂಡ್, ಜೆಕ್ ರಿಪಬ್ಲಿಕ್, ಜರ್ಮನಿ, ನೆದರ್ಲ್ಯಾಂಡ್ಸ್, ಬೆಲ್ಜಿಯಂ, ಫ್ರಾನ್ಸ್, ಲಂಡನ್​​ಗೆ ಹೋಗುತ್ತದೆ.

  ಇದನ್ನು ಓದಿ: ಮನೆಯಲ್ಲಿ ಆಮೆ ಪ್ರತಿಮೆ ಯಾಕೆ ಇಡುತ್ತಾರೆ; ವಾಸ್ತು ಏನು ಹೇಳತ್ತೆ?

  ಹಡಗಿನಲ್ಲೂ ಪ್ರಯಾಣಿಸಬಹುದು
  ಈ ಪ್ರವಾಸವನ್ನು ಬಸ್ಸಿನಲ್ಲಿ ಮಾತ್ರವಲ್ಲದೆ ಹಡಗಿನ ಮೂಲಕವೂ ಮಾಡಬಹುದು. ಫ್ರಾನ್ಸ್‌ನಿಂದ ಸಮುದ್ರದ ಮೂಲಕ ಕ್ರೂಸ್ ಹಡಗಿನಲ್ಲಿ ಇಂಗ್ಲಿಷ್ ಚಾನಲ್ ಅನ್ನು ದಾಟಬಹುದು. ಫ್ರಾನ್ಸ್ ಮತ್ತು ಲಂಡನ್ ನಡುವಿನ ದೋಣಿ ಸೇವೆಯು ಫ್ರಾನ್ಸ್‌ನ ಕಾಲ್‌ನಿಂದ UK ಯ ಡೋವರ್‌ಗೆ ಬಸ್ ಅನ್ನು ತೆಗೆದುಕೊಳ್ಳುತ್ತದೆ. ಅದನ್ನು ದಾಟಲು ಸುಮಾರು ಎರಡು ಗಂಟೆ ಬೇಕಾಗುತ್ತದೆ. ಇಂಗ್ಲಿಷ್ ಚಾನೆಲ್ ದಾಟಿದ ನಂತರ ಮತ್ತೆ ಪ್ರಯಾಣಿಕರನ್ನು ಬಸ್ಸಿನಲ್ಲಿ ಲಂಡನ್‌ಗೆ ಕರೆದೊಯ್ಯಲಾಗುತ್ತದೆ.

  70 ದಿನದ ಪ್ರವಾಸಕ್ಕೆ 15 ಲಕ್ಷ ರೂ
  ಈ ಬಸ್ ತುಂಬಾ ವಿಶೇಷವಾಗಿದ್ದು, ಕೇವಲ 20 ಸೀಟುಗಳಿರುತ್ತವೆ. ಪ್ರತಿ ಪ್ರಯಾಣಿಕರಿಗೆ ಪ್ರತ್ಯೇಕ ಕ್ಯಾಬಿನ್ ಇರುತ್ತದೆ. ಒಂದು ವಾರದವರೆಗೆ ಊಟ-ಕುಡಿತದಿಂದ ಹಿಡಿದು ಮಲಗುವವರೆಗೆ ಎಲ್ಲ ಸೌಲಭ್ಯಗಳನ್ನು ಹೊಂದಿದೆ. ಈ 70 ದಿನಗಳ ಪ್ರವಾಸಕ್ಕೆ 15 ಲಕ್ಷ ರೂ ವೆಚ್ಚ ಆಗಲಿದೆ. ಈ ಪ್ರಯಾಣದಲ್ಲಿ ವಿವಿಧ ದೇಶಗಳಲ್ಲಿ ಟಿಕೆಟ್‌ಗಳು, ವೀಸಾ ಮತ್ತು ವಸತಿ ಮುಂತಾದ ಎಲ್ಲಾ ಸೇವೆಗಳನ್ನು ಒದಗಿಸಲಾಗುತ್ತದೆ. ನೀವು ಸಹ ಈ ಪ್ರವಾಸವನ್ನು ಆನಂದಿಸಲು ಬಯಸಿದರೆ . ನೀವು ವೀಸಾ ಸೇರಿದಂತೆ ಅಗತ್ಯವಿರುವ ಎಲ್ಲಾ ದಾಖಲೆಗಳೊಂದಿಗೆ ಕಂಪನಿಯನ್ನು ಸಂಪರ್ಕಿಸಬಹುದು. ಅನೇಕ ಜನರು ಈಗಾಗಲೇ ವಿವಿಧ ದೇಶಗಳ ರಸ್ತೆಯ ಮೂಲಕ ಈ ಅದ್ಭುತ ಪ್ರಯಾಣಕ್ಕಾಗಿ ಎದುರು ನೋಡುತ್ತಿದ್ದಾರೆ.
  Published by:Seema R
  First published: